Asianet Suvarna News Asianet Suvarna News

ಸಹಬಾಳ್ವೆಯೇ ಕಾಂಗ್ರೆಸ್ ಅಜೆಂಡಾ: ಸಚಿವ ಕೆ.ಎಚ್.ಮುನಿಯಪ್ಪ

ಪಟ್ಟಣದ ಕೆಜಿಎಫ್ ರಸ್ತೆಯ ಬಾಬಾ ಹೈದವರವಲಿ ದರ್ಗಾದಲ್ಲಿ ಉರುಸ್ ನಡೆಯುತ್ತಿರುವ ಹಿನ್ನಲೆಯಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ದರ್ಗಾಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. 

Coexistence is Congress Agenda Says Minister KH Muniyappa gvd
Author
First Published Jan 25, 2024, 9:03 PM IST

ಮುಳಬಾಗಿಲು (ಜ.25): ಪಟ್ಟಣದ ಕೆಜಿಎಫ್ ರಸ್ತೆಯ ಬಾಬಾ ಹೈದವರವಲಿ ದರ್ಗಾದಲ್ಲಿ ಉರುಸ್ ನಡೆಯುತ್ತಿರುವ ಹಿನ್ನಲೆಯಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ದರ್ಗಾಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಹಿಂದೂ ಮತ್ತು ಮುಸ್ಲಿಂ ಬಾಂದವರ ಐಕ್ಯತೆಯ ಸಂಕೇತಕ್ಕೆ ಸದರಿ ದರ್ಗಾ ಹೆಸರುವಾಸಿಯಾಗಿದ್ದು ನೂರಾರು ವರ್ಷಗಳ ಇತಿಹಾಸ ಹೊಂದಿದೆ ಎಂದರಲ್ಲದೆ ಸರ್ವಧರ್ಮಗಳ ಜನತೆ ಸಹಬಾಳ್ವೆಯಿಂದ ಜೀವನ ನಡೆಸಬೇಕೆನ್ನುವುದೇ ಕಾಂಗ್ರೆಸ್ ಪಕ್ಷದ ಅಜಂಡ ಎಂದು ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದರು.

ಸ್ಪರ್ಧೆ, ಕಾದು ನೋಡಿ: ಮುಂಬರುವ ಲೋಕಸಭಾ ಚುನಾವಣೆಗೆ ಕೋಲಾರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವಿರಾ ಎಂಬ ಪ್ರಶ್ನೆಗೆ ಹೈಕಮಾಂಡ್‌ಗ್ ಬಿಟ್ಟ ವಿಚಾರ ಎಂದರಲ್ಲದೆ ರಾಜಕೀಯ ವಿದ್ಯಾಮಾನಗಳು ಆಯಾ ಸಂದರ್ಭಕ್ಕೆ ತಕ್ಕಂತೆ ನಡೆಯುತ್ತದೆ ಕಾದು ನೋಡಿ ಎಂದು ಉತ್ತರಿಸಿದರು. ಕಳೆದ ೩ ವರ್ಷದಿಂದ ಸತತವಾಗಿ ಉರುಸ್ ಆಚರಣಾ ಸಮಿತಿ ಅಧ್ಯಕ್ಷರಾಗಿರುವ ಮಹಮದ್ ವಸೀಮ್, ಉಪಾಧ್ಯಕ್ಷ ಜಹೀರ್, ಕಾಂಗ್ರೆಸ್ ಮುಖಂಡರಾದ ಊರುಬಾಗಿಲು ಶ್ರೀನಿವಾಸ್, ಕೆ.ಜಯದೇವ್, ಸುಬಾಶ್ ಚಂದ್ರಗೌಡ, ಉರುಸ್‌ನಲ್ಲಿ ಕಳೆದ ೫ ದಿನಗಳಿಂದ ಜೋಗಿ ಕುಳಿತಿರುವ ಮಲನ್ ಪಕೀರ್ ಉರುಸ್ ಆಚರಣಾ ಸಮಿತಿ ಹಾಗೂ ದರ್ಗಾ ಸಮಿತಿ ಸದಸ್ಯರು ಇದ್ದರು.

