Asianet Suvarna News Asianet Suvarna News

ಕಾಡಂಚಿನ ಜನರಿಗೆ ಸಿಹಿಸುದ್ದಿ: ಜನವನ ಸಾರಿಗೆ ಸಂಚಾರಕ್ಕೆ ಮುಂದಾದ ಅರಣ್ಯ ಅಭಿವೃದ್ಧಿ ಪ್ರಾಧಿಕಾರ

ಚಾಮರಾಜನಗರ ಜಿಲ್ಲೆಯಲ್ಲಿ ಕಾಡಿನಲ್ಲಿ ವಾಸಿಸುವ ಕಾಡು ಜನರಿಗೆ ಅರಣ್ಯ ಅಭಿವೃದ್ಧಿ ಪ್ರಾಧಿಕಾರದಿಂದ ಜನವನ ಸಾರಿಗೆ ಸೇವೆಯನ್ನು ಪುನಾರಂಭಿಸಲಾಗುತ್ತಿದೆ.

Good news for forest people Forest Development Authority is ready for public transport sat
Author
First Published Oct 23, 2023, 7:35 PM IST

ವರದಿ - ಪುಟ್ಟರಾಜು. ಆರ್. ಸಿ. ಏಷ್ಯಾನೆಟ್‌ ಸುವರ್ಣ ನ್ಯೂಸ್
ಚಾಮರಾಜನಗರ (ಅ.23): ಅದು ದಟ್ಟಾರಣ್ಯ, ಅರಣ್ಯದಲ್ಲಿ ಹೆಚ್ಚು ಜನರು ವಾಸ ಮಾಡ್ತಿದ್ದಾರೆ. ಒಂದು ವೇಳೆ ಆರೋಗ್ಯ ಹದಗೆಟ್ರೆ ಅವರನ್ನು ಡೋಲಿ ಕಟ್ಟಿಯೇ ಹೊತ್ತು ಆಸ್ಪತ್ರೆಗೆ ತರುತ್ತಾರೆ. ಮತ್ತೊಂದೆಡೆ ಕಾಡು ಪ್ರಾಣಿಗಳ ಹಾವಳಿ ಬೇರೆ, ಇನ್ನು ಪಡಿತರ ಕೊಂಡೊಯ್ಯಬೇಕಾದ್ರೆ ಹತ್ತಾರು ಕಿ.ಮೀ. ತಲೆ ಮೇಲೆ ಹೊತ್ತು ಹೋಗುತ್ತಿದ್ದರು. ಇದರಿಂದ ರೋಸಿ ಹೋದ ಜನರು ಅರಣ್ಯ ಇಲಾಖೆ ವಿರುದ್ಧ ಇಡೀ ಶಾಪ ಹಾಕಿದ್ದುಂಟು. ನಂತರ ಈ ಸಂಕಷ್ಟಕ್ಕೆ ಮುಕ್ತಿ ಕೊಡಲು 24*7 ವಾಹನಗಳ ಸೌಲಭ್ಯ ಜನವನ ಸಾರಿಗೆ ಸೌಲಭ್ಯ ಒದಗಿಸಿದ್ದರು. ನಂತರ ನಿರ್ವಹಣೆ ಕೊರತೆಯಿಂದ ಜನವನ ಸ್ಟಾಪ್ ಆಗಿತ್ತು. ಮತ್ತೆ ಜನರು ಸಂಕಷ್ಟಕ್ಕೆ ಒಳಗಾಗಿದ್ದ ಜನರಿಗೆ ಮತ್ತೊಮ್ಮೆ ಅರಣ್ಯ ಇಲಾಖೆ ಬದಲು, ಅರಣ್ಯ ಅಭಿವೃದ್ಧಿ ಪ್ರಾಧಿಕಾರದಿಂದಲೇ ಜನವನ ಸಾರಿಗೆ ಆರಂಭಿಸಲು ನಿರ್ಧರಿಸಲಾಗಿದೆ.

