userpic
user icon

ಕನ್ನಡಪ್ರಭ ಪತ್ರಿಕೆ ಜಮಖಂಡಿ ತಾಲೂಕ ವರದಿಗಾರ ಗುರುರಾಜ್ ವಾಳ್ವೇಕರ್ ನಿಧನ

Jamkhandi taluka reporter of Kannadaprabha newspaper Gururaj Valvekar passed away rav
Kannadaprabha

Synopsis

ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡಪ್ರಭ ಪತ್ರಿಕೆ ತಾಲೂಕ ವರದಿಗಾರ ಗುರುರಾಜ್ ವಾಳ್ವೇಕರ್ (59) ಇಂದು ನಿಧನರಾಗಿದ್ದಾರೆ. 

ಬಾಗಲಕೋಟೆ (ಅ.2): ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡಪ್ರಭ ಪತ್ರಿಕೆ ತಾಲೂಕ ವರದಿಗಾರ ಗುರುರಾಜ್ ವಾಳ್ವೇಕರ್ (59) ಇಂದು ನಿಧನರಾಗಿದ್ದಾರೆ. 

ಧಾರವಾಡ ಮೂಲದವರಾಗಿದ್ದ ಗುರುರಾಜ್, ಶಿಕ್ಷಣಕ್ಕಾಗಿ ಜಮಖಂಡಿಗೆ ಬಂದು ಅಲ್ಲೆ ನೆಲೆನಿಂತರು. ಹಲವು ವರ್ಷಗಳಿಂದ ಕನ್ನಡಪ್ರಭ ಜಮಖಂಡಿ ತಾಲೂಕು ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದರು. ರಾಜಮಾರ್ಗ, ರಾವ್ ಬಹದ್ದೂರ್ ಸೇರಿದಂತೆ ಬೇರೆ ಬೇರೆ ಪತ್ರಿಕೆಗಳಿಗೆ ಕೆಲಸ ನಿರ್ವಹಿಸಿದ್ದರು. 

ಪತ್ನಿ, ಓರ್ವ ಪುತ್ರ, ಪುತ್ರಿ ಸೇರಿದಂತೆ ಅಪಾರ ಬಂಧು ಬಳಗ ಅಗಲಿದ ವಾಳ್ವೇಕರ್. ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಇಂದು ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಒಂದೇ ವರ್ಷದಲ್ಲಿ 45 ಕೆಜಿ ತೂಕ ಇಳಿಸಿಕೊಂಡ ಫಿಟ್‌ನೆಸ್ ಇನ್‌ಫ್ಲುಯೆನ್ಸರ್‌ ಸಾವು

ಬೈಕ್- ಟ್ರಕ್ ನಡುವೆ ಡಿಕ್ಕೆ ಸ್ಥದಲ್ಲೇ ಸಾವರ ಸಾವು

ಆಳಂದ: ವಾಗ್ದರಿ- ರಿಬ್ಬನಪಲ್ಲಿ ಹೆದ್ದಾರಿಯ ಮಾರ್ಗದ ಕಡಗಂಚಿ ಸಮೀಪದ ಹೆದ್ದಾರಿಯಲ್ಲಿ ಹೊರಟ್ಟಿದ್ದ ಬೈಕ್ ಹಾಗೂ ಟ್ರಕ್ ನಡುವೆ ಸಂಭವಿಸಿದ ಡಿಕ್ಕಿಯಿಂದ ಸ್ಥಳದಲ್ಲೇ ಬೈಕ್ ಸವಾರನೊಬ್ಬ ಮೃತಪಟ್ಟ ಘಟನೆ ನರೋಣಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

ಅಶೋಕ ಕೆರಬಾ ಇಂಗಳೆ (48), ರೇವಣಸಿದ್ದೇಶ್ವರ ಕಾಲೋನಿ ಆಳಂದ ನಿವಾಸಿಯೇ ಮೃತಪಟ್ಟಿದ್ದು, ಹಿಂಬದಿಯ ಸವಾರ ಸಲ್ಲಾವೋದ್ದೀನ್ ಅಹ್ಮದ್ (15) ರೇವಣಸಿದ್ದೇಶ್ವರ ಕಾಲೋನಿ ಆಳಂದ ನಿವಾಸಿಯ ಕಾಲು, ಕೈಗಳಿಗೆ ಗಂಭೀರವಾಗಿ ಗಾಯಗೊಂಡಿದ್ದು, ಕಲಬುರಗಿ ಯುನೈಟೆಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

Dr Kamala Hemmige: ಹಿರಿಯ ಲೇಖಕಿ, ಸಂಶೋಧಕಿ ಡಾ.ಕಮಲಾ ಹೆಮ್ಮಿಗೆ ನಿಧನ

ಆಳಂದನಿಂದ ಕಲಬುರಗಿ ಮಾರ್ಗದ ಕಡಗಂಚಿಯಿಂದ ಕೇಂದ್ರೀಯ ವಿವಿ ಮಾರ್ಗದ ಕ್ರಾಸ್‍ನಲ್ಲಿ ಬೈಕ್ ಮೇಲೆ ಹೊರಟ್ಟಿದ್ದ ಸಂದರ್ಭದಲ್ಲಿ ಎದುರಿನಿಂದ ಬಂದ್ ಟ್ರಕ್ ಟಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಅಶೋಕ ಮೃತಪಟ್ಟಿದ್ದಾನೆ. ಈ ಘಟನೆ ಬೆಳಗಿನ 1.30ರಿಂದ 2 ಗಂಟೆಯ ಸುಮಾರಿಗೆ ಸಂಭವಿಸಿದೆ ಎಂದು ಪೊಲೀಸರು ಅಂದಾಜಿಸಿದ್ದಾರೆ. ಘಟನಾ ಸ್ಥಳಕ್ಕೆ ನರೋಣಾ ಠಾಣೆಯ ಪಿಎಸ್‍ಐ ಗಂಗಾಮ್ಮ ಅವರು ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Videos