Asianet Suvarna News Asianet Suvarna News

ದೇಶದ ಈ ರಾಜ್ಯಗಳಲ್ಲಿ ಇನ್ನೆರಡು ದಿನ ಭಾರೀ ಮಳೆ, ಹವಾಮಾನ ಇಲಾಖೆಯಿಂದ ಮುನ್ಸೂಚನೆ

ರಾಜ್ಯಾದ್ಯಂತ ಬಿಸಿಲಿನ ತಾಪಮಾನ ಹೆಚ್ಚಾಗಿದೆ. ಬಿಸಿಲ ಧಗೆಗೆ ಜನರು ಮನೆಯಿಂದ ಹೊರಬರೋಕು ಭಯಪಡುವಂತಾಗಿದೆ. ಆಗೊಮ್ಮೆ ಈಗೊಮ್ಮೆ ಸ್ವಲ್ಪ ಮಳೆ ಬಂದು ಹೋಗ್ತಿದೆಯಷ್ಟೆ. ಹೀಗಿರುವಾಗ ಹವಾಮಾನ ಇಲಾಖೆ ದೇಶದ ಈ ಕೆಲವು ರಾಜ್ಯಗಳಲ್ಲಿ ಇನ್ನು ಕೆಲವು ದಿನ ಭಾರೀ ಮಳೆ ಸುರಿಯಲಿದೆ ಎಂದು ಮುನ್ಸೂಚನೆ ನೀಡಿದೆ

IMD predicts heatwave, rainfall in several states in coming days, check full forecast Vin
Author
First Published May 4, 2024, 12:02 PM IST

ದೇಶದ ಹಲವು ರಾಜ್ಯಗಳಲ್ಲಿ ತಾಪಮಾನ ಹೆಚ್ಚಾಗ್ತಿದೆ. ಬಿಸಿಗಾಳಿಯ ಹೊಡೆತಕ್ಕೆ ಜನರು ಕಂಗೆಟ್ಟಿದ್ದಾರೆ. ಬಿಸಿಲ ಧಗೆಗೆ ಜನರು ಮನೆಯಿಂದ ಹೊರಬರೋಕು ಭಯಪಡುವಂತಾಗಿದೆ.  ಹಲವು ರಾಜ್ಯಗಳಲ್ಲಿ ಬಿಸಿಲ ಧಗೆಯಿಂದ ಆರೆಂಜ್ ಅಲರ್ಟ್‌ ಸಹ ನೀಡಲಾಗಿದೆ. ಒಮ್ಮೆ ಮಳೆ ಬಂದ್ ಬಿಟ್ರೆ ಸಾಕಪ್ಪಾ ಅಂತ ಜನ್ರು ಕಾಯ್ತಿದ್ದಾರೆ. ಹೀಗಿರುವಾಗ ಹವಾಮಾನ ಇಲಾಖೆ ದೇಶದ ಈ ಕೆಲವು ರಾಜ್ಯಗಳಲ್ಲಿ ಇನ್ನು ಕೆಲವು ದಿನ ಭಾರೀ ಮಳೆ ಸುರಿಯಲಿದೆ ಎಂದು ಮುನ್ಸೂಚನೆ ನೀಡಿದೆ. ಅದು ಯಾವ ರಾಜ್ಯದಲ್ಲೆಲ್ಲಾ ಅನ್ನೋ ಮಾಹಿತಿ ಇಲ್ಲಿದೆ.

ಮಧ್ಯಮದಿಂದ ತೀವ್ರವಾದ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಸಾಧಾರಣ ಮಳೆ (ಸಾಂದರ್ಭಿಕವಾಗಿ 30-40 ಕಿ.ಮೀ) ದಕ್ಷಿಣ ಒಳ ಕರ್ನಾಟಕ, ತಮಿಳುನಾಡಿನ ಉತ್ತರ ಒಳಭಾಗ, ಆಂಧ್ರಪ್ರದೇಶದ ಉತ್ತರ ಕರಾವಳಿಯಲ್ಲಿ ಬರಲಿದೆ. ಮತ್ತು ದಕ್ಷಿಣ ರಾಯಲಸೀಮಾದಲ್ಲೂ ಮಳೆಯ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ಮಿಜೋರಾಂ ಮತ್ತು ಅರುಣಾಚಲ ಪ್ರದೇಶದಲ್ಲಿ ಲಘುವಾಗಿ ಸಾಧಾರಣವಾದ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಮಳೆಯಾಗುತ್ತದೆ ಎಂದು IMD ಸೂಚನೆ ನೀಡಿದೆ. 

