Asianet Suvarna News Asianet Suvarna News

ರಸ್ತೆ ಬದೀಲಿರೋ ಬೆಕ್ಕನ್ನು ಗೋಣಿಚೀಲದಲ್ಲಿ ತುಂಬಿ ಬಿರಿಯಾನಿ ಹೊಟೇಲ್‌ಗೆ ಸಪ್ಲೈ ಮಾಡ್ತಾರಂತೆ!

ಚೆನ್ನೈನ ಪ್ರಾಣಿ ಪ್ರೇಮಿಯೊಬ್ಬರು ನಗರಗಳಲ್ಲಿ ಬೆಕ್ಕನ್ನು ಸಹ ಬಿರಿಯಾನಿ ಮಾಡಲು ಬಳಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ವೀಡಿಯೋದಲ್ಲಿ, ತನ್ನನ್ನು ಜೋಶುವಾ ಎಂದು ಪರಿಚಯಿಸಿಕೊಂಡಿರುವ ಕಾಲೇಜು ವಿದ್ಯಾರ್ಥಿ, ರಸ್ತೆಬದಿಯ ಬೆಕ್ಕುಗಳನ್ನು ಮಾರಾಟ ಮಾಡುವ ಜಾಲದ ಬಗ್ಗೆ ಮಾತನಾಡಿದ್ದಾರೆ. 

Animal Lover Reveals Of Spotting Stray Cats Kidnapped Over Night, Allegedly Sold To Biryani Shops Vin
Author
First Published May 2, 2024, 12:33 PM IST

ತಮಿಳುನಾಡು: ಚೆನ್ನೈನ ಪ್ರಾಣಿ ಪ್ರೇಮಿಯೊಬ್ಬರು ನಗರಗಳಲ್ಲಿ ಬೆಕ್ಕನ್ನು ಸಹ ಬಿರಿಯಾನಿ ಮಾಡಲು ಬಳಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ವೀಡಿಯೋದಲ್ಲಿ, ತನ್ನನ್ನು ಜೋಶುವಾ ಎಂದು ಪರಿಚಯಿಸಿಕೊಂಡಿರುವ ಕಾಲೇಜು ವಿದ್ಯಾರ್ಥಿ, ರಸ್ತೆಬದಿಯ ಬೆಕ್ಕುಗಳನ್ನು ಮಾರಾಟ ಮಾಡುವ ಜಾಲದ ಬಗ್ಗೆ ಮಾತನಾಡಿದ್ದಾರೆ. 'ರೋಡ್ ಸೈಡ್‌ನಲ್ಲಿ ಕಂಡು ಬರುವ 10-15 ಬೆಕ್ಕುಗಳನ್ನು ದೊಡ್ಡ ಗೋಣಿಚೀಲಗಳಲ್ಲಿ ತುಂಬಿ, ರಸ್ತೆಬದಿಯ ಬಿರಿಯಾನಿ ಅಂಗಡಿಗಳು, ಹೋಟೆಲ್‌ಗಳು ಮತ್ತು ರೆಸ್ಟೊರೆಂಟ್‌ಗಳಿಗೆ ಮಾರಾಟ ಮಾಡಲಾಗ್ತಿದೆ. ನಾನು ಇದನ್ನು ಕಣ್ಣಾರೆ ನೋಡಿದ್ದೇನೆ' ಎಂದು ಜೋಶುವಾ ವಿವರಿಸಿದ್ದಾರೆ.

ಬೆಕ್ಕಿನ ಮಾಂಸವನ್ನು ಬಿರಿಯಾನಿ ಮಾಡಲು ಬಳಸಿಕೊಳ್ಳಲಾಗುತ್ತಿದೆ. ಪ್ರಾಣಿ ರಕ್ಷಣಾ ಕೇಂದ್ರ ಮತ್ತು ಸಮಾಜದ ಕಲ್ಯಾಣ ಇಲಾಖೆಯವರು ಇದರ ವಿರುದ್ಧ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಜೋಶುವಾ ಮನವಿ ಮಾಡಿದ್ದಾರೆ. 

ಬೆಕ್ಕಿಗೆ ಚಲ್ಲಾಟ, ಇಲಿಗೆ ಪ್ರಾಣ ಸಂಕಟ ಅಂತಾರಲ್ಲ ಹಾಗೆ ಮಾರ್ಜಾಲ ಚೇಷ್ಟೆಗೆ 11 ಲಕ್ಷ ನಷ್ಟ!

