Asianet Suvarna News Asianet Suvarna News

ಸಿದ್ದರಾಮಯ್ಯ ಸಿಎಂ ಆಗದೆ ಇದ್ದಿದ್ರೆ ಗ್ಯಾರಂಟಿ ಜಾರಿ ಅಸಾಧ್ಯ: ಸಚಿವ ಬೈರತಿ ಸುರೇಶ್‌

ಸಿದ್ದರಾಮಯ್ಯ ಬಡವರ ಪರವಾಗಿದ್ದರಿಂದಲೇ ಐದು ಗ್ಯಾರಂಟಿಗಳನ್ನು ೮ ತಿಂಗಳಲ್ಲಿ ಜಾರಿಗೊಳಿಸಿದರು ಎಂದರು. ಸಿದ್ದರಾಮಯ್ಯ ಬಸವಾದಿ ಶರಣರು, ದಾಸ ಶ್ರೇಷ್ಠರು ಹಾಗೂ ಡಾ.ಬಿ.ಆರ್.ಅಂಬೇಡ್ಕರ್‌ ಅವರ ಸಮ ಸಮಾಜದ ನಿರ್ಮಾಣದ ಕನಸಿನಂತೆ ರಾಜ್ಯವನ್ನು ಆಳುತ್ತಿದ್ದಾರೆ. ಸಿದ್ದರಾಮಯ್ಯ ಇರೋ ತನಕ ಬಡವರ ಪರವಾಗಿಯೇ ಇರುತ್ತಾರೆ: ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ 

Minister Byrathi Suresh Talks over Guarantee Schemes in Karnataka grg
Author
First Published Jan 28, 2024, 5:24 AM IST

ಗುಂಡ್ಲುಪೇಟೆ(ಜ.28): ಸಿದ್ದರಾಮಯ್ಯ ಸಿಎಂ ಆಗದೆ ಇದ್ದಿದ್ರೆ,ಬೇರೆ ಯಾರೇ ಆಗಿದ್ರೆ ರಾಜ್ಯದಲ್ಲಿ ಐದು ಗ್ಯಾರಂಟಿ ಜಾರಿಗೆ ತರಲು ಆಗುತ್ತಿರಲಿಲ್ಲ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಹೇಳಿದರು.

ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ಶ್ರೀ ಕನಕದಾಸ ಜಯಂತಿ ಆಚರಣಾ ಸಮಿತಿ ಆಯೋಜಿಸಿದ್ದ ೫೨೪ ನೇ ಶ್ರೀ ಕನಕದಾಸ ಜಯಂತಿ ಮಹೋತ್ಸವ ಉದ್ಘಾಟಿಸಿ ಮಾತನಾಡಿ, ಸಿದ್ದರಾಮಯ್ಯ ಬಡವರ ಪರವಾಗಿದ್ದರಿಂದಲೇ ಐದು ಗ್ಯಾರಂಟಿಗಳನ್ನು ೮ ತಿಂಗಳಲ್ಲಿ ಜಾರಿಗೊಳಿಸಿದರು ಎಂದರು. ಸಿದ್ದರಾಮಯ್ಯ ಬಸವಾದಿ ಶರಣರು, ದಾಸ ಶ್ರೇಷ್ಠರು ಹಾಗೂ ಡಾ.ಬಿ.ಆರ್.ಅಂಬೇಡ್ಕರ್‌ ಅವರ ಸಮ ಸಮಾಜದ ನಿರ್ಮಾಣದ ಕನಸಿನಂತೆ ರಾಜ್ಯವನ್ನು ಆಳುತ್ತಿದ್ದಾರೆ. ಸಿದ್ದರಾಮಯ್ಯ ಇರೋ ತನಕ ಬಡವರ ಪರವಾಗಿಯೇ ಇರುತ್ತಾರೆ ಎಂದರು.

ತಹಸೀಲ್ದಾರ್ ಕಚೇರಿ ಎದುರು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ; ಪೊಲೀಸರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ!

ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ ಜನಪರ. ನಾನು ಸಿದ್ದರಾಮಯ್ಯ ಸರ್ಕಾರದಲ್ಲಿ ಮಂತ್ರಿಯಾಗಿರುವುದೇ ನನಗೆ ಹೆಮ್ಮೆ. ಬಡವರ ಬಗ್ಗೆ ಸಿದ್ದರಾಮಯ್ಯ ಅವರಿಗೆ ಇರೋ ಕಾಳಜಿ, ಪ್ರೀತಿ, ವಿಶ್ವಾಸ ಬೇರೆ ರಾಜಕಾರಣಿಗಳಲ್ಲಿ ಕಾಣುವುದು ಕಷ್ಟ, ನುಡಿದಂತೆ ನಡೆದ ಸರ್ಕಾರ ಮತ್ತು ಸಿದ್ದರಾಮಯ್ಯ ಮಾತ್ರ ಎಂದರು.

ಸಿದ್ದರಾಮಯ್ಯ ಬಡವರು ಆರ್ಥಿಕವಾಗಿ ಸಬಲರಾಗಲಿ ಎಂದು ಐದು ಗ್ಯಾರಂಟಿಗಳಿಗೆ ೬೦ ಸಾವಿರ ಕೋಟಿಯನ್ನು ಬಜೆಟ್‌ನಲ್ಲಿ ಮೀಸಲು ಇಟ್ಟಿದ್ದಾರೆ. ಸಿದ್ದರಾಮಯ್ಯ ಸರ್ವ ಜನೋ ಸುಖಿನೋ ಭವಂತು ಎನ್ನುವ ಬದ್ಧತೆ ಹಾಗೂ ಸಾಮಾಜಿಕ ನ್ಯಾಯ ಪರವಾಗಿ ಇದ್ದಾರೆ ಎಂದರು.

೨ ನೇ ಬಾರಿಗೆ ಸಿಎಂ

ಸಿದ್ದರಾಮಯ್ಯ ೨೦೧೩ ರಲ್ಲಿ ಸಿಎಂ ಆಗಿ ಐದು ವರ್ಷ ಪೂರೈಸಿದರು. ಈಗ ಮತ್ತೆ ಆಕಾಶದಿಂದ ಇಳಿದು ಬಂದು ಸಿಎಂ ಆಗಲಿಲ್ಲ. ೧೩೫ ಶಾಸಕರ ಬೆಂಬಲ ಹಾಗೂ ಹೈ ಕಮಾಂಡ್‌ ಆಶೀರ್ವಾದದಿಂದ ಸಿಎಂ ಆಗಿದ್ದಾರೆ. ಸಿದ್ದರಾಮಯ್ಯ ಅವರ ಕೈ ಬಲಪಡಿಸಿದರೆ ಕಾಂಗ್ರೆಸ್‌ ಕೈ ಬಲಪಡಿಸಿದಂತೆ. ಕಾಂಗ್ರೆಸ್‌ ಬಲಪಡಿಸಿದರೆ ರಾಜ್ಯದ ಜನತೆಗೆ ಕೈ ಬಲ ಪಡಿಸಿದಂತಾಗಲಿದೆ ಎಂದರು.

ಈ ವೇಳೆ ಮಾಜಿ ಸಂಸದ ಎಂ.ಶಿವಣ್ಣ, ಮಾಜಿ ಸಚಿವ ಎಚ್.ಎಂ.ರೇವಣ್ಣ ಮಾತನಾಡಿದರು. ಕೆ.ಆರ್.ನಗರ ಗುರುಪೀಠದ ಶ್ರೀಗಳು ಆಶೀರ್ವಚನ ನೀಡಿದರು. ಸಮಾರಂಭದಲ್ಲಿ ಶಾಸಕ ಡಿ.ರವಿಶಂಕರ್‌, ದರ್ಶನ್‌ ಧ್ರುವನಾರಾಯಣ, ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಪಿ.ಮರಿಸ್ವಾಮಿ, ಕಾಡ ಮಾಜಿ ಅಧ್ಯಕ್ಷ ಎಚ್.‌ಎಸ್.ನಂಜಪ್ಪ, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್.ನಂಜುಂಡಪ್ರಸಾದ್‌, ಕುರುಬರ ಸಂಘದ ನಣಜೇಗೌಡ, ಮುಖಂಡರಾದ ರಮೇಶ್‌, ಎಸ್‌ಆರ್‌ಎಸ್‌ ರಾಜು, ಬಿ.ಎಂ.ಮುನಿರಾಜು, ಆರ್.ಮಧು ಕುಮಾರ್‌, ಎಚ್.ಸಿ.ಬಸವರಾಜು, ಶಿವಕುಮಾರ್‌,ರಘು,ಪೊಲೀಸ್‌ ಪ್ರಕಾಶ್‌, ಎಚ್.ಎನ್.ಬಸವರಾಜು, ಆಲತ್ತೂರು ಜಯರಾಂ ಸೇರಿದಂತೆ ಸಾವಿರಾರು ಮಂದಿ ಇದ್ದರು.

