Asianet Suvarna News Asianet Suvarna News

ಡಿಸೆಂಬರ್ 1ಕ್ಕೆ ಭಾರತದಲ್ಲಿ Infinix Hot 20 5G ಲಾಂಚ್: ಬೆಲೆ ಎಷ್ಟು?

*ಇನ್ಫಿನಿಕ್ಸ್ ಹಾಟ್ 20 5ಜಿ ಸ್ಮಾರ್ಟ್‌ಫೋನ್ ಅತ್ಯಂತ ಅಗ್ಗದ ಸ್ಮಾರ್ಟ್‌ಫೋನ್ ಆಗಲಿದೆ
*ಈ ಫೋನ್ ಹಿಂಭಾಗದಲ್ಲಿ ಕಂಪನಿಯು 50 ಮೆಗಾ ಪಿಕ್ಸೆಲ್ ಕ್ಯಾಮೆರಾ ಅಳವಡಿಸಿದೆ
*ಅಗ್ಗದ 5ಜಿ ಫೋನ್‌ನಲ್ಲಿ ಬಳಕೆದಾರರು ಸಂತಷ್ಟುಗೊಳಿಸುವ ಫೀಚರ್ಸ್‌ಗಳಿವೆ
 

Infinix hot 20 5G smartphone will be launched in India on December 1
Author
First Published Nov 26, 2022, 2:37 PM IST

ಚೀನಾ ಮೂಲದ ಸ್ಮಾರ್ಟ್ಫೋನ್ ಉತ್ಪಾದಕ ಕಂಪನಿ ಇನ್ಫಿನಿಕ್ಸ್ (Infinix) ಭಾರತೀಯ ಮಾರುಕಟ್ಟೆಗೆ ಕಡಿಮೆ ಬೆಲೆಯ 5G - ಸಾಮರ್ಥ್ಯದ ಸ್ಮಾರ್ಟ್ಫೋನ್ ಬಿಡುಗಡೆ ಮಾಡಲು ಮುಂದಾಗಿದೆ. ಇನ್ಫಿನಿಕ್ಸ್ ಕಂಪನಿಯು ತನ್ನ  ಇನ್ಫಿನಿಕ್ಸ್ ಹಾಟ್ 20 5ಜಿ (Infinix Hot 20 5G) ಸರಣಿ ಫೋನ್ಗಳನ್ನು ಡಿಸೆಂಬರ್ 1ರಂದು ಭಾರತೀಯ ಮಾರುಕಟ್ಟೆಗೆ ಅನಾವರಣ ಮಾಡಲಿದೆ. ಈ ಸ್ಮಾರ್ಟ್ಫೋನ್ ಉತ್ಪಾದಕ ಕಂಪನಿಯೇ ಮಾಹಿತಿಯನ್ನು ನೀಡಿದೆ. ವರದಿಗಳ ಪ್ರಕಾರ, ಕಡಿಮೆ-ವೆಚ್ಚದ 5G ಮೊಬೈಲ್ ಸಾಧನಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಸೃಷ್ಟಿಸುವುದಕ್ಕಾಗಿ ಸಾಮಾನ್ಯ ಇನ್ಫಿನಿಕ್ಸ್ ಹಾಟ್ 20 5ಜಿ (Infinix Hot 20 5G) ಭಾರತದಲ್ಲಿ 12,000 ರೂ.ಗಳಿಗೆ ಮಾರಾಟ ಮಾಡಲು ಮುಂದಾಗಿದೆ. ಅಂದರೆ, ತೀರಾ ಅಗ್ಗದ ಬೆಲೆ 5ಜಿ ಬೆಂಬಲಿತ ಸ್ಮಾರ್ಟ್ಫೋನ್ ಗ್ರಾಹಕರಿಗೆ ಸಿಗಲಿದೆ ಎಂದಾಯಿತು. ಈ ಸರಣಿಯು ಪ್ರಮಾಣಿತ Infinix Hot 20 ಮತ್ತು Pro ವೇರಿಯಂಟ್ ಎರಡನ್ನೂ ಒಳಗೊಂಡಿರಬಹುದು ಎಂದು ನಿರೀಕ್ಷಿಸಲಾಗಿದೆ

Infinix ಫೋನ್ನ ವಿಶೇಷಣಗಳ ಬಗ್ಗೆ ಮುಂಚಿತವಾಗಿ ಕೆಲವು ವಿವರಗಳನ್ನು ಒದಗಿಸಿದೆ. Infinix Hot 20 5G ಗ್ಲೋಬಲ್ ಮಾದರಿಯಲ್ಲಿ 6.92-ಇಂಚಿನ ಪೂರ್ಣ-HD+ ಡಿಸ್ಪ್ಲೇ 120Hz ವರೆಗೆ ರಿಫ್ರೆಶ್ ದರವನ್ನು ಹೊಂದಿದೆ. ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 810 ಸಿಪಿಯು, 4 ಜಿಬಿ RAM ಮತ್ತು 128 ಜಿಬಿ ಆಂತರಿಕ ಸಂಗ್ರಹಣೆ ಫೋನ್ಗೆ ಶಕ್ತಿ ನೀಡುತ್ತದೆ.

