Asianet Suvarna News Asianet Suvarna News

Cycling and Firtility: ಸೈಕ್ಲಿಂಗ್ ಮಾಡಿದರೆ ಪುರುಷತ್ವವೇ ಕಡಿಮೆಯಾಗುತ್ತಾ?

ಪುರುಷರು ಫಿಟ್‌ನೆಸ್ ಕಾಪಾಡಿಕೊಳ್ಳಲು ಸೈಕ್ಲಿಂಗ್ ಮೊರೆ ಹೋಗುವುದೇನೋ ಸರಿ. ಆದರೆ ಹೆಚ್ಚು ಹೆಚ್ಚು ಸೈಕ್ಲಿಂಗ್ ಮಾಡಿದರೆ ಪುರುಷತ್ವಕ್ಕೆ ಹಾನಿಯಾಗುತ್ತದೆ ಎಂಬ ನಂಬಿಕೆಯಿದೆ. ಇದು ನಿಜವಾ?

 

are Cycling and virility related what study says on fitness exercise affecting health bni
Author
First Published Apr 7, 2024, 12:45 PM IST

ಸೈಕ್ಲಿಂಗ್ (cycling) ನಿಜವಾಗಿಯೂ ಪುರುಷರ ಲೈಂಗಿಕ ಕಾರ್ಯಕ್ಷಮತೆಗೆ (virility) ಹಾನಿ ಮಾಡುತ್ತದೆಯೇ ಎಂಬ ಅನುಮಾನವು ಸೈಕ್ಲಿಸ್ಟ್‌ಗಳನ್ನು ದೀರ್ಘಕಾಲದಿಂದ ಕಾಡುತ್ತಿರುತ್ತದೆ. ಪರಿಣಾಮವಾಗಿ, ಸೈಕ್ಲಿಂಗ್ ಬಗ್ಗೆ ಅನೇಕ ಸಿದ್ಧಾಂತಗಳು ಮತ್ತು ಊಹಾಪೋಹಗಳು ಹೊರಹೊಮ್ಮಿವೆ. ಇದು ಪುರುಷ ಫಲವತ್ತತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಕೆಲವರು ಹೇಳುತ್ತಾರೆ. ಇನ್ನು ಕೆಲವರು, ಸೈಕ್ಲಿಂಗ್‌ನಿಂದ ಲೈಂಗಿಕ ಸಾಮರ್ಥ್ಯ ಕಳೆದು ಹೋಗುತ್ತದೆ, ಇನ್ನು ಕೆಲವರು ಲೈಂಗಿಕ ಸಂವೇದನೆ (sexual sensation) ಕಡಿಮೆಯಾಗುತ್ತದೆ ಎನ್ನುತ್ತಾರೆ.

ಆದರೆ ಇತ್ತೀಚಿನ ಸಂಶೋಧನೆಯೊಂದು ಆ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿದೆ. ಈ ಸಂಶೋಧನೆಯಲ್ಲಿ 2,500ಕ್ಕೂ ಹೆಚ್ಚು ಸೈಕ್ಲಿಸ್ಟ್‌ಗಳನ್ನು ಪರೀಕ್ಷಿಸಲಾಯಿತು. 500 ಈಜುಗಾರರನ್ನು ಹಾಗೂ 800ಕ್ಕೂ ಹೆಚ್ಚು ಓಟಗಾರರನ್ನು ಕೂಡ ಪರೀಕ್ಷೆಗೆ ಒಳಪಡಿಸಲಾಯಿತು. ನಂತರ ಇದನ್ನು ಪರಸ್ಪರ ಹೋಲಿಸಲಾಯಿತು.

