Asianet Suvarna News Asianet Suvarna News

ಸಂಸದ ರಾಜಾ ಅಮರೇಶ್ವರ ಜನಪರವಾದ ರಾಜಕಾರಣಿ: ಸಚಿವ ಬೋಸರಾಜು ಬಣ್ಣನೆ

ರಾಜಕಾರಣಿ ಜಾತಿ, ಮತ, ಪಂಥ ಮರೆತು ಅಭಿವೃದ್ಧಿ ಕಾಮಗಾರಿಗಳು ಕೈಗೊಂಡಾಗ ಜನರು ಅವರನ್ನು ರಾಜಕೀಯದಲ್ಲಿ ಎತ್ತರದ ಸ್ಥಾನಕ್ಕೆ ತೆಗೆದುಕೊಂಡು ಹೋಗುತ್ತಾರೆ ಎಂದು ಸಣ್ಣ ನೀರಾವರಿ, ಮಾಹಿತಿ ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಹೇಳಿದರು. 

Minister NS Boseraju Talks Over MP Raja Amareshwara Naik At Raichur gvd
Author
First Published Oct 21, 2023, 6:39 PM IST

ಲಿಂಗಸುಗೂರು (ಅ.21): ರಾಜಕಾರಣಿ ಜಾತಿ, ಮತ, ಪಂಥ ಮರೆತು ಅಭಿವೃದ್ಧಿ ಕಾಮಗಾರಿಗಳು ಕೈಗೊಂಡಾಗ ಜನರು ಅವರನ್ನು ರಾಜಕೀಯದಲ್ಲಿ ಎತ್ತರದ ಸ್ಥಾನಕ್ಕೆ ತೆಗೆದುಕೊಂಡು ಹೋಗುತ್ತಾರೆ ಎಂದು ಸಣ್ಣ ನೀರಾವರಿ, ಮಾಹಿತಿ ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಹೇಳಿದರು. ತಾಲೂಕಿನ ಗುರುಗುಂಟಾದಲ್ಲಿ ಕೇಂದ್ರ ಸರ್ಕಾರದ ರೂರ್ಬನ್ ಶ್ಯಾಮ್‌ ಪ್ರಕಾಶ್‌ ಮುಖರ್ಜಿ ಯೋಜನೆಯಡಿ ನಿರ್ಮಾಣಗೊಂಡ ನಾನಾ ಕಟ್ಟಡಗಳನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಿ ಅವರು ಮಾತನಾಡಿದರು.

ಪರಿಶಿಷ್ಟ ಪಂಗಡ, ಜಾತಿಯ ಜನರೆ ಅಧಿಕ ಸಂಖ್ಯೆಯಲ್ಲಿ ವಾಸ ಮಾಡುವ ಗುರುಗುಂಟಾ ಹಾಗೂ ಸುತ್ತಮುತ್ತಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಸಂಸದ ರಾಜಾ ಅಮರೇಶ್ವರ ನಾಯಕರು ಶಿಸ್ತು ಬದ್ಧವಾದ ಅಭಿವೃದ್ಧಿ ಕಾಮಗಾರಿಗಳನ್ನು ಮಾಡುವ ಮೂಲಕ ಜನಪರವಾದ ಶಿಸ್ತಿನ ರಾಜಕಾರಣಿಯಾಗಿದ್ದಾರೆ ಎಂದರು.ಮಾರುಕಟ್ಟೆ, ಗ್ರಾಪಂಗಳ ಸುಜ್ಜಜಿತ ಕಡ್ಡಗಳು, ರೈತರಿಗಾಗಿ ಶೀತಲೀಕರಣ ಘಟಕ, ಗೋದಾಮು, ಸಿಸಿ ರಸ್ತೆ, ಚರಂಡಿ, ಟವರ್ ಲೈಟುಗಳ ಅಳವಡಿಕೆ, ನಾಡ ಕಚೇರಿ ಕಟ್ಟಡ, ಪಶು ಆಸ್ಪತ್ರೆ, ವಾಲ್ಮೀಕಿ ಸಮುದಾಐದ ಬಾಲಕಿಯರಿಗೆ ವಸತಿ ಶಾಲೆಯ ಜೀಣೋದ್ಧಾಕರ ಸೇರಿದಂತೆ ಒಟ್ಟು 71 ಕಾಮಾಗಾರಿಗಳ ಪೈಕಿ 61 ಕಾಮಗಾರಿಗಳನ್ನು ಸಕಾಲದಲ್ಲಿಯೇ ಮುಗಿಸುವ ಮೂಲಕ ಹೊಸ ಅಭಿವೃದ್ಧಿ ಪರ್ವ ಆರಂಭಿಸಿದ್ದಾರೆ ಎಂದು ಹೊಗಳಿದರು.

