Asianet Suvarna News Asianet Suvarna News

LIVE: Ballari Elections 2024: ಬಿಜೆಪಿ ನಾಯಕ ಶ್ರೀರಾಮುಲುಗೆ ಠಕ್ಕರ್ ಕೊಡ್ತಾರಾ ಕೈ ನಾಯಕ ತುಕಾರಾಂ

ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಬಿ. ಶ್ರೀರಾಮುಲು ಅವರಿಗೆ ಕೈ ನಾಯಕ ಇ ತುಕಾರಾಂ ಸೆಡ್ಡು ಹೊಡೆದಿದ್ದಾರೆ. ಆದರೆ, ಮತದಾರರ ಒಲವು ಯಾರಿಗಿದೆ ಎಂದು ಇಂದು ತೀರ್ಮಾನವಾಗಲಿದೆ.

Karnataka Lok Sabha Election 2024 Ballari lok sabha constituency Sriramulu and Tukaram sat
Author
First Published May 7, 2024, 9:32 AM IST

ಮತದಾನದ ಲೈವ್ ಪಟ್‌ಡೇಟ್ಸ್: ಸಂಜೆ 5 ಗಂಟೆಗೆ ಶೇ.69.94 ಮತದಾನ ಆಗಿದೆ..

ಬಳ್ಳಾರಿ/ ವಿಜಯನಗರ (ಮೇ 07): ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಈಗಾಗಲೇ ಒಂದು ಬಾರಿ ಲೋಕಸಭೆಗೆ ಸಂಸದನಾಗಿ ಆಯ್ಕೆಯಾಗಿದ್ದ ಶ್ರೀರಾಮುಲು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ವಿಧಾನಸಭೆಗೆ ತೆರಳಿ ಸಚಿವರಾಗಿದ್ದರು. ಆದರೆ, 2023ರ ವಿಧಾನಸಭಾ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಶ್ರೀರಾಮುಲು ಈಗ ಪುನಃ ಲೋಕಸಭಾ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲು ಬಂದಿದ್ದಾರೆ. ಆದರೆ, ಕಾಂಗ್ರೆಸ್‌ನಿಂದ ಈ ಹಿಂದೆ ಶಾಸಕರಾಗಿದ್ದ ತುಕಾರಾಂ ಲೋಕಸಭೆಗೆ ಬರಲು ಸಿದ್ಧತೆ ಮಾಡಿಕೊಂಡಿದ್ದು, ಶ್ರೀರಾಮುಲುಗೆ ಠಕ್ಕರ್ ಕೊಡಲು ಸಿದ್ಧರಾಗಿದ್ದಾರೆ. ಆದರೆ, ಮತದಾರ ಪ್ರಭು ಯಾರ ಕೈ ಹಿಡಿಯುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

India General Elections 2024 Live: ರಾಜ್ಯದಲ್ಲಿ ಕೊನೇ ಹಂತದ ಮತದಾನ, ಹಕ್ಕು ಚಲಾಯಿಸಿದ ಮೋದಿ ...

ಬಳ್ಳಾರಿ ಜಿಲ್ಲೆಯ ಮತದಾರರ ಮಾಹಿತಿ
ಒಟ್ಟು ಅಭ್ಯರ್ಥಿಗಳು - 10
ಒಟ್ಟು ಮತದಾರರು - 18,77,751
ಮಹಿಳಾ ಮತದಾರರು - 9,51,522
ಪುರುಷ ಮತದಾರರು - 9,25,961
ಇತರೆ - 268

