userpic
user icon
0 Min read

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಗೆ ಹೊಸ ಎಂಟ್ರಿ-ಎಕ್ಸಿಟ್; ಸಂಸದ ಡಾ.ಸಿ.ಎನ್. ಮಂಜುನಾಥ್

New Entry and Exit on Bengaluru-Mysuru Expressway sat

Synopsis

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೇಗೆ ಚನ್ನಪಟ್ಟಣ ತಾಲ್ಲೂಕಿನಿಂದ ಪ್ರವೇಶ ಮತ್ತು ನಿರ್ಗಮನ ಕಲ್ಪಿಸಲು ಹೊಸ ವ್ಯವಸ್ಥೆ. ರಾಂಪುರ ಬದಲಿಗೆ ಕಣ್ವ ಜಂಕ್ಷನ್ ಬಳಿ ಪ್ರವೇಶ ಮತ್ತು ನಿರ್ಗಮನ ಒದಗಿಸಲು ಚಿಂತನೆ.

ರಾಮನಗರ (ಏ.29): ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್ ಹೈವೆಯಲ್ಲಿ ರಾಮನಗರ ಜಿಲ್ಲೆಯ ಪ್ರವಾಸಿ ತಾಣಗಳು ಹಾಗೂ ಚನ್ನಪಟ್ಟಣಕ್ಕೆ ಹೋಗಲು ಅನುಕೂಲ ಆಗುವಂತೆ ಹೊಸ ಪ್ರವೇಶ ಮತ್ತು ನಿರ್ಗಮನ (Bengaluru Mysuru expressway new Entry/exit) ಮಾಡಲಾಗುವುದು ಎಂದು ಬೆಂಗಳೂರು ಗ್ರಾಮೀಣ ಲೋಕಸಭಾ ಕ್ಷೇತ್ರದ ಸಂಸದ ಡಾ.ಸಿ.ಎನ್. ಮಂಜುನಾಥ್ ತಿಳಿಸಿದರು.

ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಮತ್ತು ಚನ್ನಪಟ್ಟಣ ಶಾಸಕ ಸಿ.ಪಿ. ಯೋಗೇಶ್ವರ ಅವರ ಜೊತೆಗೂಡಿ ಬೆಂಗಳೂರು-ಮೈಸೂರು ಎಕ್ಸಪ್ರೆಸ್ ಹೈವೇಗೆ ಚನ್ನಪಟ್ಟಣ ತಾಲ್ಲೂಕಿನಿಂದ ಪ್ರವೇಶ ಮತ್ತು ನಿರ್ಗಮನ ಕಲ್ಪಿಸಲು ರಾಂಪುರ ಬಳಿ ಉದ್ದೇಶಿತ ಜಾಗವನ್ನು ಪರಿಶೀಲಿಸಿದರು.

ನಂತರ ಮಾತನಾಡಿದ ಸಂಸದ ಡಾ.ಸಿ.ಎನ್. ಮಂಜುನಾಥ್ ಅವರು, ರಾಂಪುರ ಬಳಿ ಪ್ರವೇಶ ಮತ್ತು ನಿರ್ಗಮನ ಕಲ್ಪಿಸುವುದರಿಂದ ಚನ್ನಪಟ್ಟಣ ತಾಲ್ಲೂಕಿನ ಜನತೆಗೆ ತೊಂದರೆಯಾಗಲಿದ್ದು, ಈ ವ್ಯವಸ್ಥೆಯನ್ನು ಕಣ್ವ ಜಂಕ್ಷನ್ ಬಳಿ ಕಲ್ಪಿಸಿದರೆ ಚನ್ನಪಟ್ಟಣ ಸೇರಿದಂತೆ, ಕಣ್ವ ಜಲಾಶಯ, ಕೆಂಗಲ್ ದೇವಸ್ಥಾನ ಮತ್ತು ಹಳೆ NH-75 ಹೋಗುವವರಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ಹಿನ್ನಲೆ ಈ ಬಗ್ಗೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು. ಈ ಬಗ್ಗೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಡ್ಕರಿ (nitin gadkari) ಅವರಿಗೂ ಮನವಿ ಸಲ್ಲಿಸಲಾಗಿದ್ದು ಅವರೂ ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: ಬೆಂಗಳೂರು -ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಕಾರಿಗೆ ಗುದ್ದಿದ ಐರಾವತ ಬಸ್; ಅಂತ್ಯಕ್ರಿಯೆಗೆ ಹೊರಟ ನಾಲ್ವರು ದುರ್ಮರಣ

