Asianet Suvarna News Asianet Suvarna News

LIVE: Chikkodi Lok sabha Elections 2024: ಸಂಸದ ಅಣ್ಣಾ ಸಾಹೇಬ್ ಜೊಲ್ಲೆ ಸೋಲಿಸುವರೇ ಪ್ರಿಯಾಂಕಾ ಜಾರಕಿಹೊಳಿ

ಚಿಕ್ಕೋಡಿಯಲ್ಲಿ ಬಿಜೆಪಿ ಹಾಲಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ ಅವರಿಗೆ ಸಚಿವ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಕಾಂಗ್ರೆಸ್‌ನಿಂದ ಭರ್ಜರಿ ಪೈಪೋಟಿ ನೀಡುತ್ತಿದ್ದಾರೆ.

Karnataka Lok Sabha Election 2024 Chikkodi lok sabha constituency Anna Saheb Jolle Vs Priyanka Jarakiholi sat
Author
First Published May 7, 2024, 9:55 AM IST

ಚಿಕ್ಕೋಡಿ ಲೋಕಸಭಾ ಕ್ಷೇತ್ರ ಮತದಾನದ ಲೈವ್ ಅಪ್‌ಡೇಟ್ಸ್:  ಸಂಜೆ 5 ಗಂಟೆಗೆ ಶೇ.72.75 ಮತದಾನ ಆಗಿದೆ.

ಬೆಳಗಾವಿ/ಚಿಕ್ಕೋಡಿ (ಮೇ 07): ಲೋಕಸಭಾ ಚುನಾವಣೆಯಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಭರ್ಜರಿ ಪ್ರತಿಷ್ಠೆಯ ಕಣವಾಗಿ ಇಟ್ಟುಕೊಂಡಿವೆ. ಚಿಕ್ಕೋಡಿಯಲ್ಲಿ ಬಿಜೆಪಿಯಿಂದ ಹಾಲಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ ಅವರಿಗೆ ಬಿಜೆಪಿಯಿಂದ ಟಿಕೆಟ್ ನೀಡಲಾಗಿದೆ. ಆದರೆ, ಕಾಂಗ್ರೆಸ್‌ನಿಂದ ಸಚಿವ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಟಿಕೆಟ್ ನೀಡಿದ್ದು, ಗೆಲುವಿಗಾಗಿ ಭರ್ಜರಿ ಪೈಪೋಟಿ ಶುರುವಾಗಿದೆ. ಇಬ್ಬರೂ ಅಬ್ಬರದ ಪ್ರಚಾರವನ್ನು ನಡೆಸಿದ್ದಾರೆ. ಇನ್ನು ಅಣ್ಣಾ ಸಾಹೇಬ್ ಜೊಲ್ಲೆಗೆ ಮೋದಿ ಅಲೆ ಹಾಗೂ ರಾಮಮಂದಿರ ನಿರ್ಮಾಣದ ಬಲ ಸಿಕ್ಕಿದೆ. ಇತ್ತ ಮೊದಲ ಬಾರಿ ಲೋಕಸಭೆಗೆ ಕಣಕ್ಕಿಳಿದ ಪ್ರಿಯಾಂಕಾ ಜಾರಕಿಹೊಳಿಗೆ ತಂದೆ ಸವಚಿವರಾಗಿರುವುದು ಹಾಗೂ ಕಾಂಗ್ರೆಸ್‌ ಗ್ಯಾರಂಟಿಗಳು ಮತ ಪಡೆಯಲು ಸಹಕಾರಿ ಆಗಿವೆ. 

ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವಿವರ:
ಒಟ್ಟು ಅಭ್ಯರ್ಥಿಗಳು - 18 
ಒಟ್ಟು ಮತದಾರರು - 17,61,694
ಪುರುಷ ಮತದಾರ - 8,85,200
ಮಹಿಳಾ ಮತದಾರ - 8,76,414
ಇತರೆ - 80
ಒಟ್ಟು ಮತಗಟ್ಟೆಗಳು - 1896
ಚುನಾವಣಾ ಸಿಬ್ಬಂದಿ - 8,792

India General Elections 2024 Live: ರಾಜ್ಯದಲ್ಲಿ ಕೊನೇ ಹಂತದ ಮತದಾನ, ಹಕ್ಕು ಚಲಾಯಿಸಿದ ಮೋದಿ ...

ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವಿವರ:
ಚಿಕ್ಕೋಡಿ ಲೋಕಸಭಾ ಕ್ಷೇತ್ರವು ಒಟ್ಟು 8 ವಿಧಾನಸಭಾ ಕ್ಷೇತ್ರಗಳ ಒಳಗೊಂಡಿದೆ.
1.ನಿಪ್ಪಾಣಿ
2.ಚಿಕ್ಕೋಡಿ
3.ಯಮಕನಮರಡಿ
4.ಹುಕ್ಕೇರಿ
5.ರಾಯಬಾಗ
6.ಕುಡಚಿ
7.ಅಥಣಿ
8.ಕಾಗವಾಡ

ಬಿಜೆಪಿಗೆ ಮತ ಹಾಕುವಂತೆ ಸೂಚಿಸಿದ ಮತಗಟ್ಟೆ ಅಧಿಕಾರಿ:
ಚಿಕ್ಕೋಡಿ : ಬಿಜೆಪಿ ಪರ‌ ಮತ ಚಲಾಯಿಸುವಂತೆ ಮತಗಟ್ಟೆ ಒಳಗಿನ ಅಧಿಕಾರಿ ಒತ್ತಾಯ ಮಾಡಿದ್ದಾರೆಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರಿಂದ ಮತಗಟ್ಟೆ ಎದುರು ಪ್ರತಿಭಟನೆ ಮಾಡಿದರು. ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ಕೋಟೆಬಾಗ ಶಾಲೆಯ ಬೂತ್ ನಂಬರ್ 162 ರಲ್ಲಿ ಘಟನೆ ನಡೆದಿದೆ. ಚುನಾವಣಾ ಸಿಬ್ಬಂದಿಯಿಂದ ಬಿಜೆಪಿ ಪರ ಮತ ಚಲಾವಣೆಗೆ ಒತ್ತಾಯ ಮಾಡಿದ್ದಾರೆ ಎಂಬ ವಿಷಯ ತಿಳಿದು ಮತಗಟ್ಟೆಗೆ ಆಗಮಿಸಿದ ಕೈ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾಗಿದ್ದಾರೆ. ಈ ವೇಳೆ ತಡೆಯಲು ಮುಂದಾದ ಪೊಲೀಸರೊಂದಿಗೆ ಕಾಂಗ್ರೆಸ್ ಕಾರ್ಯಕರ್ತರು ವಾಗ್ವಾದ ನಡೆಸಿದರು.

Kalaburagi election 2024: ಶೋಕದ ಮನೆಯಿಂದ ಬಂದು ಮತದಾನ ಮಾಡಿದ ಮಾಜಿ ಶಾಸಕ ದಿ.ನಾಗರೆಡ್ಡಿ ಕುಟುಂಬಸ್ಥರು

ಚಿಕ್ಕೋಡಿ ಮತದಾನ ಗೌಪ್ಯತೆ ಬಹಿರಂಗ:  ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮತದಾರನೊಬ್ಬ ಮತದಾನ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಚಿಕ್ಕೋಡಿ ಕಾಂಗ್ರೆಸ್ ಅಭ್ಯರ್ಥಿ ಪ್ರೀಯಂಕಾ ಜಾರಕಿಹೋಳಿಗೆ ಮತ ಹಾಕಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಜೊತೆಗೆ, ಕಾಂಗ್ರೆಸ್ ಪಕ್ಷದ ವಾಟ್ಸಪ್ ಗಳಲ್ಲಿ ಹರಿದಾಡುತ್ತಿದೆ.

Karnataka Lok Sabha Election 2024 Chikkodi lok sabha constituency Anna Saheb Jolle Vs Priyanka Jarakiholi sat

Follow Us:
Download App:
  • android
  • ios