Asianet Suvarna News Asianet Suvarna News

Corona Crisis: ಕರ್ನಾಟಕದಲ್ಲಿ 82 ಮಂದಿಗೆ ಕೊರೋನಾ: ಒಂದೂ ಸಾವಿಲ್ಲ

ರಾಜ್ಯದಲ್ಲಿ ಸೋಮವಾರ 82 ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, 79 ಮಂದಿ ಗುಣಮುಖರಾಗಿದ್ದಾರೆ. ಸೋಂಕಿತರ ಸಾವು ವರದಿಯಾಗಿಲ್ಲ. 2320 ಸೋಂಕು ಪರೀಕ್ಷೆಗಳು ನಡೆದಿದ್ದು, ಪಾಸಿಟಿವಿಟಿ ದರ ಶೇ.3.5 ರಷ್ಟು ದಾಖಲಾಗಿದೆ. 

82 new coronavirus cases on october 25th in karnataka gvd
Author
First Published Oct 25, 2022, 1:45 AM IST

ಬೆಂಗಳೂರು (ಅ.25): ರಾಜ್ಯದಲ್ಲಿ ಸೋಮವಾರ 82 ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, 79 ಮಂದಿ ಗುಣಮುಖರಾಗಿದ್ದಾರೆ. ಸೋಂಕಿತರ ಸಾವು ವರದಿಯಾಗಿಲ್ಲ. 2320 ಸೋಂಕು ಪರೀಕ್ಷೆಗಳು ನಡೆದಿದ್ದು, ಪಾಸಿಟಿವಿಟಿ ದರ ಶೇ.3.5 ರಷ್ಟು ದಾಖಲಾಗಿದೆ. ಭಾನುವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆಗಳು ಐದು ಸಾವಿರ ಕಡಿಮೆ ನಡೆದಿವೆ. ಹೀಗಾಗಿ, ಹೊಸ ಪ್ರಕರಣಗಳು 30ರಷ್ಟು ಇಳಿಕೆಯಾಗಿವೆ. (ಭಾನುವಾರ 112 ಪ್ರಕರಣ, ಸಾವು ಒಂದು)

ಸೋಂಕು ಪರೀಕ್ಷೆ ಸಂಖ್ಯೆ 10 ಸಾವಿರ ಆಸುಪಾಸಿನಿಂದ ಎರಡು ಸಾವಿರಕ್ಕೆ ಇಳಿಕೆಯಾದ ಹಿನ್ನೆಲೆ ಪಾಸಿಟಿವಿಟಿ ದರ ಶೇ.3ಕ್ಕೆ ಹೆಚ್ಚಳವಾಗಿದೆ. ಸದ್ಯ 2329 ಸಕ್ರಿಯ ಸೋಂಕಿತರಿದ್ದು, ಈ ಪೈಕಿ 25 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 10 ಮಂದಿ ಐಸಿಯು, 5 ಮಂದಿ ಆಕ್ಸಿಜನ್‌, 10 ಮಂದಿ ಸಾಮಾನ್ಯ ಹಾಸಿಗೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ 2304 ಮಂದಿ ಮನೆಯಲ್ಲಿ ಆರೈಕೆಯಲ್ಲಿದ್ದಾರೆ. ಸೋಮವಾರ ಬೆಂಗಳೂರಿನಲ್ಲಿ 61 ಮಂದಿಗೆ ಸೋಂಕು ತಗುಲಿದೆ. ಉಳಿದಂತೆ 18 ಜಿಲ್ಲೆಗಳಲ್ಲಿ ಬೆರಳೆಣಿಕೆ, 11 ಜಿಲ್ಲೆಯಲ್ಲಿ ಶೂನ್ಯ ಪ್ರಕರಣಗಳು ವರದಿಯಾಗಿವೆ.

ಕರ್ನಾಟಕದಲ್ಲಿ 112 ಕೋವಿಡ್‌ ಕೇಸ್‌: ಅರ್ಧಕ್ಕರ್ಧ ಕುಸಿತ

ಶೇ.75 ರಷ್ಟು ಮಕ್ಕಳಲ್ಲಿ ಕೊರೋನಾ ಪ್ರತಿಕಾಯ: ರಾಜ್ಯ ಆರೋಗ್ಯ ಇಲಾಖೆ ನಡೆಸಿದ 6-14 ವರ್ಷದ ಮಕ್ಕಳ ಕೊರೋನಾ ಸಿರೋ ಸಮೀಕ್ಷೆಯಲ್ಲಿ ಶೇ.75 ರಷ್ಟು ಮಕ್ಕಳಿಗೆ ಸೋಂಕು ತಗುಲಿದ್ದು ಪತ್ತೆಯಾಗಿದೆ. ವಿಶೇಷವೆಂದರೆ, ಈ ಮಕ್ಕಳಿಗೆ ಲಸಿಕೆ ಪಡೆಯದೇ ರೋಗ ಪ್ರತಿಕಾಯಗಳು ಕೂಡಾ ಉತ್ಪತ್ತಿಯಾಗಿವೆ.

