Asianet Suvarna News Asianet Suvarna News

ಅಂಜಲಿ ಸಹೋದರಿ ಆತ್ಮಹತ್ಯೆಗೆ ಯತ್ನ! ಅಕ್ಕಾನ ಸಾವಿನ ಶೋಕದಲ್ಲಿ ಪಿನಾಯಿಲ್ ಕುಡಿದ ತಂಗಿ!

ಅಂಜಲಿ ಹತ್ಯೆ  ಪ್ರಕರಣದಲ್ಲಿ ಶೀಘ್ರ ತನಿಖೆ ಹಾಗೂ ಆರೋಪಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾದ ಬಳಿಕ ಮನೆಗೆ ಬಂದ ಅಂಜಲಿ ಸಹೋದರಿ ಯಶೋಧಾ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

Anjali sister Yashodha attempted suicide at hubballi after protest against karnataka govt rav
Author
First Published May 19, 2024, 7:21 AM IST

ಹುಬ್ಬಳ್ಳಿ (ಮೇ.19): ನೇಹಾ ಹಿರೇಮಠ ಹತ್ಯೆ ಬಳಿಕ ಹುಬ್ಬಳ್ಳಿಯಲ್ಲಿ ಅಂಜಲಿ ಬರ್ಬರ ಹತ್ಯೆಯಾಗಿರುವುದು ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಕೊಲೆ ಆರೋಪಿ ಗಿರೀಶ್ ಈಗಾಗಲೇ ಪೊಲೀಸರ ಕೈಗೆ ಸಿಕ್ಕಿದ್ದಾನೆ. ಅಂಜಲಿ ಹತ್ಯೆ ಮಾಡಿದ ಆರೋಪಿ ಕಠಿಣ ಶಿಕ್ಷೆ ಕೊಡಬೇಕು, ಎನ್‌ಕೌಂಟರ್ ಮಾಡಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ. ಇತ್ತ ಸಾರ್ವಜನಿಕರು, ಮಠಾಧೀಶರು ಸಹ ಪ್ರತಿಭಟನೆ ನಡೆಸಿ ಪ್ರಕರಣದ ಆರೋಪಿಗೆ ಶೀಘ್ರ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದ್ದಾರೆ. ಈ ನಡುವೆ ಅಂಜಲಿ ಸಹೋದರಿ ಅಕ್ಕನ ಸಾವಿನ ಶೋಕದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ವೀರಾಪುರ ಓಣಿಯ ಅಂಜಲಿ ನಿವಾಸದಲ್ಲಿ ನಡೆದಿದೆ.

ಹೌದು, ಅಂಜಲಿ ಸಹೋದರಿ ಪಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಸಿದ್ದಾರೆ. ತಕ್ಷಣ ಸ್ಥಳೀಯರು ಆಕೆಯನ್ನ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ನಿನ್ನೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ವೇಳೆಯೂ ಕುಸಿದುಬಿದ್ದಿದ್ದ ಸಹೋದರಿ ಯಶೋಧ. ಪ್ರತಿಭಟನೆ ಬಳಿಕ ಮನೆಗೆ ಹೋದ ನಂತರ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಸದ್ಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

 

ಹುಬ್ಬಳ್ಳಿ: ಅಂಜಲಿ ಅಂಬಿಗೇರ ಹತ್ಯೆ ಮರೆತ ಕಾಂಗ್ರೆಸ್‌..!

Latest Videos
Follow Us:
Download App:
  • android
  • ios