ಇದರ ಫಲಿತಾಂಶ ಸೈಕ್ಲಿಸ್ಟ್‌ಗಳಿಗೆ ಸಾಕಷ್ಟು ಸಮಾಧಾನ ನೀಡುವಂತಿದೆ ಎನ್ನುತ್ತಾರೆ ಈ ಸಂಶೋಧನೆಯಲ್ಲಿ ಭಾಗವಹಿಸಿರುವ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಮೂತ್ರಶಾಸ್ತ್ರದ ಪ್ರಾಧ್ಯಾಪಕ ಡಾ.ಬೆಂಜಮಿನ್ ಬ್ರೇಯರ್. ಸೈಕ್ಲಿಂಗ್‌ನಿಂದ ಆಗುವ ಪ್ರಯೋಜನಗಳಿಗೆ ಹೋಲಿಸಿದರೆ ಸೈಕ್ಲಿಂಗ್‌ಗೆ ಸಂಬಂಧಿಸಿದ ಅಪಾಯಗಳು ಅತ್ಯಲ್ಪ ಎಂದು ಅವರು ತೀರ್ಮಾನಿಸಿದ್ದಾರೆ. ತಮ್ಮ ಸಂಶೋಧನೆಯಲ್ಲಿ, ಡಾ. ಬೆಂಜಮಿನ್, ಸೈಕ್ಲಿಸ್ಟ್‌ಗಳ ಲೈಂಗಿಕ ಆರೋಗ್ಯದ ಕುರಿತು ಪ್ರಶ್ನಾವಳಿಯನ್ನು ರಚಿಸಿದರು, ಉದಾಹರಣೆಗೆ, ಸೈಕ್ಲಿಂಗ್ ನಂತರ ಜನನಾಂಗಗಳಲ್ಲಿ ಮರಗಟ್ಟುವಿಕೆ ಅಥವಾ ನೋಯುತ್ತಿರುವಂತೆ ಆಗುವ ಸೆನ್ಸೇಷನ್ ಆಗುತ್ತದೆಯೇ ಎಂಬುದು.

ಅವರಲ್ಲಿ ಪಡೆದ ಉತ್ತರಗಳನ್ನು ಪರಿಶೀಲಿಸಿದಾಗ - ಈಜುಗಾರರು ಮತ್ತು ಓಟಗಾರರಿಗೆ ಹೋಲಿಸಿದರೆ, ಸೈಕ್ಲಿಸ್ಟ್‌ಗಳ ಲೈಂಗಿಕ ಮತ್ತು ಮೂತ್ರಕೋಶದ ಸಮಸ್ಯೆಗಳು ಅಷ್ಟೇನೂ ಇಲ್ಲ ಎಂದು ಕಂಡುಬಂದಿದೆ. ಸೈಕ್ಲಿಂಗ್ ಮಾಡುವುದರಿಂದ ನಿಮಿರುವಿಕೆಯ ಸಮಸ್ಯೆ ಉಂಟಾಗುತ್ತದೆ ಎಂದು ಹೇಳಲು ಯಾವುದೇ ನಿರ್ದಿಷ್ಟ ಕಾರಣವಿಲ್ಲ ಎಂದು ಡಾ.ಬೆಂಜಮಿನ್ ಹೇಳಿದ್ದಾರೆ. 

ಆದರೆ ನಿಜಕ್ಕೂ ಅಪಾಯ ಯಾವುದು ಗೊತ್ತಾ? ಸೈಕ್ಲಿಂಗ್ ಅಲ್ಲ. ಬದಲು ನೀವು 8 ಗಂಟೆ ಕಂಪ್ಯೂಟರ್ ಮುಂದೆ ಕುಳಿತರೆ.... ಆಗ ಸಮಸ್ಯೆಯಿದೆ. ಪ್ರೊಫೆಸರ್ ಬೆಂಜಮಿನ್, ಬೈಸಿಕಲ್ ಸವಾರಿ ಮಾಡುವುದಕ್ಕಿಂತ ಕಂಪ್ಯೂಟರ್ ಮುಂದೆ ಕುಳಿತುಕೊಳ್ಳುವುದು ಅಥವಾ ಎಂಟು ಗಂಟೆಗಳ ಕಾಲ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುವುದು ಲೈಂಗಿಕ ಕಾರ್ಯಕ್ಷಮತೆಗೆ ಹೆಚ್ಚು ಹಾನಿ ಮಾಡುತ್ತದೆ ಎಂದು ಬಹಿರಂಗಪಡಿಸಿದ್ದಾರೆ.