ರಾಜ್ಯದ ಜನರ ರೋಗ ನಿರೋಧಕ ಶಕ್ತಿ ಮತ್ತು ಲಸಿಕೆ ಪರಿಣಾಮ ತಿಳಿದುಕೊಳ್ಳುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಸಿರೋ ಸಮೀಕ್ಷೆಯನ್ನು ನಡೆಸುತ್ತಿತ್ತು. ಆದರೆ, ಲಸಿಕೆ ಪಡೆಯದ ಮಕ್ಕಳಲ್ಲಿ ಸಿರೋ ಸಮೀಕ್ಷೆ ನಡೆಸಲು ರಾಜ್ಯ ಕೊರೋನಾ ತಾಂತ್ರಿಕ ಸಲಹಾ ಸಮಿತಿ ಶಿಫಾರಸು ಮಾಡಿತ್ತು. ಅದರಂತೆ ಆರೋಗ್ಯ ಇಲಾಖೆಯು ರಾಜ್ಯಾದ್ಯಂತ 6 ರಿಂದ 14 ವರ್ಷದೊಳಗಿನ 5358 ಮಕ್ಕಳನ್ನು ಸಮೀಕ್ಷೆಗೆ ಒಳಪಡಿಸಿತ್ತು. ಆಗ ಶೇ.75.38 ಮಕ್ಕಳಲ್ಲಿ ಕೊರೋನಾ ವಿರುದ್ಧ ಹೋರಾಡುವ ರೋಗ ಪ್ರತಿಕಾಯ ಪತ್ತೆಯಾಗಿದೆ. ಅಂದರೆ, ಇವರೆಲ್ಲರಿಗೂ ಸೋಂಕು ತಗುಲಿ ಅದರಿಂದಲೇ ರೋಗಪ್ರತಿಕಾಯಗಳು ಉತ್ಪತ್ತಿಯಾಗಿರುವುದು ಸಮೀಕ್ಷೆಯಿಂದ ತಿಳಿದುಬಂದಿದೆ.

Covid Vaccine ಖರೀದಿ ಬಂದ್: ಸರ್ಕಾರದ ಬಳಿಯಿದೆ 6 ತಿಂಗಳಿಗೆ ಸಾಕಾಗುವಷ್ಟು ಲಸಿಕೆ ಸಂಗ್ರಹ

ಚಿಕ್ಕಮಗಳೂರು ನಂ.1: ಜಿಲ್ಲಾವಾರು ಸಮೀಕ್ಷೆ ನಡೆಸಿದ್ದು, ಅತಿ ಹೆಚ್ಚು ಚಿಕ್ಕಮಗಳೂರು ಶೇ. 100, ಬಾಗಲಕೋಟೆ ಶೇ. 91.12, ಉತ್ತರ ಕನ್ನಡ ಶೇ. 89.61, ಗದಗ ಶೇ. 88.62 ಮಕ್ಕಳಲ್ಲಿ ಪ್ರತಿಕಾಯ ಪತ್ತೆಯಾಗಿದೆ. ಸೋಂಕಿನ ತೀವ್ರತೆ ಹೆಚ್ಚಿದ್ದ ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇ. 86.88 ಮಕ್ಕಳಲ್ಲಿ ಪ್ರತಿಕಾಯ ಇರುವುದು ಪತ್ತೆಯಾಗಿದೆ. ಅತೀ ಕಡಿಮೆ ಪ್ರತಿಕಾಯ ಹೊಂದಿರುವ ಜಿಲ್ಲೆಗಳ ಪೈಕಿ ಕೊನೆಯಿಂದ ಐದು ಸ್ಥಾನಗಳಲ್ಲಿ ಕಲಬುರಗಿ ಶೇ. 43.24, ಯಾದಗಿರಿ ಶೇ. 48.20, ಉಡುಪಿ ಶೇ. 52.31, ಹಾವೇರಿ ಶೇ. 59.47 ಹಾಗೂ ರಾಮನಗರ ಶೇ. 62.72 ಮಕ್ಕಳಲ್ಲಿ ಪ್ರತಿಕಾಯಗಳು ಕಂಡುಬಂದಿವೆ.

Follow Us:
Download App:
  • android
  • ios