ನನಗೆ,ಯತೀಂದ್ರಗೆ ಗಣೇಶ್‌ ಪರಮಾಪ್ತ: ಭೈರತಿ ಸುರೇಶ್‌

ಮಾಜಿ ಸಚಿವ ದಿವಂಗತ ಎಚ್.ಎಸ್.ಮಹದೇವಪ್ರಸಾದ್‌ ಸಿದ್ದರಾಮಯ್ಯ ಅವರಿಗೆ ಆಪ್ತರು, ನನಗೆ ಮತ್ತು ಯತೀಂದ್ರ ಸಿದ್ದರಾಮಯ್ಯಗೆ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಪರಮಾಪ್ತ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಹೇಳಿದರು. ಗುಂಡ್ಲುಪೇಟೆ ಕ್ಷೇತ್ರದ ಜನರು ಒಳ್ಳೆಯ ಶಾಸಕ ಗಣೇಶ್‌ ಪ್ರಸಾದ್‌ ರನ್ನು ಗೆಲ್ಲಿಸಿದ್ದೀರಾ! ಗಣೇಶ್‌ ಪ್ರಸಾದ್‌ ಗುಂಡ್ಲುಪೇಟೆ ಜನತೆಗೆ ಕುಡಿವ ನೀರಿಗಾಗಿ ಅನುದಾನ ಕೇಳಿದಾಗ ಮರು ಮಾತನಾಡದೆ ೧೩೫ ಕೋಟಿ ಹಣ ನೀಡಿದ್ದೇನೆ. ಆದಷ್ಟು ಬೇಗ ಕೆಲಸ ಮುಗಿಸಿ ಉದ್ಘಾಟನೆಗೆ ಕರೆಯಿರಿ ಬರುತ್ತೇನೆ ಎಂದರು.

ಶಾಲಾ ಕಾಲೇಜು ಸ್ಥಾಪನೆಗೆ ವೈಯಕ್ತಿಕವಾಗಿ ಹಣ ಕೊಡುವೆ: ಬೈರತಿ ಸುರೇಶ್‌

ರಾಜ್ಯದಲ್ಲಿ ೫೦ ಲಕ್ಷ ಕುರುಬರು ಇದ್ದಾರೆ ಜಿಲ್ಲೆ ಹಾಗೂ ತಾಲೂಕಲ್ಲಿ ಸಮಾಜಕ್ಕೆ ಹಾಸ್ಟೆಲ್‌, ಶಾಲಾ, ಕಾಲೇಜುಗಳಿಲ್ಲದ ಕಾರಣ ಸರ್ಕಾರದ ಅನುದಾನದ ಜೊತೆಗೆ ನನ್ನ ಸ್ವಂತ ಹಣವನ್ನು ಕೊಡುತ್ತೇನೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಘೋಷಿಸಿದರು. ಸಮಾರಂಭದಲ್ಲಿ ಮಾತನಾಡಿ ೫೦ ಲಕ್ಷದಷ್ಟು ಕುರುಬರು ರಾಜ್ಯದಲ್ಲಿ ಇದ್ದರೂ ಜನಸಂಖ್ಯೆಗೆ ಅನುಗುಣವಾಗಿ ಅನುದಾದ ಸಿಗದ ಕಾರಣ ಸಮಾಜಕ್ಕೆ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಹಾಸ್ಟೆಲ್‌ ಹಾಗೂ ಶಾಲಾ, ಕಾಲೇಜುಗಳಿಲ್ಲ ಎಂದರು.

