Asianet Suvarna News Asianet Suvarna News

ಹೆಚ್ಚುತ್ತಿದೆ ಸೆಕ್ಸ್‌ ಇಲ್ಲದ ಫ್ರೆಂಡ್‌ಶಿಪ್‌ ಮ್ಯಾರೀಜ್‌, ಅಮೃತಧಾರೆಯ ಗೌತಮ್-ಭೂಮಿಕಾ ಸಂಬಂಧದ ಹಾಗಾ?

ವೈವಾಹಿಕ ಸಂಬಂಧದ ಹೊಸ ರೂಢಿಯೊಂದು ಜಪಾನ್‌ನಲ್ಲಿ ಟ್ರೆಂಡ್‌ ಆಗುತ್ತಿದೆ. ಇಲ್ಲಿ ಪ್ರೀತಿ ಅಥವಾ ಲೈಂಗಿಕತೆಯ ಅಗತ್ಯವಿಲ್ಲ. ʼಫ್ರೆಂಡ್‌ಶಿಪ್‌ ಮ್ಯಾರೀಜ್‌ʼ ಅಥವಾ "ಸ್ನೇಹ ವಿವಾಹ" ಎಂದು ಈ ಅಸಾಂಪ್ರದಾಯಿಕ ವ್ಯವಸ್ಥೆಯನ್ನು ಕರೆಯಲಾಗುತ್ತೆ.

Friendship marriage trend as Gowtham diwan and bhoomika relationship in Amruthadhare bni
Author
First Published May 17, 2024, 1:13 PM IST

ವೈವಾಹಿಕ ಸಂಬಂಧದ ಹೊಸ ರೂಢಿಯೊಂದು ಜಪಾನ್‌ನಲ್ಲಿ ಟ್ರೆಂಡ್‌ ಆಗುತ್ತಿದೆ. ಇಲ್ಲಿ ಪ್ರೀತಿ ಅಥವಾ ಲೈಂಗಿಕತೆಯ ಅಗತ್ಯವಿಲ್ಲ. ʼಫ್ರೆಂಡ್‌ಶಿಪ್‌ ಮ್ಯಾರೀಜ್‌ʼ ಅಥವಾ "ಸ್ನೇಹ ವಿವಾಹ" ಎಂದು ಈ ಅಸಾಂಪ್ರದಾಯಿಕ ವ್ಯವಸ್ಥೆಯನ್ನು ಕರೆಯಲಾಗುತ್ತೆ. ಲೈಂಗಿಕತೆಯ ಅಗತ್ಯವಿಲ್ಲದವರು, ಸಲಿಂಗಕಾಮಿಗಳು, ಸಾಂಪ್ರದಾಯಿಕ ವಿವಾಹದ ರೂಢಿಗಳಿಂದ ಭ್ರಮನಿರಸನಗೊಂಡವರು, ಭಿನ್ನಲಿಂಗೀಯರು ಸೇರಿದಂತೆ ಹೆಚ್ಚಿನ ಸಂಖ್ಯೆಯ ಯುವಜನರು ಇದರತ್ತ ಮಾರುಹೋಗುತ್ತಿದ್ದಾರೆ.

ಏನಿದು ಫ್ರೆಂಡ್‌ಶಿಪ್‌ ಮ್ಯಾರೀಜ್?‌
ಫ್ರೆಂಡ್‌ಶಿಪ್‌ ಮ್ಯಾರೀಜ್ ಅಥವಾ ಸ್ನೇಹ ವಿವಾಹ ಅಂದರೆ ಮದುವೆಯ ಹೆಸರಿನಲ್ಲಿ ಸಹಬಾಳ್ವೆ ಅಷ್ಟೇ. ಕೆಲವು ಆಸಕ್ತಿಗಳು ಮತ್ತು ಮೌಲ್ಯಗಳ ಆಧಾರದ ಮೇಲೆ ನಡೆಸುವ ಸಹಬಾಳ್ವೆಯ ಸಂಬಂಧವಿದು. ಇಲ್ಲಿ ಪ್ರೀತಿ ಪ್ರೇಮ ಪ್ರಣಯ ರೊಮ್ಯಾನ್ಸ್‌ ಇರುವುದಿಲ್ಲ. ನಿಮ್ಮ ಉತ್ತಮ ಸ್ನೇಹಿತನನ್ನೇ ಮದುವೆಯಾಗಬೇಕೆಂದೂ ಅಲ್ಲ. ಬದಲಿಗೆ ಇದು ಲೈಂಗಿಕ ಅನ್ಯೋನ್ಯತೆಯ ಕಟ್ಟುಪಾಡು ಮೀರಿದ ಕಾನೂನಾತ್ಮಕ ಒಪ್ಪಂದ.

