Asianet Suvarna News Asianet Suvarna News

ಹೊಸಬರ 'ಎಲ್ಟು ಮುತ್ತಾ' ಪೋಸ್ಟರ್ ರಿಲೀಸ್, ಸಾಥ್ ಕೊಟ್ಟ ಶೈಲಜಾ ವಿಜಯ್ ಕಿರಗಂದೂರು ಟೀಮ್!

ಹೈಫ್ 5 ಸ್ಟುಡಿಯೋದ ಮೆಂಟರ್ ಆಗಿರುವ ಸತ್ಯ ಶ್ರೀನಿವಾಸನ್ ಮಾತನಾಡಿ, ಹೈಫ್ 5 ಸ್ಟುಡಿಯೋ ಅಂದರೆ  ಐದು  ಜನರ ಸಂಸ್ಥೆ. ಒಳ್ಳೆ ಕಂಟೆಂಟ್ ಸಿನಿಮಾಗಳನ್ನು ವಿಶ್ವದ ಎಲ್ಲಾ ಸಿನಿಮಾ ಪ್ರೇಮಿಗಳಿಗೆ ತಲುಪಿಸುವುದು. ಈ ನೆಲದ ಕಂಟೆಂಟ್..

Shailaja Vijay Kiraganduru supports new team Eltuu Muthaa movie srb
Author
First Published Apr 8, 2024, 1:13 PM IST

ಕನ್ನಡ ಚಿತ್ರರಂಗದಲ್ಲೀಗ ಯುವ ಪ್ರತಿಭೆಗಳ ಪರ್ವ ಆರಂಭವಾಗಿದೆ. ಹೊಸಬರು ಮಾಡುತ್ತಿರುವ ಸಿನಿಮಾ ಯಶಸ್ಸು ಕಾಣುತ್ತಿದೆ. ಬಗೆಬಗೆಯ ಶೀರ್ಷಿಕೆಗಳ ಮೂಲಕವೇ ಸಿನಿಮಾಗಳು ಸೆಟ್ಟೇರುತ್ತಿವೆ. ಇದೀಗ ಅಂಥದ್ದೇ ವಿಭಿನ್ನ ಟೈಟಲ್ ಮೂಲಕ ಗಮನ ಸೆಳೆಯುತ್ತಿದೆ ಎಲ್ಟು ಮುತ್ತಾ ಸಿನಿಮಾ. 

ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದಲ್ಲಿ ಹೈ5 ಸ್ಟುಡಿಯೋ ನಿರ್ಮಾಣ ಸಂಸ್ಥೆ ಉದ್ಘಾಟನೆ ಹಾಗೂ ಎಲ್ಟು ಮುತ್ತಾ ಸಿನಿಮಾದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹೊಂಬಾಳೆ ಸಂಸ್ಥೆಯ ಸಂಸ್ಥಾಪಕ ವಿಜಯ್ ಕಿರಗಂದೂರು ಪತ್ನಿ ಶೈಲಜಾ ವಿಜಯ್ ಕಿರಗಂದೂರು, ಸಂಗೀತ ಕಟ್ಟಿ, ಎಎಂಆರ್ ರಮೇಶ್ ಹೊಸಬರ ಕನಸಿಗೆ ಸಾಥ್ ಕೊಟ್ಟರು. 

ಸದ್ಯದಲ್ಲೇ ತಲೈವಾ-ಬಿಗ್‌ ಬಿ ಜೋಡಿ ಕಮಾಲ್‌; ಬಾಕ್ಸಾಫೀಸ್ ಬೇಟೆಗೆ 'ವೆಟ್ಟೈಯಾನ್' ಭರ್ಜರಿ ಎಂಟ್ರಿ!

