userpic
user icon
0 Min read

ಇಬ್ರು ಸ್ಟಾರ್ ನಟಿಯರ ನಡುವೆ ಜಗಳನೇ ಜಾಸ್ತಿ?; ರಮ್ಯಾ ಬಗ್ಗೆ ಮೌನ ಮುರಿದ ಅಮೃತಾ ಅಯ್ಯಂಗಾರ್

Love mocktail Amrutha Iyengar talks about friendship with Ramya vcs
Amrutha Iyengar Ramya

Synopsis

ಇಂಡಸ್ಟ್ರಿಯಲ್ಲಿ ನನಗೆ ಪ್ರತಿಯೊಬ್ಬರೂ ಸ್ನೇಹಿತರೇ ಎಂದು ಹೆಮ್ಮೆಯಿಂದ ಹೇಳಿರುವ ಅಮೃತಾ ಅಯ್ಯಂಗಾರ್ ಮೋಹಕ ತಾರೆ ಬಗ್ಗೆ ಮಾತನಾಡಿದ್ದಾರೆ.
 

ಲವ್ ಮಾಕ್ಟೇಲ್ ಚಿತ್ರದ ಮೂಲಕ ಕನ್ನಡ ಸಿನಿಮಾರಂಗದಲ್ಲಿ ಜರ್ನಿ ಆರಂಭಿಸಿದ ಅಮೃತಾ ಅಯ್ಯಂಗಾರ್ ಮತ್ತು ಮೋಹಕ ತಾರೆ ರಮ್ಯಾ ಹೇಗೆ ಸ್ನೇಹಿತರು ಎಂದು ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಪದೇ ಪದೇ ಪ್ರಶ್ನೆ ಮಾಡುತ್ತಿರುತ್ತಾರೆ. ಇದಕ್ಕೆ ಅಮೃತಾ ಉತ್ತರ ಕೊಟ್ಟಿದ್ದಾರೆ. 

'ಒಬ್ರು ಸ್ನೇಹಿತರ ಮೂಲಕ ನಾನು ರಮ್ಯಾ ಅವರನ್ನು ಭೇಟಿ ಮಾಡಿದ್ದು. ನಾನು ಯಾರೆಂದು ಅವರಿಗೆ ಗೊತ್ತಿತ್ತು ನನ್ನನ್ನು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಆರಂಭಿಸಿದ್ದರು. ಇದೆಲ್ಲಾ ನನಗೆ ಪ್ಯಾನ್ ಮೊಮೆಂಟ್‌ಗಳು. ರಮ್ಯಾ ಅವರನ್ನು ಭೇಟಿ ಮಾಡಿದಾಗ ಹೇಳಿದೆ ನೀವು ನನಗೆ ತುಂಬಾ ಸ್ಫೂರ್ತಿ ತುಂಬುತ್ತೀರಿ ನಿಮ್ಮನ್ನು ನೋಡಿ ಎಷ್ಟೋ ವಿಚಾರಗಳನ್ನು ಕಲಿತಿರುವೆ. ಸಿನಿಮಾಗೆ ಬಂದಾಗ ನೋಡಪ್ಪ ಹೆಸರು ಮಾಡಿದರೆ ರಮ್ಯಾ ಅವರಂತೆ ಹೆಸರು ಮಾಡಬೇಕು ಎಂದು ನಿರ್ಧಾರ ಮಾಡಿದೆ. ಇವತ್ತಿಗೂ ನೋಡಿ ಅವ್ರು ಇಂಡಸ್ಟ್ರಿಗೆ ವಾಪಸ್ ಬರ್ತಾರೆ ಸೋಷಿಯಲ್ ಮೀಡಿಯಾದಲ್ಲಿ ಒಂದು ಫೋಟೋ ಹಾಕುತ್ತಾರೆ ಸಿನಿಮಾಗೆ ವಾಪಸ್ ಬರ್ತಾರೆ ಅಂದರೆ  ಜನರು ಕಾಯುತ್ತಾರೆ. ಎಲ್ಲಾ ನಾಯಕಿಯರಿಗೂ ಈ ಪವರ್ ಇರುವುದಿಲ್ಲ. ಆ ಕ್ರೇಶ್‌ನ ಇಷ್ಟು ವರ್ಷ ಆದ್ರೂ ಕಾಪಾಡಿಕೊಂಡಿರುವುದು ಗ್ರೇಟ್.' ಎಂದು ಖಾಸಗಿ ಸಂದರ್ಶನದಲ್ಲಿ ಅಮೃತಾ ಮಾತನಾಡಿದ್ದಾರೆ.