ಆದಾಗ್ಯೂ, ಈ ಸಂಶೋಧನೆಯು, ಸೈಕ್ಲಿಸ್ಟ್‌ಗಳು ಮೂತ್ರನಾಳದ ಸಂಕೋಚನ ಸಮಸ್ಯೆಯನ್ನು ಹೊಂದುವ ಸಾಧ್ಯತೆಯಿದೆ ಎಂದು ಕಂಡುಹಿಡಿದಿದೆ. ಅದೆಂದರೆ, ಮೂತ್ರದ ಹರಿವಿನ ಸಮಸ್ಯೆ ಉಂಟಾಗಬಹುದು. ಇದಲ್ಲದೆ, ಇಡೀ ಸೈಕ್ಲಿಂಗ್ ಸಮಯದಲ್ಲಿ 20 ಪ್ರತಿಶತದಷ್ಟು ವಿರಾಮವನ್ನು ತೆಗೆದುಕೊಳ್ಳುವುದರಿಂದ ಕೈಕಾಲುಗಳಲ್ಲಿ ಸೆಳೆತದ ಸಾಧ್ಯತೆಯನ್ನು ಕಡಿಮೆ ಮಾಡಬಹುದು. 

ಗಂಡ ಹೆಂಡತಿ ನಡುವಿನ ಖಾಸಗಿ ವಿಷಯವಂತೆ ಇದು

ಬಿಸಿ ಹಾಗೂ ಸೆಖೆ ವೀರ್ಯಾಣುಗಳ ಸಂಖ್ಯೆಯನ್ನು ಆಘಾತಕಾರಿ ಮಟ್ಟಕ್ಕೆ ಇಳಿಸಬಹುದು. ಬಿಗಿಯಾದ ಒಳ ಉಡುಪು, ಬಿಸಿಯಾದ ನೀರಿನ ಸ್ನಾನ, ಬಿಸಿ ಇರುವ ಸ್ಥಳಗಳಲ್ಲಿ ಕೆಲಸ ಮೊದಲಾದವುಗಳು ವೀರ್ಯಾಣುಗಳ ಸಂಖ್ಯೆಯನ್ನು ಕಡಿಮೆಗೊಳಿಸುತ್ತವೆ. ದಿನವಿಡೀ ಬೈಕ್ ಚಲಾಯಿಸುವುದು ಅಥವಾ ಫ್ಯಾಶನ್ ಎಂದು ದಿನವಿಡೀ ಬಿಗಿಯಾದ ಜೀನ್ಸ್ ಧರಿಸುವುದೂ ವೀರ್ಯಾಣುಗಳ ಸಂಖ್ಯೆಯನ್ನು ಕಡಿಮೆಗೊಳಿಸುತ್ತದೆ.

ಮದ್ಯಪಾನದ ವ್ಯಸನಿಗಳಲ್ಲಿ ಟೆಸ್ಟೋಸ್ಟೆರೋನ್ ಪ್ರಮಾಣ ವಿಪರೀತವಾಗಿ ಕಡಿಮೆಯಾಗುತ್ತದೆ. ಅಲ್ಲದೇ ಮಹಿಳೆಯರಲ್ಲಿ ಈಸ್ಟ್ರೋಜೆನ್ ಪ್ರಮಣವನ್ನು ಹೆಚ್ಚಿಸುತ್ತದೆ. ಇದರಿಂದಲೂ ವೀರ್ಯಾಣುಗಳ ಸಂಖ್ಯೆ ಅಪಾರವಾಗಿ ಕಡಿಮೆಯಾಗುತ್ತದೆ. ಕೆಲವರು ಮೂತ್ರಕ್ಕೆ ಅವಸರವಾಗುತ್ತದೆ ಎಂಬ ಕಾರಣ ಒಡ್ಡಿ ನೀರನ್ನೇ ಕುಡಿಯುವುದಿಲ್ಲ. ಇದು ಅಪಾಯಕಾರಿಯಾಗಿದ್ದು ಹಲವು ಆರೋಗ್ಯದ ತೊಂದರೆಗಳ ಸಹಿತ ವೀರ್ಯಾಣುಗಳ ಸಂಖ್ಯೆ ಮತ್ತು ಗುಣಮಟ್ಟವನ್ನೂ ಕುಂದಿಸುತ್ತದೆ. ಆದ್ದರಿಂದ ದಿನವಿಡೀ ಸತತವಾಗಿ ನೀರು, ಹಣ್ಣಿನ ರಸಗಳನ್ನು ಸೇವಿಸುತ್ತಾ ಇರಬೇಕು.

ಇನ್ಯಾರಿಗೋ ಕಾಯ್ಬೇಡಿ… ನಿಮ್ಮನ್ನೇ ನೀವು ತಬ್ಬಿಕೊಂಡು ನೋಡಿ, ಆಗುತ್ತೆ ಕಮಾಲ್
 

Follow Us:
Download App:
  • android
  • ios