ನಾವೂ ಹೇಳಲೂ ಹೊರಟಿರುವುದು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಧಾಮದ ಕಥೆ. ಈ ಅರಣ್ಯ ವ್ಯಾಪ್ತಿಯಲ್ಲಿ 18 ಕ್ಕೂ ಹೆಚ್ಚು ಗ್ರಾಮಗಳಿವೆ. ಈ ಗ್ರಾಮದ ಜನರ ಸ್ಥಿತಿ ಬಹಳ ಶೋಚನೀಯವಾಗಿತ್ತು. ಮಕ್ಕಳು ಶಿಕ್ಷಣ ಪಡೆಯಬೇಕಾದರೆ ಕಾಡು ಪ್ರಾಣಿಗಳ ಭಯದ ನಡುವೆ ಹೆಜ್ಜೆ ಹಾಕುವ ಪರಿಸ್ಥಿತಿಯಿತ್ತು. ಹೆಚ್ಚು ಮಕ್ಕಳು  ಈ ಭಯಕ್ಕೆ ವಿದ್ಯಾಭ್ಯಾಸ ಮೊಟಕುಗೊಳಿಸಿದ್ದೆ ಜಾಸ್ತಿ. ಇನ್ನೂ ಪೋಷಕರು ಕೂಡ ಭಯದಿಂದ ಶಾಲೆ ಕೂಡ ಬಿಡಿಸಿದ್ದಾರೆ. ಈ ಗ್ರಾಮಗಳ ಜನರಿಗೆ ಮೂಲ ಸೌಕರ್ಯ ಕೂಡ ಮರೀಚಿಕೆ. ಪಡಿತರ ಪಡೆಯಬೇಕಾದರೆ ಹತ್ತಾರು ಕಿಮೀ ಪಡಿತರ ಹೊತ್ತು ನಡೆದೆ ಹೋಗುವ ಪರಿಸ್ಥಿತಿ. ಕಾಡು ಪ್ರಾಣಿಗಳ ದಾಳಿಯಿಂದ ಸತ್ತ ನಿದರ್ಶನ ಕೂಡ ಸಾಕಷ್ಟಿದೆ.

'ಮುಕ್ಕೋಟಿ ಚೆಲ್ಲೀತಲೇ ಕಲ್ಯಾಣ ಕಟ್ಟೀತಲೇ ಪರಾಕ್': ದೇವರಗುಡ್ಡ ಕಾರ್ಣಿಕ

ಇದಕ್ಕೆಲ್ಲಾ ಮುಖ್ಯವಾಗಿ ಒಂದು ವೇಳೆ ಆರೋಗ್ಯ ಹದಗೆಟ್ರೆ ಅಂತಹವರ ಪರಿಸ್ಥಿತಿ ಮಾದಪ್ಪನಿಗೆ ಅಚ್ಚು ಮೆಚ್ಚು ಅನ್ನೋ ರೀತಿಯಿತ್ತು. ಡೋಲಿ ಕಟ್ಟಿಕೊಂಡು ಗ್ರಾಮದ ಒಂದಷ್ಟು ಜನರು ಆಸ್ಪತ್ರೆಗೆ ತಂದು ಚಿಕಿತ್ಸೆ ಕೊಡಿಸುತ್ತಿದ್ದರು. ಕಾಡಿನ ದಾರಿ ಮಧ್ಯದಲ್ಲಿಯೇ ಗರ್ಭಿಣಿಯರಿಗೆ ಹೆರಿಗೆ ನೋವು ಕಾಣಿಸಿಕೊಂಡು ಮಗು ಸಾವನ್ನಪ್ಪಿದ್ದು ನಡೆದಿದೆ. ಅದೇ ರೀತಿ ರೋಗಿಗಳು ಸಾವನ್ನಪ್ಪಿದ್ದಾರೆ. ನಮಗೆ ಕನಿಷ್ಠ ಮೂಲಭೂತ ಸೌಕರ್ಯ ಒದಗಿಸಿ ಅನ್ನೋ ಕೂಗು ಬಹಳ ವರ್ಷಗಳಿಂದ ಕೇಳಿ ಬಂದಿತ್ತು. ಇದೀಗ ಜನರ ಕಷ್ಟಕ್ಕೆ ಸ್ಪಂದಿಸುವ ಕೆಲಸಕ್ಕೆ ಅರಣ್ಯಾಧಿಕಾರಿಗಳು ಮುಂದಾಗಿ ದಿನದ 24 ಗಂಟೆಗೂ ವಾಹನ ಸೌಲಭ್ಯ ಒದಗಿಸಿದ್ದರು. ಆದ್ರೆ ಯೋಜನೆ ಆರಂಭವಾದ 3 ತಿಂಗಳೊಳಗೆ ನಿರ್ವಹಣೆ ಕೊರತೆಯಿಂದ ಜನವನ ಸ್ಟಾಪ್ ಆಯ್ತು. ನಂತರ ಕಾಡಂಚಿನ ಜನರ ಸ್ಥಿತಿ ಯಥಾರೀತಿಯಾಗಿತ್ತು. ಮತ್ತೇ ಜನವನ ಆರಂಭಿಸಬೇಕೆಂಬ ಕೂಗು ಹೆಚ್ಚಾಗಿತ್ತು. ಈ ಕೂಗಿಗೆ ಇದೀಗಾ ಧ್ವನಿಯಗುವ ಕಾಲ ಈಗ ಬಂದಿದೆ.

