Asianet Suvarna News Asianet Suvarna News

ಸುಳ್ಳನ್ನೇ ಮಾರುಕಟ್ಟೆ ಮಾಡಿಕೊಂಡ ಪ್ರಧಾನಿ, ಮೋದಿ ವಿರುದ್ಧ ಸಿದ್ದರಾಮಯ್ಯ ಕೆಂಡಾಮಂಡಲ..!

ಧರ್ಮ, ಹಿಂದುತ್ವ, ಜಾತಿ ಹೆಸರಿನಲ್ಲಿ ಸಮಾಜ ಒಡೆಯುವ ಕೆಲಸ ಮಾಡಿದ್ದಾರೆ. ದ್ವೇಷದ ರಾಜಕಾರಣ ಮಾಡಿ ಜನರ ಮನ ಕೆಡಿಸಿದ್ದಾರೆ. ಹಿಂದೂ, ಮುಸ್ಲಿಂ, ಜೈನ, ಬೌದ್ಧರು ಎಂದು ಮನಸು ಒಡೆದಿದ್ದಾರೆ. ರಾಹುಲ್ ಗಾಂಧಿ ಅದಕ್ಕಾಗಿಯೇ ಪದಾಯಾತ್ರೆ ಮಾಡಿದ್ದರು. ದೇಶದುದ್ದಕ್ಕೂ ಪಾದಯಾತ್ರೆ ಮಾಡಿದ್ದರು. ಸ್ವತಂತ್ರ ಬಂದ ಬಳಿಕ ದೊಡ್ಡಮಟ್ಟದ ಪಾದಯಾತ್ರೆ: ಸಿಎಂ ಸಿದ್ದರಾಮಯ್ಯ 

Karnataka CM Siddaramaiah Slams PM Narendra Modi grg
Author
First Published May 4, 2024, 8:15 PM IST

ದಾವಣಗೆರೆ(ಮೇ.04): ಎನ್‌ಡಿಎ ಅಧಿಕಾರಕ್ಕೆ ಬರಬೇಕಾ, ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರಬೇಕಾ?. ಹತ್ತು ವರ್ಷಗಳಿಂದ ಮೋದಿ ಪ್ರಧಾನಿ ಆಗಿದ್ದಾರೆ. ಹತ್ತು ವರ್ಷಗಳಲ್ಲಿ ಬಡವರ ಅಭಿವೃದ್ಧಿಗೆ ಏನೂ ಮಾಡಿಲ್ಲ. ಹಿಂದುಳಿದವರು, ದಲಿತರು, ಮಹಿಳೆಯರು, ಅಲ್ಪಸಂಖ್ಯಾತರ ಅಭಿವೃದ್ಧಿಗೆ ಏನೂ ಮಾಡಿಲ್ಲ. ದೇಶದ ಜನರಿಗೆ ಬರೀ ಸುಳ್ಳು ಹೇಳಿದ್ದಾರೆ. ಸುಳ್ಳನ್ನೇ ಮಾರುಕಟ್ಟೆ ಮಾಡಿಕೊಂಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಿಎಂ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ.

