Asianet Suvarna News Asianet Suvarna News

ರಾಜ್ಯಗಳಿಗೆ ಮತ್ತಷ್ಟು ಕೋವಿಡ್‌ ಮುನ್ನೆಚ್ಚರಿಕೆ ಸೂಚನೆ: ಕೇಂದ್ರ ಸರ್ಕಾರ ತಾಕೀತು

*  ಸಭೆ, ಯಾತ್ರೆಗಳಲ್ಲಿ ಪಾಲ್ಗೊಳ್ಳುವವರು ಲಸಿಕೆ ಪಡೆದಿರಬೇಕು
*  ರೋಗಲಕ್ಷಣ ಹೊಂದಿರಬಾರದು
*  ರಾಜ್ಯಗಳು ಈ ಎರಡೂ ಅಂಶ ಖಚಿತಪಡಿಸಿಕೊಳ್ಳಬೇಕು
 

Central Government Covid Precautions Notice to All States grg
Author
Bengaluru, First Published Jun 29, 2022, 3:30 AM IST

ನವದೆಹಲಿ(ಜೂ.29):  ದೇಶದಲ್ಲಿ ಕೋವಿಡ್‌ ಪ್ರಕರಣಗಳ ಹೆಚ್ಚಳದ ಬೆನ್ನಲ್ಲೇ, ದೊಡ್ಡ ಸಭೆ-ಸಮಾರಂಭಗಳಲ್ಲಿ ಪಾಲ್ಗೊಳ್ಳುವವರು ಹಾಗೂ ಯಾತ್ರೆಗಳಲ್ಲಿ ಪಾಲ್ಗೊಳ್ಳುವವರು ಯಾವುದೇ ರೋಗಲಕ್ಷಣಗಳನ್ನು ಹೊಂದಿರಬಾರದು ಮತ್ತು ಲಸಿಕೆ ಪಡೆದವರಾಗಿರಬೇಕು ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರವು ಎಲ್ಲ ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದೆ.

ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ಪತ್ರ ಬರೆದಿದ್ದು, ‘ಮುಂದಿನ ದಿನಗಳಲ್ಲಿ ನಡೆಯಲಿರುವ ಜಾತ್ರೆಗಳು, ವಿವಿಧ ಉತ್ಸವಗಳು ಹಾಗೂ ಸಭೆ-ಸಮಾರಂಭಗಳು ಸೋಂಕು ಹರಡುವಿಕೆಯ ಕೇಂದ್ರವಾಗಿ ಮಾರ್ಪಾಡಾಗಬಹುದು. ಇದರಲ್ಲಿ ಪಾಲ್ಗೊಳ್ಳಲು ಜನರು ಅಂತಾರಾಜ್ಯ ಅಥವಾ ಅಂತರ್‌ಜಿಲ್ಲಾ ಪ್ರಯಾಣವನ್ನೂ ಮಾಡಬಹುದು. 

Covid Crisis: ಮಾಸ್ಕ್‌ ಧರಿಸದವರಿಗೆ ದಂಡ ಹಾಕಿ: ತಜ್ಞರು

ಹೀಗಾಗಿ ಇಂಥ ಉತ್ಸವ, ಜಾತ್ರೆ ಹಾಗೂ ಸಭೆ ಸಮಾರಂಭಗಳಲ್ಲಿ ಭಾಗವಹಿಸುವವರು ಲಸಿಕೆ ಪಡೆದವರಾಗಿರಬೇಕು ಹಾಗೂ ರೋಗ ಲಕ್ಷಣಗಳನ್ನು ಹೊಂದಿರಬಾರದು ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಈ ರೀತಿ ಯಾತ್ರೆ/ಪ್ರವಾಸ ಕೈಗೊಳ್ಳುವವರು ಇದ್ದರೆ ಅವರ ಪ್ರವಾಸದ 15 ದಿನ ಮುಂಚಿತವಾಗಿಯೇ ಗುರುತಿಸಿ ಲಸಿಕೆ ನೀಡಬೇಕು’ ಎಂದು ತಿಳಿಸಿದ್ದಾರೆ.
 

Follow Us:
Download App:
  • android
  • ios