Asianet Suvarna News Asianet Suvarna News

ತುಮಕೂರು: ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರ್ಪಡೆಯಾದ ಮುಖಂಡರು

ಮಾದಿಗ ದಂಡೋರ ರಾಜ್ಯಾಧ್ಯಕ್ಷರಾದ ಅನೇಕಲ್‌ ಶಂಕರಪ್ಪ ಹಾಗೂ ತಾಲೂಕು ಬಿಜೆಪಿ ಅಧ್ಯಕ್ಷ ರಂಗಣ್ಣ, ಹಿರಿಯ ಮುಖಂಡರಾದ ಜಿ.ಟಿ.ಗಿರೀಶ್‌, ಜಿಲ್ಲಾ ಘಟಕದ ಶಿವಕುಮಾರ್‌ ಸಾಕೇಲ್‌ ಸಮ್ಮುಖದಲ್ಲಿ ಶನಿವಾರ ಪಟ್ಟಣದ 12ನೇ ವಾರ್ಡಿನ ಮುಖಂಡ ಸುಬ್ರಮಣ್ಯಂ ಇತರೆ ಕಾರ್ಯಕರ್ತರು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆಯಾದರು.

Tumkur  Leaders left Congress and joined BJP snr
Author
First Published Apr 21, 2024, 11:40 AM IST

ಪಾವಗಡ: ಮಾದಿಗ ದಂಡೋರ ರಾಜ್ಯಾಧ್ಯಕ್ಷರಾದ ಅನೇಕಲ್‌ ಶಂಕರಪ್ಪ ಹಾಗೂ ತಾಲೂಕು ಬಿಜೆಪಿ ಅಧ್ಯಕ್ಷ ರಂಗಣ್ಣ, ಹಿರಿಯ ಮುಖಂಡರಾದ ಜಿ.ಟಿ.ಗಿರೀಶ್‌, ಜಿಲ್ಲಾ ಘಟಕದ ಶಿವಕುಮಾರ್‌ ಸಾಕೇಲ್‌ ಸಮ್ಮುಖದಲ್ಲಿ ಶನಿವಾರ ಪಟ್ಟಣದ 12ನೇ ವಾರ್ಡಿನ ಮುಖಂಡ ಸುಬ್ರಮಣ್ಯಂ ಇತರೆ ಕಾರ್ಯಕರ್ತರು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆಯಾದರು.

ಮುಖಂಡ ಸುಬ್ರಮಣ್ಯಂರಿಗೆ ದಂಡೋರ ಅಧ್ಯಕ್ಷ ಶಂಕರಪ್ಪ ಅವರು ಬಾವುಟ ನೀಡುವ ಮೂಲಕ ಸ್ವಾಗತಿದರು. ಎನ್‌ಡಿಎ ಹಿರಿಯ ಮುಖಂಡ ಅನೇಕಲ್‌ ಕೆ.ನಾರಾಯಣಸ್ವಾಮಿ,ಮುಖಂಡರಾದ ಅರಸೀಕೆರೆ ತಿಪ್ಪೇಸ್ವಾಮಿ ಚಂದ್ರಶೇಖರ್‌ನಾಯ್ಕ್‌, ಅಲ್ಕುಂದರಾಜ್‌, ರಾಜೇಂದ್ರ ಹಾಗೂ ಅನೇಕಲ್‌ ತಾ.ಮಾಜಿ ಪುರಸಭೆ ಅಧ್ಯಕ್ಷ ರಾಜು ಸೇರಿ ಬಿಜೆಪಿ ಕಾರ್ಯಕರ್ತರಿದ್ದರು.

ತುಮಕೂರಲ್ಲಿ ಬಿಜೆಪಿ ಗೆದ್ದರೆ ಬೆಂಗಳೂರಿಗೆ ಹೋಗಬೇಕಾಗುತ್ತದೆ

ಹೊಳವನಹಳ್ಳಿ: ತುಮಕೂರು ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಎಸ್‌.ಪಿ. ಮುದ್ದಹನುಮೇಗೌಡ ಗೆದ್ದರೆ ರಾಯದುರ್ಗ ರೈಲ್ವೆಗೆ ಮತ್ತೆ ಮರು ಜೀವ ಬರುತ್ತದೆ. ಬಿಜೆಪಿ ಅಭ್ಯರ್ಥಿ ಗೆದ್ದರೆ ಬೆಂಗಳೂರಿಗೆ ಹೋಗಬೇಕಾಗುತ್ತದೆ ಎಂದು ಮಧುಗಿರಿ ಸಂಘಟನಾತ್ಮಕ ಜಿಲ್ಲಾ ಮಾಜಿ ಅಧ್ಯಕ್ಷ ಪುಟ್ಟರಾಜು ಹೇಳಿದರು.

ಕ್ಯಾಮೇನಹಳ್ಳಿಯಲ್ಲಿ ನಡೆದ ಕಾಂಗ್ರೆಸ್‌ ಅಭ್ಯರ್ಥಿ ಪರ ಪ್ರಚಾರ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು. ಮುದ್ದ ಹನುಮೇಗೌಡ ಗೆಲುವಿಗೆ ಸಚಿವರಾದ ಡಾ.ಜಿ.ಪರಮೇಶ್ವರ್, ಕೆ.ಎನ್.ರಾಜಣ್ಣ ಬೆಂಬಲವಾಗಿ ನಿಂತಿದ್ದಾರೆ. ಕೊರಟಗೆರೆ ಕ್ಷೇತ್ರದ ಕಸಬಾ, ಹೊಳವನಹಳ್ಳಿ, ಪುರವಾರ ಹೋಬಳಿಯ ಮತದಾರರ ಒಲವು ಕಾಂಗ್ರೆಸ್ ಪರವಾಗಿದೆ. ಎಸ್‌ಪಿಎಂ ಗೆಲುವಿಗೆ ಶ್ರೀ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ, ಹೂವಿನ ಅಲಂಕಾರ ಮಾಡಿಸಿದ್ದೇವೆ ಎಂದರು.

ಕಾಂಗ್ರೆಸ್ ಮುಖಂಡ ಶಿವಕುಮಾರ್ ಮಾತನಾಡಿ, ಕರ್ನಾಟಕದ 28 ಲೋಕಸಭಾ ಗೆಲುವಿಗೆ 5 ಗ್ಯಾರಂಟಿಗಳು ಸಹಕಾರಿಯಾಗಲಿವೆ. ಮುದ್ದಹನುಮೇಗೌಡ ಗೆಲುವು ಸಾಧಿಸುತ್ತಾರೆ. ಕೊರಟಗೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಅತ್ಯಂತ ಹೆಚ್ಚಿನ ಮತ ಪಡೆಯಲಿದೆ ಎಂದು ಹೇಳಿದರು. ಮುಖಂಡರಾದ ನರಸಿಂಹರಾಜು, ಹನುಮಂತರಾಜು, ಗಂಗಣ್ಣ, ನರಸಿಂಹಯ್ಯ, ನಾಗರಾಜು, ರಂಗಧಾಮಯ್ಯ, ಹನುಮಂತರಾಯಪ್ಪ, ಲಕ್ಷ್ಮಮ್ಮ, ನಟರಾಜು, ದೇವರಾಜು, ರಂಗನಾಥ, ಲಕ್ಷ್ಮೀನರಸಪ್ಪ, ಮಂಜುನಾಥ ಇದ್ದರು.

Follow Us:
Download App:
  • android
  • ios