Asianet Suvarna News Asianet Suvarna News

ಮಾದರಿ ಕರ್ನಾಟಕ ನಿರ್ಮಾಣವೇ ಕಾಂಗ್ರೆಸ್‌ ಗುರಿ: ಸಚಿವ ಎಂ.ಸಿ.ಸುಧಾಕರ್‌

ನಗರದಲ್ಲಿ ಮುಂದಿನ 25 ವರ್ಷಗಳ ನಂತರವೂ ಕುಡಿಯುವ ನೀರಿನ ಸಮಸ್ಯೆ ಬರಬಾರದಂತೆ ಎಲ್ಲ ರೀತಿಯ ಸಿದ್ಧತೆಗಳನ್ನು ಈಗಲೇ ಮಾಡಿಕೊಳ್ಳಲಾಗುತ್ತಿದೆ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ಹೇಳಿದರು. 

Construction of model Karnataka is the goal of Congress Says Minister Dr MC Sudhakar gvd
Author
First Published Sep 3, 2023, 10:03 PM IST

ಚಿಕ್ಕಬಳ್ಳಾಪುರ (ಸೆ.03): ನಗರದಲ್ಲಿ ಮುಂದಿನ 25 ವರ್ಷಗಳ ನಂತರವೂ ಕುಡಿಯುವ ನೀರಿನ ಸಮಸ್ಯೆ ಬರಬಾರದಂತೆ ಎಲ್ಲ ರೀತಿಯ ಸಿದ್ಧತೆಗಳನ್ನು ಈಗಲೇ ಮಾಡಿಕೊಳ್ಳಲಾಗುತ್ತಿದೆ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ಹೇಳಿದರು. ಚಿಂತಾಮಣಿ ನಗರದ ಕರಿಯಪಲ್ಲಿಯ ರಜಕ್‌ ಫಾತಿಮಾ ಫಂಕ್ಷನ್‌ ಹಾಲ್‌ನಲ್ಲಿ ಪೂರ್ವ ರೇಷ್ಮೆ ಬೆಳೆಗಾರರ ಹಾಗೂ ರೈತ ಸಹಕಾರ ಸಂಘ ಹಾಗೂ ಡಿಸಿಸಿ ಬ್ಯಾಂಕ್‌ ವತಿಯಿಂದ ಮಹಿಳಾ ಸ್ವಸಹಾಯ ಸಂಘಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಸುಮಾರು 3.55 ಕೋಟಿ ರು.ಗಳ ಸಾಲ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಗ್ರಾಮಗಳ ಸಮಸ್ಯೆ ಪರಿಹರಿಸಲು ಕ್ರಮ: ಪ್ಲಾಸ್ಟಿಕ್‌ ಬಳಕೆಯನ್ನು ನಿಷೇಧಿಸಲಾಗಿದ್ದು ಈ ಕಾರ್ಯಕ್ಕೆ ಎಲ್ಲರೂ ಸಂಪೂರ್ಣ ಸಹಕಾರ ನೀಡಬೇಕು. ಚಿಂತಾಮಣಿ ಕ್ಷೇತ್ರದ ಜನತೆ 30 ಸಾವಿರಕ್ಕಿಂತ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿ ಕ್ಷೇತ್ರದ ಜನತೆಯ ಸೇವೆ ಮಾಡಲು ನನಗೆ ಅವಕಾಶ ನೀಡಿದ್ದಾರೆ. ತಮ್ಮೆಲ್ಲರ ಆಶೀರ್ವಾದದಿಂದ ಸಚಿವನಾಗಿದ್ದೇನೆ. ಕ್ಷೇತ್ರದ ಹಳ್ಳಿಗಳ ಸಮಸ್ಯೆಗಳು ಹೆಚ್ಚಾಗಿದ್ದು ಹಂತ ಹಂತವಾಗಿ ಬಗೆಹರಿಸಲು ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದರು. ಈ ಹಿಂದೆ ಸತತ ಎರಡು ಬಾರಿ ನಾನು ಸೋತಿದ್ದು ಈ ಬಾರಿ ಗೆದ್ದ ತಕ್ಷಣ ಕಾಂಗ್ರೆಸ್‌ ಸರ್ಕಾರ ನನಗೆ ಮಂತ್ರಿ ಸ್ಥಾನ ನೀಡಿ ಜವಾಬ್ದಾರಿಯನ್ನು ಹೆಚ್ಚಿಸಿದೆ. ಕ್ಷೇತ್ರದಲ್ಲಿ ಕೆಲಸ ಕಾರ್ಯಗಳು ಹೆಚ್ಚಾಗಿರುವ ಕಾರಣ ಹಳ್ಳಿಗಳಿಗೆ ಬೇಟಿ ನೀಡಲು ಸಾಧ್ಯವಾಗುತ್ತಿಲ್ಲ ಹಳ್ಳಿಗಳಲ್ಲಿ ಹೆಚ್ಚಿನ ಸಮಸ್ಯೆಗಳಿವೆ. ಅವುಗಳನ್ನು ಹಂತ ಹಂತವಾಗಿ ಬಗೆಹರಿಸುತ್ತೇನೆ ಎಂದರು.