ಕುರುಬರು ಮುಗ್ಧ ಜನ. ಹಾಲಿನಷ್ಟೆ ಶ್ರೇಷ್ಟ. ಸಮಾಜದ ದೃಷ್ಠಿಯಿಂದ ನಾನು ವೈಯಕ್ತಿಕವಾಗಿ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಹಾಸ್ಟೆಲ್‌ ಹಾಗೂ ಶಾಲಾ, ಕಾಲೇಜು ಸ್ಥಾಪನೆಗೆ ಹಣ ಕೊಡುತ್ತೇನೆ ಎಂದು ವಾಗ್ದಾನ ಮಾಡಿದರು.
ಗುಂಡ್ಲುಪೇಟೆಯಲ್ಲಿ ನಿರ್ಮಾಣ ಹಂತದಲ್ಲಿರುವ ಕನಕ ಭವನಕ್ಕೆ ಅನುದಾನ ಕೊರತೆಯಿದೆ ಇದೆ ಎಂಬ ಮಾಹಿತಿಯಿದೆ. ಕನಕ ಭವನಕ್ಕೆ ಅನುದಾನ ಕೊರತೆ ಆಗದಂತೆ ಅನುದಾನ ಕನಕ ಭವನಕ್ಕೆ ಸಿಎಂ ೭೫ ಲಕ್ಷ ನೀಡಲು ಒಪ್ಪಿದ್ದಾರೆ:

ಗುಂಡ್ಲುಪೇಟೆ: ಗುಂಡ್ಲುಪೇಟೆ ಕನಕ ಭವನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ೭೫ ಲಕ್ಷ ನೀಡಲು ಒಪ್ಪಿದ್ದಾರೆ, ಆರು ತಿಂಗಳಲ್ಲಿ ಕನಕ ಭವನ ಉದ್ಘಾಟನೆಗೆ ಪ್ರಯತ್ನಿಸುವುದಾಗಿ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್ ಹೇಳಿದರು.
ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ಶ್ರೀ ಕನಕದಾಸ ಜಯಂತಿ ಆಚರಣಾ ಸಮಿತಿ ಆಯೋಜಿಸಿದ್ದ ೫೨೪ ನೇ ಶ್ರೀ ಕನಕದಾಸ ಜಯಂತಿ ಮಹೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾಜಿ ಸಚಿವ ಎಚ್.ಎಸ್.ಮಹದೇವಪ್ರಸಾದ್‌ ಕನಸಿನ ಕೂಸಾದ ಕನಕ ಭವನ ನೆನಗುದಿಗೆ ಬಿದ್ದಿದೆ ಎಂದರು.

ಕಳೆದ ಸರ್ಕಾರದಲ್ಲಿ ಅನುದಾನ ಬರಲಿಲ್ಲ. ಈಗ ಮುಖ್ಯಮಂತ್ರಿ ೭೫ ಲಕ್ಷ ರು. ಅನುದಾನ ಬಂದರೆ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ ಭವನ ಉದ್ಘಾಟನೆ ಆಗುವಂತೆ ನೋಡಿಕೊಳ್ಳವುದಾಗಿ ಹೇಳಿದರು.

ಎಚ್‌ಎಸ್‌ಎಂ ಕಾಲದ್ದು:

ಗುಂಡ್ಲುಪೇಟೆ ಪಟ್ಟಣಕ್ಕೆ ದಿನದ ೨೪ ಗಂಟೆ ಕುಡಿವ ನೀರಿನ ಯೋಜನೆಗೆ ಮಾಜಿ ಸಚಿವ ಎಚ್.ಎಸ್.ಮಹದೇವಪ್ರಸಾದ್‌ ಅನುಮೋದನೆ ಕೊಡಿಸಿದ್ದರು. ಈಗ ಸಚಿವ ಬೈರತಿ ಸುರೇಶ್‌ ಅನುದಾನ ಕೊಟ್ಟಿದ್ದಾರೆ. ಆರೇಳು ತಿಂಗಳಲ್ಲಿ ಕುಡಿವ ನೀರಿನ ಯೋಜನೆಗೆ ಚಾಲನೆ ಸಿಗಲಿದೆ ಎಂದರು.

