Asianet Suvarna News Asianet Suvarna News

ಚೀನಾ ಮಾಸ್ಟರ್ಸ್‌: ಫೈನಲ್‌ಗೆ ಸಾತ್ವಿಕ್‌-ಚಿರಾಗ್ ಜೋಡಿ ಲಗ್ಗೆ

ಶನಿವಾರ ಸೆಮಿಫೈನಲ್ ಪಂದ್ಯದಲ್ಲಿ ಚೀನಾದ ಹೆ ಜೀ ಟಿಂಗ್ - ರೆನ್ ಕ್ಷಿಯಾಂಗ್ ಯು ವಿರುದ್ದ 21-15, 22-20 ಅಂತರದಲ್ಲಿ ರೋಚಕ ಗೆಲುವು ಸಾಧಿಸಿತು. ಸಾತ್ವಿಕ್-ಚಿರಾಗ್, ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ವಿಶ್ವದ ನಂ.1 ಚೀನಾದ ಲಿಯಾಂಗ್ ವೀ ಕೆಂಗ್ - ವಾಂಗ್ ಚಾಂಗ್ ವಿರುದ್ದ ಸೆಣಸಲಿದ್ದಾರೆ.

China Masters 2023 badminton Chirag Shetty and Satwiksairaj Rankireddy reach final kvn
Author
First Published Nov 26, 2023, 12:50 PM IST

ಶೆನ್‌ಝೆನ್(ನ.26): ಭಾರತದ ತಾರಾ ಪುರುಷ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ - ಚಿರಾಗ್ ಶೆಟ್ಟಿ ಅಭೂತಪೂರ್ವ ಪ್ರದರ್ಶನ ಮುಂದುವರೆಸಿದ್ದು, ಚೀನಾ ಮಾಸ್ಟರ್ಸ್‌ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದೆ. 

ಶನಿವಾರ ಸೆಮಿಫೈನಲ್ ಪಂದ್ಯದಲ್ಲಿ ಚೀನಾದ ಹೆ ಜೀ ಟಿಂಗ್ - ರೆನ್ ಕ್ಷಿಯಾಂಗ್ ಯು ವಿರುದ್ದ 21-15, 22-20 ಅಂತರದಲ್ಲಿ ರೋಚಕ ಗೆಲುವು ಸಾಧಿಸಿತು. ಸಾತ್ವಿಕ್-ಚಿರಾಗ್, ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ವಿಶ್ವದ ನಂ.1 ಚೀನಾದ ಲಿಯಾಂಗ್ ವೀ ಕೆಂಗ್ - ವಾಂಗ್ ಚಾಂಗ್ ವಿರುದ್ದ ಸೆಣಸಲಿದ್ದಾರೆ.

ಬಿಎಫ್‌ಸಿ ತಂಡಕ್ಕೆ ಇಂದು ನಾರ್ಥ್‌ಈಸ್ಟ್‌ ಸವಾಲು

ಗುವಾಹಟಿ: ಈ ಬಾರಿ ಇಂಡಿಯನ್‌ ಸೂಪರ್‌ ಲೀಗ್‌(ಐಎಸ್‌ಎಲ್‌) ಫುಟ್ಬಾಲ್‌ ಲೀಗ್‌ನಲ್ಲಿ 6 ಪಂದ್ಯಗಳಲ್ಲಿ ಕೇವಲ 1 ಗೆಲುವು ಕಂಡಿರುವ ಮಾಜಿ ಚಾಂಪಿಯನ್‌ ಬೆಂಗಳೂರು ಎಫ್‌ಸಿ ಗೆಲುವಿನ ಹಳಿಗೆ ಮರಳಲು ಕಾಯುತ್ತಿದ್ದು, ಭಾನುವಾರ ನಾರ್ಥ್‌ಈಸ್ಟ್‌ ಯುನೈಟೆಡ್‌ ತಂಡದ ವಿರುದ್ಧ ಸೆಣಸಾಡಲಿದೆ. ಸುನಿಲ್‌ ಚೆಟ್ರಿ ನಾಯಕತ್ವದ ಬಿಎಫ್‌ಸಿ ಈ ವರ್ಷ 3 ಸೋಲು ಕಂಡಿದ್ದು, ಕೇವಲ 5 ಅಂಕಗಳೊಂದಿಗೆ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಅತ್ತ ನಾರ್ಥ್‌ಈಸ್ಟ್‌ ಆಡಿರುವ 6 ಪಂದ್ಯಗಳಲ್ಲಿ 2ರಲ್ಲಿ ಗೆದ್ದಿದ್ದು, ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ.