ಈ ಮದುವೆಗಳಲ್ಲಿ, ದಂಪತಿ ಒಟ್ಟಿಗೆ ಅಥವಾ ಪ್ರತ್ಯೇಕವಾಗಿ ವಾಸಿಸಬಹುದು. ಇವರು ಮಕ್ಕಳನ್ನು ಹೊಂದಲು ನಿರ್ಧರಿಸಿದರೆ ಕೃತಕ ಗರ್ಭಧಾರಣೆಯನ್ನು ಆರಿಸಿಕೊಳ್ಳಬಹುದು. ಪರಸ್ಪರ ಒಪ್ಪಂದವಿರುವವರೆಗೆ ಇಬ್ಬರೂ ಪಾಲುದಾರರು. ಮದುವೆಯ ಹೊರಗೆ ಪ್ರಣಯ ಸಂಬಂಧಗಳನ್ನು ಮುಂದುವರಿಸಲು ಸ್ವತಂತ್ರರು!

ಸ್ನೇಹ ವಿವಾಹವು ಒಂದೇ ರೀತಿಯ ಆಸಕ್ತಿಗಳನ್ನು ಹೊಂದಿರುವ ರೂಮ್‌ಮೇಟ್ ಅನ್ನು ಹೊಂದುವುದು ಎನ್ನಬಹುದು ಎಂದು ಮೂರು ವರ್ಷಗಳ ಕಾಲ ಅಂತಹ ದಾಂಪತ್ಯದಲ್ಲಿದ್ದ ಒಬ್ಬ ವ್ಯಕ್ತಿ ತಿಳಿಸುತ್ತಾರೆ. "ಯಾರೋ ಒಬ್ಬನ ಪತ್ನಿಯಾಗಲು ನಾನು ಸೂಕ್ತಳಲ್ಲ. ಆದರೆ ನಾನು ಉತ್ತಮ ಸ್ನೇಹಿತೆಯಾಗಬಲ್ಲೆ. ನಾವಿಬ್ಬರೂ ಇಷ್ಟಪಡುವ, ಚಾಟ್ ಮಾಡಲು ಮತ್ತು ನಗಲು ಒಂದೇ ರೀತಿಯ ಅಭಿರುಚಿಯನ್ನು ಹೊಂದಿರುವ ಯಾರಾದರೂ ನನಗೆ ಸಾಕು" ಎಂಬುದು ಆಕೆಯ ಅಭಿಮತ.

ಈ ಪರಿಕಲ್ಪನೆ ರೋಟಿಕ್ ಅಲ್ಲ ಎಂಬಂತೆ ಕಾಣುತ್ತದೆ. ಆದರೆ ಸುಮಾರು 80% ಸ್ನೇಹ ವಿವಾಹದ ದಂಪತಿಗಳು ಒಟ್ಟಿಗೆ ಸಂತೋಷದಿಂದ ಬದುಕುತ್ತಾರೆ. ಅನೇಕರು ಮಕ್ಕಳನ್ನು ಸಹ ಹೊಂದಿದ್ದಾರಂತೆ. ಸಂಭಾವ್ಯ ಪಾಲುದಾರರು ಸುಗಮ ಬದುಕನ್ನು ಖಚಿತಪಡಿಸಿಕೊಳ್ಳಲು ತಮ್ಮ ಸಹಬಾಳ್ವೆಯ ವಿವರಗಳನ್ನು ಚರ್ಚಿಸಲು ಗಂಟೆಗಳ ಕಾಲ ಕಳೆಯುತ್ತಾರೆ.

ಪತ್ನಿ ಈ 6 ವರ್ತನೆಗಳನ್ನು ತೋರಿಸ್ತಿದ್ರೆ ಪತಿ ವಿಚ್ಚೇದನಕ್ಕೆ ಯೋಚಿಸೋದ್ರಲ್ಲಿ ತಪ್ಪಿಲ್ಲ..