ಜಾತಿ, ಧರ್ಮದ ಹೆಸರಲ್ಲಿ ರಾಜಕಾರಣ ಮಾಡುವವರನ್ನು ಕ್ಷೇತ್ರದ ಜನರು ವಿರೋಧಿಸಬೇಕು ಜೊತೆಗೆ ಜಾತಿ,ಧರ್ಮ ರಾಜಕಾರಣಕ್ಕೆ ಅವಕಾಶವನ್ನು ಕೊಡಬಾರದು. ಕ್ಷೇತ್ರದ ಜನರು ನಾವೆಲ್ಲ ಒಂದೇ ರೀತಿ ಇರಬೇಕು ಎಂಬುದು ನನ್ನಾಆಶಯ ಎಂದರು. ಗುಂಡ್ಲುಪೇಟೆ ಕ್ಷೇತ್ರ ಶಾಂತಿಯ ತೋಟವಾಗಿರಬೇಕು. ಜಾತಿ, ಧರ್ಮದ ರಾಜಕಾರಣ ನಾನು ಮಾಡಲ್ಲ. ನನ್ನದೇನಿದ್ದರೂ ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಎಲ್ಲರು ಒಂದಾಗಿರಬೇಕು ಎಂದರು.
ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರ ಕೈ ಬಲ ಪಡಿಸಬೇಕು ನಿಮ್ಮ ಪ್ರೀತಿ, ವಿಶ್ವಾಸ ಇರಲಿ ನಾನು ನಿಮ್ಮ ಜೊತೆ ಸದಾ ಇರುತ್ತೇನೆ ಎಂದು ಅಭಯ ನೀಡಿದರು. ಕೊಡಿಸುವ ಜವಬ್ದಾರಿ ನನ್ನದು. ಕನಕ ಭವನ ಉದ್ಘಾಟನೆ ಕರೆಯಿರಿ ಕಂಡಿತಾ ನಾನು ಯತೀಂದ್ರ ಬರುತ್ತೇವೆ.

ಕನಕ ಭವನಕ್ಕೆ 5ಲಕ್ಷ ಅನುದಾನ ನೀಡಿದ ವಿ.ಪ ಸದಸ್ಯ ಮರಿತಿಬ್ಬೇಗೌಡ

ಗುಂಡ್ಲುಪೇಟೆ: ಗುಂಡ್ಲುಪೇಟೆ ಪಟ್ಟಣದಲ್ಲಿ ನಿರ್ಮಾಣ ಹಂತದಲ್ಲಿರುವ ಕನಕ ಭವನಕ್ಕೆ ಈ ಹಿಂದೆ ಐದು ಲಕ್ಷ ಅನುದಾನ ನೀಡಿದ್ದೇ ಮತ್ತೆ ಐದು ಲಕ್ಷ ಅನುದಾನ ನೀಡುವುದಾಗಿ ವಿ.ಪ ಸದಸ್ಯ ಮರಿತಿಬ್ಬೇಗೌಡ ಘೋಷಿಸಿದರು.
ಸಮಾರಂಭದಲ್ಲಿ ಮಾತನಾಡಿ ಶಾಸಕ ಎಚ್.‌ಎಂ.ಗಣೇಶ್‌ ಪ್ರಸಾದ್‌ ಅವರು ಕನಕ ಜಯಂತಿ ಮಹೋತ್ಸವಕ್ಕೆ ಹೆಚ್ಚಿನ ಸಹಕಾರ ನೀಡಿದ್ದಾರೆ. ಕನಕ ಭವನ ಅನುದಾನ ಕೊರತೆಯಿಂದ ಸ್ಥಗಿತಗೊಂಡಿದೆ ಹಾಗಾಗಿ ಐದು ಲಕ್ಷ ಅನುದಾನ ನೀಡುವೆ ಎಂದರು.

