Asianet Suvarna News Asianet Suvarna News

'ಇನ್ನೊಬ್ಬರ ಬಳಿ ಹಿಂದೂತ್ವ ಕಲಿಯುವ ಅಗತ್ಯ ಇಲ್ಲ': ಕೆಎಸ್ ಈಶ್ವರಪ್ಪಗೆ ಸಂಸದ ರಾಘವೇಂದ್ರ ತಿರುಗೇಟು

ಯಾವುದೋ ಗ್ಯಾರೆಂಟಿ, ಯಾವುದೋ ಕುಟುಂಬ ಅಥವಾ ಯಾರನ್ನೋ ಎಂಪಿ ಮಾಡಲು ನಡೆಯುತ್ತಿರುವ ಚುನಾವಣೆ ಇದಲ್ಲ, ದೇಶದ ಭವಿಷ್ಯ, ರೈತ, ಬಡವ, ಮಹಿಳೆಯರಿಗಾಗಿ ಮಾಡುತ್ತಿರುವ ಚುನಾವಣೆ ಇದಾಗಿ ಎಂದು ಸಂಸದ ಬಿವೈ ರಾಘವೇಂದ್ರ ತಿಳಿಸಿದರು.

Lok sabha election 2024 BY Raghavendra reaction about KS Eshwarappa statement shivamogga rav
Author
First Published Mar 30, 2024, 7:38 PM IST

ತೀರ್ಥಹಳ್ಳಿ (ಮಾ.30): ಯಾವುದೋ ಗ್ಯಾರೆಂಟಿ, ಯಾವುದೋ ಕುಟುಂಬ ಅಥವಾ ಯಾರನ್ನೋ ಎಂಪಿ ಮಾಡಲು ನಡೆಯುತ್ತಿರುವ ಚುನಾವಣೆ ಇದಲ್ಲ, ದೇಶದ ಭವಿಷ್ಯ, ರೈತ, ಬಡವ, ಮಹಿಳೆಯರಿಗಾಗಿ ಮಾಡುತ್ತಿರುವ ಚುನಾವಣೆ ಇದಾಗಿ ಎಂದು ಸಂಸದ ಬಿವೈ ರಾಘವೇಂದ್ರ ತಿಳಿಸಿದರು.

ತೀರ್ಥಹಳ್ಳಿ ತಾಲೂಕಿನ ದರಲಗೋಡುನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ದೇಶಕ್ಕೆ ರಾಷ್ಟ್ರಕವಿಗಳನ್ನು ಕೊಟ್ಟ ಕ್ಷೇತ್ರ ತೀರ್ಥಹಳ್ಳಿಯಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆರಗ ಜ್ಞಾನೇಂದ್ರ ಅವರಿಗೆ ಎಂಬತ್ತು ಸಾವಿರಕ್ಕೂ ಅಧಿಕ ಮತ ಬಂದಿತ್ತು. ಈ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಒಂದು ಲಕ್ಷಕ್ಕೂ ಅಧಿಕ ಮತ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಮೋದಿ ಗ್ಯಾರಂಟಿ ಟಿವಿಯಲ್ಲಿ, ನಮ್ಮ ಗ್ಯಾರಂಟಿ ನಿಮ್ಮ ಕೈಯಲ್ಲಿ: ಪ್ರಿಯಾಂಕ್ ಖರ್ಗೆ

ಜಿಲ್ಲೆಯಲ್ಲಿ ಅಭಿವೃದ್ಧಿ ರಾಜಕಾರಣದ ಬಗ್ಗೆ  ವಿರೋಧ ಪಕ್ಷಕ್ಕೆ ಚರ್ಚೆ ಮಾಡಲಾಗದೇ ಟೀಕೆ ಮಾಡುವುದನ್ನೇ ಚುನಾವಣೆ ಪ್ರಚಾರ ಅಂದು ಕೊಂಡಿವೆ. ಇದು ವೈಯಕ್ತಿಕ ಟೀಕೆ ಮಾಡುವ ಚುನಾವಣೆ ಅಲ್ಲ,  ಅಭಿವೃದ್ಧಿಯನ್ನು ನೋಡಿ, ದೇಶದ ಹಿತ ದೃಷ್ಟಿಯಿಂದ ಜಿಲ್ಲೆಯಲ್ಲಿ ಆಗಿರುವ ಕೆಲಸದ ದೃಷ್ಟಿಯಿಂದ ಜನರು ಮತ ನೀಡುತ್ತಾರೆ ಎಂದರು.

