userpic
user icon
0 Min read

ಕರ್ನಾಟಕ ಡಿಸಿಎಂ ಆಗಿಯೇ ನಿವೃತ್ತಿ ಪಡೆಯುತ್ತೇನೆ: ಬಾಬುರಾವ್ ಚಿಂಚನಸೂರು

Iam retiring as DCM of karnataka says Baburao Chinchansur rav
chinchanasuru

Synopsis

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗುರುಮಠಕಲ್ ಮತಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜೆಡಿಎಸ್‌ ಎದುರು ಸೋಲುಂಡಿದ್ದ ಮಾಜಿ ಸಚಿವ ಬಾಬುರಾವ್‌ ಚಿಂಚನಸೂರು ಇದೀಗ ಮತ್ತೇ ಮುನ್ನೆಲೆಗೆ ಬಂದಿದ್ದಾರೆ.

ಯಾದಗಿರಿ/ಗುರುಮಠಕಲ್: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗುರುಮಠಕಲ್ ಮತಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜೆಡಿಎಸ್‌ ಎದುರು ಸೋಲುಂಡಿದ್ದ ಮಾಜಿ ಸಚಿವ ಬಾಬುರಾವ್‌ ಚಿಂಚನಸೂರು ಇದೀಗ ಮತ್ತೇ ಮುನ್ನೆಲೆಗೆ ಬಂದಿದ್ದಾರೆ.

ರಸ್ತೆ ಅಪಘಾತದ ಐದು ತಿಂಗಳ ನಂತರ ಭಾನುವಾರ ಗುರುಮಠಕಲ್‌ನಲ್ಲಿ ಕಾಣಿಸಿಕೊಂಡ ಚಿಂಚನಸೂರು, ಮತದಾರರಿಗೆ ನ್ಯಾಯ ಕೊಡಿಸುವ ಸಲುವಾಗಿ ನಾನು ರಾಜಕೀಯದಲ್ಲಿ ಜೀವಂತ ಇರುತ್ತೇನೆ. ಉಪ ಮುಖ್ಯಮಂತ್ರಿಯಾಗಿ ರಾಜಕೀಯ ನಿವೃತ್ತಿಯಾಗುತ್ತೇನೆ. ಡಿಸಿಎಂ ಆಗಿಯೇ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆಸೇರ್ಪಡೆ ಮಾಡುವುದೇ ನನ್ನ ಗುರಿ ಎಂದರು.

ಅಪಘಾತಗೊಂಡು ಆಸ್ಪತ್ರೆ ಸೇರಿದರೂ, ಆಂಬುಲೆನ್ಸ್‌ನಲ್ಲಿ ಬಂದು ಪ್ರಚಾರ ಮಾಡಿದ ಬಾಬುರಾವ್ ಚಿಂಚನಸೂರು!

ವಿಧಾನಸಭೆ ಚುನಾವಣೆ ವೇಳೆ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ನನಗೆ ಆರು ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗಿತ್ತು. ಆದರೆ, ವಿರೋಧಿಗಳು ನಾನು ಸಾಯುತ್ತೇನೆಂದು ಚುನಾವಣೆ ಸಂದರ್ಭದಲ್ಲಿ ಅಪಪ್ರಚಾರ ನಡೆಸಿದ್ದರು. ಇದರಿಂದಾಗಿ ಸೋಲಾಗಿದ್ದು, ನನ್ನ ಆತ್ಮಕ್ಕೆ ಬೆಂಕಿ ಬಿದ್ದಂತಾಗಿದೆ ಎಂದರು.

Latest Videos