'ಮಧ್ಯರಾತ್ರಿಯಲ್ಲಿ ಒಬ್ಬ ವ್ಯಕ್ತಿ ಬ್ಯಾಗ್‌ಗಳಿಂದ ಬೆಕ್ಕುಗಳನ್ನು ನಂತರ ವಾಹನಕ್ಕೆ ಲೋಡ್ ಮಾಡುವುದನ್ನು ನಾನು ನೋಡಿದೆ. ನಾನು ಅವನ ಬಳಿಗೆ ಬರುವ ಹೊತ್ತಿಗೆ, ಅವನು ಚೀಲಗಳನ್ನು ಮರೆಮಾಡಲು ನೆರಳಿನ ಮೂಲೆಗೆ ಬದಲಾಯಿಸಿದನು. ಸುಮಾರು ಮೂರು ಕಿಲೋಮೀಟರ್‌ಗಳಷ್ಟು ದೂರದ ವರೆಗೆ ನಾನು ಅವನನ್ನು ಹಿಂಬಾಲಿಸಿದೆ. ಅವನು ಮತ್ತೊಂದು ಸ್ಥಳದಲ್ಲಿ ಅದೇ ರೀತಿ ಬೆಕ್ಕುಗಳನ್ನು ಚೀಲಕ್ಕೆ ತುಂಬುತ್ತಿದ್ದನು. ಬೆಕ್ಕುಗಳನ್ನು ಅಪಹರಿಸುವುದರಲ್ಲಿ ಏಕೆ ತೊಡಗಿಸಿಕೊಂಡಿದ್ದೀರಿ ಎಂದು ಆ ವ್ಯಕ್ತಿಯನ್ನು ಕೇಳಿದಾಗ, ಆತ ಇದು ನನ್ನ ಕೆಲಸ ಎಂದು ತಿಳಿಸಿದ್ದಾಗಿ ಜೋಶುವಾ ಹೇಳಿದ್ದಾರೆ.

'ಇದರಲ್ಲಿ ದೊಡ್ಡ ಗ್ಯಾಂಗ್ ಭಾಗಿಯಾಗಿದೆ. ಅವರು ಈ ಬೆಕ್ಕುಗಳನ್ನು ರಸ್ತೆಬದಿಯ ಅಂಗಡಿಗಳಿಗೆ ಮಾರಾಟ ಮಾಡುತ್ತಾರೆ. ಇದರಿಂದಲೇ ಬಿರಿಯಾನಿ ಮಾಡಿ ಜನರಿಗೆ ಉಣಬಡಿಸುತ್ತಾರೆ. ಇಂತಹ ಕಾನೂನುಬಾಹಿರ ಚಟುವಟಿಕೆಗಳು ರಾತ್ರಿಯಲ್ಲಿ ನಡೆಯುತ್ತಿವೆ. ಇದು ಮುಂದುವರಿದರೆ, ನಗರವು ಸುರಕ್ಷಿತವಾಗಿದೆಯೇ ಎಂದು ಮರುಚಿಂತನೆ ಮಾಡಬೇಕು' ಎಂದು ಜೋಶುವಾ ತಿಳಿಸಿದ್ದಾರೆ.

ಈ ತಾಣ ನೋಡಿದ್ರೆ ನೀವು ಮತ್ತೊಂದು ಲೋಕಕ್ಕೆ ಹೊಕ್ಕಂತೆ ಅನಿಸೋದ್ರಲ್ಲಿ ಡೌಟೇ ಇಲ್ಲ

ಈ ಕುರಿತು ಮತ್ತಷ್ಟು ಪ್ರತಿಕ್ರಿಯಿಸಿದ ಅವರು, 'ಬೀದಿ ಪ್ರಾಣಿಗಳ ವಿರುದ್ಧ ಇಂತಹ ಚಟುವಟಿಕೆಗಳನ್ನು ನಿಲ್ಲಿಸದಿದ್ದರೆ, ಸಮಾಜವು ಪ್ರಾಣಿಗಳನ್ನು ಶಾಶ್ವತವಾಗಿ ಕಳೆದುಕೊಳ್ಳಬಹುದು. ಭವಿಷ್ಯದಲ್ಲಿ, ಮಕ್ಕಳು ಬೆಕ್ಕುಗಳನ್ನು ಕಾರ್ಟೂನ್‌ಗಳಲ್ಲಿ ಅಥವಾ ಮೃಗಾಲಯದಲ್ಲಿ ಮಾತ್ರ ನೋಡಬೇಕಾಗಬಹುದು. ಜನರು ಪ್ರಾಣಿ ಹಿಂಸೆಯ ವಿರುದ್ಧ ಧ್ವನಿ ಎತ್ತುವುದು ಮುಖ್ಯವಾಗಿದೆ ಎಂದರು.

Follow Us:
Download App:
  • android
  • ios