ನೂತನ ಎಂಟ್ರಿ-ಎಕ್ಸಿಟ್ ಗೆ ಕೇಂದ್ರದಿಂದ ಅನುಮತಿ ಹಿನ್ನೆಲೆಯಲ್ಲಿ ಸಂಸದ ಡಾ.ಮಂಜುನಾಥ್ ಹಾಗೂ ಶಾಸಕ ಸಿ.ಪಿ.ಯೋಗೇಶ್ವರ್ ರಿಂದ ಸ್ಥಳ ಪರಿಶೀಲನೆ ಮಾಡಲಾಗಿದೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರವಾಸಿಗರು ಹಾಗೂ ವಾಹನ ಸವಾರರ ಅನುಕೂಲಕ್ಕಾಗಿ ಹೊಸ ಎಂಟ್ರಿ, ಎಕ್ಸಿಟ್ ಗೆ ಹೆದ್ದಾರಿ ಪ್ರಾಧಿಕಾರ ಅನುಮತಿ ನೀಡಿದೆ. ಚನ್ನಪಟ್ಟಣದ ರಾಂಪುರದ ಬಳಿ ಇದಕ್ಕೆ ಜಾಗ ಗುರುತಿಸಲಾಗಿತ್ತು. ಆದರೆ, ಅಲ್ಲಿ ಸೂಕ್ತ ಜಾಗ ಇಲ್ಲದ್ದಕ್ಕೆ ಕಣ್ವ ಜಂಕ್ಷನ್ ಬಳಿ ಜಾಗ ಗುರುತು ಮಾಡಲಾಗಿದೆ. ಹಾಗಾಗಿ ಸ್ಥಳೀಯ ಶಾಸಕರು ಹಾಗೂ NHAI ಅಧಿಕಾರಿಗಳ ಜೊತೆ ಸ್ಥಳ ಪರಿಶೀಲನೆ ಮಾಡಲಾಗಿದೆ ಎಂದರು.

ಕಣ್ವ ಜಂಕ್ಷನ್ ನಲ್ಲಿ ಎಕ್ಸಿಟ್, ಎಂಟ್ರಿ ನಿರ್ಮಾಣ ಆದ್ರೆ ಪ್ರವಾಸೋದ್ಯಮಕ್ಕೂ ಅನುಕೂಲ. ಕಣ್ವ ಡ್ಯಾಂ, ಕೆಂಗಲ್ ಆಂಜನೇಯನ ದೇವಾಲಯ ಹಾಗೂ ಬೆಂ-ಮೈ ಹಳೇ ಹೆದ್ದಾರಿಗೆ ನೇರ ಸಂಪರ್ಕ ಕಲ್ಪಿಸುತ್ತದೆ. ಅಲ್ಲದೇ ಶೀಘ್ರದಲ್ಲೇ ಮೂರು ಕಡೆಗಳಲ್ಲಿ ಸ್ಕೈವಾಕ್ ಕಾಮಗಾರಿ ಕಂಪ್ಲೀಟ್ ಆಗಲಿದೆ. ಚನ್ನಪಟ್ಟಣದ ಬಳಿ ಟಾಯ್ಸ್ ಪಾರ್ಕ್ ಕೂಡಾ ಬರಲಿದೆ. ಅದಕ್ಕೂ ಈಗಾಗಲೇ ಜಾಗ ಗುರುತು ಮಾಡಲಾಗಿದೆ. ಎಕ್ಸ್‌ಪ್ರೆಸ್‌ ಹೈವೆಯ ಎಲ್ಲಾ ಸಮಸ್ಯೆಗಳನ್ನ ಹಂತಹಂತವಾಗಿ ಬಗೆಹರಿಸಲಾಗುವುದು ಎಂದು ಡಾ.ಮಂಜುನಾಥ್ ತಿಳಿಸಿದರು.

ಇದನ್ನೂ ಓದಿ: 180 ರೂಪಾಯಿ ಟೋಲ್‌ ಉಳಿಸಲು ಹೋಗಿ ಪ್ರಾಣಬಿಟ್ಟ ಒಂದೇ ಕುಟುಂಬದ ನಾಲ್ವರು!

ಪಹಲ್ಗಾಮ್ ದಾಳಿಗೆ ಕೇಂದ್ರ ಭದ್ರತಾ ವೈಫಲ್ಯ ಕಾರಣ ಎಂಬ ವಿಪಕ್ಷಗಳ ಆರೋಪ ವಿಚಾರದ ಬಗ್ಗೆ ಮಾತನಾಡಿ, ಈ ಸಂದರ್ಭದಲ್ಲಿ ಘಟನೆಗೆ ಯಾವ ರೀತಿ ರೆಸ್ಪಾನ್ಸ್ ಮಾಡಬೇಕು ಎಂಬುದು ಮುಖ್ಯ. ಈ ಕ್ಷಣಕ್ಕೆ ಭಯೋತ್ಪಾದನೆ ಹಾಗೂ ಭಯೋತ್ಪಾದಕರಿಗೆ ತಕ್ಕಪಾಠ ಕಲಿಸುವ ಬಗ್ಗೆ ಯೋಚನೆ ಮಾಡಬೇಕು. ಮಿಕ್ಕಿದ್ದೆಲ್ಲ ಆಮೇಲೆ ಮಾತನಾಡಬಹುದು. ಯುದ್ಧ ಎಂಬುದು ಸೂಕ್ಷ್ಮವಾದ ವಿಚಾರ. ಅದರ ಬಗ್ಗೆ ಎಲ್ಲೆಂದರಲ್ಲಿ ಚರ್ಚೆ ಮಾಡೋದು ಸೂಕ್ತ ಅಲ್ಲ ಎಂದು ಮಾಹಿತಿ ನೀಡಿದರು.

Latest Videos