ಇನ್ನು ಯತೀಂದ್ರ ಸಿದ್ದರಾಮಯ್ಯ ಅವರ ಗೂಂಡಾ ಹೇಳಿಕೆ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಸಂಸದರು, ಸರ್ದಾರ್ ಪಟೇಲರಿಗೆ ಹೋಲಿಕೆ ಮಾಡುವಂಥ ಅಮಿತ್ ಶಾ ಅವರ ಬಗ್ಗೆ ಯತೀಂದ್ರ ಗೂಂಡಾ ಎಂದಿದ್ದಾರೆ. ಆರ್ಟಿಕಲ್ 370 ರದ್ದು ಮಾಡಿ ದೇಶಕ್ಕೆ ಅನುಕೂಲ ಮಾಡುತ್ತಿರುವ ನಾಯಕರ ಬಗ್ಗೆ ಈ ರೀತಿ ಮಾತನಾಡುವುದು ಸರಿಯಲ್ಲ ಎಂದರು. ಇದೇ ವೇಳೆ ಕೆಎಸ್ ಈಶ್ವರಪ್ಪ ಅವರ ಬಂಡಾಯ ವಿಚಾರ ಪ್ರಸ್ತಾಪಿಸಿದ ಸಂಸದರು, ಈಶ್ವರಪ್ಪನವರ ಬಗ್ಗೆ ನನಗೆ ಗೌರವ ಇದೆ. ಎರಡು ವಾರಗಳ ಹಿಂದೆ ರಾಘಣ್ಣನನ್ನು ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದಿದ್ದರು. ಆದರೆ ಈಗ ಯಾಕೆ ಹೀಗೆ ಮಾತನಾಡುತ್ತಿದ್ದಾರೆ ಗೊತ್ತಾಗುತ್ತಿಲ್ಲ. ರಾಜಕಾರಣ, ಅಧಿಕಾರ ಬರುತ್ತದೆ ಹೋಗುತ್ತದೆ. ಹಿಂದುತ್ವ ವಿರೋಧಿ ಎಂದು ಹೇಳಿಕೆ ನೀಡುವುದು ಸರಿಯಲ್ಲ. ಹಿಂದುತ್ವವನ್ನು ಇನ್ನೊಬ್ಬರ ಬಳಿ ಕಲಿಯುವ ಅವಶ್ಯಕತೆ ಇಲ್ಲ ಎಂದು ತಿರುಗೇಟು ನೀಡಿದರು.

ಆಗ ವಿಜಯೇಂದ್ರರನ್ನು ಹೊಗಳಿದ್ದ ಈಶ್ವರಪ್ಪ ಈಗ ಬದಲಾಗಿದ್ದು ಯಾಕೆ?: ಬಿ.ವೈ.ರಾಘವೇಂದ್ರ

 ಈ ಚುನಾವಣೆ ಅಭಿವೃದ್ಧಿ ಪರವಾಗಿ, ಅಭಿವೃದ್ಧಿಗೆ ಮನ್ನಣೆ ಕೊಡದವರ ನಡುವೆ ನೆಡೆಯುವ ಚುನಾವಣೆಯಾಗಿದೆ. ಕಾಂಗ್ರೆಸ್ ನಾಯಕರನ್ನು ಆಪರೇಷನ್ ಮಾಡುವ ಅಗತ್ಯವಿಲ್ಲ. ಕಾಂಗ್ರೆಸ್ ದುರಾಡಳಿತದ ಬಗ್ಗೆ ಪಕ್ಷದ ಕಾರ್ಯಕರ್ತರು, ನಾಯಕರು ಬೇಸತ್ತಿದ್ದಾರೆ. ಅವರೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗುತ್ತಾರೆ ಎಂದರು.

Follow Us:
Download App:
  • android
  • ios