Asianet Suvarna News Asianet Suvarna News

ಜೈ ಶ್ರೀರಾಮ್ ಅಂದ್ರೆ ₹10 ಲಕ್ಷ ಬರುತ್ತೆ, ಅದರ ಹಿಂದೇನೇ ಇನ್‌ಕಂ ಟ್ಯಾಕ್ಸ್‌ನವರು ಬರ್ತಾರೆ: ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ

ಜೈಶ್ರೀರಾಮ್ ಅಂತ ಹೇಳಿದ್ರೆ ಎಲ್ಲರಿಗೂ 10 ಲಕ್ಷ ರೂ. ಬರುತ್ತೆ, ಹಿಂದೇನೆ ಇನ್ಕಮ್ ಟ್ಯಾಕ್ ನವ್ರು ಬರ್ತಾರೆ ಇದು ಬಿಜೆಪಿ ಅಜೆಂಡ ಎಂದು ಕೋಲಾರ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ಬಿಜೆಪಿ ವಿರುದ್ಧ ಕಿಡಿಕಾರಿದರು.

Lok sabha election 2024 congress MLA kottur manjunath outraged against samriddhi manjunath rav
Author
First Published Apr 1, 2024, 11:57 PM IST

ಕೋಲಾರ (ಏ.1): ಜೈಶ್ರೀರಾಮ್ ಅಂತ ಹೇಳಿದ್ರೆ ಎಲ್ಲರಿಗೂ 10 ಲಕ್ಷ ರೂ. ಬರುತ್ತೆ, ಹಿಂದೇನೆ ಇನ್ಕಮ್ ಟ್ಯಾಕ್ ನವ್ರು ಬರ್ತಾರೆ ಇದು ಬಿಜೆಪಿ ಅಜೆಂಡ ಎಂದು ಕೋಲಾರ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ಬಿಜೆಪಿ ವಿರುದ್ಧ ಕಿಡಿಕಾರಿದರು.

ನಿನ್ನೆ ಜೆಡಿಎಸ್ ಶಾಸಕ ಸಮೃದ್ಧಿ ಮಂಜುನಾಥ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು. 'ಕೋಲಾರದಲ್ಲಿ ಗಂಡಸರು ಯಾರೂ ಇಲ್ವಾ? ಹೊರಗಿನವರನ್ನು ಕರೆತಂದು ಕಾಂಗ್ರೆಸ್‌ನಲ್ಲಿ ಅಭ್ಯರ್ಥಿ ಮಾಡಿದ್ದಾರೆ' ಎಂಬ ಹೇಳಿಕೆ ನೀಡಿದ್ದರು ಈ ವಿಚಾರವಾಗಿ ಇಂದು ಕೋಲಾರದಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿದ ಕೊತ್ತೂರು ಮಂಜುನಾಥ್ ತಿರುಗೇಟು ನೀಡಿದರು, ಜೆಡಿಎಸ್ ನವರ ಅಜೆಂಡಾ ಮೂರು ನಾಮ ಹಾಕೋದು, ಗೋವಿಂದ. ಮೂರು ನಾಮಗಳಲ್ಲಿ ಹಾಸನದ್ದು ಬಿಳಿ ನಾಮ, ಮಂಡ್ಯದ್ದು ಬಿಳಿ ನಾಮ, ಕೋಲಾರದು ಕೆಂಪು ನಾಮ. ಜೆಡಿಎಸ್‌ನವರದು ಮಾತು ಬಿಟ್ಟರೆ ಬೇರೆ ಏನೂ ಇಲ್ಲ. ಹೌದು ನಾವು ಗಂಡಸರಲ್ಲ, ನೀವು ಏನು ಅಂದುಕೊಳ್ತಿರೋ ಅದೇ ನಾವು. ನಮಗೆ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಬೇಕು ಅಷ್ಟೇ ಎಂದು ತಿರುಗೇಟು ನೀಡಿದರು.

ಕೋಲಾರ: ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆಗೆ ಮುನಿಗಂಗಾಧರ್ ಸಿದ್ದತೆ!

ಸಮೃದ್ಧಿ ಮಂಜುನಾಥ್‌ಗೆ ಪರಿಷತ್ ಸದಸ್ಯ ಅನಿಲ್ ತಿರುಗೇಟು

'ಕಾಂಗ್ರೆಸ್ ನಲ್ಲಿ ಯಾರೂ ಗಂಡಸರಿಲ್ವ' ಎಂಬ ಶಾಸಕ ಸಮೃದ್ಧಿ ಮಂಜುನಾಥ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಪರಿಷತ್ ಸದಸ್ಯ ಅನಿಲ್ ಕುಮಾರ, ಹಾಗಾದರೆ ಮುಳಬಾಗಿಲು ತಾಲೂಕಿನಲ್ಲಿ ಯಾರೂ ಗಂಡಸರು ಇರಲಿಲ್ಲ. ನೀನೇ ಏಕೆ ಬಂದು ಇಲ್ಲಿ ಶಾಸಕನಾದೆ? ಚಿಂತಾಮಣಿ ಕೃಷ್ಣ ರೆಡ್ಡಿ, ಕೋಲಾರದಲ್ಲಿ ವರ್ತೂರು ಪ್ರಕಾಶ್, ಮಾಲೂರಿನಲ್ಲಿ ಮಂಜುನಾಥ್ ಗೌಡ ಹೊರಗಿನವರು ಅಲ್ವಾ? ಎಂದು ಪ್ರಶ್ನಿಸಿದರು.

ಮೊದಲು ಬಾಯಿಗೆ ಬಂದಂಗೆ ಬೈತಿದ್ದ ಸಿದ್ದರಾಮಯ್ಯ ಈಗ ಸೋನಿಯಾ ಮುಂದೆ ನಡು ಬಗ್ಗಿಸಿ ನಿಲ್ತಾರೆ: ಎಚ್‌ಡಿ ಕುಮಾರಸ್ವಾಮಿ

ಅಭಿವೃದ್ಧಿ ಹಾಗೂ ಪಕ್ಷದ ಸಿದ್ದಂತಾದ ಮೇಲೆ ಮತ ಕೇಳಬೇಕು. ಕೋಲಾರ ಜಿಲ್ಲೆಯ ರಾಜಕೀಯ ನೀನು ಹೇಳಿಕೊಡಬೇಕಾಗಿಲ್ಲ. ನಿನ್ನ ಕಾರ್ಯಕ್ರಮ, ಪಕ್ಷದ ಸಿದ್ಧಾಂತ, ಬಿಜೆಪಿ ಗೆ ಏಕೆ ಹೋದೆ ಅಂತ ಹೇಳು. ನೀನು ಅಲ್ಪಸಂಖ್ಯಾತರಿಗೆ ಮೋಸ ಮಾಡಿ ಮತ ಪಡೆದಿದ್ದಿ ಅದಕ್ಕೆ ಉತ್ತರ ಕೊಡು. ಅದಕ್ಕಾಗಿಯೇ ನಿಮ್ಮನ್ನು ಬಿಜೆಪಿಯ ಬಿ ಟೀಂ ಅಂತಾ ಸಿದ್ದರಾಮಯ್ಯ ಹೇಳಿದ್ದು ಎಂದು ತಿರುಗೇಟು ನೀಡಿದರು.

Follow Us:
Download App:
  • android
  • ios