ಭಾರತೀಯ ಸೇನೆಗೆ ಸೇರಿಸುವುದಾಗಿ 150 ಯುವಕರಿಗೆ 1 ಕೋಟಿ ವಂಚಿಸಿದ ಶಿವರಾಜ್‌ ವಟಗಲ್

ಇನ್ನೂ  ಮಲೆ  ಮಹದೇಶ್ವರ  ಅಭಿವೃದ್ಧಿ  ಪ್ರಾಧಿಕಾರಕ್ಕೆ ಕೋಟ್ಯಂತರ ರೂಪಾಯಿ ಆದಾಯ ಬರ್ತಿದೆ. ಆದರೂ ಕೂಡ ಸ್ಥಳೀಯ ಜನರ ಕೂಗು ಪ್ರಾಧಿಕಾರಕ್ಕೆ ಕೇಳ್ತಿಲ್ವಾ  ಅಂತಾ ಅನೇಕ ಬಾರಿ ಆಕ್ರೋಶ ಹೊರಹಾಕಿದರು. ಇದೀಗಾ ಕಾಡಂಚಿನ ಜನರ ಸೇವೆಗೆ ಮಲೆ ಮಹದೇಶ್ವರ ಪ್ರಾಧಿಕಾರ ಮುಂದಾಗಿದೆ. ನಾಲ್ಕು ವಾಹನಗಳನ್ನು ಕೂಡ ಪ್ರಾಧಿಕಾರದ ವೆಚ್ಚದಲ್ಲಿ ಜನರಿಗೆ ಸೌಲಭ್ಯ ಒದಗಿಸಲು ತೀರ್ಮಾನಿಸಲಾಗಿದೆ. ಅರಣ್ಯ ಇಲಾಖೆಯಿಂದ ಜನವನ ವಾಹನಗಳನ್ನು ಪ್ರಾಧಿಕಾರವೇ ವಹಿಸಿಕೊಂಡು ಜನರಿಗೆ ಸೇವೆ ಒದಗಿಸಲು ತಯಾರಿ ನಡೆದಿದೆ. ಈ ಸೇವೆಯಿಂದ ಜನರಿಗೂ ಅನುಕೂಲಕ್ಕೆ ಆಗುತ್ತೆ,  ಕಡಿಮೆ ಸಾರಿಗೆ ವೆಚ್ಚದಲ್ಲಿ ಸೌಲಭ್ಯ ಕೊಡಲೂ ಚಿಂತಿಸಲಾಗಿದೆ.

ದುರ್ಗಮ ಹಾದಿಯಲ್ಲಿ ಸಂಚಾರ ಮಾಡಲೂ ಹೆದರುತ್ತಿದ್ದ ಜನರು ಇದೀಗಾ ಜನವನ ಸಾರಿಗೆ ಆರಂಭದಿಂದ ನಿಟ್ಟುಸಿರು ಬಿಡುವಂತಾಗಿದೆ.ಅನಾರೋಗ್ಯಕ್ಕೆ ತುತ್ತಾದವರು,ಶಾಲಾ ಮಕ್ಕಳಿಗೆ ಸೌಲಭ್ಯ ಸಿಕ್ಕುತ್ತ ಅಂತಾ ಸ್ಥಳೀಯರು ಸಂತಸವಾಗಿದ್ದಾರೆ.ಶೀಘ್ರದಲ್ಲೇ ಈ ಯೋಜನೆ ಆರಂಭವಾದ್ರೆ ಸಾವಿರಾರು ಜನರಿಗೆ ಅನುಕೂಲವಾಗುತ್ತದೆ.

Follow Us:
Download App:
  • android
  • ios