Asianet Suvarna News Asianet Suvarna News

ಇದು ಸಾಮಾನ್ಯ ಅಲ್ಲ, ಸಂವಿಧಾನ ಉಳಿಸುವ ಚುನಾವಣೆ: ರಾಹುಲ್‌ ಗಾಂಧಿ

ಆರ್‌ಎಸ್‌ಎಸ್‌ನ ಸಿದ್ಧಾಂತದ ವಿರುದ್ಧ ಬೀದಿಗಳಲ್ಲಿ, ಗ್ರಾಮಗಳಲ್ಲಿ ಮತ್ತು ನೀವು ಎಲ್ಲೆಲ್ಲಿ ಇದ್ದೀರೋ ಅಲ್ಲೆಲ್ಲಾ ಹೋರಾಡಿ. ಏಕೆಂದರೆ ನೀವೇ ಇದರ ರಕ್ಷಕರು. ಜೊತೆಗೆ ಬಿಜೆಪಿ ಭಾರತದ ಪರಿಕಲ್ಪನೆ, ಸಂವಿಧಾನದ ವಿರುದ್ಧ ದಾಳಿ ಮಾಡುತ್ತಿದೆ ಎಂಬುದರ ಬಗ್ಗೆ ಜನರಿಗೆ ತಿಳಿ ಹೇಳಿ: ರಾಹುಲ್‌ ಗಾಂಧಿ 

This is an Election to save the Constitution Says Rahul Gandhi grg
Author
First Published Apr 19, 2024, 10:26 AM IST

ನವದೆಹಲಿ(ಏ.19):  ಈ ಬಾರಿಯದ್ದು ಸಾಮಾನ್ಯ ಚುನಾವಣೆ ಅಲ್ಲ, ಸಂವಿಧಾನ ಉಳಿಸುವ ಚುನಾವಣೆ ಎಂದು ಬಣ್ಣಿಸಿರುವ ಕಾಂಗ್ರೆಸ್‌ ನಾಯಕ್‌ ರಾಹುಲ್‌ ಗಾಂಧಿ ದೇಶವನ್ನು ಕಾಪಾಡುವ ಹೊಣೆ ನಿಮ್ಮ ಮೇಲಿದೆ ಎಂದು ಪಕ್ಷದ ಕಾರ್ಯಕರ್ತರಿಗೆ ಸಂದೇಶ ರವಾನಿಸಿದ್ದಾರೆ.

ಮೊದಲ ಹಂತದ ಚುನಾವಣೆಗೂ ಮುನ್ನಾ ದಿನ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ರಾಹುಲ್‌ ಗಾಂಧಿ, ‘ಇದು ಚುನಾವಣೆಯ ಸಮಯವಾದ್ದರಿಂದ ನಾನು ನಿಮ್ಮ ಜೊತೆ ನೇರವಾಗಿ ಮಾತನಾಡಬೇಕು ಎಂದುಕೊಂಡಿದ್ದೇನೆ. ನೀವೆಲ್ಲಾ ನಮ್ಮ ಪಕ್ಷದ ಬೆನ್ನಲುಬು. ಈ ಬಾರಿಯದ್ದು ಸಾಮಾನ್ಯ ಚುನಾವಣೆ ಅಲ್ಲ, ಇದು ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಸುವ ಚುನಾವಣೆ. ಇದರಲ್ಲಿ ಬಬ್ಬರ್‌ ಶೇರ್‌ (ಸಿಂಹದ ಹೃದಯ) ಕಾರ್ಯಕರ್ತರಾದ ನಿಮ್ಮಂಥವರ ಹೊಣೆಗಾರಿಗೆ ಅತ್ಯಂತ ದೊಡ್ಡದಿದೆ’ ಎಂದು ಹೇಳಿದ್ದಾರೆ.

ಡಿಕೆ ಶಿವಕುಮಾರ ಪರಮ ನೀಚ: ಎಚ್‌ಡಿ ಕುಮಾರಸ್ವಾಮಿ ವಾಗ್ದಾಳಿ

ಜೊತೆಗೆ, ‘ನಾನು ಹೀಗೇಕೆ ಹೇಳುತ್ತೇನೆಂದರೆ ಕಾಂಗ್ರೆಸ್‌ನ ಸಿದ್ಧಾಂತ ಮತ್ತು ಚಿಂತನೆ ನಿಮ್ಮ ನರನಾಡಿಗಳಲ್ಲೂ ಹರಿದಾಡುತ್ತಿದೆ. ಆದರೆ ಬಿಜೆಪಿಯ ಮತ್ತು ಆರ್‌ಎಸ್‌ಎಸ್‌, ಭಾರತದ ಪರಿಕಲ್ಪನೆಗೆ ವಿರುದ್ಧವಾಗಿದೆ. ಅವರು ನಮ್ಮ ಸಂವಿಧಾನವನ್ನು, ಪ್ರಜಾಪ್ರಭುತ್ವದ ಚೌಕಟ್ಟನ್ನು, ಚುನಾವಣಾ ಆಯೋಗ ಸೇರಿದಂತೆ ನಮ್ಮ ಸಂಸ್ಥೆಗಳನ್ನು ಮತ್ತು ಭಾರತೀಯ ಕಾನೂನಿನ ಚೌಕಟ್ಟನ್ನೇ ನಾಶ ಮಾಡುತ್ತಿದ್ದಾರೆ.’

ಹೀಗಾಗಿಯೇ ಆರ್‌ಎಸ್‌ಎಸ್‌ನ ಸಿದ್ಧಾಂತದ ವಿರುದ್ಧ ಬೀದಿಗಳಲ್ಲಿ, ಗ್ರಾಮಗಳಲ್ಲಿ ಮತ್ತು ನೀವು ಎಲ್ಲೆಲ್ಲಿ ಇದ್ದೀರೋ ಅಲ್ಲೆಲ್ಲಾ ಹೋರಾಡಿ. ಏಕೆಂದರೆ ನೀವೇ ಇದರ ರಕ್ಷಕರು. ಜೊತೆಗೆ ಬಿಜೆಪಿ ಭಾರತದ ಪರಿಕಲ್ಪನೆ, ಸಂವಿಧಾನದ ವಿರುದ್ಧ ದಾಳಿ ಮಾಡುತ್ತಿದೆ ಎಂಬುದರ ಬಗ್ಗೆ ಜನರಿಗೆ ತಿಳಿ ಹೇಳಿ’ ಎಂದು ರಾಹುಲ್‌ ಕರೆ ನೀಡಿದ್ದಾರೆ.

Follow Us:
Download App:
  • android
  • ios