Asianet Suvarna News Asianet Suvarna News

ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಬಿಗ್ ಟ್ವಿಸ್ಟ್, ಐಇಡಿ ಬಳಸಿರುವ ಬಗ್ಗೆ ಪೊಲೀಸರ ಶಂಕೆ!

ಬೆಂಗಳೂರಿನ ಕುಂದಲಹಳ್ಳಿ ಗೇಟ್‌ ಸಮೀಪ ಇರುವ ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ ಈಗ ಬಿಗ್‌ ಟ್ವಿಸ್ಟ್ ಸಿಕ್ಕಿದೆ.

Bengaluru Rameshwaram Cafe explosion bomb squad  arrived at the spot gow
Author
First Published Mar 1, 2024, 3:52 PM IST

ಬೆಂಗಳೂರು (ಮಾ.1):  ಬೆಂಗಳೂರಿನ ಕುಂದಲಹಳ್ಳಿ ಗೇಟ್‌ ಸಮೀಪ ಇರುವ ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ ಈಗ ಬಿಗ್‌ ಟ್ವಿಸ್ಟ್ ಸಿಕ್ಕಿದೆ. ಸ್ಪೋಟದ ಜಾಗದಲ್ಲಿ ಸಾಕ್ಷ್ಯ ಗಳ ಪರಿಶೀಲನೆ ಮಾಡುತ್ತಿರುವ ಪೊಲೀಸರು ಉಗ್ರರ ಕೃತ್ಯ ಇರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಐಇಡಿ (impoverished explossive device - ಸುಧಾರಿತ ಸ್ಪೋಟಕ್ಕೆ ಸಾಮಾಗ್ರಿ) ಬಳಕೆ ಮಾಡಿಕೊಂಡು ಸ್ಪೋಟ ಮಾಡಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಬಾಂಬ್ ನಿಷ್ಕ್ರೀಯ ದಳ, ಶ್ವಾನ ದಳ,  ಎನ್ಐಎ ಅಧಿಕಾರಿಗಳು, ಪೊಲೀಸ್‌ ಕಮಿಷನರ್‌ ದಯಾನಂದ್‌, ಆಂತರಿಕಾ ಭದ್ರತಾ ವಿಭಾಗದ ಎಡಿಜಿಪಿ ಚಂದ್ರಶೇಖರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಿಗೂಢ ವಸ್ತು ಸ್ಫೋಟ; ಐವರಿಗೆ ಗಂಭೀರ ಗಾಯ!

ಸ್ಪೋಟದ ಜಾಗದಲ್ಲಿ ಸಾಕ್ಷ್ಯ ಗಳ ಪರಿಶೀಲನೆ ಮಾಡುತ್ತಿರುವ ಪೊಲೀಸ್ ಅಧಿಕಾರಿಗಳು ಉಗ್ರರ ಕೃತ್ಯ ಇರಬಹುದು ಎಂದು ಶಂಕಿಸುತ್ತಿದ್ದಾರೆ. ಮದ್ಯಾಹ್ನ 1.05 ನಿಮಿಷಕ್ಕೆ ಸ್ಪೋಟಗೊಂಡಿದ್ದು, ಊಟದ ಸಮಯವಾದುದರಿಂದ  ಹೆಚ್ಚು ಜನ ನೆರೆದಿದ್ದರು. ಕೈ ತೊಳೆಯುವ  ಸಿಂಕ್ ಇಟ್ಟಿದ್ದ ಜಾಗದಲ್ಲಿ ಇದ್ದ ಬ್ಯಾಗ್ ಸ್ಪೋಟಗೊಂಡಿದ್ದು, ಇದು ಬೇಕೆಂತಲೇ ಮಾಡಿರುವ ಕೃತ್ಯ ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿದೆ. ಸಿ ಸಿ ಕ್ಯಾಮರಾ ಪರಿಶೀಲನೆ ನಡೆಸಲಾಗುತ್ತಿದ್ದು, ಶಂಕಿತರಿಗಾಗಿ ಹುಡುಕಾಟ ನಡೆಯುತ್ತಿದೆ.