ಒಬ್ಬ ರೈತನಿಗೆ ಪ್ರೋತ್ಸಾಹ ನೀಡಿದರೆ 100 ಮಂದಿಗೆ ಉದ್ಯೋಗ ಸಿಗುತ್ತೆ: ಸಚಿವ ಚಲುವರಾಯಸ್ವಾಮಿ

ಸಣ್ಣ ನೀರಾವರಿ ಯೋಜನೆಯಡಿ ಜಿಲ್ಲೆಯ ಬಡ ರೈತರಿಗೆ ಅನುಕೂಲವಾಗಲು ಕೆಲವೇ ತಿಂಗಳುಗಳಲ್ಲಿ ಈ ಭಾಗದ ಶಾಸಕ-ಸಂಸದರು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಣ್ಣ ನೀರಾವರಿ ಇಲಾಖೆಯ ಸೌಲಭ್ಯಗಳನ್ನು ರೈತರಿಗೆ ನೀಡಲಾಗುವುದು. ಸಣ್ಣ ನೀರಾವರಿ ಇಲಾಖೆ ಯೋಜನೆಗಳು ಗುರುಗುಂಟಾ ಸೇರಿದಂತೆ ಜಿಲ್ಲೆಯಲ್ಲಿ ಜಾರಿಗೊಳಿಸಲಾಗುವುದೆಂದು ಭರವಸೆ ನೀಡಿದರು. ಸಂಸದ ರಾಜಾ ಅಮರೇಶ್ವರ ನಾಯಕ ಮಾತನಾಡಿ, ಕೇಂದ್ರ ಸರ್ಕಾರ ರಾಯಚೂರು ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ಮುಂದಾಗಿದ್ದು ಮಹತ್ವಕಾಂಕ್ಷೆ ಜಿಲ್ಲೆ ಎಂದು ಘೋಷಣೆ ಮಾಡಿ ಮೂಲ ಸೌಕರ್ಯಗಳ ಒದಗಿಸಿಲು ಹೆಚ್ಚಿನ ಆದ್ಯತೆ ನೀಡುತ್ತಿದೆ. ಜಲಧಾರೆ ಯೋಜನೆ ಮೂಲಕ ಎಲ್ಲಾ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಕಾಮಗಾರಿ ಭರದಿಂದ ಸಾಗಿದೆ. ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಸಾರಿಗೆ ಸೇವೆಗೆ ಯೋಜನೆ ಕಾಮಗಾರಿಗಳು ತ್ವರಿತ ಗತಿಯಲ್ಲಿ ಸಾಗಿವೆ ಎಂದರು.

ತಪ್ಪು ಮಾಡಿದವರು ಅನುಭವಿಸಲೇಬೇಕು: ಡಿಕೆಶಿ ವಿರುದ್ಧ ಖೂಬಾ ಪರೋಕ್ಷ ವಾಗ್ದಾಳಿ

ಶಾಸಕ ಮಾನಪ್ಪ ವಜ್ಜಲ್ ಮಾತನಾಡಿದರು. ಈ ವೇಳೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರಾಣಿ ತಾರಾ ರಾಜಾ ಸೋಮನಾಥ ನಾಯಕ, ಶಿವಾಜಿ ನಾಯ್ಕ ರಾಠೋಡ್, ದೇವಪ್ಪ ಐದಬಾವಿ, ಎಸಿ ಶಿಂಧೆ ಅವಿನಾಶ ಸಂಜೀವನ, ತಹಸೀಲ್ದಾರ ಎಸ್.ಶಂಶಾಲ, ಇಓ ಅಮರೇಶ ಯಾದವ್, ಎಇಇಗಳಾದ ಶಿವಕುಮಾರ, ರಾಜಾ ಶಶಾಂಕ ನಾಯಕ, ತಿಮ್ಮಣ್ಣ, ರಾಜಾ ಶ್ರೀನಿವಾಸ ನಾಯಕ, ರಾಜಾ ಸೋಮನಾಥ ನಾಯಕ, ಉಪಾಧ್ಯಕ್ಷೆ ಯಂಕಮ್ಮ ನಂದೀಶ ನಾಯಕ, ಚಿದಾನಂದ, ಬಸವರಾಜ, ಗಜೇಂದ್ರ ನಾಯಕ, ವೆಂಕಟೇಶ ಗುತ್ತೆದಾರ, ಚೆನ್ನಯ್ಯ ಹೊರಪ್ಯಾಟಿಮಠ, ರಮೇಶ ಬಸಾಪುರ, ಸೈಯದ್ ಇಸ್ಮಾಯಿಲ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Follow Us:
Download App:
  • android
  • ios