Asianet Suvarna News Asianet Suvarna News

ಚಿಕ್ಕಮಗಳೂರು: ಚುನಾವಣಾ ಪ್ರಚಾರಕ್ಕಿಳಿದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ

ಸರಳತೆಗೆ ಹೆಸರಾದ ಕೋಟ ಶ್ರೀನಿವಾಸ ಪೂಜಾರಿ ಅವರು ದತ್ತಪೀಠಕ್ಕೆ ತೆರಳುವ ಮುನ್ನ ಕಾರ್ಯಕರ್ತರ ಜೊತೆ ರಸ್ತೆ ಬದಿ ತಳ್ಳುಗಾಡಿಯ ಕ್ಯಾಂಟೀನ್ನಲ್ಲಿ ತಮಗೆ ಪ್ರಿಯವಾದ ಟೀ ಮತ್ತು ಬನ್ ಸೇವಿಸಿದರು. ಅಲ್ಲದೆ ನಗರದ  ಟ್ಯಾಕ್ಸ್ , ಆಟೋ  ನಿಲ್ದಾಣಕ್ಕೆ ತೆರಳಿ ಚಾಲಕರೊಂದಿಗೆ ಮಾತುಕತೆ ನಡೆಸಿ ದೇಶದ ನಾಯಕತ್ವಕ್ಕಾಗಿ ಮೋದಿಯನ್ನು ಬೆಂಬಲಸುವಂತೆ ಮನವಿ  ಮಾಡಿ ತದನಂತರ ದತ್ತಪೀಠಕ್ಕೆ ಪ್ರಯಾಣ ಮುಂದುವರಿಸಿದರು.

BJP Candidate Kota Shrinivas Poojari who Campaigning for Lok Sabha Election in Chikkamagaluru grg
Author
First Published Mar 16, 2024, 10:54 PM IST

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಮಾ.16):  ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾದ ನಂತರ ಮೊದಲ ಬಾರಿಗೆ ಚಿಕ್ಕಮಗಳೂರಿಗೆ ಆಗಮಿಸಿದ ಕೋಟ ಶ್ರೀನಿವಾಸ ಪೂಜಾರಿ ಅವರು ಇಂದು(ಶನಿವಾರ) ಮೊದಲು ದತ್ತಪೀಠಕ್ಕೆ ತೆರಳಿ ಪಾದುಕೆಗಳ ದರ್ಶನ ಪಡೆದು ನಂತರ ಚುನಾವಣಾ ಪ್ರಚಾರಕ್ಕಿಳಿದಿದ್ದಾರೆ.

ಚಿಕ್ಕಮಗಳೂರು ನಗರಕ್ಕಾಗಮಿಸಿದ ಕೋಟ ಶ್ರೀನಿವಾಸ ಪೂಜಾರಿ ಅವರು ಜಿಲ್ಲಾ ಬಿಜೆಪಿ ಅಧ್ಯಕ್ಷ ದೇವರಾಜ ಶೆಟ್ಟಿ ಸೇರಿದಂತೆ ಇತರೆ ಮುಖಂಡರೊಂದಿಗೆ ನೇರವಾಗಿ ದತ್ತಪೀಠಕ್ಕೆ ತೆರಳಿದರು. ಅರ್ಚಕರು ಪಾದುಕೆಗಳಿಗೆ ಪೂಜೆ ನೆರವೇರಿಸಿ ಶ್ರೀನಿವಾಸ ಪೂಜಾರಿ ಅವರಿಗೆ ತೀರ್ಥ ಪ್ರಸಾದ ನೀಡಿ ಆಶೀರ್ವದಿಸಿದರು.

ಲೋಕಸಭಾ ಚುನಾವಣೆಗೆ ಪಾಕಿಸ್ತಾನದಿಂದ ಕಾಂಗ್ರೆಸ್ ಹಣ? ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದೇನು?

