Asianet Suvarna News Asianet Suvarna News

Karnataka elections 2023: ಗುಪ್ತ ಮತದಾನದ ನಿಯಮ ಉಲ್ಲಂಘನೆ: ವೋಟ್‌ ಹಾಕಿದ ವಿಡಿಯೋ, ಫೋಟೋ ವೈರಲ್‌!

ಗೌಪ್ಯ ಮತದಾನ ಮಾಡಬೇಕೆಂಬ ನಿಯಮವಿದ್ದರೂ ಹಲವು ಯುವಕರು ತಾವು ಮತದಾನ ಮಾಡಿದ ವೀಡಿಯೋ, ಪೊಟೋ ತೆಗದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

Karnataka elections 2023 Violation of rules of secret voting photo and Video viral sat
Author
First Published May 10, 2023, 5:57 PM IST

ಬೀದರ್/ವಿಜಯಪುರ/ ಹಾವೇರಿ/ ಬೆಳಗಾವಿ (ಮೇ 10): ರಾಜ್ಯಾದ್ಯಂತ ಇಂದು ಬಿರುಸಿನ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಆದರೆ, ಗುಪ್ತವಾಗಿ ಮತದಾನ ಮಾಡಬೇಕು ಎಂಬ ನಿಯಮವಿದ್ದರೂ ಹಲವು ಯುವಕರು ತಾವು ಮತದಾನ ಮಾಡಿದ ವೀಡಿಯೋ, ಪೊಟೋ ತೆಗದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. 

ಹಾವೇರಿ ಜಿಲ್ಲೆಯಲ್ಲಿ ಮತದಾನ ಮಾಡಿದ ಬಳಿಕ ಯುವಕನೊಬ್ಬ ಫೇಸ್‌ಬುಕ್‌ನಲ್ಲಿ ಫೋಟೋ ಅಪಲೋಡ್ ಮಾಡಿಕೊಂಡಿದ್ದಾನೆ. ಹಾವೇರಿಯ ಪುರದ ಓಣಿ ಯುವಕ ಹರೀಶ್ ಮಾಳಗಿ ಹುಕ್ಕೇರಿ ಮಠದ ಮಹಿಳಾ ಕಾಲೇಜು ಮತಗಟ್ಟೆಯಲ್ಲಿ ಮತದಾನ ಮಾಡಿದ್ದನು. ಈ ವೇಳೆ ಮತದಾನ ಮಾಡುವ ವೇಳೆ ಪೋಟೋ ಕ್ಲಿಕ್ಕಿಸಿಕೊಂಡಿದ್ದನು. ನಂತರ, ಪೋಟೋವನ್ನು ತನ್ನ ಫೇಸ್‌ಬುಕ್‌ನಲ್ಲಿ ಅಪ್ ಲೋಡ್ ಮಾಡಿ ಹಂಚಿಕೊಂಡಿದ್ದಾನೆ. ಇನ್ನು ಈ ಘಟನೆ ತಿಳಿದ ಕೂಡಲೇ ಚುನಾವಣಾ ಅಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿದೆ.

ಶಿರಸಿಯಲ್ಲಿ ಸಂಸದ ಅನಂತ ಕುಮಾರ್‌ ಹೆಗಡೆ ಮತದಾನ : ಸಕ್ರಿಯ ರಾಜಕಾರಣದಿಂದ ಅಂತರವೇಕೆ?

ಚಿಕ್ಕೋಡಿ ಮತಗಟ್ಟೆಯೊಳಗೆ ಮೊಬೈಲ್‌ ಬಳಕೆ:  ಬೆಳಗಾವಿಯ ಚಿಕ್ಕೋಡಿಯಲ್ಲಿ ಮತದಾನ ಮಾಡಲು ಹೋದ ಯುವಕನೊಬ್ಬ ತಾನು ಮತದಾನ ಮಾಡುವಾ ಯಾವ ಪಕ್ಷದ ಅಭ್ಯರ್ಥಿಗೆ ಮತದಾನ ಮಾಡಿದ ಬಗ್ಗೆ ವಿಡಿಯೋ ಮಾಡಿಕೊಂಡು, ಸಾಮಾಜಿಕ ತಾಣಗಳಲ್ಲಿ ಹಂಚಿಕೆ ಮಾಡಿಕೊಂಡಿದ್ದಾನೆ. ಆದರೆ, ಇಲ್ಲಿ ಚುನಾವಣೆ ಅಧಿಕಾರಿಗಳಿಂದ ಲೋಪವೂ ಕೂಡ ಕಂಡುಬರುತ್ತಿದೆ. ಮತದಾನ ಮಾಡುವ ವೋಟಿಂಗ್‌ ಮಶಿನ್‌ ಬಳಿ ಮೊಬೈಲ್‌ ಬಳಕೆ ಮಾಡಬಾರದು ಎಂಬ ನಿಯಮವಿದೆ. ಆದರೆ, ಇಲ್ಲೊಬ್ಬ ಯುವಕ ಕಾಗವಾಡ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ್ ಗೆ ಮತ ಹಾಕಿರುವುದು ವೀಡಿಯೋ ಮಾಡಿ ಅದನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ಚುನಾವಣಾ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Karnataka Elections 2023 LIVE: ಮತದಾನ ಮುಕ್ತಾಯ. ಸರ್ಕಾರ ಯಾರದ್ದು, ಕಾಯಬೇಕು 13ರ ತನಕ...

