Asianet Suvarna News Asianet Suvarna News

ಮಳೆ ಎಫೆಕ್ಟ್: ಹೂ ದರ ಕುಸಿತ, ಬೆಳೆಗಾರ ತತ್ತರ

ರಾಜ್ಯದ ಕರಾವಳಿ, ಮಲೆನಾಡು ಸೇರಿದಂತೆ ಉತ್ತರ ಕರ್ನಾಟಕದ ಕೆಲವು ಜಿಲ್ಲೆಯಲ್ಲಿ ಧಾರಾಕರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆ ಅದರ ದುಷ್ಪರಿಣಾಮ ಚಿಕ್ಕಬಳ್ಳಾಫುರ ಜಿಲ್ಲೆಗೆ ತಟ್ಟಿದೆ. 

Flower rates fall due to rain effect at chikkaballapur gvd
Author
First Published Jul 31, 2023, 9:03 PM IST

ದಯಾಸಾಗರ್‌ ಎನ್‌.

ಚಿಕ್ಕಬಳ್ಳಾಪುರ (ಜು.31): ರಾಜ್ಯದ ಕರಾವಳಿ, ಮಲೆನಾಡು ಸೇರಿದಂತೆ ಉತ್ತರ ಕರ್ನಾಟಕದ ಕೆಲವು ಜಿಲ್ಲೆಯಲ್ಲಿ ಧಾರಾಕರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆ ಅದರ ದುಷ್ಪರಿಣಾಮ ಚಿಕ್ಕಬಳ್ಳಾಫುರ ಜಿಲ್ಲೆಗೆ ತಟ್ಟಿದೆ. ಹಗಲು ರಾತ್ರಿ ಕಷ್ಟಪಟ್ಟು ಬೆಳೆದ ಚಿನ್ನದಂಥಹ ಹೂಗಳು ಮಾರಾಟವಾಗದೆ ತಿಪ್ಪೆ ಸೇರುತ್ತಿದ್ದು, ರೈತರು ಸಾಲ ತೀರಿಸುವುದು ಹೇಗಪ್ಪ ಎಂಬ ಚಿಂತೆಯಲ್ಲಿ ಮುಳುಗಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ರಾಜ್ಯಕ್ಕೆ ಆಗುವಷ್ಟು ತರೇವಾರಿ ಹೂಗಳನ್ನು ಬೆಳೆದು ರಾಜ್ಯದಾದ್ಯಂತ ಸರಬರಾಜು ಮಾಡಲಾಗುತ್ತದೆ. ಆದರೆ, ಕಳೆದ ಒಂದು ವಾರದಿಂದ ರಾಜ್ಯದ ಕರಾವಳಿ, ಮಲೆನಾಡು ಸೇರಿದಂತೆ ಉತ್ತರ ಕರ್ನಾಟಕದ ಕೆಲವು ಜಿಲ್ಲೆಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆ ಬೆಳೆದ ಹೂಗಳ ಸರಹರಾಜು ಸ್ಥಗಿತಗೊಂಡಿದೆ. ಜೊತೆಗೆ ತುಂತುರು ಮಳೆಯಿಂದ ಹೂಗಳು ಒದ್ದೆಯಾಗಿ ಕೊಳೆಯುತ್ತಿವೆ. ಮಳೆಯಿಂದಾಗಿ ಕೆಲವೆಡೆ ರಸ್ತೆಗಳು ಬಂದ್‌ ಆಗಿವೆ. ಶುಭ ಕಾರ್ಯಗಳು ಕಡಿಮೆಯಾಗಿವೆ. ಇದರಿಂದ ಹೂಗಳ ಬೇಡಿಕೆ ಕುಸಿದು ಬೆಲೆ ಕಳೆದುಕೊಂಡಿವೆ.

ಧೈರ್ಯವಿದ್ರೆ ಪ್ರದೀಪ್‌ ರಾಜೀನಾಮೆ ಕೊಟ್ಟು ಸ್ಪರ್ಧಿಸಲಿ: ಮಾಜಿ ಸಚಿವ ಸುಧಾಕರ್‌

ಹೂಗಳನ್ನು ತಿಪ್ಪೆಗೆ ಸುರಿದ ರೈತರು: ಚಿಕ್ಕಬಳ್ಳಾಪುರದ ಹೂ ಮಾರುಕಟ್ಟೆಯ ಅಧ್ಯಕ್ಷ ರವೀಂದ್ರ ಅವರು ಮಾತನಾಡಿ, 15 ದಿನಗಳಿಂದ ವಿಪರೀತ ಮಳೆಯಿದ್ದು, ಸಾಗಾಟ ಮಾಡಲು ಕಷ್ಟವಾಗುತ್ತಿದೆ. ಹಾಗೂ ಮಾರುಕಟ್ಟೆಗೆ ರಫ್ತು ಮಾಡಿದರೂ ಹೂಗಳಲ್ಲಿ ಡ್ಯಾಮೇಜ್‌ ಬರುತ್ತಿರುವ ಕಾರಣ ಯಾರೂ ತೆಗೆದುಕೊಳ್ಳುತ್ತಿಲ್ಲ. ಮಳೆಯಿಂದ ಹೂಗಳು ಕೊಳೆತು ಹೋಗುತ್ತಿವೆ. ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ತರೇವಾರಿ ಸೇವಂತಿ, ಕಲರ್‌ಪುಲ್‌ ರೋಜ್‌, ಚೆಂಡೂ ಹೂ, ಕನಕಾಂಬರ, ಸುಗಂಧರಾಜ, ಮಲ್ಲಿಗೆ, ಕಾಕಡ ಸೇರಿದಂತೆ ಹಲವಾರು ತರಹದ ಹೂಗಳನ್ನು ಬೆಳೆಯುತ್ತಾರೆ. ಮಳೆಯಾಗುವ ಮೊದಲು ಕೆಜಿಗೆ 200 ರುಪಾಯಿ ಇದ್ದ ಹೂಗಳು ಈಗ ಕೇವಲ 50 ರೂಪಾಯಿಗೆ ಮಾರಾಟವಾಗುತ್ತಿವೆ. ಇದರಿಂದ ರೈತರು ಮಾರಾಟವಾಗದ ಹೂಗಳನ್ನು ತಿಪ್ಪೆಗೆ ಸುರಿಯುತ್ತಿದ್ದಾರೆ ಎಂದರು.

