ನಾಯಿ ನಿಮಗೆ ಇಷ್ಟವಿರಬಹುದು? ಹಾಗಂತ ಬೇಕಾಬಿಟ್ಟ ಸಾಕಾಗೋಲ್ಲ, ಇನ್ನು ಮುಂದೆ ಸ್ಟ್ರಿಕ್ಟ್ ರೂಲ್
ಸಾಕು ಪ್ರಾಣಿಗಳು ಇಷ್ಟ ಅಂತ ಜನರು ನಾಯಿ, ಬೆಕ್ಕು, ಕೋಳಿ ಅಂತ ಒಂದಿಷ್ಟು ಪ್ರಾಣಿಗಳನ್ನು ಸಾಕುತ್ತಾರೆ. ಆದ್ರೆ ಅವುಗಳನ್ನು ಹೇಗೆ ಆರೈಕೆ ಮಾಡ್ಬೇಕು ಎಂಬ ಜ್ಞಾನ ಇರೋದಿಲ್ಲ. ನಾಯಿ ಸಾಕಿದ ಮೇಲೆ ಯಾವೆಲ್ಲ ನಿಯಮ ಪಾಲಿಸಬೇಕು ಅಂತಾ ಅಧಿಕಾರಿಗಳು ಹೇಳಿದ್ದಾರೆ ತಿಳ್ಕೊಳ್ಳಿ.
ನಾಯಿಯನ್ನು ಮನೆಯಲ್ಲಿ ಸಾಕಿದ್ರೆ ಸಾಲದು, ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ನಾಯಿಗೆ ಅಗತ್ಯವಿರುವ ಆಹಾರ, ಸ್ವಚ್ಛತೆ, ಸಮಯಕ್ಕೆ ಸರಿಯಾಗಿ ಲಸಿಕೆ ಹಾಕಿಸುವ ಅಗತ್ಯವಿರುತ್ತದೆ. ಕೆಲವರು ನಾಯಿ ಮೇಲಿನ ಪ್ರೀತಿಗೆ ಒಂದಕ್ಕಿಂತ ಹೆಚ್ಚು ನಾಯಿಗಳನ್ನು ಮನೆಯಲ್ಲಿ ಸಾಕ್ತಾರೆ. ಆದ್ರೆ ಸ್ವಚ್ಛತೆ, ಆಹಾರದ ಬಗ್ಗೆ ನಿರ್ಲಕ್ಷ್ಯ ವಹಿಸ್ತಾರೆ. ಇದು ನಾಯಿ, ನಾಯಿ ಸಾಕಿದವರ ಜೊತೆ ನೆರೆಮನೆಯವರ ಮೇಲೂ ಪರಿಣಾಮ ಬೀರುತ್ತದೆ. ನಾಯಿ ಸಾಕಿದವರ ಮನೆಯಿಂದ ನಿರಂತರ ಕೆಟ್ಟ ವಾಸನೆ ಬರ್ತಿದ್ದರೆ ಅದನ್ನು ಸಹಿಸೋದು ಕಷ್ಟ. ಆಗ್ನೇಯ ದೆಹಲಿಯ ಕಾಳಿಂದ ಕಾಲೋನಿಯ ಒಂದು ಮನೆ ಸ್ಥಿತಿ ಕೂಡ ಇದಕ್ಕಿಂತ ಭಿನ್ನವಾಗಿದೆ. ಅಲ್ಲಿನ ಒಂದು ಮನೆಯಲ್ಲಿ ಬೀದಿ ನಾಯಿಗಳನ್ನು ಸಾಕಲಾಗ್ತಿದೆ. ಒಂದಲ್ಲ ಎರಡಲ್ಲ 40ಕ್ಕೂ ಹೆಚ್ಚು ನಾಯಿಗಳು ಮನೆಯಲ್ಲಿವೆ. ಆದ್ರೆ ನಾಯಿಗೆ ಸೂಕ್ತವಾದ ಯಾವುದೇ ವ್ಯವಸ್ಥೆ ಇಲ್ಲ. ಸ್ವಚ್ಛತೆ ಕೊರತೆ ಕಾಡುತ್ತಿದೆ. ಮನೆಯಿಂದ ಗಬ್ಬು ವಾಸನೆ ಬರ್ತಿದೆ ಎಂದು ಅಕ್ಕಪಕ್ಕದವರು ದೂರು ನೀಡಿದ್ದರು. ಈ ದೂರಿನ ಮೇಲೆ ಉಪವಿಭಾಗೀಯ ಮ್ಯಾಜಿಸ್ಟ್ರೇಟ್, ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಎನ್‌ಜಿಒ ಮನೆ ಮೇಲೆ ದಾಳಿ ನಡೆಸಿದ್ದರು. ಈ ದಾಳಿ ನಂತ್ರ ನಾಯಿ ಸಾಕಿರುವ ಕುಟುಂಬಸ್ಥರಿಗೆ ಕೆಲವೊಂದು ನಿಯಮ ಪಾಲಿಸುವಂತೆ ಸೂಚನೆ ನೀಡಿದ್ದಾರೆ. ನೀವೂ ನಾಯಿ ಸಾಕಿದ್ರೆ ಈ ಎಲ್ಲ ನಿಯಮಗಳ ಬಗ್ಗೆ ತಿಳಿದಿರಿ.
ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ (Magistrate) ಆದೇಶವೇನು? : ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅಧಿಕಾರಿ (Officer) ಗಳು, ಸ್ಥಳೀಯರು ಹೇಳಿದಂತೆ ಮನೆ ಸ್ಥಿತಿ ಶೋಚನೀಯವಾಗಿರಲಿಲ್ಲ. ಸ್ವಚ್ಛತೆ ಬಗ್ಗೆ ಕಾಳಜಿವಹಿಸಲಾಗಿತ್ತು. ಆದ್ರೆ ಕೆಲವೊಂದು ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ. ಅದನ್ನು ಪಾಲಿಸುವಂತೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.
ಗೌರಿ ಜೊತೆ ಲವ್ ಹೇಗಾಯ್ತು ಎಂಬ ಸ್ಟೋರಿಯನ್ನು ಚಾಚೂ ತಪ್ಪದೇ ಹೇಳಿದ ಶಾರುಖ್ ಖಾನ್!
• ಎಲ್ಲಾ ನಾಯಿ (Dog) ಗಳಿಗೆ ಹೆಸರು ಮತ್ತು ಸಂಖ್ಯೆಯನ್ನು ನೀಡಬೇಕು. ಕಾಲರ್ ಕಡ್ಡಾಯವಾಗಿ ಹಾಕಬೇಕು. ರಾತ್ರಿಯಿಡಿ ನಾಯಿಗಳು ಅಳೋದ್ರಿಂದ ಕಾಲೋನಿ ಜನರಿಗೆ ನಿದ್ರೆ ಬರ್ತಿಲ್ಲ. ಹಾಗಾಗಿ ಪ್ರತಿ ದಿನ ಕನಿಷ್ಠ 60 ನಿಮಿಷಗಳ ಕಾಲ ವಾಕಿಂಗ್ ಮಾಡಿಸ್ಬೇಕು ಇಲ್ಲವೇ ಆಟಕ್ಕೆ ಅವಕಾಶ ನೀಡಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ.
• ಮನೆಯಲ್ಲಿ ಸರಿಯಾದ ಗಾಳಿ, ಬೆಳಕಿನ ಜೊತೆ ಬೇಸಿಗೆಯಲ್ಲಿ ನಾಯಿಗೆ ಕೂಲರ್ ವ್ಯವಸ್ಥೆ ಮಾಡಬೇಕೆಂದು ಅಧಿಕಾರಿಗಳು ಆದೇಶಿಸಿದ್ದಾರೆ.
• ಎಲ್ಲ ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಬೇಕು. ಅರ್ಹ ಪಶು ವೈದ್ಯರನ್ನು ತಕ್ಷಣ ಸಂಪರ್ಕಿಸಬೇಕೆಂದು ಅವರು ಸೂಚಿಸಿದ್ದಾರೆ.
