Asianet Suvarna News Asianet Suvarna News

ತೆಂಗು ಬೆಳೆಗೆ ರೋಗ: ಔಷಧಿ ಕಂಡುಹಿಡುಯುವಲ್ಲಿ ವಿಫಲ

ಸರ್ಕಾರದ ನಿರ್ಲಕ್ಷ್ಯದಿಂದ ತೆಂಗಿನ ಮರಗಳು ನಾನಾರೋಗಗಳಿಗೆ ತುತ್ತಾಗುತ್ತಿದ್ದು ಕಲ್ಪತರು ನಾಡು ಬಯಲು ನಾಡಾಗುತ್ತಿದೆ ಎಂದು ರೈತ ಮುಖಂಡ ಹಾಗೂ ಎಪಿಎಂಸಿ ಮಾಜಿ ನಿರ್ದೇಶ ಬಿ.ಬಿ. ಸಿದ್ದಲಿಂಗಮೂರ್ತಿ ಪತ್ರಿಕಾ ಪ್ರಕಟಣೆಯ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Coconut crop disease: Failure to find a cure snr
Author
First Published Feb 26, 2024, 10:51 AM IST

ತಿಪಟೂರು: ಸರ್ಕಾರದ ನಿರ್ಲಕ್ಷ್ಯದಿಂದ ತೆಂಗಿನ ಮರಗಳು ನಾನಾರೋಗಗಳಿಗೆ ತುತ್ತಾಗುತ್ತಿದ್ದು ಕಲ್ಪತರು ನಾಡು ಬಯಲು ನಾಡಾಗುತ್ತಿದೆ ಎಂದು ರೈತ ಮುಖಂಡ ಹಾಗೂ ಎಪಿಎಂಸಿ ಮಾಜಿ ನಿರ್ದೇಶ ಬಿ.ಬಿ. ಸಿದ್ದಲಿಂಗಮೂರ್ತಿ ಪತ್ರಿಕಾ ಪ್ರಕಟಣೆಯ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತಪರವಾಗಿ ಮಾತನಾಡುವ ಸರ್ಕಾರ ರೈತರ ತುಟಿಗೆ ತುಪ್ಪ ಸವರುವ ಕೆಲಸ ಮಾಡುತ್ತಿರುವುದು ಬಿಟ್ಟರೆ, ರೈತಪರ ಯೋಜನೆಗಳಿಂದ ರೈತರಿಗೆ ಯಾವ ಅನುಕೂಲವೂ ಆಗುತ್ತಿಲ್ಲ. ರೈತನ ಸಮಸ್ಯೆಗಳಿಗೆ ಪರಿಹಾರವೂ ಸಿಗುತ್ತಿಲ್ಲ. ತೆಂಗಿನ ಮರಗಳಿಗೆ ಅಣಬೆ ರೋಗ, ರಸ ಸೋರುವ ರೋಗ, ನುಸಿ ರೋಗದಂತೆ ನಾನಾ ರೋಗಗಳು ಬರುತ್ತಿದ್ದು ತೆಂಗನ್ನೆ ನಂಬಿ ಜೀವನ ನಡೆಸುತ್ತಿರುವ ರೈತನ ಸ್ಥಿತಿ ಶೋಚನೀಯವಾಗಿದೆ. ಒಂದು ತೆಂಗಿನ ಮರ ಬೆಳೆಸಲು ಹತ್ತು ವರ್ಷಬೇಕು. ಅದರ ಪಾಲನೆ ಪೋಷಣೆಗಾಗಿ ೧೦ಸಾವಿರಕ್ಕೂ ಹೆಚ್ಚು ಖರ್ಚು ಬರುತ್ತದೆ. ಇನ್ನೇನು ಫಸಲು ಬಂತು ಎನ್ನುವಾಗ ನಾನಾ ರೋಗಗಳು ಬಂದು ತೆಂಗಿನ ಮರಗಳು ವಿನಾಶವಾಗುತ್ತಿವೆ. ದೇಶಕ್ಕೆ ಅನ್ನ ಕೊಡುವ ಹಾಗೂ ತೆರಿಗೆ ಕಟ್ಟುವ ರೈತನ ಬಗ್ಗೆ ಸರ್ಕಾರಗಳು ಉದಾಸೀನತೆ ತೋರುತ್ತಿವೆ ಎಂದರು.

ತೋಟಗಾರಿಕೆ ವಿಜ್ಞಾನಿಗಳು ರೈತರ ತೆರಿಗೆಯಿಂದ ಸಂಬಳ ತೆಗೆದುಕೊಳ್ಳುತ್ತಾರೆ ಆದರೆ ತೆಂಗಿಗೆ ಬಂದಿರುವ ರೋಗಗಳ ಬಗ್ಗೆ ಔಷಧಿಗಳನ್ನು ಕಂಡುಹಿಡಿಯುವಲ್ಲಿ ವಿಫಲರಾಗಿದ್ದಾರೆ.

ತಾಲೂಕಿನಿಂದ ಆಯ್ಕೆಯಾಗಿರುವ ಶಾಸಕರು ಸಹ ತೆಂಗುಬೆಳೆಗಾರರ ಪರವಾಗಿ ನಡೆದುಕೊಳ್ಳುತ್ತಿಲ್ಲದೆ ತೆಂಗು ಸಂರಕ್ಷಣೆಯ ಬಗ್ಗೆ ಗಮನಹರಿಸುತ್ತಿಲ್ಲ. ಸರ್ಕಾರವು ತೆಂಗು ವಿಜ್ಞಾನಿಗಳಿಂದ ಔಷಧಿ ಕಂಡು ಹಿಡಿದು ತೋಟಗಾರಿಕೆ ಅಧಿಕಾರಿಗಳ ಮೂಲಕ ಕರಪತ್ರ ಪ್ರಚಾರ ಮಾಡಿಸಿ ಹಳ್ಳಿ ಹಳ್ಳಿಗಳಲ್ಲಿ ಗ್ರಾಮ ಸಭೆ ಮಾಡಿ ತೆಂಗಿನ ರೋಗಗಳ ಬಗ್ಗೆ ರೈತರಿಗೆ ಮನವರಿಕೆ ಮಾಡಬೇಕು. ಹೀಗೆ ಮಾಡಿದಾಗ ಮಾತ್ರ ತೆಂಗನ್ನು ಉಳಿಸಿಕೊಳ್ಳಲು ಸಾಧ್ಯವಿದ್ದು ಇದರಿಂದ ರೈತನು ನೆಮ್ಮದಿಯಿಂದ ಬದುಕನ್ನು ನಡೆಸಬಹುದಾಗಿದ್ದು, ಸರ್ಕಾರ ಕೂಡಲೆ ಕ್ರಮತೆಗೆದುಕೊಳ್ಳಬೇಕೆಂದು ಬಿ.ಬಿ. ಸಿದ್ದಲಿಂಗಮೂರ್ತಿ ಒತ್ತಾಯಿಸಿದ್ದಾರೆ.

Follow Us:
Download App:
  • android
  • ios