Asianet Suvarna News Asianet Suvarna News

ಜಮೀನಿಗಾಗಿ ಎರಡು ಕುಟುಂಬಗಳು ಮಾರಮಾರಿ; ರೈತರ ನಡುವೆ ಜಗಳ ತಂದಿಟ್ಟು ತಮಾಷೆ ನೋಡ್ತಿರೋ ಅಧಿಕಾರಿಗಳು!

ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಓಬಟ್ಟಿ ಗ್ರಾಮದಲ್ಲಿ ಕಂದಾಯ ಅಧಿಕಾರಿಗಳ ಎಡವಟ್ಟಿನಿಂದ ಎರಡು ರೈತ ಕುಟುಂಬಗಳು ಮಾರಾಮಾರಿ ಮಾಡಿಕೊಂಡಿದ್ದಾರೆ.

Negligence of officials Two farmers fight for farming at kolar rav
Author
First Published Jan 26, 2024, 7:36 PM IST

ಕೋಲಾರ (ಜ.26) : ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಓಬಟ್ಟಿ ಗ್ರಾಮದಲ್ಲಿ ಕಂದಾಯ ಅಧಿಕಾರಿಗಳ ಎಡವಟ್ಟಿನಿಂದ ಎರಡು ರೈತ ಕುಟುಂಬಗಳು ಮಾರಾಮಾರಿ ಮಾಡಿಕೊಂಡಿದ್ದಾರೆ. ಗ್ರಾಮದಲ್ಲಿ ಮೊದಲಿನಿಂದಲೂ ಸರ್ವೇ ನಂಬರ್ 43 ಹಾಗೂ 44 ರಲ್ಲಿ ಎರಡು ಕುಟುಂಬಗಳು ಪ್ರತ್ಯೇಕವಾಗಿ ವ್ಯವಸಾಯ ಮಾಡಿಕೊಂಡು ಬರುತ್ತಿದ್ದಾರೆ. ವಿರೇಗೌಡ ಹಾಗೂ ದೊಡ್ಡವೆಂಕಟದಾಸಿ ಕುಟುಂಬಗಳಿಗೆ ಜಮೀನನ್ನು ಮಂಜೂರು ಮಾಡಿಕೊಡಲಾಗಿತ್ತು. ಅದರಂತೆ ಎರಡು ಕುಟುಂಬಗಳು ಕೃಷಿ ಮಾಡಿಕೊಂಡು ಜೀವನ ಮಾಡ್ತಿದ್ದಾರೆ. 

ನಿಗಮ ಮಂಡಳಿ ನೇಮಕ: 'ನಾವೇನು ನಿಮ್ಮ ಗುಲಾಮರಾ?' ಹೈಕಮಾಂಡ್ ವಿರುದ್ಧ ಸಿಡಿದೆದ್ದ ರಾಜಣ್ಣ!

ಆದ್ರೆ ಇದರಲ್ಲಿ ಎರಡು ಕುಟುಂಬಗಳಿಗೆ ನೀಡಿರುವ ಸರ್ವೇ ನಂಬರ್ ಗಳನ್ನು ಅಧಿಕಾರಿಗಳ ಕಣ್ತಪ್ಪಿನಿಂದ ಅದಲು ಬದಲು ಮಾಡಲಾಗಿದ್ದು, ಇದೀಗ ಅದು ಎರಡು ಕುಟುಂಬಗಳಿಗೆ ತಿಳಿದು  ಜಮೀನಿನಲ್ಲೇ ಗಲಾಟೆ ಮಾಡಿಕೊಳ್ತಿದ್ದಾರೆ. ಸದ್ಯ ಈ ವಿಚಾರ ಇದೀಗ ಮಾಲೂರು ಕೋರ್ಟ್ ನ ಮೆಟ್ಟಿಲೇರಿದ್ದು ಪ್ರಕರಣ ಇತ್ಯಾರ್ಥ ಆಗುವವರೆಗೂ ಎರಡು ಕುಟುಂಬಗಳು ಸರ್ವೇ ನಂಬರ್ 44 ರಲ್ಲಿ ವ್ಯವಸಾಯ ಮಾಡದಂತೆ ಸೂಚನೆ ಜೊತೆ ತಡೆಯಾಜ್ಞೆ ನೀಡಿದೆಕ. ಆದ್ರೂ ಸಹ ವ್ಯವಸಾಯ ಮಾಡುತ್ತಿದ್ರು ಇದನ್ನು ನಾವು ಜಮೀನಿಗೆ ಹೋಗಿ ಪ್ರಶ್ನೆ ಮಾಡಿದಕ್ಕೆ ಎರಡು ಕುಟುಂಬಗಳು ಮಾರಾಮಾರಿ ಮಾಡಿಕೊಂಡಿದ್ದೇವೆ. ಅಧಿಕಾರಿಗಳ ಎಡವಟ್ಟು ನಮ್ಮನ್ನು ಮಾರಾಮಾರಿಗೆ ತಂದು ನಿಲ್ಲಿಸಿದೆಕ. ಆಗಾಗಿ ಸಮಸ್ಯೆಯನ್ನು ಬಗಹರಿಸಿ ಎಂದು ವೀರೇಗೌಡ ಕುಟುಂಬಸ್ಥರು ಮನವಿ ಮಾಡ್ತಿದ್ದಾರೆ.

ಕೊನೆಗೂ ನಿಗಮ ಮಂಡಳಿ ಪಟ್ಟಿ ಬಿಡುಗಡೆ; ಯಾರಿಗೆ ಯಾವ ನಿಗಮ? ಇಲ್ಲಿದೆ ಮಾಹಿತಿ

ಇನ್ನು ಮಾರಾಮಾರಿ ಸಂಬಂಧ ಎರಡು ಕುಟುಂಬಗಳಿಂದ ಮಾಸ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಸಮಸ್ಯೆಯನ್ನ ಕೋರ್ಟ್ ನಲ್ಲೇ ಬಗೆಹರಿಸಿಕೊಳ್ಳಿ ಎಂದು ಪೊಲೀಸರು ಹೇಳಿ ಕಳಿಸಿದ್ದಾರೆ. ಸಧ್ಯ ಅಧಿಕಾರಿಗಳ ಎಡವಟ್ಟು ಎರಡು ರೈತ ಕುಟುಂಬಗಳು ಮಾರಾಮಾರಿ ಮಾಡಿಕೊಳ್ಳುವಂತೆ ಮಾಡಿದೆ.

Follow Us:
Download App:
  • android
  • ios