Asianet Suvarna News Asianet Suvarna News

ಕೋಲಾರ: ಸರ್ಕಾರಿ ಅಧಿಕಾರಿಗಳಿಂದ ಇಲಾಖೆಗಳ ವಾಹನ ದುರ್ಬಳಕೆ

ಪ್ರತಿದಿನ ಬೆಂಗಳೂರಿನಿಂದ ರೈಲಿನಲ್ಲಿ ಪ್ರಯಾಣಿಸುವಂತ ಅಧಿಕಾರಿಗಳು ಬಂಗಾರಪೇಟೆ ರೈಲ್ವೆ ನಿಲ್ದಾಣದ ಬಳಿ ತಮ್ಮ ಇಲಾಖೆಯ ವಾಹನಗಳನ್ನು ಕರೆಸಿಕೊಂಡು ಕಚೇರಿಗೆ ಬರುವ ಮೂಲಕ ಸರ್ಕಾರಿ ವಾಹನಗಳು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿ ಹಾಗೂ ಇಲಾಖೆಯ ಮೇಲಿನ ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮಕೈಗೊಳ್ಳದೆ ನಿರ್ಲಕ್ಷಿಸಲಾಗುತ್ತಿದೆ.

Misuse of Departmental Vehicles by Government Officials in Kolar grg
Author
First Published Jan 7, 2024, 2:00 AM IST

ಕೋಲಾರ(ಜ.07):  ಕೋಲಾರ, ಕೆ.ಜಿ.ಎಫ್ ಮತ್ತು ಬಂಗಾರಪೇಟೆಯಲ್ಲಿ ಕೆಲಸ ನಿರ್ವಹಿಸುವ ಬಹುತೇಕ ಅಧಿಕಾರಿಗಳು ಕೇಂದ್ರ ಸ್ಥಳದಲ್ಲಿ ವಾಸ ಮಾಡದೆ ಪ್ರತಿದಿನ ಬೆಂಗಳೂರಿನಿಂದ ಬಂದು ಹೋಗುತ್ತಾರೆ. ಇವರನ್ನು ರೈಲು ನಿಲ್ದಾಣ ಹಾಗೂ ಬಸ್ ನಿಲ್ದಾಣಗಳಿಗೆ ಕರೆ ತರಲು ಸರ್ಕಾರಿ ವಾಹನಗಳನ್ನು ಬಳಸಲಾಗುತ್ತಿದೆ. ಕೆಲವೊಮ್ಮೆ ಬೆಂಗಳೂರಿಗೂ ಸಹ ಡ್ರಾಪ್ ಮಾಡಿದ ಉದಾಹರಣೆಗಳಿವೆ.

ಪ್ರತಿದಿನ ಬೆಂಗಳೂರಿನಿಂದ ರೈಲಿನಲ್ಲಿ ಪ್ರಯಾಣಿಸುವಂತ ಅಧಿಕಾರಿಗಳು ಬಂಗಾರಪೇಟೆ ರೈಲ್ವೆ ನಿಲ್ದಾಣದ ಬಳಿ ತಮ್ಮ ಇಲಾಖೆಯ ವಾಹನಗಳನ್ನು ಕರೆಸಿಕೊಂಡು ಕಚೇರಿಗೆ ಬರುವ ಮೂಲಕ ಸರ್ಕಾರಿ ವಾಹನಗಳು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿ ಹಾಗೂ ಇಲಾಖೆಯ ಮೇಲಿನ ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮಕೈಗೊಳ್ಳದೆ ನಿರ್ಲಕ್ಷಿಸಲಾಗುತ್ತಿದೆ.

ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಕೈ ಅಭ್ಯರ್ಥಿ ಆಯ್ಕೆ ಕಗ್ಗಂಟು: ರಾಮಲಿಂಗಾರೆಡ್ಡಿ ನಿವಾಸದಲ್ಲಿ ಸಭೆ

ಕೇಂದ್ರ ಸ್ಥಾನದಲ್ಲಿ ವಾಸ ಕಡ್ಡಾಯ

ಇಲಾಖೆಯ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಕಡ್ಡಾಯವಾಗಿ ಹಾಜರಿರಬೇಕೆಂದು ಸರ್ಕಾರ ನಿಯಮ ಜಾರಿ ಮಾಡಿದ್ದರೂ ಅಧಿಕಾರಿಗಳು ಸರ್ಕಾರಿ ನಿಯಮ ಗಾಳಿಗೆ ತೋರಿದ್ದಾರೆ. ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಬಹುತೇಕ ಮಂದಿ ಕೇಂದ್ರ ಸ್ಥಾನದಲ್ಲಿ ವಾಸವಿಲ್ಲ, ಇದು ಹಲವಾರು ವರ್ಷದಿಂದ ವಿವಿಧ ಇಲಾಖೆಯ ಅಧಿಕಾರಿಗಳು ಮುಂದುವರೆಸಿಕೊಂಡು ಬಂದಿದ್ದಾರೆ. ಇದರ ಜೂತೆಗೆ ಮನೆಯ ಬಾಡಿಗೆ ಹಣವೆಂದು ಎಚ್‌ಆರ್‌ಎ ಭತ್ಯೆ ಅಧಿಕಾರಿಗಳು ಸರ್ಕಾರದಿಂದ ಪಡೆಯುತ್ತಿದ್ದಾರೆ. ಈ ಬಗ್ಗೆ ಮೇಲಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ.