Infinix Hot 20 5G ನಲ್ಲಿ ಮೈಕ್ರೊ SD ಕಾರ್ಡ್ ಸ್ಲಾಟ್ ಇದೆ. ಬಳಕೆದಾರರು ಈ ಸ್ಲಾಟ್ ಬಳಸಿಕೊಂಡು ತಮ್ಮ ಫೋನ್ ಸ್ಟೋರೇಜ್ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಇನ್ಫಿನಿಕ್ಸ್ ಹಾಟ್ 20 5ಜಿ ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಕಂಪನಿಯು 50 ಮೆಗಾ ಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಒದಗಿಸಿದೆ. ಇದರ ಜತೆಗೆ ಸೆಕೆಂಡರ್ ಕ್ಯಾಮೆರಾ ಆಗಿ 2 ಮೆಗಾ ಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಸೋನಿ LinkBuds S ವೈರ್‌ಲೆಸ್ ಇಯರ್‌ಬಡ್‌ ಏಕೆ ಖರೀದಿಸಬೇಕು? ಇಲ್ಲಿವೆ 5 ಕಾರಣಗಳು

ಹಿಂಬದಿಯ ಫೋನ್ ಗಮನಿಸದಿರೆ, ಅತಿ ಹೆಚ್ಚಿನ ಪಿಕ್ಸೆಲ್ ಇರುವ ಕ್ಯಾಮೆರಾ ಆಗಿರುವುದರಿಂದ ಸಹಜವಾಗಿಯೇ, ಕಡಿಮೆ ರೇಟಿಗೆ ಈ ಫೋನ್ ಸಾಮರ್ಥ್ಯವು ತುಸು ಹೆಚ್ಚೇ ಎಂದು ಭಾವಿಸಬಹುದು. ಹಾಗಾಗಿ ಫೋನ್ ವಿಷಯದಲ್ಲಿ ಈ ಫೋನ್ ಹೆಚ್ಚು ಆಕರ್ಷಕವಾಗಿದೆ ಎಂದೂ ಹೇಳಬಹುದು. Infinix Hot 20 5G ಸ್ಮಾರ್ಟ್‌ಫೋನ್ ಮುಂಭಾಗದಲ್ಲಿ ಕ 8MP ಕ್ಯಾಮೆರಾವನ್ನು ಅಳವಡಿಸಿದೆ. ಈ ಕ್ಯಾಮೆರಾವನ್ನು ಬಳಕೆದಾರರು ವೀಡಿಯೊ ಕರೆಗಳಿಗೆ ಮತ್ತು ಸೆಲ್ಫಿ ತೆಗೆದುಕೊಳ್ಳಲು ಬಳಸಲಾಗುತ್ತದೆ. 18W ಕ್ಷಿಪ್ರ ಚಾರ್ಜಿಂಗ್ ಅನ್ನು ಬೆಂಬಲಿಸುವ 5000mAh ಬ್ಯಾಟರಿ ಸ್ಮಾರ್ಟ್‌ಫೋನ್‌ಗೆ ಹೆಚ್ಚಿನ ಶಕ್ತಿಯನ್ನು ಒದಗಿಸುತ್ತದೆ.

ಮೂಲಕಗಳ ಪ್ರಕಾರ, ಈ Infinix ಸ್ಮಾರ್ಟ್ಫೋನ್ ಪ್ಲಾಸ್ಟಿಕ್ ಹಿಂಭಾಗವನ್ನು ಹೊಂದಿದೆ ಮತ್ತು ಬೆಲೆಯನ್ನು ಕಡಿಮೆ ಮಾಡಲು ಎರಡು ಬಣ್ಣ ರೂಪಾಂತರಗಳಲ್ಲಿ ಬರುತ್ತದೆ. ಸ್ಟ್ಯಾಂಡರ್ಡ್ Infinix Hot 20 ನ ಹಿಂಭಾಗದಲ್ಲಿ ಎರಡು ಕ್ಯಾಮೆರಾ ಸಂವೇದಕಗಳನ್ನು ಸೇರಿಸಲು ನಿರೀಕ್ಷಿಸಲಾಗಿದೆ. ಬೆಲೆಗೆ ಸಂಬಂಧಿಸಿದಂತೆ, Infinix Hot 20 5G ಸರಣಿಯು ಭಾರತದಲ್ಲಿ ರೂ 18,000 ರೂ. ಕ್ಕಿಂತ ಕಡಿಮೆ ಬೆಲೆಯಿರುತ್ತದೆ ಎಂದು ಹೇಳಲಾಗುತ್ತಿದೆ.

ಡಿಸೆಂಬರ್ 2ಕ್ಕೆ iQOO 11 5G ಫೋನ್ ಲಾಂಚ್, ವಿಶೇಷತೆಗಳೇನು?

Pro ಮಾದರಿಯ ಹಿಂಭಾಗದಲ್ಲಿ ಫಿಂಗರ್ಪ್ರಿಂಟ್ ಸ್ಕ್ಯಾನರ್ ಅನ್ನು ನಿರೀಕ್ಷಿಸಲಾಗಿದೆ. ಚೀನಾದ ಟ್ರಾನ್ಸ್ಷನ್ ಗ್ರೂಪ್ನಿಂದ ಹೊಸ 4G ಸ್ಮಾರ್ಟ್ಫೋನ್ ಆಗಿ, Infinix ಇತ್ತೀಚೆಗೆ ಭಾರತದಲ್ಲಿ Infinix Note 12 Pro ಸ್ಮಾರ್ಟ್ಫೋನ ಅನ್ನು ಬಿಡುಗಡೆ ಮಾಡಿತ್ತು. ಈ ಸ್ಮಾರ್ಟ್ಫೋನ್ ವಾಟರ್-ಡ್ರಾಪ್-ಆಕಾರದ ಡಿಸ್ಪ್ಲೇ ನಾಚ್ ಮತ್ತು ಟ್ರಿಪಲ್ ಬ್ಯಾಕ್ ಕ್ಯಾಮೆರಾ ವ್ಯವಸ್ಥೆಯನ್ನು ಹೊಂದಿದೆ ಮತ್ತು ಅದರ ಮಧ್ಯದಲ್ಲಿ 108 MP  ಕ್ಯಾಮೆರಾವನ್ನು ಹೊಂದಿದೆ.

Follow Us:
Download App:
  • android
  • ios