Asianet Suvarna News Asianet Suvarna News

ಮಹಾರಾಣಾ ಪ್ರತಾಪರ ವಂಶ ಈಗಲೂ ಸಮಾಜಸೇವೆಯಲ್ಲಿ ಸಕ್ರಿಯ; ಈ ಕೆಲಸ ಮಾಡ್ತಿರೋದ್ಯಾರು ಗೊತ್ತಾ?

ಮಹಾರಾಣಾ ಪ್ರತಾಪ್‌ ಸಾಹಸ, ಧೈರ್ಯಕ್ಕೆ ಮತ್ತೊಂದು ಹೆಸರು. ಅವರ ವಂಶ ಇಂದಿಗೂ ಸಮಾಜಸೇವೆಯಲ್ಲಿ ತೊಡಗಿಕೊಂಡಿರುವುದು ವಿಶೇಷ. ಮೇವಾಡ ವಂಶಸ್ಥ ಲಕ್ಷ್ಯ ರಾಜ್‌ ಅವರು ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಸಕ್ರಿಯವಾಗಿದ್ದು, ಗಿನ್ನೆಸ್‌ ದಾಖಲೆಗೂ ಭಾಜನರಾಗಿದ್ದಾರೆ.
 

He is a man who belongs to Maharana Pratap's family and prince of Udaipur sum
Author
First Published Mar 14, 2024, 5:56 PM IST

ಮಹಾರಾಣಾ ಪ್ರತಾಪ್‌ ಹೆಸರು ಭಾರತದ ಇತಿಹಾಸದಲ್ಲಿ ಚಿರಸ್ಥಾಯಿಗಾಗಿ ಉಳಿದಿದೆ. ಇತರ ರಜಪೂತ ದೊರೆಗಳಂತೆ ಮೊಘಲರೊಂದಿಗೆ ಹೊಂದಾಣಿಕೆ ರಾಜಕೀಯ ಮಾಡಿಕೊಳ್ಳದೆ, ಅವರ ವಿರುದ್ಧ ನಿರಂತರವಾಗಿ ಹೋರಾಟ ನಡೆಸುತ್ತ ಬಂದಿದ್ದ ಮಹಾರಾಣಾ ಪ್ರತಾಪ್‌, ಶಿವಾಜಿ ಮಹಾರಾಜರಿಂದ ಹಿಡಿದು ಬ್ರಿಟಿಷ್‌ ವಿರೋಧಿ ಕ್ರಾಂತಿಕಾರಿಗಳವರೆಗೆ ಸ್ಫೂರ್ತಿಯ ಸೆಲೆಯಾಗಿ ಪರಿಣಮಿಸಿದ್ದ ಮಹಾನ್‌ ಯೋಧ. ಗೆರಿಲ್ಲಾ ಯುದ್ಧದಲ್ಲಿ ಈತ ನಿಪುಣನಾಗಿದ್ದ. ಇತರ ರಜಪೂತ ರಾಜರ ಸಹಕಾರವಿಲ್ಲದೆ ಗೆರಿಲ್ಲಾ ಯುದ್ಧದ ಮೂಲಕ ಮೊಘಲರನ್ನು ಹಿಮ್ಮೆಟ್ಟಿಸುತ್ತಿದ್ದ. ಹಲ್ದಿಘಾಟ್‌ ಕದನದಲ್ಲಿ ಈತನನ್ನು ಮೊಘಲರು ಸೋಲಿಸಿದರೂ ಅದು ಮಹತ್ತರವಾದ ಗೆಲುವಾಗಿರಲಿಲ್ಲ ಎನ್ನುತ್ತವೆ ಇತಿಹಾಸದ ದಾಖಲೆಗಳು. ಈತನ ಸಾಹಸ, ಧೈರ್ಯಗಳ ಗಾಥೆಯನ್ನು ಇಂದಿಗೂ ರಾಜಸ್ಥಾನದ ಹಲವು ಪ್ರಾಂತ್ಯಗಳಲ್ಲಿ ಜಾನಪದ ಕತೆಗಳ ಮೂಲಕ ತಿಳಿಸಲಾಗುತ್ತದೆ. ಮಹಾರಾಣಾ ಪ್ರತಾಪನ ವಂಶಸ್ಥರು ಇಂದಿಗೂ ರಾಜಸ್ಥಾನದಲ್ಲಿದ್ದಾರೆ. ಅವರು ಮೇವಾಡ ಕುಟುಂಬದ ಲಕ್ಷ್ಯರಾಜ್‌ ಸಿಂಗ್‌ ಮೇವಾಡ್.‌ ಸಾಂಪ್ರದಾಯಿಕತೆ ಮತ್ತು ಆಧುನಿಕತೆಯನ್ನು ಮೇಳೈಸಿಕೊಂಡಿರುವ ಇವರು ತಮ್ಮ ಮನೆತನದ ಘನತೆಯನ್ನು ಇಂದಿಗೂ ಮುಂದುವರಿಸುತ್ತಿದ್ದಾರೆ. ವಿಶ್ವದ ಪುರಾತನ ರಾಜಮನೆತನಗಳಲ್ಲಿ ಒಂದಾಗಿರುವ ಮೇವಾಡ ಕುಟುಂಬದಲ್ಲಿ ಜನಿಸಿ ಸಮಾಜಕ್ಕೆ ಹಾಗೂ ಉದ್ಯಮ ವಲಯಕ್ಕೆ ಹಲವು ಮಹತ್ವದ ಕೊಡುಗೆಗಳನ್ನು ಇವರು ನೀಡಿದ್ದಾರೆ.