ಕರ್ನಾಟಕವನ್ನು ಡ್ರಗ್ಸ್‌ ಮುಕ್ತರಾಜ್ಯವಾಗಿಸಲು ಪಣ: ಗೃಹ ಸಚಿವ ಪರಮೇಶ್ವರ

ಬೆಂಗಳೂರಿನಿಂದ ಬರುವವರೇ ಹೆಚ್ಚು

ಬಂಗಾರಪೇಟೆ ರೈಲ್ವೆ ನಿಲ್ದಾಣದಲ್ಲಿ ಕೋಲಾರದ ಪ್ರಾದೇಶಿಕ ಸಾರಿಗೆ ಇಲಾಖೆ ವಾಹನ, ಕೋಲಾರದ ಲೋಕೋಪಯೋಗಿ ಇಲಾಖೆ ವಾಹನ, ಕ್ಷೇತ್ರ ಶಿಕ್ಷಣಾಧಿಕಾರಿ ವಾಹನ ಸೇರಿದಂತೆ ಹಲವಾರು ವಾಹನಗಳು ರೈಲ್ವೆ ನಿಲ್ದಾಣದಲ್ಲಿ ಸಾಲುಗಟ್ಟಿ ಸರದಿಯಲ್ಲಿ ನಿಂತಿರುವುದನ್ನು ಬೆಳಗಿನ ವೇಳೆ ಕಾಣಬರುತ್ತದೆ. ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಬೆಂಗಳೂರು ಸೇರಿದಂತೆ ದೂರದ ಊರುಗಳಿಂದ ದಿನ ನಿತ್ಯ ಪ್ರಯಾಣಿಸಿ ಕಚೇರಿಗಳಿಗೆ ಬರುತ್ತಿದ್ದಾರೆ.
ಈ ರೀತಿ ದಿನನಿತ್ಯ ಪ್ರಯಾಣಿಸುವಂತ ಅಧಿಕಾರಿಗಳು ನಿಗದಿತ ಅವಧಿಯಲ್ಲಿ ಕಚೇರಿಗೆ ಬರುವುದಿಲ್ಲ. ಕಚೇರಿಯ ಕೆಲಸದ ಅವಧಿಗಿಂತ ಮುಂಚೆಯೇ ಜಾಗ ಖಾಲಿ ಮಾಡುತ್ತಾರೆ. ಈ ಸಂದರ್ಭದಲ್ಲಿ ಅಧಿಕಾರಿಗಳನ್ನು ಹುಡುಕಿಕೊಂಡು ಬಂದವರಿಗೆ ಡಿ.ಸಿ. ಕಚೇರಿಯಲ್ಲಿ ಮೀಟಿಂಗ್ ಹೋಗಿದ್ದಾರೆ, ಕೋರ್ಟ್, ಬೆಂಗಳೂರು ಹೆಡ್ ಆಫೀಸ್ ಮಿಟಿಂಗ್ ಇತ್ಯಾದಿ ಸಬೂಬುಗಳನ್ನು ಹೇಳುವುದು ಅಭ್ಯಾಸವಾಗಿ ಹೋಗಿದೆ.

ಪ್ರವಾಸಕ್ಕೂ ಸರ್ಕಾರಿ ಕಾರು ಬಳಕೆ

ಇಷ್ಟೇ ಅಲ್ಲದೆ ಕೆಲ ಅಧಿಕಾರಿಗಳು ಸರ್ಕಾರಿ ವಾಹನಗಳನ್ನು ಕುಟುಂಬದವರೊಂದಿಗೆ ರಜೆ ದಿನಗಳಲ್ಲಿ ಪ್ರವಾಸಗಳಿಗೆ ಬಳಸುತ್ತಿರುವುದು ಸಂಬಂಧಪಟ್ಟ ಇಲಾಖೆಯ ಮೇಲಧಿಕಾರಿಗಳ ಗಮನಕ್ಕೆ ಬಂದಿದ್ದರೂ ಕ್ರಮ ಜರುಗಿಸದೆ ಹೊಂದಾಣಿಕೆ ಮಾಡಿಕೊಂಡಿದ್ದಾರೆಂಬ ಆರೋಪಿಗಳು ಕೇಳಿ ಬರುತ್ತಿವೆ.

Follow Us:
Download App:
  • android
  • ios