ಬಿಡಿಗಾಸು ಕೊಟ್ಟಿಲ್ಲ

ರಾಜ್ಯದಲ್ಲಿ ಭೀಕರ ಬರಗಾಲ ಬಂದಿದೆ. ಕೇಂದ್ರ ಸರ್ಕಾರ ಇಲ್ಲಿಯ ತನಕ ಬಿಡಿಗಾಸು ಕೊಟ್ಟಿಲ್ಲ. ರಾಜ್ಯ ಸರ್ಕಾರವೇ ಬರಗಾಲಕ್ಕೆ ಸಾಧ್ಯವಾದಷ್ಟು ಅನುದಾನ ನೀಡುತ್ತಿದೆ. ರಾಜ್ಯ ಸರ್ಕಾರ ರೈತರ ಸಾಲದ ಬಿಡ್ಡಿ ಮನ್ನಾ ಮಾಡಿದೆ ಅಸಲು ಮನ್ನಾ ಮಾಡಲಿ ಎಂದು ಒತ್ತಾಯಿಸಿದರು.

ದೊಡ್ಡ ಚಿಂತಕ

ಕನಕದಾಸ ೧೫ ನೇ ಶತಮಾನದಲ್ಲೆ ಕೀರ್ತನೆ ಮೂಲಕ ಬೀದಿ ಬೀದಿಗಳಲ್ಲಿ ಸಾರುತ್ತ ಜನ ಸಮುದಾಯಕ್ಕೆ ಮೌಢ್ಯತೆಯಿಂದ ಹೊರ ಬರಲ ಹೇಳಿದರು ಅಲ್ಲದೆ ಉತ್ತಮ ಬದುಕಿಗೆ ಸಾಗಿಸಿ ಎಂದ ದೊಡ್ಡ ಚಿಂತಕ ಎಂದರು.

ಕನಕ ಭವನಕ್ಕೆ ಅನುದಾನ ನೀಡುವೆ

ಗುಂಡ್ಲುಪೇಟೆ: ಕನಕ ಭವನಕ್ಕೆ ಐದು ಲಕ್ಷ ಅನುದಾನ ನನ್ನ ನಿಧಿಯಲ್ಲಿ ಕೊಡುತ್ತೇನೆ ಎಂದು ಮಾಜಿ ಸಚಿವ ವಿಧಾನ ಪರಿಷತ್‌ ಬಿಜೆಪಿ ಸದಸ್ಯ ಅಡಗೂರು ಎಚ್‌ ವಿಶ್ವನಾಥ್‌ ಘೋಷಿಸಿದರು. ಪಟ್ಟಣದಲ್ಲಿ ಕನಕದಾಸ ಜಯಂತಿ ಆಚರಣಾ ಸಮಿತಿ ಆಯೋಜಿಸಿದ್ದ ಕನಕದಾಸ ಜಯಂತಿ ಮಹೋತ್ಸವ ಸಮಾರಂಭದಲ್ಲಿ ಕನಕದಾಸರಿಗೆ ಪುಷ್ಪಾರ್ಚನೆ ನೆರವೇರಿಸಿದ ಬಳಿಕ ಮಾತನಾಡಿ ನಾನು ಕೊಡುತ್ತಿರುವುದು ಜನರ ತೆರಿಗೆಯ ಹಣ ಎಂದರು. ಇದು ಶಾಸಕ, ಸಂಸದ, ವಿಪ ಸದಸ್ಯರ ಹಣವಲ್ಲ ಜನರ ತೆರಿಗೆಯ ಹಣವನ್ನು ಕೊಡುತ್ತೇನೆ. ನಮಗೊಂದು ಪತ್ರ ಕೊಡಿ ೫ ಲಕ್ಷ ಕೊಡುತ್ತೇನೆ ಎಂದು ಹೇಳಿದರು.

ರಾಜ್ಯದಲ್ಲಿ ೩೨ ಜಯಂತಿಗಳು, ಹಬ್ಬ, ಶನಿವಾರ, ಭಾನುವಾರಗಳ ರಜೆಯಲ್ಲೇ ಸರ್ಕಾರ ಕಾಲ ಕಳೆದರೆ ರಾಜ್ಯದ ಅಭಿವೃದ್ಧಿ, ಆಡಳಿತಕ್ಕೆ ಸಮಯವೇ ಇಲ್ಲ. ಹಾಗಾಗಿ ಎಲ್ಲಾ ವಿಭೂತಿ ಪುರುಷರ ಜಯಂತಿಗಳನ್ನು ಆಚರಿಸಿ ಆಡಳಿತ ನಡೆಸಿ ಆಗ ಅಭಿವೃದ್ಧಿಗೆ ಸಹಕಾರಿ ಆಗಲಿದೆ ಎಂದು ಮಾಜಿ ಸಚಿವ ಅಡಗೂರು ವಿಶ್ವನಾಥ್‌ ಸರ್ಕಾರಕ್ಕೆ ಸಲಹೆ ನೀಡಿದರು.