ಬೇರೆ ರಾಜ್ಯಗಳಿಗೂ ಪೂರೈಕೆ ಇಲ್ಲ: ಮಳೆಯ ಕಾರಣ 1 ಕೆಜಿ 200 ರೂಪಾಯಿಯಿಂದ 300 ರೂಪಾಯಿ ಇದ್ದ ಸೇವಂತಿಗೆ ಬೆಲೆ ಇಂದು 50 ರಿಂದ 80 ರೂಪಾಯಿಗೆ ಇಳಿದಿದೆ, ಇನ್ನೂ 100-150 ರೂಪಾಯಿ ಇರ್ತಿದ್ದ ಗುಲಾಬಿ ಬೆಲೆ 40 ರಿಂದ 60 ರೂಪಾಯಿಗೆ ಇಳಿದಿದೆ. ಚೆಂಡು ಹೂ ಕೇಳೋರಿಲ್ಲದಂತಾಗಿದೆ. ಇದರಿಂದ ರೈತರು ಚೆಂಡು ಹೂವನ್ನ ತಿಪ್ಪೆಗೆ ಸುರಿದು ಹೋಗುತ್ತಿದ್ದು ಆರ್ಥಿಕ ನಷ್ಟಅನುಭವಿಸುವಂತಾಗಿದೆ. ಮತ್ತೊಂದೆಡೆ ದೇಶ ಹಾಗೂ ರಾಜ್ಯದ ವಿವಿಧ ಭಾಗಗಳಲ್ಲೂ ಸಹ ಧಾರಾಕಾರ ಮಳೆಯ ಕಾರಣ ರಪ್ತು ಸಹ ಆಗುತ್ತಿಲ್ಲ. ಇದ್ರಿಂದ ಹೂ ಬೆಲೆಯಲ್ಲಿ ಭಾರೀ ಇಳಿಕೆಯಾಗಿ ರೈತರು ನಷ್ಟಅನುಭವಿಸುವಂತಾಗಿದೆ ಎಂದು ಹೂ ಬೆಳೆಗಾರ ಮಂಜುನಾಥ್‌ ತಮ್ಮ ಅಳಲು ತೋಡಿಕೊಂಡರು.

ಕಾಂಗ್ರೆಸ್ಸಿಂದ ಲೋಕಸಭೆ ಸ್ಪರ್ಧೆಗೆ ಸುಧಾಕರ್‌ ಯತ್ನ: ಶಾಸಕ ಪ್ರದೀಪ್‌ ಈಶ್ವರ್‌

ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ನಿರೀಕ್ಷೆಯಂತೆ ಮಳೆ ಇಲ್ಲ, ಹೌದು ವಾಡಿಕೆಯ ಮಳೆಯೂ ಆಗಿಲ್ಲವಾಗಿತ್ತು. ಆದ್ರೆ, ಹನಿ ನೀರು ಬಸಿದು ಹೂಗಳನ್ನು ಬೆಳೆಯಲಾಗಿತ್ತು. ಇದೀಗ ಅದಕ್ಕೂ ಉತ್ತಮ ಬೆಲೆ ಇಲ್ಲದೆ ರೈತರು ಕಂಗಲಾಗಿದ್ದಾರೆ. ಕೆ.ಜಿಗೆ 50 ರು.ಗಳಂತೆ ಮಾರಾಟ ಮಾಡಿ, ಮಾರಾಟವಾಗದ ಹೂವನ್ನ ತಿಪ್ಪೆಗೆ ಎಸೆದು ಹೋಗುತ್ತಿದ್ದಾರೆ. ದಿನವೀಡಿ ಮೋಡ ಕವಿದ ವಾತಾವರಣ ಸಂಜೆಯಾಗುತ್ತಿದ್ದಂತೆ ಇಡೀ ರಾತ್ರಿ ಜಟಿ ಜಿಟಿ ತುಂತುರು ಮಳೆಯ ಕಾರಣ ಬೆಳೆದ ಬೆಳೆಗಳೆಲ್ಲವೂ ಹಾಳಾಗುತ್ತಿದ್ದು, ಇತ್ತ ಹೂ ಬೆಳೆಗಾರರು ಸಹ ಸಂಕಷ್ಟಕ್ಕೆ ಸಿಲುಕುವಂತಾಗಿದೆ.

Follow Us:
Download App:
  • android
  • ios