ಬಳ್ಳಾರಿಯಲ್ಲಿ ಮತದಾನ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಬಿ.ನಾಗೇಂದ್ರ ಅವರು, ಬಿಸಿಲು ಲೆಕ್ಕಿಸದೆ ಜನ ಮತದಾನ ಮಾಡ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ತುಕಾರಾಂ ಗೆಲ್ಲುವ ವಿಶ್ವಾಸವಿದೆ. ಮೊದಲನೇ ಹಂತಕ್ಕಿಂತ ಎರಡನೇ ಹಂತದ ಚುನಾವಣೆ ಉತ್ತಮವಾಗಿದೆ. ಗ್ಯಾರಂಟಿಗಳಿಂದ ಮಹಿಳೆಯರು ಹೆಚ್ಚು ಮತದಾನ ಮಾಡ್ತಿದ್ದಾರೆ. ಬಳ್ಳಾರಿ ಕ್ಷೇತ್ರದಲ್ಲಿ ಶೇ 70 ಕ್ಕಿಂತ ಹೆಚ್ಚು ಮತದಾನ ಆಗೋ ವಿಶ್ವಾಸವಿದೆ ಎಂದು ಹೇಳಿದರು. 

ಪ್ರಜ್ವಲ್ ರೇವಣ್ಣ ಪ್ರಕರಣದ ವಿಚಾರದ ಬಗ್ಗೆ ಮಾತನಾಡಿ, ಬಿಜೆಪಿ ಇದರಲ್ಲಿ ರಾಜಕೀಯ ಮಾಡ್ತಿದೆ ಪ್ರಕರಣ ಕಾನೂನು ಹಂತದಲ್ಲಿ ತನಿಖೆ ನಡೆಯುತ್ತಿದೆ. ಈ ಹಂತದಲ್ಲಿ ಬಿಜೆಪಿ ಅನವಶ್ಯಕ ರಾಜಕೀಯ ಮಾಡ್ತಿದೆ. ಈ ಘಟನೆಯಿಂದ ಬಿಜೆಪಿ ಜೆಡಿಎಸ್ ಅಲೈನ್ಸ್ ಮೇಲೆ ಹೊಡೆತ ಬಿದ್ದಿದೆ.. ಅದಕ್ಕೆ ಕಾಂಗ್ರೆಸ್ ಮೇಲೆ ಆರೋಪ ಮಾಡ್ತಿದ್ದಾರೆ. ಕರ್ನಾಟಕದ ಚುನಾವಣೆ  ಮೇಲೆ ಘಟನೆ ಪ್ರಬಾವ ಬೀರಿದೆ. ಬಿಜೆಪಿ ಸೋಲಿನ ಹತಾಶೆಯಿಂದ ಮಾತಾಡ್ತಿದ್ದಾರೆ. ಮಾಡಿದ ಕೃತ್ಯವನ್ನ ಬಿಜೆಪಿ ಸಮರ್ಥಿಸಿಕೊಳ್ತಿದ್ದಾರೆ. ಈ ಘಟನೆಯಿಂದ ಯಾವ ಷಡ್ಯಂತ್ರವೂ ಇಲ್ಲ ಎಂದು ನಾಗೇಂದ್ರ ಹೇಳಿದರು. 

ಶಿವಮೊಗ್ಗ ಗಂಡನ ಸಾವಿಗೆ ಮತದಾನ ಸಮರ್ಪಿಸಿದ ಹೆಂಡತಿ; ಶವ ಬಿಟ್ಟುಬಂದು ಮತ ಹಾಕಿದ ಮಹಿಳೆ

ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಬೆಳಗ್ಗೆ 6 ಗಂಟೆಯಿಂದ ಸಂಜೆ 5 ಗಂಟೆವರೆಗೆ ಒಟ್ಟು ಶೇ.68.94 ಮತದಾನ ಆಗಿದೆ.
ಬಳ್ಳಾರಿ ಗ್ರಾಮೀಣ - ಶೇ.67.53
ಬಳ್ಳಾರಿ ನಗರ - ಶೇ.60.33
ಹೂವಿನಹಡಗಲಿ - ಶೇ.70.72
ಹಗರಿಬೊಮ್ಮನಹಳ್ಳಿ- ಶೇ.72.12
ಕಂಪ್ಲಿ - ಶೇ.74.61
ಕೂಡ್ಲಿಗಿ - ಶೇ.73.29
ಸಂಡೂರು - ಶೇ.70.09
ವಿಜಯನಗರ - ಶೇ.65.61

Follow Us:
Download App:
  • android
  • ios