ದೇಶದ ಜನತೆಗೆ ಆಹಾರ ಭದ್ರತೆ ಕಲ್ಪಿಸಿದ್ದು ಪ್ರಧಾನಿ ಮೋದಿ: ಸಂಸದ ಮುನಿಸ್ವಾಮಿ

ದೇಶದಲ್ಲಿ ಜಯಂತಿಗಳಿಗೇನು ಬರವಿಲ್ಲ, ನಡೆಯುತ್ತಿವೆ ಆದರೆ ಮರುದಿನ ಜಯಂತಿಯ ಅರ್ಥವೇ ಆಗಲ್ಲ ಹಾಗಾಗಿ ಜಯಂತಿಗಳ ಆಚರಣೆಗೆ ಪೂರ್ವ ಭಾವಿ ಸಭೆ ದಿನ ಕೆಲಸವಿಲ್ಲ. ಜಯಂತಿ ರಜೆ ಘೋಷಣೆ ಆದರೆ ಆಡಳಿತ ಹಾಗೂ ಅಭಿವೃದ್ಧಿಗೆ ಹಿನ್ನಡೆಯಾಗಲಿದೆ ಎಂದರು. ವಿಭೂತಿ ಪುರುಷರು ಮನುಷ್ಯರು ಹೇಗೆ ಬದುಕಬೇಕು ಎಂಬ ಸಂದೇಶ ೧೨ ಮತ್ತು ೧೫ ನೇ ಶತಮಾನದಲ್ಲಿ ಹೇಳಿದ್ದಾರೆ. ಸ್ವಾತಂತ್ರ್ಯ ನಂತರ ಅಂಬೇಡ್ಕರ್‌ ಹೇಳಿದ್ದಾರೆ. ಹಾಗಾಗಿ ಜಯಂತಿಗಳು ಒಟ್ಟಿಗೆ ಆಚರಣೆ ಮಾಡಲಿ ಎಂದರು.

ರಾಜ್ಯ ಸರ್ಕಾರ ಸಂವಿಧಾನ ಅರಿಯಲು ಗ್ರಾಪಂ ಮಟ್ಟದಲ್ಲಿ ಅರಿವು ಮೂಡಿಸಲು ಮುಂದಾಗಿದೆ ಇದು ಸ್ವಾಗತಾರ್ಹ ಕ್ರಮ. ಸಂವಿಧಾನ ಜನಕ್ಕೆ ಅರ್ಥವಾಗುತ್ತಿಲ್ಲ ಅರ್ಥ ಮಾಡಿಕೊಳ್ಳಬೇಕು ಎಂದರು. ಶಾಲಾ, ಕಾಲೇಜು ಮಕ್ಕಳಿಗೆ ಅಪ್ಪ ಯಾವ ಪಕ್ಷ, ಯಾವ ಜಾತಿ, ಧರ್ಮ ಎಂಬುದು ಗೊತ್ತಿದೆ. ಆದರೆ ಜನಜಂತ್ರ ವ್ಯವಸ್ಥೆಯ ಬಗ್ಗೆ ಅರಿವಿಲ್ಲ. ನಾನು, ಸಿದ್ದರಾಮಯ್ಯ, ರೇವಣ್ಣ ಸೇರಿದಂತೆ ಹಲವರು ಸಮಾಜದ ಸಂಘಟನೆ ಮಾಡಿದ್ದೇವೆ. ಮಠ ಸ್ಥಾಪಿಸಿದ ಶ್ರೀಗಳು ಇದ್ದಾರೆ. ನಮಗೂ ವಯಸ್ಸಾಗಿದೆ ಮುಂದೆ ಸಂಘಟನೆ ಹಾಗೂ ಮಠದ ತೇರು ಎಳೆಯಲು ಯುವಕರು ಸಜ್ಜಾಗಬೇಕು ಎಂದರು.

Follow Us:
Download App:
  • android
  • ios