ಸ್ನೇಹ ವಿವಾಹಗಳಲ್ಲಿ ಆಸಕ್ತಿ ಹೊಂದಿರುವ ವ್ಯಕ್ತಿಗಳು ಸಾಮಾನ್ಯವಾಗಿ ಸುಮಾರು 32.5 ವರ್ಷ ವಯಸ್ಸಿನವರು. ಸರಾಸರಿಗಿಂತ ಹೆಚ್ಚಿನ ಆದಾಯವನ್ನು ಗಳಿಸುತ್ತಾರೆ. 85%ರಷ್ಟು ಮಂದಿ ಸ್ನಾತಕೋತ್ತರ ಪದವಿ ಅಥವಾ ಹೆಚ್ಚಿನ ಪದವಿ ಹೊಂದಿದ್ದಾರೆ. ನಿರ್ದಿಷ್ಟವಾದ ಲೈಂಗಿಕ ಬಯಕೆಯಿಲ್ಲದೆ ಒಡನಾಟವನ್ನು ಬಯಸುವ ಅಲೈಂಗಿಕ ವ್ಯಕ್ತಿಗಳಿಗೆ, ಜಪಾನ್‌ನಲ್ಲಿ ಕಾನೂನುಬದ್ಧವಾಗಿ ಮದುವೆಯಾಗಲು ಸಾಧ್ಯವಾಗದ ಸಲಿಂಗಕಾಮಿಗಳಿಗೆ ಈ ವ್ಯವಸ್ಥೆ ಚೆನ್ನಾಗಿ ಹೊಂದುತ್ತದೆ.

ಕೆಲವು ಭಿನ್ನಲಿಂಗೀಯ ಯುವಕರು ವೃತ್ತಿಜೀವನದ ಪ್ರಗತಿಗಾಗಿ ಅಥವಾ ಅವರ ಪೋಷಕರನ್ನು ಮೆಚ್ಚಿಸಲು ಸಾಂಪ್ರದಾಯಿಕ ಸಂಬಂಧಗಳಿಗೆ ಪರ್ಯಾಯವಾಗಿ ಸ್ನೇಹ ವಿವಾಹಗಳನ್ನು ಸ್ವೀಕರಿಸುತ್ತಾರೆ. ಜಪಾನ್‌ನಲ್ಲಿ ವಿವಾಹವಾಗುವವರಿಗೆ ಟ್ಯಾಕ್ಸ್‌ ವಿನಾಯಿತಿ ಇದೆ. ಒಂಟಿ ಮಹಿಳೆಯರಿಗೆ ಮಕ್ಕಳನ್ನು ಹೊಂದುವುದು ಇಲ್ಲಿ ಕಷ್ಟಕರ. 70%ಕ್ಕಿಂತ ಹೆಚ್ಚು ಸ್ನೇಹ ವಿವಾಹ ಪಾಲುದಾರರು ಮಕ್ಕಳನ್ನು ಹೊಂದುವ ಉದ್ದೇಶದಿಂದಲೇ ಮದುವೆಯಾಗುತ್ತಾರೆ.

ಸ್ನೇಹ ವಿವಾಹಗಳ ಸಂಖ್ಯೆ ಇನ್ನೂ ಕಡಿಮೆ ಇದೆ. ಆದರೆ ಜಾಗತಿಕವಾಗಿ ಯುವಜನರಲ್ಲಿ ಬಲವಾಗುವ ಸಾಧ್ಯತೆ ಕಾಣಿಸುತ್ತಿದೆ. ಯಾಕೆಂದರೆ ಸಾಂಪ್ರದಾಯಿಕ ವಿವಾಹದ ವ್ಯಾಖ್ಯಾನಗಳು ಬದಲಾಗುತ್ತಿವೆ. ಮೊದಲಿನಂತೆ ಈಗ ಲೈಂಗಿಕತೆ ಮಾತ್ರ ಮದುವೆಯ ಉದ್ದೇಶ ಅಲ್ಲ. ಲೈಂಗಿಕತೆಯಿಲ್ಲದ ದಾಂಪತ್ಯ ಎಲ್ಲರಿಗೂ ರುಚಿಸುವುದು ಕಷ್ಟ. ಆದರೂ ಇದು ಅನಾರೋಗ್ಯಕರವಲ್ಲ. ಜಪಾನಿನ ಜನಸಂಖ್ಯೆಯ ಸುಮಾರು 1%ರಷ್ಟು ಜನರು ಸ್ನೇಹ ವಿವಾಹಗಳಿಗೆ ಮಾರುಹೋಗಿದ್ದಾರೆ. ಇದು ಜನಪ್ರಿಯತೆಯನ್ನು ಗಳಿಸುತ್ತಲೇ ಇದೆ.

ಕೆಲ ಮಹಿಳೆಯರು ಸಂಗಾತಿಗೆ ಮೋಸ ಮಾಡೋದೇಕೆ? ಇಲ್ಲಿದೆ 8 ಕಾರಣಗಳು
 

Latest Videos
Follow Us:
Download App:
  • android
  • ios