ಕುಂದಲಹಳ್ಳಿ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಹಿನ್ನೆಲೆ ಹೋಟೆಲ್​ ಸುತ್ತಮುತ್ತ ಶಂಕಿತರು ಓಡಾಡಿರೋ ಶಂಕೆ ಹಿನ್ನೆಲೆ ಸಿಸಿಟಿವಿ ಪರಿಶೀಲನೆ ನಡೆಸುತ್ತಿರೋ ಪೊಲೀಸರು ಶಂಕಿತರಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಮೂವರನ್ನು ಆರ್ ಎಕ್ಸ್ ಡಿಕ್ಸ್ ಆಸ್ಪತ್ರೆಗೆ ದಾಖಲು  ಮಾಡಲಾಗಿದೆ. 

ಈ ಘಟನೆಯಲ್ಲಿ  ಮೂವರು ಸಿಬ್ಬಂದಿ ಸೇರಿ  8 ಮಂದಿ ಗಂಭೀರ ಗಾಯಗೊಂಡಿದ್ದಾರೆ. ಸದ್ಯ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಾಯಗೊಂಡವರಲ್ಲಿ  ಮೈಕ್ರೋಚಿಪ್ ಉದ್ಯೋಗಿಯಾಗಿರುವ  ಸ್ವರ್ಣಾಂಭ ನಾರಾಯಣಪ್ಪ ಎಂಬ ಮಹಿಳೆ ಗಂಭೀರ ಗಾಯವಾಗಿದ್ದು, ಬ್ರೂಕ್ ಫೀಲ್ಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದರ ಜೊತೆಗೆ ಉತ್ತರ ಭಾರತ ಮೂಲದ ಆಕ್ಸಿಸ್ ಬ್ಯಾಂಕ್ ಉದ್ಯೋಗಿ ಮೋಮಿ ಎಂಬ ಮಹಿಳೆ ಕೂಡ ಓರ್ವ ಗಾಯಾಳುವಾಗಿದ್ದಾರೆ.  

ಟಿಫಿನ್ ಬಾಕ್ಸ್‌ನಲ್ಲಿ ಸ್ಟೋಟಕ!: ಇನ್ನು ಬ್ಲಾಸ್ಟ್ ಸಂದರ್ಭದಲ್ಲಿದ್ದ ಪ್ರತ್ಯಕ್ಷದರ್ಶಿ ರಾಮೇಶ್ವರಂ ಕೆಫೆಯ ಸೆಕ್ಯೂರಟಿ ಗಾರ್ಡ್ ಸಚಿನ್ ಲಾಮಾಣಿ ಮಾಹಿತಿ ನೀಡಿ, ಟಿಫನ್ ಪಾಕ್ಸ್ ರೀತಿ ಇತ್ತು. ಒಮ್ಮೆ ಬಾಂಬ್ ರೀತಿ ಸೌಂಡ್ ಆಗಿದೆ. 10 ಸೆಕೆಂಡ್‌ಗಳಲ್ಲಿ ಎರಡು ಬಾರಿ ಸ್ಫೋಟ ಸಂಭವಿಸಿದೆ. ಪೋನ್ ನಲ್ಲಿ ನಾನು ಮಾತಾಡುತ್ತಿದ್ದಾಗ ಇದು ಆಗಿದೆ. ಹೊಟೇಲ್ ನಲ್ಲಿ ಅಡುಗೆ ಮಾಡುವವರು ಗಾಯಗೊಂಡಿದ್ದಾರೆ. ಹುಡುಗರು ಮೂರು ಮಂದಿ ಇದ್ರು. ಎರಡು ಗಂಟೆಗೆ ಅವರ ಕೆಲಸ ಮುಗಿತ್ತಿತ್ತು. ಒಬ್ಬನನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಅಡುಗೆ ಮಾಡುವವರು ಎಲ್ಲಾ ಹಿಂದಿ ಮಾತನಾಡುವವರು ಇದ್ರು. ಅವರೆಲ್ಲರಿಗೂ ಗಾಯವಾಗಿದೆ ಎಂದು ಸುವರ್ಣನ್ಯೂಸ್ ಜೊತೆ ಮಾತನಾಡುತ್ತಾ ಹೇಳಿಕೆ ನೀಡಿದ್ದಾನೆ.

Follow Us:
Download App:
  • android
  • ios