ನಿರ್ದೇಶಕರಾದ ರಾ ಸೂರ್ಯ ಮಾತನಾಡಿ, ಇಡೀ ತಂಡ ನನ್ನ ಮೇಲೆ ಭರವಸೆ ಇಟ್ಟಿದೆ. ಆ ಭರವಸೆ, ನನ್ನ ಏನಾದರೂ ಮಾಡಲು ಫುಶ್ ಮಾಡುತ್ತಿದೆ. ಪ್ರತಿಯೊಬ್ಬರು ಒಂದು ದಿನ ಹೊಸಬರು ಆಗಿರುತ್ತಾರೆ. ಅವರು ನಂತರ ಹಳಬರು ಆಗುತ್ತಾರೆ. ಅದಕ್ಕೆ ಕಾರಣ ನಿಮ್ಮ ಪ್ರೋತ್ಸಾಹ, ಆಶೀರ್ವಾದ. ನಾವು ಈಗ ಹೊಸಬರು, ನಮ್ಮನು ಹಳಬರನಾಗಿ ಮಾಡಿ ,ಬೆಂಬಲ ನಮ್ಮ ಮೇಲೆ ಇರಲಿ. ಸಾವಿಗೆ ಡೋಲು ಬಡಿಯುವವರ ಕಥೆಯನ್ನು ಎತ್ತಿಕೊಂಡು ಸಿನಿಮಾ ಮಾಡಿದ್ದೇನೆ. ಇದು ಸತ್ಯ ಘಟನೆಯ ಆಧಾರಿತ ಸಿನಿಮಾ. ಅದನ್ನು ಫಿಕ್ಷನ್ ವೇನಲ್ಲಿ ಹೇಳಿದ್ದೇನೆ. ಸಿನಿಮಾದಲ್ಲಿ 4 ಹಾಡುಗಳಿವೆ. ಈಗಾಗಲೇ ಡಬ್ಬಿಂಗ್ ಮುಗಿದಿದೆ ಎಂದರು.

ನೆಪೋಟಿಸಂ ಅನುಕೂಲತೆಗಳನ್ನು ಒಪ್ಪಿಕೊಂಡ್ರೆ ಚರ್ಚೆಗಳು ನಿಲ್ಲುತ್ತವೆ; ಹೇಳೇ ಬಿಟ್ರು ಹಿತಾ ಚಂದ್ರಶೇಖರ್!

ಹೈಫ್ 5 ಸ್ಟುಡಿಯೋದ ಮೆಂಟರ್ ಆಗಿರುವ ಸತ್ಯ ಶ್ರೀನಿವಾಸನ್ ಮಾತನಾಡಿ, ಹೈಫ್ 5 ಸ್ಟುಡಿಯೋ ಅಂದರೆ  ಐದು  ಜನರ ಸಂಸ್ಥೆ. ಒಳ್ಳೆ ಕಂಟೆಂಟ್ ಸಿನಿಮಾಗಳನ್ನು ವಿಶ್ವದ ಎಲ್ಲಾ ಸಿನಿಮಾ ಪ್ರೇಮಿಗಳಿಗೆ ತಲುಪಿಸುವುದು. ಈ ನೆಲದ ಕಂಟೆಂಟ್ ಅನ್ನು ಎಲ್ಲೆಡೆ ಪಸರಿಸುವುದು ಈ ಸಂಸ್ಥೆಯ ಉದ್ದೇಶ ಎಂದರು. ನಾವು ಮೂರು ಕಥೆ ಕೇಳಿದವು. ಆದರೆ ಈ ಚಿತ್ರದ ಕಥೆ ಇಷ್ಟವಾಯ್ತು ಎಂದು ತಿಳಿಸಿದರು.

ನಾನು ಜಗಳವಾಡುತ್ತೇನೆ, ನನ್ನಿಂದಾನೇ ಆಗೋದು, ಬೇರೆಯವರಿಂದ ಅಲ್ಲ; ಸತೀಶ್ ನೀನಾಸಂ ಹೇಳಿಕೆ ವೈರಲ್!