ಹೊಸ ವರ್ಷಾಚರಣೆಗೆ ಲಂಡನ್‌‌ಗೆ ಹಾರಿದ ರಮ್ಯಾ; ಅಮೃತಾ ಅಯ್ಯಂಗರ್ ಜೊತೆ ಮಸ್ತ್ ಮಜಾ ಮಾಡುತ್ತಿರುವ ಫೋಟೋ ವೈರಲ್

'ನಾನು ತುಂಬಾ ಅದೃಷ್ಟ ಮಾಡಿರುವೆ ಏಕೆಂದರೆ ಯಾವತ್ತೂ ಯಾವ ನಾಯಕಿಯರ ಜೊತೆನೂ ಕಾಣಿಸಿಕೊಂಡಿಲ್ಲ ಆದರೆ ನಾನು ನನ್ನ ತಾಯಿ ಜೊತೆ ದುಬೈಗೆ ಹೋಗಿದ್ದಾಗ ಅಲ್ಲಿ ಅವರನ್ನು ಭೇಟಿ ಮಾಡಿದೆ. ರಮ್ಯಾ ಅವರಿಗೆ ನನ್ನ ಜರ್ನಿ ತುಂಬಾನೇ ಇಷ್ಟವಾಗುತ್ತದೆ ಬ್ಯಾಕ್‌ಗ್ರೌಂಡ್‌ ಇಲ್ಲದೆ ನಾನು ಸಿನಿಮಾ ಜರ್ನಿ ಆರಂಭಿಸಿರುವುದು ಎಂದು. ಕಷ್ಟ ಪಡುತ್ತಿರುವೆ ನಿನ್ನ ಕಾಲುಗಳ ಮೇಲೆ ನೀನು ನಿಂತುಕೊಂಡಿರುವೆ ಎಂದು ಖುಷಿಯಿಂದ ಹೇಳುತ್ತಾರೆ. ಮೊನ್ನೆ ಲಂಡನ್‌ಗೆ ಒಟ್ಟಿಗೆ ಹೋಗಿದ್ವಿ..ಅದೆಲ್ಲಾ ನೆನಪು ಮಾಡಿಕೊಂಡರೆ ಒಂದೊಂದು ಕ್ಷಣವೂ ಅಮೂಲ್ಯ ಅನಿಸುತ್ತದೆ ನಿಜಕ್ಕೂ ಅವರ ಜೊತೆ ಇದ್ದೀವಾ ಅನಿಸುತ್ತದೆ. ಹುಡುಗರಿಗೆ ಮಾತ್ರವಲ್ಲ ಹುಡುಗಿಯರಿಗೂ ಫೆವರೆಂಟ್ ರಮ್ಯಾ, ಅವರನ್ನು ನೋಡಿ ಫ್ಯಾನ್ ಮೊಮೆಂಟ್ ಫೀಲ್ ಆಗವುದು ಫಾರ್‌ಎವರ್' ಎಂದು ಅಮೃತಾ ಹೇಳಿದ್ದಾರೆ.

ಸ್ಟಾರ್ ನಾಯಕಿರು ನಡುವೆ enemity ಇದ್ಯಾ?