ನಂದಿ ಬೆಟ್ಟಕ್ಕೆ ಖಾಸಗಿ ವಾಹನಗಳ ನಿಷೇಧಕ್ಕೆ ಚಿಂತನೆ: ಯಾಕೆ ಗೊತ್ತಾ?

ಮಾದರಿ ಕರ್ನಾಟಕವೇ ಕಾಂಗ್ರೆಸ್‌ ಗುರಿ: 10 ವರ್ಷಗಳ ಕಾಲ ಕ್ಷೇತ್ರ ಹಿನ್ನಡೆಯಾಗಿದ್ದು ಇನ್ನು ಮುಂದೆ 10 ವರ್ಷಗಳ ಕಾಲ ಕ್ಷೇತ್ರ ಯಾವ ರೀತಿ ಇರಬೇಕು ಎಂಬುದು ಮಾಡಿ ತೋರಿಸುತ್ತೇನೆ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬಂದು ಇನ್ನೂ 100 ದಿನಗಳು ಮಾತ್ರ ಆಗಿದೆ. ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್‌ ಸರ್ಕಾರ ನೀಡಿರುವ ಐದು ಗ್ಯಾರಂಟಿಗಳಲ್ಲಿ 4 ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತಂದಿದ್ದು ಮುಂದಿನ ದಿನಗಳಲ್ಲೇ ಮಾದರಿ ಕರ್ನಾಟಕ ರಾಜ್ಯವನ್ನು ಮಾಡುವುದೇ ಕಾಂಗ್ರೆಸ್‌ ಪಕ್ಷದ ಗುರಿ ಎಂದು ಹೇಳಿದರು. ಜನತೆಗೆ 5 ಗ್ಯಾರಂಟಿ ನೀಡಿದ್ದೇವೆ. 

ರಾಜೀವ್‌ ಗಾಂಧಿ ಮೆಡಿಕಲ್‌ ಕಾಲೇಜು ಇಲ್ಲೇ ಇರಲಿದೆ: ಶಾಸಕ ಇಕ್ಬಾಲ್‌ ಹುಸೇನ್‌

ಮೊದಲನೆಯದ್ದು ಗೃಹಲಕ್ಷ್ಮಿ- 2 ಸಾವಿರ ರುಪಾಯಿ ಪ್ರತೀ ಮನೆಯ ಮಹಿಳೆಗೆ ,ಎರಡನೆಯದ್ದು ಗೃಹಜ್ಯೋತಿ ಎಲ್ಲರಿಗೂ 200 ಯೂನಿಟ್‌ವರೆಗೂ ಉಚಿತ ವಿದ್ಯುತ್‌, ಮೂರನೆಯದಾಗಿ ಪ್ರತೀ ಕುಟುಂಬದ ಸದಸ್ಯರಿಗೆ 10 ಕಿಲೋ ಅಕ್ಕಿಕೊಡುವ ಅನ್ನಭಾಗ್ಯ, ನಾಲ್ಕನೇ ಭಾಗ್ಯ ರಾಜ್ಯದ ಸಾರಿಗೆಯಲ್ಲಿ ಮಹಿಳೆಯರಿಗೆ ಉಚಿತ ಪ್ರವಾಸ, ಹಾಗೂ ನಿರುದ್ಯೋಗಿಯಾಗಿರುವ ಪದವೀದರರಿಗೆ ಯುವನಿಧಿ ಮೂಲಕ 3 ಸಾವಿರ,ಹಾಗೂ ಡಿಪ್ಲೋಮಾ ಮಾಡಿದವರಿಗೆ 1500 ರೂಪಾಯಿ ಕೊಡುವ ಆಶ್ವಾಸನೆ ನೀಡಿದ್ದೇವೆ ಈಗಾಗಲೇ 4 ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತಂದಿದ್ದೇವೆ ಎಂದು ವಿವರಿಸಿದರು. ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್‌ ನಿರ್ದೇಶಕ ನಾಗಿ ರೆಡ್ಡಿ, ಕೋಚಿಮುಲ್‌ ನಿರ್ದೇಶಕ ಅಶ್ವತ್‌ ನಾರಾಯಣ್‌ ಬಾಬು, ಮುರುಗಮಲ್ಲ ಲಕ್ಷ್ಮೀನಾರಾಯಣ ರೆಡ್ಡಿ, ಗ್ರಾಮ ಪಂಚಾಯತಿ ಅಧ್ಯಕ್ಷ ಹಾಜಿ ಅನ್ಸರ್‌ ಖಾನ್‌, ಎಎನ್‌ಆರ್‌ ನಾಗರಾಜ್‌, ಕರಿಯಪಲ್ಲಿ ಮಾಲಿಕ್‌ ಪಾಷಾ ಸೇರಿದಂತೆ ಮತ್ತಿತರರು ಇದ್ದರು.

Follow Us:
Download App:
  • android
  • ios