ಸಾರ್ವಜನಿಕ ಜೀವನದಲ್ಲಿ (Public Life) ಲಕ್ಷ್ಯರಾಜ್‌ (Lakshyaraj) ಅವರದ್ದು ಸ್ಥಿರವಾದ ಹಾಗೂ ಬದ್ಧತೆಯುಳ್ಳ (Commit) ಪಯಣ. ಹಲವು ಕ್ಷೇತ್ರಗಳಲ್ಲಿ ಮಹತ್ವದ ಸಾಧನೆ (Achieve) ಮಾಡಿದ್ದು, ಸಾರ್ವಜನಿಕ ಸೇವೆಯ (Public Service) ಅದಮ್ಯ ಹಂಬಲ ಹೊಂದಿದ್ದಾರೆ. ಶಿಕ್ಷಣ, ಕ್ರೀಡೆಗಳ ಕ್ಷೇತ್ರದಲ್ಲಿ ವಿಭಿನ್ನ ಸೇವೆ ಸಲ್ಲಿಸಿದ್ದಾರೆ. ಇವರ ಹೆಸರಿನಲ್ಲಿ ಗಿನ್ನೆಸ್‌ ದಾಖಲೆ (Guinness Record) ಕೂಡ ಆಗಿದೆ ಎಂದರೆ ಅಚ್ಚರಿಯಾಗಬಹುದು. ಕೇವಲ 40 ನಿಮಿಷಗಳಲ್ಲಿ 21058 ಸಸಿಗಳನ್ನು ನೆಡುವ ಮೂಲಕ ಇವರು ವಿಶ್ವ ದಾಖಲೆ ಮಾಡಿದ್ದಾರೆ. ಪರಿಸರದ ಸಂರಕ್ಷಣೆಗೆ ಬದ್ಧತೆ ಹೊಂದಿದ್ದಾರೆ. 

Viral News: ಕನ್ಸಲ್ಟಂಟ್ ಆಗಿ ಕೆಲಸ ಮಾಡೋದಂದ್ರೆ ಸ್ನೇಹಿತರನ್ನ ಮಾಡ್ಕೊಳ್ಳೋದಾ? ಲಿಂಕ್ಡಿನ್ ಪ್ರೊಫೈಲ್ ಹೀಗಂತಿದೆ

