userpic
user icon
0 Min read

ಇಸ್ರೋ ಮಾಜಿ ಅಧ್ಯಕ್ಷ ಕೆ ಕಸ್ತೂರಿರಂಗನ್ ಬೆಂಗಳೂರಿನಲ್ಲಿ ನಿಧನ, ಪ್ರಧಾನಿ ಮೋದಿ ಸಂತಾಪ

Isro Former chairman K Kasturirangan passes away at 84 in Bengaluru residence

Kasturirangan

Synopsis

ಇಸ್ರೋ ಮಾಜಿ ಅಧ್ಯಕ್ಷ , ದೇಶದ ಹೆಮ್ಮೆಯ ವಿಜ್ಞಾನಿ ಕೆ ಕಸ್ತೂರಿರಂಗನ್ ನಿಧನರಾಗಿದ್ದಾರೆ. ಇಂದು ಬೆಂಗಳೂರಿನ ಸ್ವಗ್ರಹದಲ್ಲಿ ಕಸ್ತೂರಿರಂಗನ್ ನಿಧನರಾಗಿದ್ದಾರೆ. ಪ್ರಧಾನಿ ಮೋದಿ, ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಬೆಂಗಳೂರು(ಏ.25) ಇಸ್ರೋ ಮಾಜಿ ಅಧ್ಯಕ್ಷ, ದೇಶದ ಹೆಮ್ಮೆಯ ಪ್ರಧಾನಿ ಹಾಗೂ ಸರ್ಕಾರದ ನಿರಂತರವಾಗಿ ಸಲಹೆ ಮಾರ್ಗದರ್ಶನ ನೀಡುತ್ತಿದ್ದ ಕೆ ಕಸ್ತೂರಿರಂಗನ್ ಇಂದು(ಏ.25) ನಿಧನರಾಗಿದ್ದಾರೆ. 84 ವರ್ಷದ ಕೆ ಕಸ್ತೂರಿರಂಗನ್  ಬೆಂಗಳೂರಿನ ಸ್ವಗೃದಲ್ಲಿ ನಿಧನರಾಗಿದ್ದಾರೆ. ಎನ್‌ಇಪಿ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಕೆ. ಕಸ್ತೂರಿ ರಂಗನ್ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕುಲಪತಿ ಮತ್ತು ಕರ್ನಾಟಕ ಜ್ಞಾನ ಆಯೋಗದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಕರ್ನಾಟಕದ ಬಹುತೇಕರು ಕೆ ಕಸ್ತೂರಿರಂಗನ್ ಅವರ ಹೆಸರನ್ನು ಕೇಳಿದ್ದಾರೆ. ಕಾರಣ ಪಶ್ಚಿಮ ಘಟ್ಟಗಳ ಕುರಿತು ಸಲ್ಲಿಸಿದ್ದ ಕಸ್ತೂರಿರಂಗನ್ ವರದಿ ಪದೇ ಪದೇ ಚರ್ಚೆ ನಡೆಯುತ್ತಲೇ ಇರುತ್ತೆ. ಕಸ್ತೂರಿರಂಗನ್ ಸೇವೆಯಿಂದ ನಿವೃತ್ತರಾದ ಬಳಿಕವೂ ಕರ್ನಾಟಕದಲ್ಲಿ ಅವರ ವರದಿ ಭಾರಿ ಸದ್ದು ಮಾಡಿದೆ. ಕಸ್ತೂರಿರಂಗನ್ ನಿಧನಕ್ಕೆ ಹಲವರು ಸಂತಾಪ ಸೂಚಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ, ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

ಕಸ್ತೂರಿರಂಗನ ನಿಧನ ವಾರ್ತೆ ನೋವು ತಂದಿದೆ. ಭಾರತದ ವಿಜ್ಞಾನ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ, ದೇಶಕ್ಕಾಗಿ ಸಲ್ಲಿಸಿದ ನಿಸ್ವಾರ್ಥ ಸೇವೆಯನ್ನು ಭಾರತ ಯಾವತ್ತೂ ಮರೆಯುವುದಿಲ್ಲ.ಕಸ್ತೂರಿರಂಗನ್ ಅಧ್ಯಕ್ಷತೆಯಲ್ಲಿ ಇಸ್ರೋ ಮಹತ್ತರ ಸಾಧನೆ ಮಾಡಿತ್ತು ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ಇದೇ ವೇಳೆ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸುವಾಗ ಕಸ್ತೂರಿರಂಗನ್ ನೀಡಿದ ಕೊಡುಗೆಯನ್ನು ಮೋದಿ ಸ್ಮರಿಸಿದ್ದಾರೆ.  ಎಪ್ರಿಲ್ 27 ರಂದು  ಕೆ ಕಸ್ತೂರಿರಂಗನನ್ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.  

ಶಿಕ್ಷಣ ತಜ್ಞ, ಪಿಇಎಸ್ ವಿಶ್ವವಿದ್ಯಾಲಯ ಸಂಸ್ಥಾಪಕ ಎಂ.ಆರ್. ದೊರೆಸ್ವಾಮಿ ಇನ್ನಿಲ್ಲ!