• ನಾಯಿಗಳನ್ನು ಎರಡು ಕೋಣೆಯಲ್ಲಿ ವಿಂಗಡಿಸಿ ಇಡಬೇಕು. ಯಾವ ಕೋಣೆಯಲ್ಲಿ ಎಷ್ಟು ನಾಯಿ ಇದೆ, ಅದರ ಹೆಸರು ಮತ್ತು ಅದನ್ನು ನೋಡಿಕೊಳ್ಳುತ್ತಿರುವ ವ್ಯಕ್ತಿಗಳ ಹೆಸರನ್ನು ಕೋಣೆ ಬೋರ್ಡ್ ಮೇಲೆ ಬರೆಯಬೇಕು.
• ನಾಯಿ ಇರುವ ಕೋಣೆಯಲ್ಲಿ ಶುದ್ಧ ನೀರಿನ ವ್ಯವಸ್ಥೆ ಮಾಡಬೇಕಲ್ಲದೆ, ನಾಯಿಗೆ ಎರಡು ಬಾರಿಯಾದ್ರೂ ಪೂರ್ಣ ಆಹಾರ ನೀಡಬೇಕು.
• ನಾಯಿಗೆ ಸರಪಳಿ ಹಾಕ್ಬಾರದು. ನಾಯಿಗಳನ್ನೆಲ್ಲ ಒಟ್ಟಿಗೆ ಇಡಲು ಬಿಡಬೇಕು. ಅದ್ರಲ್ಲಿ ಆಕ್ರಮಣಕಾರಿ ನಾಯಿ ಇದ್ರೆ ಅದರ ನಡವಳಿಕೆ ಸುಧಾರಿಸುವ ಹೊಣೆ ನಿಮ್ಮದೇ ಎಂದು ಅಧಿಕಾರಿಗಳು ಹೇಳಿದ್ದಾರೆ.
• ನಾಯಿಗಳನ್ನು ದತ್ತು ಪಡೆಯುವವರನ್ನು ಸದಾ ಹುಡುಕ್ತಿರಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ. ಅಷ್ಟೇ ಅಲ್ಲ ತಲಾ ಐದು ನಾಯಿಗೆ ಒಬ್ಬರಂತೆ ನಾಯಿಯ ಮೇಲ್ವಿಚಾರಣೆ ಮಾಡಲು ಜನರನ್ನು ನೇಮಿಸಬೇಕು ಎಂದೂ ಅಧಿಕಾರಿಗಳು ಸೂಚಿಸಿದ್ದಾರೆ.
ಅವಳಲ್ಲಿದ್ದ ಮೌನ ನನಗೆ ಬದುಕು ಕಟ್ಟುಕೊಟ್ಟಿದೆ: ಅಂತರಾಳದ ಮಾತು ಬಿಚ್ಚಿಟ್ಟ ವಿಜಯ್ ರಾಘವೇಂದ್ರ
• ನಾಯಿಗಳನ್ನು ಸದಾ ಸ್ವಚ್ಛವಾಗಿಡಬೇಕು. ಉತ್ತಮ ಆಹಾರದ ಜೊತೆ ಶುದ್ಧ ನೀರು ಹಾಗೂ ಚಿಕಿತ್ಸೆಯ ಬಗ್ಗೆ ಕಾಳಜಿವಹಿಸಬೇಕು ಎಂದು ಅಧಿಕಾರಿಗಳು ಆದೇಶ ನೀಡಿದ್ದಾರೆ. ಅಲ್ಲದೆ ಕೆಲ ಅಧಿಕಾರಿಗಳಿಗೆ ಈ ನಾಯಿಗಳ ಮೇಲ್ವಿಚಾರಣೆ ನೋಡುವ ಜವಾಬ್ದಾರಿವಹಿಸಿದ್ದಾರೆ.
• ನಿಮ್ಮಲ್ಲೂ ಮೂರು, ನಾಲ್ಕು ನಾಯಿಗಳನ್ನು ಸಾಕಿದ್ದರೆ ಮೇಲಿನ ನಿಯಮಗಳನ್ನು ಪಾಲಿಸಲು ಮರೆಯಬೇಡಿ.