Asianet Suvarna News Asianet Suvarna News

ಸೈಬರ್‌ ವಂಚಕರಿಂದ ಹಣ ವಾಪಸ್‌ ಪಡೆಯೋಕೆ ಗುಡ್‌ ಐಡಿಯಾ! ಗೋಲ್ಡನ್‌ ಅವರ್‌ನಲ್ಲಿ ಈ ಕೆಲಸ ಮಾಡಿ

ಸೈಬರ್‌ ಕ್ರೈಂ ವಂಚಕರಿಂದ ಕಳೆದುಕೊಂಡ ಹಣವನ್ನು ವಾಪಸ್‌ ಪಡೆಯಲು ಪೊಲೀಸರು ಐಡಿಯಾವೊಂದನ್ನು ಕೊಟ್ಟಿದ್ದು, ಇದನ್ನು ಹಣ ಕಳೆದುಕೊಂಡ 2 ಗಂಟೆಗಳಲ್ಲಿ ಪ್ರಯೋಗ ಮಾಡಬೇಕು.

Good idea to get money back from cyber scammers Get cashback during golden hour sat
Author
First Published Jul 18, 2023, 11:20 PM IST

ವರದಿ - ಪುಟ್ಟರಾಜು. ಆರ್. ಸಿ.  ಏಷ್ಯಾನೆಟ್‌ ಸುವರ್ಣ ನ್ಯೂಸ್ ,
ಚಾಮರಾಜನಗರ (ಜು.18): ಹುಚ್ಚನ ಮದ್ವೆಲಿ ಉಂಡೋನೆ ಜಾಣ ಎಂಬಂತೆ ಇತ್ತೀಚಿಗೆ ಸೋಶಿಯಲ್ ಮಿಡಿಯಾದಲ್ಲಿ ಅತಿ ಹೆಚ್ಚು ಆಕ್ಟೀವ್ ಆಗಿರುವವರೆ ಸೈಬರ್ ಚೋರರ ಜಾಲಕ್ಕೆ ಸಿಲುಕುತ್ತಿದ್ದಾರೆ. ಕಳೆದ 7 ತಿಂಗಳಲ್ಲಿ ಗಡಿನಾಡಿನಲ್ಲಿ ಬರೋಬ್ಬರಿ29 ಸೈಬರ್ ಕ್ರೈಂ ಪ್ರಕರಣಗಳು ದಾಖಲಾಗಿವೆ. ಇನ್ನು ಸೈಬರ್‌ ವಂಚಕರ ಪಾಲಾದ ನಿಮ್ಮ ಹಣವನ್ನು ವಾಪಸ್‌ ಪಡೆಯಲು 2 ಗಂಟೆಗಳ ಗೋಲ್ಡನ್‌ ಅವರ್‌ನಲ್ಲಿ ವಾಪಸ್‌ ಪಡೆಯಲು ಸಾಧ್ಯವಾಗಲಿದೆ.

ಟೆಕ್ನಾಲಜಿ ಅಡ್ವಾನ್ಸ್ ಆದಷ್ಟು ಎಷ್ಟು ಉಪಯೋಗವಿದೆಯೋ ಅಷ್ಟೇ ದುರುಪಯೋಗ ಕೂಡ ಇದೆ. ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿವೆ. ಸೋಶಿಯಲ್ ಮಿಡಿಯಾದಲ್ಲಿ ಅತಿ ಹೆಚ್ಚು ಆಕ್ಟೀವ್ ಆಗಿರುವವರನ್ನೆ ಸೈಬರ್ ವಂಚಕರು ಟಾರ್ಗೆಟ್ ಮಾಡುತ್ತಿದ್ದಾರೆ. ಫಾರಿನ್ ಇಂದ ಗಿಫ್ಟ್ ಕಳಿಸಿದ್ದೇವೆ, ಆನ್ ಲೈನ್ ನಲ್ಲಿ ಫಿಫ್ಟಿ ಪರ್ಸೆಂಟ್ ಆಫರ್ ಇದೆ. ಎಂದು ಲಿಂಕ್ ಗಳನ್ನ ಕಳಿಸುತ್ತಿದ್ದಾರೆ. ಇದನ್ನ ನಂಬಿ ಲಿಂಕ್ ಒತ್ತಿದ್ರೆ ಸೈಬರ್ ಚೋರರ ಜಾಲಕ್ಕೆ ಬೀಳ ಬೇಕಾಗುತ್ತೆ. ಗಡಿ ನಾಡು ಚಾಮರಾಜನಗರ ಜಿಲ್ಲೆಯಲ್ಲಿ ಕಳೆದ 7 ತಿಂಗಳಿನಿಂದ ಬರೋಬ್ಬರಿ 29 ಕ್ಕೂ ಹೆಚ್ಚು ಸೈಬರ್ ಕ್ರೈಂ ಪ್ರಕರಣಗಳು ದಾಖಲಾಗುವ ಮೂಲಕ ಪೊಲೀಸ್ ಇಲಾಖೆಯೆ ಬೆಚ್ಚಿ ಬೀಳುವಂತಾಗಿದೆ. ಅತಿ ಹೆಚ್ಚಾಗಿ ಮಹಿಳೆಯರನ್ನೆ ಟಾರ್ಗೆಟ್ ಮಾಡುತ್ತಿರುವ ಚೋರರು ಲಕ್ಷ, ಲಕ್ಷ ಹಣ ಪೀಕಿ ಮಕ್ಮಲ್ ಟೋಪಿ ಹಾಕಿದ್ದಾರೆ.

