Asianet Suvarna News Asianet Suvarna News

ಯಾದಗಿರಿ: ಮಳೆಗಾಗಿ ಆಷಾಢ ಪರವು ಆಚರಣೆ, ಗುರುಲಿಂಗಮಾಹ ಸ್ವಾಮೀಜಿಯಿಂದ ವಿಶೇಷ ಪೂಜೆ

ಸಮೀಪದ ಅರಿಕೇರಾ ಬಿ. ಗ್ರಾಮದಲ್ಲಿ ಬೆಟ್ಟದ ಪರಮಾನಂದೇಶ್ವರ ಪೀಠಾಧಿಪತಿಗಳಾದ ಗುರುಲಿಂಗಮಾಹ ಸ್ವಾಮೀಜಿಗಳ ನೇತೃತ್ವದಲ್ಲಿ ಮಳೆ, ಬೆಳೆ ಚೆನ್ನಾಗಿ ಬರಲೆಂದು ಆಷಾಢ ಪರವು ವೈಶಿಷ್ಟವಾಗಿ ಆಚರಿಸಲಾಯಿತು.

lack of rain special puja for rain in Yadagiri by swamiji at yadgiri rav
Author
First Published Jul 14, 2023, 8:23 AM IST

ಯಾದಗಿರಿ (ಜು.14) :ಸಮೀಪದ ಅರಿಕೇರಾ ಬಿ. ಗ್ರಾಮದಲ್ಲಿ ಬೆಟ್ಟದ ಪರಮಾನಂದೇಶ್ವರ ಪೀಠಾಧಿಪತಿಗಳಾದ ಗುರುಲಿಂಗಮಾಹ ಸ್ವಾಮೀಜಿಗಳ ನೇತೃತ್ವದಲ್ಲಿ ಮಳೆ, ಬೆಳೆ ಚೆನ್ನಾಗಿ ಬರಲೆಂದು ಆಷಾಢ ಪರವು ವೈಶಿಷ್ಟವಾಗಿ ಆಚರಿಸಲಾಯಿತು.

ನೂರಾರು ಸಂಖ್ಯೆಯ ಗ್ರಾಮಸ್ಥರು ಹಲಗಿ, ಡೊಳ್ಳು, ಭಜನೆ ಮೇಳದೊಂದಿಗೆ ಪಲ್ಲಕ್ಕಿ ಮೆರವಣಿಗೆ ಮೂಲಕ ಬೆಟ್ಟದ ಪರಮಾನಂದೇಶ್ವರ ಮಂದಿರಕ್ಕೆ ತಲುಪಿದರು. ಲಿಂಗ ಪೂಜೆ, ಅಭಿಷೇಕ, ಮಂಗಳಾರತಿ ಕಾರ್ಯಕ್ರಮಗಳ ಬಳಿಕ ಗ್ರಾಮಸ್ಥರು ಒಟ್ಟಾಗಿ ಕೆಲ ಗಂಟೆಗಳ ಕಾಲ ಮಳೆಗಾಗಿ ಪ್ರಾರ್ಥಿಸಿ, ಭಜನೆ ಮಾಡಿದರು.

ಮಹಿಳೆಯರು, ಯುವತಿಯರು ಹೊಸ ಸೀರೆ ಉಟ್ಟು, ಬಿದಿರಿನ ಪುಟ್ಟಿಯಲ್ಲಿ ಹೋಳಿಗೆ, ರೊಟ್ಟಿ, ಪುಂಡಿ ಪಲ್ಯ, ಕಾಳು ಪಲ್ಯ, ಅನ್ನ, ಸಾಂಬಾರು, ಶೇಂಗಾದ ಹಿಂಡಿ, ಹಪ್ಪಳ, ಮೊಸರು ಬುತ್ತಿ ಕಟ್ಟಿಕೊಂಡು ತಲೆ ಮೇಲೆ ಹೊತ್ತುಕೊಂಡು, ಬೆಟ್ಟಕ್ಕೆ ಆಗಮಿಸಿದ್ದರು. ಮುತ್ತೈದೆ ಮಹಿಳೆಯರಿಗೆ ಹಣಗೆ ಕುಂಕುಮ, ಅರಿಶಿಣ ಹಚ್ಚಿವ ಮೂಲಕ ಸಾಂಪ್ರದಾಯ ಮೆರೆದರು.

ಮಳೆಗಾಗಿ ತಾಮ್ರದ ಬಿಂದಿಗೆ ಬಳಿ ಭವಿಷ್ಯ ಕೇಳಿದ ವಿಜಯಪುರ ಜನ! ಬಿಂದಿಗೆ ನುಡಿದ ಭವಿಷ್ಯ ನಿಜವಾಗುತ್ತಾ?

ಆಗಮಿಸಿದ ಭಕ್ತಾದಿಗಳಿಗೆಲ್ಲ ಮಹಿಳೆಯರು ತಂದಿದ್ದ ರೊಟ್ಟಿಬುತ್ತಿಯನ್ನು ಪ್ರಸಾದ ರೂಪದಲ್ಲಿ ಉಣಬಡಿಸಿದರು. ಚಿಕ್ಕ ಮಕ್ಕಳು ತಾಯಂದಿರ ಜೊತೆ ಗುಂಪಾಗಿ ಕುಳಿತು, ಊಟ ಮಾಡಿ ಸಂಭ್ರಮಿಸಿದ್ದರು. ಸಂಜೆ ಸಮಯ ಭಜನೆ ಮಾಡುತ್ತಾ ಮರಳಿ ಗ್ರಾಮಕ್ಕೆ ಮರಳಿದರು.

ಮೌನೇಶ ಕಂಬಾರ, ಅಶೋಕಗೌಡ ಮಾಲಿಪಾಟೀಲ್‌, ಸಿದ್ದಲಿಂಗರೆಡ್ಡಿ ಸಾವುಕಾರ, ದೊಡ್ಡಪ್ಪಗೌಡ ಹಾದಿಮನಿ, ಹಣಮಂತ ಮುಲಿಮನಿ, ಹೊನ್ನಪ್ಪ ಸಿದ್ದಪ್ಪ ಬಡಿಗೇರ, ಸಾಬರೆಡ್ಡಿ ಹಳಿಮನಿ ಶಿವರೆಡ್ಡಿ ಚಾಮನಳ್ಳಿ ಇದ್ದರು.

ದಾವಣಗೆರೆಯಲ್ಲಿ ಮಳೆಗಾಗಿ ಪ್ರಾರ್ಥಿಸಿ ವಿಶೇಷ ಸಂತೆ, ಐದು ವಾರ ಸಂತೆ ಕಳೆಯುವಷ್ಟರಲ್ಲಿ ಮಳೆ!

Follow Us:
Download App:
  • android
  • ios