ಎಲ್ಟಾ ಮುತ್ತಾ ಸಿನಿಮಾ ಮೂಲಕ ಯುವ ಪ್ರತಿಭೆ ರಾ.ಸೂರ್ಯ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ಒಂದಷ್ಟು ಕಿರುಚಿತ್ರ ನಿರ್ದೇಶನದ ಅನುಭವವನ್ನು ಇಟ್ಟುಕೊಂಡು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ವೈದ್ಯಕೀಯ ಹಿನ್ನೆಲೆಯುಳ್ಳ ಸೂರ್ಯ ಅವರಿಗೆ ಸಿನಿಮಾ ಮೇಲಿನ ಸೆಳೆತ ಅವರನ್ನು ಚಿತ್ರರಂಗಕ್ಕೆ ಕರೆದು ತಂದು ನಿಲ್ಲಿಸಿದೆ. ಎಲ್ಟು ಮುತ್ತಾ ಸಿನಿಮಾ ಮೂಲಕ ಯುವ ನಟ ಶೌರ್ಯ ಪ್ರತಾಪ್ ನಾಯಕನಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇವರಿಗೆ ನಾಯಕಿಯಾಗಿ ಪ್ರಿಯಾಂಕಾ ಮಾಲಲಿ ಸಾಥ್ ಕೊಟ್ಟಿದ್ದಾರೆ. ಕಾಕ್ರೋಚ್ ಸುಧಿ, ಯಮುನಾ ಶ್ರೀನಿಧಿ , ನವೀನ್ ಪಡಿಲ್ ತಾರಾಬಳಗದಲ್ಲಿದ್ದಾರೆ.

ನಾನು ಬೆಳೆದ ಎರಡೂ ಧರ್ಮಗಳಲ್ಲಿ ನಂಬಿಕೆ ಹೊಂದಿದ್ದೇನೆ; ನಟಿ ಮೇಘನಾ ರಾಜ್ ಮಾತಿನ ಮರ್ಮವೇನಿದೆ?

ನೈಜ ಘಟನೆಯಾಧಾರಿತ ಎಲ್ಟು ಮುತ್ತಾ ಸಿನಿಮಾದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಮಡಿಕೇರಿಯ ನೆಲಜಿಯಲ್ಲಿ ಬಹುತೇಕ ಶೂಟಿಂಗ್ ಮಾಡಲಾಗಿದೆ.  ಉಳಿದಂತೆ ಬೆಂಗಳೂರು ಸುತ್ತಮುತ್ತ ಕೂಡ ಚಿತ್ರೀಕರಿಸಲಾಗಿದೆ. ಹೈ5 ಸ್ಟುಡಿಯೋಸ್ ಮೂಲಕ ನಿರ್ದೇಶಕ ರಾ ಸೂರ್ಯ, ನಾಯಕ ಶೌರ್ಯ ಪ್ರತಾಪ್, ಪ್ರಸನ್ನ ಕೇಶವ, ರುಹಾನ್ ಆರ್ಯ ಹಾಗೂ ಬಸವರಾಜೇಶ್ವರಿ ಭೂಮ್ರಡ್ಡಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

25 ದಿನ ಪೂರೈಸಿದ ದೀಕ್ಷಿತ್ ಶೆಟ್ಟಿಯ 'ಬ್ಲಿಂಕ್' ಸಿನಿಮಾ; ಪ್ರೇಕ್ಷಕರು ಅಪ್ಪಿಕೊಂಡು ಗೆಲ್ಲಿಸಿದರು ಎಂದ ಟೀಮ್!

ಎಲ್ಟು ಮುತ್ತಾ ಅಂದರೆ ಚಿತ್ರದ ಎರಡು ಪಾತ್ರಗಳ ಹೆಸರು. ಶೌರ್ಯ ಪ್ರತಾಪ್ ನಾಯಕನಾಗಿ ಬಣ್ಣ ಹಚ್ಚುವುದರ ಜೊತೆಗೆ ಸಹ ನಿರ್ದೇಶಕರಾಗಿ ಹಾಗೂ ಸಹ ಬರಗಾರರನಾಗಿ ಸೂರ್ಯ ಅವರಿಗೆ ಜೊತೆಯಾಗಿ ನಿಂತಿದ್ದಾರೆ. ಪ್ರಸನ್ನ ಕೇಶವ ಸಂಗೀತ, ಮೆಯ್ಯಪ್ಪ ಭಾಸ್ಕರ್ ಛಾಯಾಗ್ರಹಣ, ಕೆ ಯೇಸು ಸಂಕಲನ, ಜ್ಞಾನತಿ ರಾಹುಲ್ ನೃತ್ಯ ಸಂಯೋಜನೆ ಚಿತ್ರಕ್ಕಿದೆ. ಅಜಿತ್ ಕೇಶವ, ರಾ ಸೂರ್ಯ ಹಾಗೂ ಶೌರ್ಯ ಪ್ರತಾಪ್ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ.

Follow Us:
Download App:
  • android
  • ios