ದಕ್ಷಿಣ ಭಾರತದಲ್ಲಿ ಏಪ್ರಿಲ್‌ ಬಿಸಿಲು 123 ವರ್ಷಗಳಲ್ಲೇ 2ನೇ ಗರಿಷ್ಠ!

ದೇಶದ ಹಲವು ಭಾಗಗಳಲ್ಲಿ ತಾಪಮಾನ ಹೆಚ್ಚುತ್ತಿರೋ ಮಧ್ಯೆಯೇ, ಮೇ 07, 2024 ರಂದು ಪಶ್ಚಿಮ ರಾಜಸ್ಥಾನ, ಸೌರಾಷ್ಟ್ರ ಕಚ್ ಮತ್ತು ಉತ್ತರ ಒಳನಾಡಿನ ಪ್ರತ್ಯೇಕ ಸ್ಥಳಗಳಲ್ಲಿ ಶಾಖದ ಅಲೆಯ ಸಾಧ್ಯತೆಯಿದೆ ಎಂದು ಮಾಹಿತಿ ನೀಡಿದೆ. ಮೇ 06, 2024 ರಂದು ಸೌರಾಷ್ಟ್ರ ಮತ್ತು ಕಚ್, ತೆಲಂಗಾಣ, ತಮಿಳುನಾಡು, ಪುದುಚೇರಿ ಕಾರೈಕಾಲ್ ಮತ್ತು ಉತ್ತರ ಆಂತರಿಕ ಕರ್ನಾಟಕದ ಪ್ರತ್ಯೇಕ ಸ್ಥಳಗಳಲ್ಲಿ ಶಾಖದ ಅಲೆ ಹೆಚ್ಚುವ ಸಾಧ್ಯತೆಯಿದೆ ಎಂದು IMD ತಿಳಿಸಿದೆ.

ಮೇ 05, 2024ರಂದು ಗಂಗಾನದಿ ಪಶ್ಚಿಮ ಬಂಗಾಳ, ಜಾರ್ಖಂಡ್, ಮಧ್ಯ ಮಹಾರಾಷ್ಟ್ರ, ಮರಾಠವಾಡ, ಸೌರಾಷ್ಟ್ರ ಮತ್ತು ಕಚ್, ಕರಾವಳಿ ಆಂಧ್ರಪ್ರದೇಶ ಮತ್ತು ಯಾನಂ, ರಾಯಲಸೀಮಾ, ತೆಲಂಗಾಣ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ ಮತ್ತು ಆಂತರಿಕ ಕರ್ನಾಟಕದಲ್ಲಿ ಶಾಖದ ಅಲೆಯ ಸಾಧ್ಯತೆಯಿದೆ ಎನ್ನಲಾಗಿದೆ.

ರಾಜ್ಯದಲ್ಲಿ ಇನ್ನು ಐದು ದಿನ ಉಷ್ಣ ಮಾರುತ ದಾಳಿ: ಸೆಕೆ ಎದುರಿಸಲು ಸಜ್ಜಾಗಿ!

ಈ ಂಧ್ಯೆ ದಿಮಾ ಹಸಾವೊ ಗುಡ್ಡಗಾಡು ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಮತ್ತು ಭೂಕುಸಿತ ಉಂಟಾಗಿದೆ. ಇದರ ಪರಿಣಾಮವಾಗಿ ಸಂವಹನ ಅಡಚಣೆಯಾಗಿದೆ. ಭಾರೀ ಮಳೆಯಿಂದಾಗಿ ಹಾಫ್ಲಾಂಗ್ ಟೌನ್ ಸೇರಿದಂತೆ ಜಿಲ್ಲೆಯ ಹಲವಾರು ಪ್ರದೇಶಗಳು ಜಲಾವೃತವಾಗಿವೆ. ಜಟಿಂಗ-ಲಂಪುರ್ ಮತ್ತು ನ್ಯೂ ಹರಂಗಜಾವೋ ನಡುವೆ ಭೂಕುಸಿತದಿಂದಾಗಿ ರೈಲು ಸೇವೆಯೂ ಸ್ಥಗಿತಗೊಂಡಿದೆ.

Follow Us:
Download App:
  • android
  • ios