ಗುಜರಾತ್ ಟೈಟಾನ್ಸ್ ಬಿಟ್ಟು ಮತ್ತೆ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್‌ ತೆಕ್ಕೆಗೆ? ಯಾಕೆ ಹೀಗೆ?

ಪಂದ್ಯ: ರಾತ್ರಿ 8 ಗಂಟೆಗೆ

ಈಜು: ರಾಜ್ಯದ ಶ್ರೀಹರಿ, ರಿಧಿಮಾಗೆ ಚಿನ್ನದ ಪದಕ

ಬೆಂಗಳೂರು: ನೆಟ್ಟಕಲ್ಲಪ್ಪ ಈಜು ಕೇಂದ್ರ(ಎನ್‌ಎಸಿ) ಆಯೋಜಿಸುತ್ತಿರುವ 2ನೇ ಆವೃತ್ತಿಯ ರಾಷ್ಟ್ರೀಯ ಈಜು ಸ್ಪರ್ಧೆಯ ಮೊದಲ ದಿನವಾದ ಶನಿವಾರ ಕರ್ನಾಟಕದ ಶ್ರೀಹರಿ ನಟರಾಜ್‌ ಹಾಗೂ ರಿಧಿಮಾ ಚಿನ್ನದ ಪದಕ ಗೆದ್ದಿದ್ದಾರೆ. ಪುರುಷರ ಸ್ಕಿನ್ಸ್‌ ವಿಭಾಗದ 50 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಶ್ರೀಹರಿ 25.89 ಸೆಕೆಂಡ್‌ಗಳಲ್ಲಿ ಕ್ರಮಿಸಿ ಅಗ್ರಸ್ಥಾನಿಯಾದರು. ಮಹಿಳೆಯರ ವಿಭಾಗದಲ್ಲಿ ರಿಧಿಮಾ 29.35 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ ಚಿನ್ನ ಗೆದ್ದರು. ಮಹಿಳೆಯರ 50 ಮೀ. ಬಟರ್‌ಫ್ಲೈ ಸ್ಕಿನ್ಸ್‌ನಲ್ಲಿ ನೀನಾ ವೆಂಕಟೇಶ್‌, ಪುರುಷರ ವಿಭಾಗದಲ್ಲಿ ಸಾಜನ್‌ ಬಂಗಾರದ ಸಾಧನೆ ಮಾಡಿದರು. ಭಾನುವಾರವೂ ಹಲವು ವಿಭಾಗಗಳ ಸ್ಪರ್ಧೆಗಳು ನಡೆಯಲಿವೆ.

ರಾಷ್ಟ್ರೀಯ ಹಾಕಿ: ರಾಜ್ಯ ತಂಡ ಸೆಮೀಸ್‌ ಪ್ರವೇಶ

ಚೆನ್ನೈ: ಹಾಕಿ ಇಂಡಿಯಾ ಆಯೋಜಿಸುತ್ತಿರುವ 13ನೇ ರಾಷ್ಟ್ರೀಯ ಹಿರಿಯ ಪುರುಷರ ಹಾಕಿ ಟೂರ್ನಿಯಲ್ಲಿ ಕರ್ನಾಟಕ ಸೆಮಿಫೈನಲ್‌ ಪ್ರವೇಶಿಸಿದೆ. ಶನಿವಾರ ಇಲ್ಲಿ ನಡೆದ ಜಾರ್ಖಂಡ್ ವಿರುದ್ಧದ ಕ್ವಾರ್ಟರ್‌ ಫೈನಲ್‌ನಲ್ಲಿ 4-1 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು. ಶೇಷೇ ಗೌಡ 23ನೇ ನಿಮಿಷದಲ್ಲೇ ಬಾರಿಸಿದ ಗೋಲಿನಿಂದ ಕರ್ನಾಟಕ ಖಾತೆ ತೆರೆದರೆ, ಲಿಖಿತ್‌ 32ನೇ ನಿಮಿಷದಲ್ಲಿ ಮುನ್ನಡೆ ಹೆಚ್ಚಿಸಿದರು. 39ನೇ ನಿಮಿಷದಲ್ಲಿ ಜಾರ್ಖಂಡ್‌ ಗೋಲು ಬಾರಿಸಿದರೂ ಕೊನೆ ಕ್ವಾರ್ಟರ್‌ನಲ್ಲಿ ಹರೀಶ್‌ ಹೊಡೆದ ಅವಳಿ ಗೋಲು ತಂಡದ ಗೆಲುವು ಖಚಿತಪಡಿಸಿತು.