ವಿದ್ಯುತ್ ಸಮಸ್ಯೆಗಳಿಗೆ ಅಧಿಕಾರಿಗಳು ತಕ್ಷಣವೇ ಸ್ಪಂದಿಸಿ: ಸಚಿವ ಸಂತೋಷ್‌ ಲಾಡ್ ಸೂಚನೆ

ಲೀಲಾವತಿ ಚಿತ್ರರಂಗದ ತುಂಬಿದ ಕೊಡ: ಲೀಲಾವತಿಯವರು ಚಿತ್ರರಂಗದ ತುಂಬಿದ ಕೊಡವಿದ್ದಂತೆ, ಅವರ ಕಾಲದ ಚಲನಚಿತ್ರಗಳು ಸಮಾಜಕ್ಕೆ ನೀತಿ ಪಾಠವಾಗಿದ್ದವು ಎಂದು ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಸಚಿವ ಕೆ.ಎಚ್ ಮುನಿಯಪ್ಪ ಅಭಿಪ್ರಾಯಪಟ್ಟರು. ಸೋಲದೇವನಹಳ್ಳಿ ಗ್ರಾಮದ ಹಿರಿಯ ನಟಿ ಲೀಲಾವತಿ ಅಂತ್ಯಕ್ರಿಯೆಯ ಸ್ಥಳದಲ್ಲಿ ಭವ್ಯ ಸ್ಮಾರಕ ನಿರ್ಮಾಣಕ್ಕೆ ಗುದ್ದಲಿ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

ಲೀಲಾವತಿಯವರು ಮಾಡಿರುವ ಸೇವೆ ಸಮಾಜಕ್ಕೆ ಮಾದರಿಯಾಗಿದ್ದು, ಅವರ ಸಿನಿಮಾಗಳಲ್ಲಿ ನೀತಿ ಪಾಠ ಕಾಣಬಹುದಾಗಿತ್ತು. ಆದರೆ, ಇವತ್ತಿನ ದಿನಗಳ ಸಿನಿಮಾಗಳಲ್ಲಿ ಆ ಕೊರತೆ ಹೆಚ್ಚಾಗಿ ಕಾಣುತ್ತಿದೆ. ಲೀಲಾವತಿಯವರ ಸ್ಮಾರಕ ನಿರ್ಮಾಣಕ್ಕೆ ವಿನೋದ್‌ರಾಜ್ ಮುಂದಾಗಿರುವುದು ಸಂತೋಷ, ಸರ್ಕಾರದ ಹಣ ಕೇಳದೆ ಸ್ವಂತ ಹಣದಲ್ಲಿ ಮಾಡುತ್ತಿದ್ದಾರೆ, ಲೀಲಾವತಿಯವರ ಜೀವನದ ಶ್ರೇಷ್ಠತೆ ಸಾರುವ ವಿಚಾರಗಳ ಜತೆ ಸ್ಮಾರಕ ನಿರ್ಮಾಣ ಅದ್ಭುತವಾಗಿದೆ. ವಿನೋದ್ ರಾಜ್ ಜತೆ ಸ್ಮಾರಕ ನಿರ್ಮಾಣದ ಸಮಯದಲ್ಲಿ ನಾವೆಲ್ಲರೂ ಜೊತೆಯಾಗಿರುತ್ತೇವೆ ಎಂದರು.

ರಾಮಲಲ್ಲಾ ಪ್ರತಿಷ್ಠಾಪನೆ ದಿನ ಮಸೀದಿ ಕೆಡವುವ ಸಂಕಲ್ಪ ತೊಟ್ಟಿದ್ದ ಸಂಸದ ಅನಂತ ಕುಮಾರ್ ಹೆಗಡೆ!

ನಟ ವಿನೋದ್ ರಾಜ್ ಮಾತನಾಡಿ, ತಾಯಿಯ ಸ್ಮಾರಕವನ್ನು ನನ್ನ ಆಸೆಯಂತೆ ನಿರ್ಮಿಸಲು ನಿರ್ಧರಿಸಿದ್ದೇನೆ. ಸುಮಾರು ೫೫ ಲಕ್ಷ ರು. ವೆಚ್ಚದಲ್ಲಿ ನಿರ್ಮಾಣವಾಗಲಿದ್ದು, ಅಮ್ಮನ ಮೊದಲ ಸಿನಿಮಾದಿಂದ ಕೊನೆಯ ಸಿನಿಮಾದವರೆಗಿನ ಚಿತ್ರಗ್ಯಾಲರಿಯನ್ನು ನಿರ್ಮಿಸಲು ತೀರ್ಮಾನ ಮಾಡಲಾಗಿದೆ. ಅಮ್ಮನ ಸಮಾಧಿಯನ್ನು ಆಧ್ಯಾತ್ಮಿಕ ಕ್ಷೇತ್ರವನ್ನಾಗಿ ಮಾಡುತ್ತೇನೆ. ಸರಕಾರದ ಯಾವುದೇ ಅಪೇಕ್ಷೆ ಪಡದೆ ನಾನೇ ಸ್ಮಾರಕ ಕಟ್ಟಲು ತೀರ್ಮಾನ ಮಾಡಿದ್ದೇನೆ ಎಂದರು.

Follow Us:
Download App:
  • android
  • ios