ಭಾರತ ಮತ್ತು ವಿದೇಶದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡಿದ್ದಾರೆ. ಹಾಸ್ಪಿಟಾಲಿಟಿ ಮ್ಯಾನೇಜ್‌ ಮೆಂಟ್‌ ನಲ್ಲಿ ಕೌಶಲ (Skill) ಗಳಿಸಿದ್ದಾರೆ. ವಿದೇಶದಲ್ಲಿ ಉನ್ನತ ಶಿಕ್ಷಣ (Higher Education) ಪಡೆದ ಬಳಿಕ, ಉದಯಪುರಕ್ಕೆ ವಾಪಸಾಗಿ ಕುಟುಂಬದ (Family) ವ್ಯವಹಾರದಲ್ಲಿ ಭಾಗಿಯಾದರು. ಇವರ ನೇತೃತ್ವದಲ್ಲಿ ಎಚ್‌ ಆರ್‌ ಎಚ್‌ ಗ್ರೂಪ್‌ ಆಫ್‌ ಹೋಟೆಲ್‌ ತನ್ನ ವಹಿವಾಟನ್ನು ವಿಸ್ತರಿಸಿದೆ. ಜಗಮಂದಿರ ದ್ವೀಪ ಅರಮನೆಯನ್ನು (Palace) ನವೀಕರಣಗೊಳಿಸಿ ಅದನ್ನು ರಾಜಕುಟುಂಬದ ವಿಶ್ವವಿಖ್ಯಾತ ವೆಡ್ಡಿಂಗ್‌ ತಾಣವನ್ನಾಗಿ ರೂಪಿಸಿದ್ದಾರೆ. 

ಕ್ರಿಕೆಟ್‌ ಅಂದ್ರೆ ಪ್ರೀತಿ
ಉದ್ಯಮ ವಹಿವಾಟಿನ ನಡುವೆಯೂ ಲಕ್ಷ್ಯ ರಾಜ್‌ ಅವರ ಇನ್ನೊಂದು ಆಸಕ್ತಿಕರ ಕ್ಷೇತ್ರವೆಂದರೆ ಕ್ರೀಡೆ. ರಾಜಸ್ಥಾನ ಕ್ರಿಕೆಟ್‌ ಅಸೋಸಿಯೇಷನ್‌ ನಲ್ಲಿ ಪ್ರಮುಖ ಸ್ಥಾನ ಹೊಂದಿದ್ದು, ಕ್ರಿಕೆಟ್‌ ಸಮುದಾಯಲ್ಲಿ ಇವರ ಕುರಿತು ಹೆಮ್ಮೆಯ ಭಾವನೆಯಿದೆ. ಕ್ರೀಡೆಯ (Sports) ಏಳಿಗೆಗಾಗಿ ಶ್ರಮಿಸುವ ಇವರ ಮನೋಭಾವ ಈ ವಲಯದಲ್ಲಿ ಹೆಸರುವಾಸಿ.

50 ವರ್ಷದಿಂದ ಕುಡಿದಿಲ್ಲ ನೀರು, ಬರೀ ಕೋಕೇ ಜೀವ ಜಲವಂತೆ ಇವ್ನಿಗೆ, ಹೇಗ್ ಬದುಕಿದ ಅಂತಿದ್ದಾರೆ ನೆಟ್ಟಿಗರು!

ಲಕ್ಷ್ಯ ರಾಜ್‌ ಅವರು ಮಹಾರಾಣಾ ಪ್ರತಾಪ್‌ ವಾಸಿಸಿದ್ದ ಐತಿಹಾಸಿಕ ಬೃಹತ್‌ ಅರಮನೆಯ ಅಧಿಕಾರವನ್ನೂ ಹೊಂದಿದ್ದು. ಅದಕ್ಕೆ ಆಧುನಿಕ ಸ್ಪರ್ಶ (Modern Touch) ನೀಡಿದ್ದಾರೆ. ಅರಮನೆಯನ್ನು ಕಲೆಯ ತಾಣವಾಗಿ ನಿರ್ಮಿಸಿದ್ದಾರೆ. ಈ ಮೂಲಕ, ಕಲೆ, ಸಂಸ್ಕೃತಿ, ಸಾಹಿತ್ಯದ ಪ್ರೇಮಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಸಾಂಪ್ರದಾಯಿಕತೆ, ಅನ್ವೇಷಣೆ, ಸೇವಾ ಮನೋಭಾವದ ಸ್ಫೂರ್ತಿಯಾಗಿದ್ದಾರೆ. ಸಮಾಜದ ಒಳಿತಿಗಾಗಿ ತುಡಿತ ಹೊಂದಿದ್ದು, ನಿರಂತರವಾಗಿ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. 

Follow Us:
Download App:
  • android
  • ios