userpic
user icon
0 Min read

ಇನ್ನೂ ಬಾರದ ಮುಂಗಾರು ಮಳೆ; ದೇವರ ಮೊರೆ ಹೋದ ಗ್ರಾಮಸ್ಥರು!

Lack of Rain: Special Puja to God by Villagers in kamalapur udupi rav
Vijayanagara

Synopsis

ರಾಜ್ಯದ ಕೆಲವೆಡೆ ಮಳೆಯಾಗುತ್ತಿದ್ದರೂ, ಉತ್ತರ ಕರ್ನಾಟಕದ ಮಲೆನಾಡು, ವಿಜಯನಗರ, ಕೊಪ್ಪಳ ಸೇರಿದಂತೆ ಕೆಲ ಭಾಗಗಳಲ್ಲಿ ಮಳೆ ಸುರಿದಿಲ್ಲ. ಇದರಿಂದ ರೈತರು ಆತಂಕಗೊಂಡಿದ್ದು,ಇನ್ನೂ ಬಾರದ ಮಳೆಗಾಗಿ ದೇವರ ಮೊರೆ ಹೋಗುತ್ತಿದ್ದಾರೆ.

ವಿಜಯನಗರ (ಜೂ.7): ರಾಜ್ಯದ ಕೆಲವೆಡೆ ಮಳೆಯಾಗುತ್ತಿದ್ದರೂ, ಉತ್ತರ ಕರ್ನಾಟಕದ ಮಲೆನಾಡು, ವಿಜಯನಗರ, ಕೊಪ್ಪಳ ಸೇರಿದಂತೆ ಕೆಲ ಭಾಗಗಳಲ್ಲಿ ಮಳೆ ಸುರಿದಿಲ್ಲ. ಇದರಿಂದ ರೈತರು ಆತಂಕಗೊಂಡಿದ್ದು,ಇನ್ನೂ ಬಾರದ ಮಳೆಗಾಗಿ ದೇವರ ಮೊರೆ ಹೋಗುತ್ತಿದ್ದಾರೆ.

ಈಗಾಗಲೇ ಮಳೆ ಬಾರದಿರುವುದರಿಂದ ತುಂಗಭದ್ರಾ ಜಲಾಶಯ ಸಂಪೂರ್ಣ ಖಾಲಿಯಾಗಿದ್ದು ಇನ್ನೂ ಎರಡು ಮೂರು ಟಿಎಂಸಿ ನೀರು ಮಾತ್ರ ಇದೆ. ಹೀಗಾಗಿ ಮಳೆಯನ್ನೇ ಅಶ್ರಯಿಸಿರುವ ರೈತರು ಮುಂದಿನ ಬಿತ್ತನೆ ಕಾರ್ಯಕ್ಕಾಗಿ ಆಕಾಶಕ್ಕೆ ಮುಖಮಾಡಿ ಕುಳಿತಿದ್ದಾರೆ.

ಮುಂಗಾರುಪೂರ್ವ ಮಳೆ ಕೊರತೆ; 79 ಅಡಿಗೆ ಕುಸಿದ ಕೆಆರ್‌ಎಸ್‌ ನೀರಿನ ಮಟ್ಟ!

ವಾಡಿಕೆಯಂತೆ ಮಳೆಯಾಗದ ಹಿನ್ನೆಲೆ ವಿಜಯನಗರ ಹೆಬ್ಬಾಗಿಲು ಕಮಲಾಪುರ ಗ್ರಾಮದಲ್ಲಿ  ಗ್ರಾಮ ದೇವತೆಗಳಿಗೆ ಹೂ, ಹಣ್ಣು ನೀಡಿ ವಿಶೇಷ ಪೂಜೆ ಸಲ್ಲಿಸುತ್ತಿರುವ ಗ್ರಾಮಸ್ಥರು. ಕಮಲಾಪುರದ ಗ್ರಾಮಸ್ಥರೆಲ್ಲ ಏಕಕಾಲಕ್ಕೆ ಮಳೆಗಾಗಿ  ಊರಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸ್ತಿರುವ ಗ್ರಾಮಸ್ಥರು. ಮಳೆ ಬರದಿದ್ದಾಗ ಊರಮ್ಮ ದೇವಿಗೆ ಪೂಜೆ ಸಲ್ಲಿಸುವುದು ವಿಜಯನಗರ ಕಾಲದಿಂದಲೂ ನಡೆದುಕೊಂಡು ಬಂದಿದೆ. ಈ ಬಾರಿ ಮುಂಗಾರು ಆರಂಭವಾಗಿದ್ದರೂ ಮಳೆ ಸುರಿಯದ ಹಿನ್ನೆಲೆ ಗ್ರಾಮಸ್ಥರು ದೇವಿಯ ಮೊರೆ ಹೋಗಿದ್ದಾರೆ. 

ಉಪ್ಪಿನಂಗಡಿ ದೇಗುಲದಲ್ಲಿ ಮಳೆಗೆ ವಿಶೇಷ ಪ್ರಾರ್ಥನೆ

 ಉಪ್ಪಿನಂಗಡಿ: ವರುಣ ದೇವನ ಕೃಪೆಗಾಗಿ ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದಲ್ಲಿ ಪುತ್ತೂರು ಶಾಸಕ ಅಶೋಕ್‌ ಕುಮಾರ್‌ ರೈ ಉಪಸ್ಥಿತಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಶ್ರೀ ದೇವರಿಗೆ ಸೀಯಾಳಾಭಿಷೇಕ ನೆರವೇರಿಸಲಾಯಿತು.

ಕರ್ನಾಟಕದ 10 ಜಿಲ್ಲೆಗಳಲ್ಲಿ ಜೂನ್‌ ಮಳೆ ಕೊರತೆ

ಮಳೆಗಾಗಿ ಪ್ರಾರ್ಥಿಸಿ ದೇವಾಲಯದ ಅರ್ಚಕರಾದ ಶಂಕರ್‌ ನಾರಾಯಣ ಭಟ್‌ ಅವರ ನೇತೃತ್ವದಲ್ಲಿ ಶ್ರೀ ಸಹಸ್ರಲಿಂಗೇಶ್ವರ ದೇವರಿಗೆ ಸೀಯಾಳಾಭಿಷೇಕ ನಡೆಯಿತು. ಶ್ರೀ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ ಸುವರ್ಣ, ಸದಸ್ಯರಾದ ಹರಿರಾಮಚಂದ್ರ, ಸುನೀಲ್‌ ಎ., ಜಯಂತ ಪೊರೋಳಿ, ಹರಿಣಿ ಕೆ., ಪ್ರೇಮಲತಾ, ರಾಮ ನಾಯ್ಕ, ಮಾಜಿ ಸದಸ್ಯರಾದ ರಾಧಾಕೃಷ್ಣ ನಾೖಕ್‌, ಕೃಷ್ಣರಾವ್‌ ಆರ್ತಿಲ, ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಡಾ. ನಿಂಗಯ್ಯ, ವ್ಯವಸ್ಥಾಪಕ ವೆಂಕಟೇಶ್‌ ರಾವ್‌, ಸಿಬ್ಬಂದಿ ಕೃಷ್ಣಪ್ರಸಾದ್‌ ಮತ್ತಿತರರಿದ್ದರು.

Latest Videos