ಆಟೋ, ಟ್ಯಾಕ್ಸಿ ಚಾಲಕರ ಮತಯಾಚನೆ 

ಸರಳತೆಗೆ ಹೆಸರಾದ ಕೋಟ ಶ್ರೀನಿವಾಸ ಪೂಜಾರಿ ಅವರು ದತ್ತಪೀಠಕ್ಕೆ ತೆರಳುವ ಮುನ್ನ ಕಾರ್ಯಕರ್ತರ ಜೊತೆ ರಸ್ತೆ ಬದಿ ತಳ್ಳುಗಾಡಿಯ ಕ್ಯಾಂಟೀನ್ನಲ್ಲಿ ತಮಗೆ ಪ್ರಿಯವಾದ ಟೀ ಮತ್ತು ಬನ್ ಸೇವಿಸಿದರು. ಅಲ್ಲದೆ ನಗರದ  ಟ್ಯಾಕ್ಸ್ , ಆಟೋ  ನಿಲ್ದಾಣಕ್ಕೆ ತೆರಳಿ ಚಾಲಕರೊಂದಿಗೆ ಮಾತುಕತೆ ನಡೆಸಿ ದೇಶದ ನಾಯಕತ್ವಕ್ಕಾಗಿ ಮೋದಿಯನ್ನು ಬೆಂಬಲಸುವಂತೆ ಮನವಿ  ಮಾಡಿ ತದನಂತರ ದತ್ತಪೀಠಕ್ಕೆ ಪ್ರಯಾಣ ಮುಂದುವರಿಸಿದರು.

Lok Sabha Election 2024: ವಲಸಿಗರು ಬೇಡ, ಶೆಟ್ಟರ್‌ ವಿರುದ್ಧ ಒಂದಾದ ಬೆಳಗಾವಿ ಬಿಜೆಪಿ ಟೀಂ

ಈಶ್ವರಪ್ಪ ನಮ್ಮ ಪಕ್ಷದ ಹಿರಿಯ ನಾಯಕ.

ದತ್ತಪೀಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀನಿವಾಸ ಪೂಜಾರಿ, ಶಿವಮೊಗ್ಗದಲ್ಲಿ ಈಶ್ವರಪ್ಪ ಬಂಡಾಯ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಕುರಿತು ಪ್ರತಿಕ್ರಿಯೆ ನೀಡಿ, ಈಶ್ವರಪ್ಪ ನಮ್ಮ ಪಕ್ಷದ ಹಿರಿಯ ನಾಯಕ. ಎರಡು ದಿನದಲ್ಲಿ ಎಲ್ಲವೂ ಸರಿಯಾಗುತ್ತೆ. ಹಿರಿಯ ನಾಯಕರು ಈಶ್ವರಪ್ಪನವರ ಜೊತೆ ಮಾತುಕತೆ ನಡೆಸಲಿದ್ದಾರೆ ಎಂದರು. 

ಹಾವೇರಿ ಟಿಕೆಟ್ ತಮ್ಮ ಪುತ್ರ ಕಾಂತೇಶ್‌ಗೆ ನೀಡಬೇಕೆಂಬುದು ಈಶ್ವರಪ್ಪನವರ ಬಯಕೆಯಾಗಿತ್ತು. ಸಾಮಾಜಿಕ ನ್ಯಾಯಕ್ಕೆ ಅನುಗುಣವಾಗಿ ಟಿಕೆಟ್ ನೀಡಬೇಕಾಗುತ್ತದೆ. ಎಲ್ಲವನ್ನು ಸಮನ್ವಯವಾಗಿಸಿಕೊಂಡು ಹೋಗಬೇಕಿರುವುದು ಪಕ್ಷದ ಜವಾಬ್ದಾರಿ. ನಮ್ಮ ಪಕ್ಷ ಆ ಕೆಲಸ ಮಾಡುತ್ತೆ. ಈ ಸಮಸ್ಯೆಗೆ ಹೈಕಮಾಂಡ್ ಸೂಕ್ತ ತೀರ್ಮಾನ ಕೈಗೊಳ್ಳುತ್ತದೆ ಎಂದರು. 

ರಾಷ್ಟ್ರೀಯ ನಾಯಕರಾದ ಸಿ.ಟಿ.ರವಿ, ಮತ್ತೋರ್ವ ಟಿಕೆಟ್ ಆಕಾಂಕ್ಷಿಯಾಗಿದ್ದ ಪ್ರಮೋದ್ ಮದ್ವರಾಜ್, ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಎಲ್ಲರೂ ನಮ್ಮನ್ನು ಬೆಂಬಲಿಸಿದ್ದಾರೆ ಅದರಲ್ಲಿ ಯಾವುದೇ ಸಮಸ್ಯೆಗಳಿಲ್ಲ ಎಂದರು.

Follow Us:
Download App:
  • android
  • ios