 

 

ಬೆಂಗಳೂರಿನ ಸದಾಶಿವನಗರ ಮೇಕ್ರಿ ಸರ್ಕಲ್ ಬಳಿ ಇರುವ ರಾಮನ್ ರಿಸರ್ಚ್ ಇನ್ಸ್ಟಿಟ್ಯೂಟ್‌ನಲ್ಲಿ ಎಪ್ರಿಲ್ 27ರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನವರೆಗೆ ಅವಕಾಶ ನೀಡಲಾಗಿದೆ.ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ದೇಶದ ಹೆಮ್ಮೆಯ ವಿಜ್ಞಾನಿ ಕೊಡುಗೆಯನ್ನು ಈ ಸಂದರ್ಭದಲ್ಲಿ ಸ್ಮರಿಸಿದ್ದಾರೆ. ವಿಜ್ಞಾನಿಯಾಗಿ, ಶಿಕ್ಷಣ ತಜ್ಞರಾಗಿ, ಇಸ್ರೋ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಭಾರತ ಈ ಹೆಮ್ಮೆಯ ವಿಜ್ಞಾನಿಯನ್ನು ಯಾವತ್ತೂ ನೆನಪಿನಲ್ಲಿ ಇಟ್ಟುಕೊಳ್ಳಲಿದೆ ಎಂದು ದೇವೇಗೌಡ ಟ್ವೀಟ್ ಮಾಡಿದ್ದಾರೆ.

 

 

ಕಸ್ತೂರಿರಂಗನ್ ನಿಧನಕ್ಕೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸಂತೂಪ ಸೂಚಿಸಿದ್ದಾರೆ. ಸುಪ್ರಸಿದ್ಧ ಅಂತರಿಕ್ಷ ವಿಜ್ಞಾನಿ ಡಾ. ಕಸ್ತೂರಿರಂಗನ್ ಅವರ ದೇಹಾವಸಾನದಿಂದ ಭಾರತದ ರಾಷ್ಟ್ರಜೀವನದಲ್ಲಿ ಒಂದು ದೇದೀಪ್ಯಮಾನ ನಕ್ಷತ್ರದ ಅಸ್ತಂಗತವಾಗಿದೆ. ಡಾ. ರಂಗನ್ ಅವರು ಈಗ ನೆನಪು ಮಾತ್ರ. ಪದ್ಮವಿಭೂಷಣ ಸಮ್ಮಾನಿತ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇದರ ಮಾಜಿ ಅಧ್ಯಕ್ಷರಾದ ಡಾ.ರಂಗನ್ ಅವರು ವೈಜ್ಞಾನಿಕ ಕ್ಷೇತ್ರದಲ್ಲಿ ವೈಶ್ವಿಕ ಸ್ತರದ ದಿಗ್ಗಜರಾಗಿದ್ದರು.‌ಅದರ ಜೊತೆಗೆ ರಾಜ್ಯಸಭಾ, ಯೋಜನಾ ಆಯೋಗದಂತಹ ವಿವಿಧ ಕ್ಷೇತ್ರಗಳಲ್ಲಿ ಅವರು ರಾಷ್ಟ್ರದ ಸೇವೆಗೈದಿದ್ದಾರೆ. ಅವರು ಬಾಹ್ಯಕಾಶ ಕ್ಷೇತ್ರಕ್ಕೆ ನೀಡಿದ ಸೇವೆಗೆ ಸಮಾನವಾಗಿ ಭಾರತದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ನಿರ್ಮಿಸುವುದರಲ್ಲಿ ಹಾಗೂ ಅನುಷ್ಠಾನಗೊಳಿಸುವುದರಲ್ಲಿ ಕೊಡುಗೆ ನೀಡಿರುವುದು ಒಂದು ಐತಿಹಾಸಿಕ ಸಾಧನೆಯಾಗಿದೆ. ವಿಜ್ಞಾನಿ, ನೀತಿ ನಿರ್ಮಾತೃ, ಶಿಕ್ಷಣತಜ್ಞ, ಪರಿಸರತಜ್ಞ ಹೀಗೆ ಹಲವು ಭೂಮಿಕೆಗಳಲ್ಲಿ ಪ್ರಭಾವಿಯಾಗಿ ಕಾರ್ಯನಿರ್ವಹಿಸಿದ ಡಾ. ಕಸ್ತೂರಿರಂಗನ್  ಅವರು ಉದಾತ್ತ ಮಾನವತಾವಾದಿ ಮತ್ತು ಸಂವೇದನಾಶೀಲ ವ್ಯಕ್ತಿಯಾಗಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪರವಾಗಿ, ಡಾ. ಕಸ್ತೂರಿರಂಗನ್ ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ನಮ್ಮ ಹೃತ್ಪೂರ್ವಕ ಸಂತಾಪಗಳನ್ನು ವ್ಯಕ್ತಪಡಿಸುತ್ತೇವೆ. ಅಂತಹ ಮಹಾನ್ ದೇಶಭಕ್ತನಿಗೆ ನಾವು ಶ್ರದ್ಧಾಂಜಲಿಯನ್ನು ಸಲ್ಲಿಸುತ್ತೇವೆ.  ಅಗಲಿದ ಅವರ ಆತ್ಮಕ್ಕೆ ಸದ್ಗತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ ಎಂದು ಮೋಹನ್ ಭಾಗವತ್ ಸಂತಾಪ ಸೂಚಿಸಿದ್ದಾರೆ.  ಹೆಚ್‌ಡಿ ಕುಮಾರಸ್ವಾಮಿ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ. 

 

 
ಕೇರಳದ ಎರ್ನಾಕುಲಂನಲ್ಲಿ ಜನಿಸಿದ ಕಸ್ತೂರಿರಂಗನ್ ಬಾಂಬೆ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ವಿಜ್ಞಾನ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇಸ್ರೋದಲ್ಲಿ ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ. 

ಭಾರತದ ಮೊದಲ ಹೃದಯ ಬೈಪಾಸ್‌ ಸರ್ಜರಿ ಮಾಡಿದ್ದ ಡಾಕ್ಟರ್‌ ಚೆರಿಯನ್‌ ನಿಧನ

 

Latest Videos