ಇಂದು(ಶನಿವಾರ) ದಾವಣಗೆರೆಯಲ್ಲಿ ನಡೆದ ಕುರುಬ ಸಮಾಜದ ಸಭೆಯಲ್ಲಿ ಕೈ ಅಬ್ಯರ್ಥಿ ಪ್ರಭಾ ಮಲ್ಲಿಕಾರ್ಜುನ ಪರ ಮತಯಾಚನೆ ಮಾಡಿದ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು,  ಧರ್ಮ, ಹಿಂದುತ್ವ, ಜಾತಿ ಹೆಸರಿನಲ್ಲಿ ಸಮಾಜ ಒಡೆಯುವ ಕೆಲಸ ಮಾಡಿದ್ದಾರೆ. ದ್ವೇಷದ ರಾಜಕಾರಣ ಮಾಡಿ ಜನರ ಮನ ಕೆಡಿಸಿದ್ದಾರೆ. ಹಿಂದೂ, ಮುಸ್ಲಿಂ, ಜೈನ, ಬೌದ್ಧರು ಎಂದು ಮನಸು ಒಡೆದಿದ್ದಾರೆ. ರಾಹುಲ್ ಗಾಂಧಿ ಅದಕ್ಕಾಗಿಯೇ ಪದಾಯಾತ್ರೆ ಮಾಡಿದ್ದರು. ದೇಶದುದ್ದಕ್ಕೂ ಪಾದಯಾತ್ರೆ ಮಾಡಿದ್ದರು. ಸ್ವತಂತ್ರ ಬಂದ ಬಳಿಕ ದೊಡ್ಡಮಟ್ಟದ ಪಾದಯಾತ್ರೆ. ನಾನು ಸಹ ಬಳ್ಳಾರಿ ಪಾದಯಾತ್ರೆ ಮಾಡಿದ್ದೆನು. ಜನಾರ್ದರೆಡ್ಡಿ ಬ್ರದರ್ಸ್ ವಿರುದ್ಧ ಪಾದಯಾತ್ರೆ ಮಾಡಿದ್ದೆನು. ಅಕ್ರಮ ಗಣಿ ಬಗ್ಗೆ ಮಾತಾಡಿದಾಗ ನನ್ನ ಮೇಲೆ ಜಗಳಕ್ಕೆ ಬಂದಿದ್ದರು. ರೆಡ್ಡಿ, ರಾಮುಲು, ಕರುಣಾಕರರೆಡ್ಡಿ ಜಗಳಕ್ಕೆ ಬಂದಿದ್ದರು. ಬಳ್ಳಾರಿಗೆ ಬಾ ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದರು. ಕಾಲ್ನಡಿಗೆಯಲ್ಲಿ ಬರುತ್ತೇನೆ ನಡೀರಿ ಎಂದು ತೊಡೆ ತಟ್ಟಿದ್ದೆನು, ತೋಳು ತಟ್ಟಿದ್ದೆನು. ನನ್ನ ಮೇಲೆ ಯಡಿಯೂರಪ್ಪ ಜಗಳಕ್ಕೆ ಬಂದಿದ್ದರು. ನನಗೆ ಹೊಡೆಯುವವನ ಥರ ಜಗಳಕ್ಕೆ ಬಂದಿದ್ದರು. ಮಿಸ್ಟರ್ ಯಡಿಯೂರಪ್ಪ ಕಾಲಿಟ್ಟರೆ ಕಾಲು ಮುರಿಯುತ್ತೇನೆ ಹುಷಾರ್ ಎಂದು ಎಚ್ಚರಿಕೆ ನೀಡಿದ್ದೆನು ಎಂದು ಹೇಳಿದ್ದಾರೆ. 

ಬೆಲೆ ಏರಿಕೆಯಿಂದ ಕಂಗಾಲಾದ ಜನತೆ, ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದ ಪ್ರಿಯಾಂಕಾ ಗಾಂಧಿ