ಕಿಸಾನ್‌ ಸಮ್ಮಾನ್‌ ಯೋಜನೆಗೆ ಎಳ್ಳುನೀರು? : 50 ಲಕ್ಷ ರೈತರಿಗೆ ಬರ್ತಿದ್ದ 4 ಸಾವಿರ ರೂ. ಸ್ಥಗಿತ!

ಹಣ ಲಪಟಾಯಿಸಿದ 2 ಗಂಟೆಗಳು ಗೋಲ್ಡನ್‌ ಅವರ್‌ ಆಗಿರುತ್ತದೆ: ಸೈಬರ್ ಚೋರರ ಜಾಲಕ್ಕೆ ಸಿಲುಕುವ ಸಂತ್ರಸ್ಥರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಿವಿ ಮಾತನ್ನ ಹೆಳಿದ್ದಾರೆ. ಯಾವುದೇ ಕಾರಣಕ್ಕೂ ಒಟಿಪಿಗಳನ್ನ ಶೇರ್ ಮಾಡದಂತೆ ಸೂಚಿಸಿದ್ದಾರೆ. ಇದರ ಜೊತೆಗೆ ಖಾತೆಯಿಂದ ಹಣ ಕಡಿತವಾಗಿದ್ರೆ 2 ಗಂಟೆ ಒಳಗಾಗಿ ಸೈಬರ್ ಕ್ರೈಂ ಪೊಲೀಸರಿಗೆ ಮಾಹಿತಿ ನೀಡುವಂತೆ ತಿಳಿಸಿದ್ದಾರೆ. ವಂಚನೆಯಾದ 2 ಗಂಟೆಗಳನ್ನ ಗೋಲ್ಡನ್ ಅವರ್ ಎಂದು ಕರೆಯುತ್ತಾರೆ. ತಕ್ಷಣವೇ ಕಂಟ್ರೋಲ್ ರೂಮ್ ಅಥವ ಹತ್ತಿರದ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಬೇಕಾಗಿದೆ. ಇನ್ನು ಜನ ಸಾಮಾನ್ಯರಿಗೆ ಸೈಬರ್ ವಂಚನೆ ಕುರಿತು ಸೂಕ್ತ ಮಾಹಿತಿ ನೀಡುವ ಉದ್ದೇಶದಿಂದ ಮುಂಬರುವ ದಿನಗಳಲ್ಲಿ ಪ್ರತಿವಾರ ಪ್ರತಿ ಠಾಣಾ ವ್ಯಾಪ್ತಿಯಲ್ಲಿ ಒಂದು ದಿನ ಸಾರ್ವಜನಿಕರಿಗೆ ಸೈಬರ್ ಚೋರರ ಕುರಿತು ಮಾಹಿತಿ ನೀಡುವ ಕೆಲಸಕ್ಕೆ ಮುಂದಾಗುತ್ತಿದ್ದಾರೆ.

ಚಂದ್ರಯಾನ -3ಕ್ಕೆ ಯಾವ ದೇಶವೂ ನೀಡದ ಆಂಪ್ಲಿಫೈಯರ್ ತಯಾರಿಸಿದ ಕನ್ನಡಿಗ ವಿಜ್ಞಾನಿ ದಾರುಕೇಶ್‌

ಸಾಮಾಜಿಕ ಜಾಲತಾಣಗಳ ಮೂಲಕ ವಂಚನೆ:  ಅದೇನೆ ಹೇಳಿ ವಾಟ್ಸಪ್ ಇನ್ಸ್ಟಾಗ್ರಾಮ್ ಹಾಗೂ ಫೇಸ್ ಬುಕ್ ನಂತಹ ಸೋಶಿಯಲ್ ಮಿಡಿಯಾದಲ್ಲಿ ಬ್ಯುಸಿಯಾಗಿರುವವರು ಸ್ವಲ್ಟ ಎಚ್ಚರದಿಂದ ಇದ್ರೆ ಒಳಿತು ಇಲ್ದೆ ಹೋದ್ರೆ ಸೈಬರ್ ಚೋರರ ಜಾಲಕ್ಕೆ ಸಿಲುಕಿ ತಮ್ಮಲ್ಲಿದ್ದ ಹಣವನ್ನ ಕಳೆದು ಕೊಳ್ಳ ಬೇಕಾಗುತ್ತದೆ. ಸೈಬರ್ ಕ್ರೈಂ ವಂಚನೆ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚಾದ ಬೆನ್ನಲ್ಲೆ ಕೇವಲ ಸಿಇಎನ್ ಪೊಲೀಸ್ ಠಾಣೆಗಳಲ್ಲಿ ಅಷ್ಟೇ ಅಲ್ಲದೆ ಪ್ರತಿಯೊಂದು ಠಾಣೆಯಲ್ಲಿಯೂ ಈಗ ದೂರು ದಾಖಲು ಮಾಡಲು ಅವಕಾಶವನ್ನ ಮಾಡಿಕೊಟ್ಟಿದ್ದಾರೆ. ಅದೇನೆ ಹೇಳಿ ಮೋಸ ಹೋಗುವವರು ಎಲ್ಲಿಯ ವರ್ಗೂ ಇರ್ತಾರೊ ಅಲ್ಲಿಯ ವರ್ಗೂ ಮೋಸ ಮಾಡುವವರು ಇದ್ದೆ ಇರ್ತಾರೆ.

Latest Videos
Follow Us:
Download App:
  • android
  • ios