ಟಿ20 ತಂಡಕ್ಕೆ ಬೇಕಿದೆ ಕೊಹ್ಲಿ ಎನರ್ಜಿ; ರನ್ ಮಷೀನ್ ಇಲ್ಲದೇ ಹೋದ್ರೆ ಸಂಕಷ್ಟ ತಪ್ಪಿದ್ದಲ್ಲ..!

ಗುಂಪು ಹಂತದಲ್ಲಿ ಎರಡೂ ಪಂದ್ಯ ಗೆದ್ದಿದ್ದ ರಾಜ್ಯ ತಂಡಕ್ಕೆ ಸೆಮೀಸ್‌ನಲ್ಲಿ ಸೋಮವಾರ ಬಲಿಷ್ಠ ಪಂಜಾಬ್‌ ಸವಾಲು ಎದುರಾಗಲಿದೆ. ಭಾರತದ ನಾಯಕ ಹರ್ಮನ್‌ಪ್ರೀತ್‌ ಮುನ್ನಡೆಸುತ್ತಿರುವ ಪಂಜಾಬ್‌ ತಂಡ ಕ್ವಾರ್ಟರ್‌ನಲ್ಲಿ ಮಣಿಪುರವನ್ನು 4-2ರಿಂದ ಸೋಲಿಸಿತು. ಸೋಮವಾರ ಮತ್ತೊಂದು ಸೆಮೀಸ್‌ನಲ್ಲಿ ಹರ್ಯಾಣ-ತಮಿಳುನಾಡು ಮುಖಾಮುಖಿಯಾಗಲಿವೆ.

ಶೂಟಿಂಗ್‌: ಬೆಳ್ಳಿ ಜಯಿಸಿದ ರಾಜ್ಯದ ಸೇನ್‌-ಸೌರಾಷ್ಟ್ರಿ

ನವದೆಹಲಿ: ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಶೂಟಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಡೇರಿಯಸ್‌ ಸೌರಾಷ್ಟ್ರಿ-ತಿಲೋತ್ತಮ ಸೇನ್‌ ಬೆಳ್ಳಿ ಪದಕ ಗೆದ್ದಿದ್ದಾರೆ. 10 ಮೀ. ಏರ್‌ ರೈಫಲ್‌ ಮಿಶ್ರ ತಂಡ ವಿಭಾಗದ ಸ್ಪರ್ಧೆಯ ಫೈನಲ್‌ನಲ್ಲಿ ರಾಜ್ಯದ ಜೋಡಿಗೆ ಪಶ್ಚಿಮ ಬಂಗಾಳದ ಮೆಹುಲಿ ಘೋಷ್‌-ಅಭಿನವ್‌ ಶಾ ಜೋಡಿ ವಿರುದ್ಧ 6-16 ಅಂಕಗಳ ಅಂತರದಲ್ಲಿ ಸೋಲು ಎದುರಾಯಿತು. ಅರ್ಹತಾ ಸುತ್ತಿನಲ್ಲಿ ಕರ್ನಾಟಕ ಜೋಡಿ 631.3 ಅಂಕಗಳೊಂದಿಗೆ 2ನೇ ಸ್ಥಾನಿಯಾಗಿತ್ತು.
 

Follow Us:
Download App:
  • android
  • ios