ಬಳ್ಳಾರಿಯನ್ನು ರಿಪಬ್ಲಿಕ್ ಆಫ್ ಬಳ್ಳಾರಿ ಮಾಡಿದ್ದರು. ಜನಾರ್ಧನರೆಡ್ಡಿ ಸೊಕ್ಕು ಮುರಿಯಲು ಪಾದಯಾತ್ರೆ ಮಾಡಿದ್ದೆನು. ಪಾದಯಾತ್ರೆ ಬಳಿಕ ಜನಾರ್ಧನರೆಡ್ಡಿ ಜೈಲಿಗೆ ಹೋದರು. ಬಳ್ಳಾರಿ ರಿಪಬ್ಲಿಕ್ ಆಫ್ ಬಳ್ಳಾರಿಯಿಂದ ಮುಕ್ತ ಆಯಿತು. ರಾಹುಲ್ ಗಾಂಧಿ ದೇಶದ ಐಕ್ಯತೆಗಾಗಿ ಯಾತ್ರೆ ಮಾಡಿದ್ದಾರೆ. ಮೋದಿ ಹತ್ತು ವರ್ಷದಲ್ಲಿ ಯಾವ ಅಭಿವೃದ್ಧಿ ಮಾಡಿದ್ದಾರೆ. ಸುಳ್ಳು ಹೇಳಿದ್ದಕ್ಕೆ ಬಿಜೆಪಿಗೆ ಮತ ಹಾಕಬೇಕಾ?. ಕಪ್ಪು ಹಣ ತಂದು ಪ್ರತಿ ಅಕೌಂಟಿಗೆ 15ಲಕ್ಷ ಹಾಕುವುದಾಗಿ ಹೇಳಿದ್ರು. ಉದ್ಯೋಗ ಸೃಷ್ಠಿ ಆಗಲಿಲ್ಲ, ಬೆಲೆ ಇಳಿಕೆ ಆಗಲಿಲ್ಲ. ರೈತರ ಸಾಲ ಮನ್ನಾ ಆಗಲಿಲ್ಲ, ರೈತರ ಆದಾಯ ದುಪ್ಪಟ್ಟು ಆಗಲಿಲ್ಲ ಎಂದು ಪ್ರಧಾನಿ ಮೋದಿ ವಿರುದ್ಧ ಕಿಡಿ ಕಾರಿದ್ದಾರೆ. 

ಕಾಂಗ್ರೆಸ್ ಪಕ್ಷ ರೈತರು, ದಲಿತರು, ಬಡವರು, ಹಿಂದುಳಿದವರಿಗೆ ಸಹಾಯ ಮಾಡಿದೆ. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದು ಕಾಂಗ್ರೆಸ್. ನರೇಂದ್ರ ಮೋದಿ ಸ್ವತಂತ್ರ ಬಂದ ಬಳಿಕ ಜನಿಸಿದ್ದಾರೆ. ಮೋದಿ ನನಗಿಂತ ಚಿಕ್ಕವರು, ಜನಸಂಘ ಹುಟ್ಟಿದ್ದೇ 1950ರಲ್ಲಿ, 1980ರಲ್ಲಿ ಬಿಜೆಪಿ ಹುಟ್ಟಿದೆ. ಸ್ವತಂತ್ರ ಹೋರಾಟದಲ್ಲಿ ಬಿಜೆಪಿಯವರು ಭಾಗಿ ಆಗಿಲ್ಲ. ಹಿಂದುಳಿದವರಿಗೆ ಮೀಸಲಾತಿ ಕೊಟ್ಟಾಗ ಬಿಜೆಪಿ ವಿರೋಧಿಸಿತ್ತು. ಮೀಸಲಾತಿಗೆ ಬಿಜೆಪಿ ವಿರೋಧವಿದೆ. ಬಿಜೆಪಿಯ ಉಪಾಧ್ಯಕ್ಷ ರಾಮಾ ಜೋಯಿಸರು ವಿರೋಧಿಸಿದ್ದರು. ಹೆಣ್ಣು‌ಮಕ್ಕಳಿಗೆ, ಹಿಂದುಳಿದವರಿಗೆ ಮೀಸಲಾತಿಗೆ ವಿರೋಧಿಸಿದ್ದರು. ಬಿಜೆಪಿಗೆ ಹಿಂದುಳಿದವರು ಮತ ಹಾಕಲು ಆಗುತ್ತದೆಯೇ. ರಾಜ್ಯದಲ್ಲಿ ಈಗ ಯಾರು ಮುಖ್ಯಮಂತ್ರಿ?ಸಿದ್ದರಾಮಯ್ಯ ಅಲ್ಲವೇ ಎಂದು ಪ್ರಶ್ನೆ? ಮಾಡಿದ್ದಾರೆ.  ನಾನು ಸಿಎಂ ಆಗುವುದು ಬಯಸುತ್ತಿರೋ ಇಲ್ಲವೋ, ನಾನು ಮುಖ್ಯಮಂತ್ರಿಯಾಗಿ ಮುಂದುವರೆಯಲು ಬಯಸುತ್ತಿರೋ ಇಲ್ಲವೋ? ಎಂದು ಸಿದ್ದರಾಮಯ್ಯ ಜನರನ್ನ ಕೇಳಿದ್ದಾರೆ. 