ವಿಜಯಪುರದಲ್ಲೂ ವಿಡಿಯೋ ಮಾಡಿ ಬಹಿರಂಗ: ವಿಜಯಪುರ ಜಿಲ್ಲೆ ಮುದ್ದೇಬಿಹಾಳದಲ್ಲಿಯೂ ಯುವಕನೊಬ್ಬ ತಾನು ಮತದಾನ ಮಾಡುವ ವೀಡಿಯೋ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ. ಯುವಕ ಮೊಬೈಲ್‌ನಲ್ಲಿ ವಿಡಿಯೋ ಮಾಡುತ್ತಲೇ ಮತ ಹಾಕಿದ್ದಾನೆ. ಕಾಂಗ್ರೆಸ್ ಪಕ್ಷಕ್ಕೆ‌ ಮತಹಾಕಿ ಬಳಿಕ ವಿಡಿಯೋ ವೈರಲ್ ಮಾಡಿದ್ದಾನೆ. ಈ ಮೂಲಕ ಗುಪ್ತಮತದಾನ ನಿಯಮ ಉಲ್ಲಂಘನೆ ಆಗಿದೆ. ಚುನಾವಣಾಧಿಕಾರಿಗಳು ವಿಡಿಯೋ ವೈರಲ್ ಯುವಕನ ನಂಬರ್ ಪಡೆದು ಸ್ವಯಂ ದೂರು ದಾಖಲಿಸಿಕೊಂಡಿದ್ದಾರೆ.

ರಾಜ್ಯ ಚುನಾವಣಾ ಆಯೋಗದ ಎಡವಟ್ಟು! ಕೆಜಿಎಫ್‌ ಬಾಬು ಕ್ರಮಸಂಖ್ಯೆಯಲ್ಲಿ ವ್ಯತ್ಯಾಸ

ಮತದಾನದ ವಿಡಿಯೋ ಹರಿಬಿಟ್ಟವರಿಗೆ ಚುನಾವಣಾ ಅಧಿಕಾರಿಗಳ ಬಿಸಿ:  ದೇಶದಲ್ಲಿ ಗೌಪ್ಯವಾಗಿ ಮತದಾನ ಮಾಡಬೇಕೆಂಬ ನಿಯಮವಿದ್ದರೂ, ಬೀದರ್‌ ನಗರದಲ್ಲೊಬ್ಬ ಯುವಕರು ತಾವು ಮತದಾನ ಮಾಡುವ ವಿಡಿಯೋ ಹರಿಬಿಟ್ಟಿದ್ದಾರೆ. ಬೀದರ್ ನ ಭಾಲ್ಕಿ, ಬೀದರ್ ಉತ್ತರ ಸೇರಿದಂತೆ ಹಲವು ಕ್ಷೇತ್ರಗಳ ಕೆಲವರಿಂದ ಮತದಾನ ಮಾಡಿದ ವಿಡಿಯೋ ರೆಕಾರ್ಡ್ ಮಾಡಲಾಗಿದೆ. ವಿಡಿಯೋ ರೇಕಾರ್ಡ್ ಕಾನೂನಿನ ಬಾಹಿರವೆಂದು ಚುನಾವಣಾ ಅಧಿಕಾರಿ ಹೇಳಿದ್ದಾರೆ. ಜಿಲ್ಲಾ ಚುನಾವಣಾ ಅಧಿಕಾರಿಯಿಂದ ವಿಡಿಯೋ ವೈರಲ್ ಮಾಡಿದವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಭಾಲ್ಕಿ ಕ್ಷೇತ್ರ, ಬೀದರ್ ಉತ್ತರ ಕ್ಷೇತ್ರದ ಕೆಲವರಿಂದ ಮತದಾನ ಮಾಡಿದ ವಿಡಿಯೋ ವೈರಲ್ ಆಗಿದ್ದು, ಅಂಥವರ ವಿರುದ್ಧ ಕ್ರಮಕ್ಕೆ ಕೈಗೊಳ್ಳಲು ಮುಂದಾಗಿದ್ದಾರೆ. 

ಬೆಂಗಳೂರಿನಲ್ಲಿಯೂ ವೀಡಿಯೋ ಮಾಡಿದ ವ್ಯಕ್ತಿ: ಇನ್ನು ರಾಜ್ಯ ರಾಜಧಾನಿ ಬೆಂಗಳೂರಿನ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿಯೂ ವ್ಯಕ್ತಿಯೊಬ್ಬ ತಾನು ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯರೆಡ್ಡಿಗೆ ಮತದಾನ ಮಾಡಿರುವುದನ್ನು ಫೋಟೋ ತೆಗೆದುಕೊಂಡಿದ್ದಾ. ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ವೈರಲ್‌ ಮಾಡಿದ್ದಾರೆ. ಇನ್ನು ಈ ಫೊಟೋವನ್ನು ಅಭ್ಯರ್ಥಿಗಳಿಗೂ ಕೂಡ ತಲುಪಿಸಿದ್ದಾರೆ. 

Karnataka elections 2023 Violation of rules of secret voting photo and Video viral sat

Follow Us:
Download App:
  • android
  • ios