'ಇಂಡಸ್ಟ್ರಿಯಲ್ಲಿ ಇಬ್ಬರು ನಟಿಯರ ನಡುವೆ ಜಗಳು ಇರುತ್ತೆ ಅನ್ನೋದು ಸುಳ್ಳು. ಇಂಡಸ್ಟ್ರಿಯಲ್ಲಿರುವ ಪ್ರತಿಯೊಬ್ಬರೂ ನನ್ನ ಸ್ನೇಹಿತರು. ಜಗಳ ಅನ್ನೋ ಪದಕ್ಕೆ ಜಾಗವೇ ಇಲ್ಲ. ರಮ್ಯಾ ಅವರೇ ಬೆಸ್ಟ್‌ ಫ್ರೆಂಡ್ ಆಗಿದ್ದಾರೆ ಅವರು ನಮಗೆ ಸೀನಿಯರ್ ಅವರನ್ನು ನೋಡಿ ಕಲಿಯಬೇಕು ನಾವು ಏಕಂದರೆ ಜ್ಯೂನಿಯರ್ಸ್‌ ಮತ್ತು ಹೊಸ ಕಲಾವಿದರು ಹೊಸ ತಂಡದವರಿಗೆ ತುಂಬಾ ಸಪೋರ್ಟ್ ಮಾಡುತ್ತಾರೆ. ಹಗೆತನದಿಂದ ಏನು ಮಾಡಬೇಕಿಲ್ಲ. ನಾನು ಮಿಲನಾ ಸಿನಿಮಾ ಮಾಡಿದ್ದೀವಿ...ನಾನು ಹೊಟ್ಟೆ ತುಂಬಾ ಊಟ ಮಾಡಬೇಕು ನಿದ್ರೆ ಮಾಡಬೇಕು ಅಂದ್ರೆ ಮೊದಲು ಹೋಗುವುದು ಮಿಲನಾ ಮನೆಗೆ. ಸಪ್ತಮಿ ನಾನು ಒಟ್ಟಿಗೆ ನಟಿಸಿದ್ದೀವಿ, ಸಂಜನಾ ಕೂಡ ಚೆನ್ನಾಗಿದ್ದಾರೆ. ಒಂದು ವಾರ ಪೋನ್ ಮಾಡಿಲ್ಲ ಅಂದ್ರೆ ಮಕ್ಕಳ ರೀತಿ ಮುನಿಸಿಕೊಳ್ಳುವವರು ಇದ್ದಾರೆ ಅಷ್ಟು ಗಟ್ಟಿಯಾಗಿದೆ ನಮ್ಮ ಸ್ನೇಹ' ಎಂದಿದ್ದಾರೆ ಅಮೃತಾ.

ನಟಿ ರಮ್ಯಾ ಜೊತೆ ಕಾಣಿಸಿಕೊಂಡ ಬಡವ ರಾಸ್ಕಲ್ ನಟಿ ಅಮೃತಾ!

ಪಾತ್ರದ ಹಂಬಲ: 

'ಪ್ರತಿಯೊಬ್ಬ ನಾಯಕಿಗೂ ಪಾತ್ರದ ಹಂಬಲ ಇರುತ್ತದೆ. ಯಾರಿಗೂ ಸಾಕಪ್ಪ ಇಷ್ಟು ಮಾಡಿ ಅನಿಸುವುದಿಲ್ಲ..ಜೀವನದಲ್ಲಿ ಎಷ್ಟೇ ಸಿನಿಮಾ ಮಾಡಿದ್ದರೂ ಪಾತ್ರದ ಹಂಬಲ ಇರಬೇಕು. ದಿನ ವಿಭಿನ್ನ ಪಾತ್ರಗಳನ್ನು ಹುಡುಗಬೇಕು. ಕನ್ನಡ ಸಿನಿಮಾ ರಂಗದಲ್ಲಿ ನಟಿಯರಿಗೆ ಅವಕಾಶ ಕಡಿಮೆ ಇಲ್ಲ ನಿಜ ಹೇಳಬೇಕು ಅಂದ್ರೆ ಬೇರೆ ಭಾಷೆಯಲ್ಲಿ ಕನ್ನಡದವರೇ ಮಿಂಚುತ್ತಿದ್ದಾರೆ. ಅನೇಕ ಸಿನಿಮಾಗಳನ್ನು ಕನ್ನಡವರೇ ಮಿಂಚುತ್ತಿರುವುದು' ಎಂದು ಅಮೃತಾ ಹೇಳಿದ್ದಾರೆ. 

Latest Videos