ಸಂಯುಕ್ತಾ ಪಿಎಂ ಆದ್ರೆ ರಾಹುಲ್, ಪ್ರಿಯಾಂಕಾ, ಸೋನಿಯಾ ಗಾಂಧಿ ಇವರ ಮನೆಯ ಕೆಲಸಕ್ಕೆ ಬರಬೇಕಾ?: ಯತ್ನಾಳ್‌

ದಾವಣಗೆರೆಯಲ್ಲಿ ವಿನಯ್ ಕುಮಾರ್ ಪಕ್ಷೇತರ ಸ್ಪರ್ಧೆಗೆ ಸಂಬಂಧಿಸಿದಂತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ನಾನು ದಯಮಾಡಿ ಸ್ಪರ್ಧೆ ಬೇಡ ಎಂದು ಹೇಳಿದೆನು. ಪರೋಕ್ಷವಾಗಿ ಬಿಜೆಪಿಗೆ ಬೆಂಬಲಿಸಿದಂತೆ ಆಗುತ್ತದೆ ಎಂದು ಹೇಳಿದ್ದೆನು. ಕನಕ ಗುರುಪೀಠ ಶ್ರೀಗಳ ಜತೆ ನಮ್ಮ ಮನೆಗೆ ಬಂದಿದ್ದರು. ಸ್ಪರ್ಧಿಸಲ್ಲ ಎಂದು ಹೇಳಿ ಹೋದರು. ಯಾರದೋ ಕುಮ್ಮಕ್ಕಿನಿಂದ ವಿನಯ್ ಸ್ಪರ್ಧೆ ಮಾಡಿದ್ದಾರೆ ಎಂದು ಹೇಳಿದ್ದಾರೆ. 
ಬಿಜೆಪಿಯವರು ಕುರುಬರಿಗೆ ಒಂದು ಕಡೆಯೂ ಟಿಕೆಟ್ ಕೊಟ್ಟಿಲ್ಲ. ಈ ಸಲ ನಾವು ಮೂರು ಕಡೆ ಟಿಕೆಟ್ ಕೊಟ್ಟಿದ್ದೇವೆ. ಪಾಪ ಈಶ್ವರಪ್ಪ ನನ್ನ ಮೇಲೆ ರಕ್ತ ಕಾರುವವನು, ಅವನ ಮಗನಿಗೆ ಬಿಜೆಪಿ ಟಿಕೆಟ್ ಕೊಡಲಿಲ್ಲ. ಬಿಜೆಪಿಗೆ ಸಪೋರ್ಟ್ ಮಾಡಲು ವಿನಯ್ ಸ್ಪರ್ಧೆ ಮಾಡಿದ್ದಾರೆ ಎಂದು ಹೇಳಿದ್ದಾರೆ. 

ನಾನು ಬೇಕಾ, ವಿನಯ್ ಬೇಕಾ ಎಂದು ಕೇಳಿದ ಸಿಎಂ ಸಿದ್ದರಾಮಯ್ಯ ಅವರು, ನಾನು ಬೇಕು ಅಂದರೆ ವಿನಯ್ ಗೆ ಒಂದು ಮತವೂ ಹಾಕಬೇಡಿ, ನಾನು ಸಿಎಂ ಆಗಿರುವುದರಿಂದ ಶಕ್ತಿ ಯೋಜನೆ, ಉಚಿತವಾಗಿ ಬಸ್ ಗಳಲ್ಲಿ ಸಂಚಾರದ ವ್ಯವಸ್ಥೆ ಮಾಡಿದ್ದೇನೆ ಎಂದು ಹೇಳಿದ್ದಾರೆ. 

Follow Us:
Download App:
  • android
  • ios