Asianet Suvarna News Asianet Suvarna News

ಪುಟ್ಟ ತಂಗಿಯನ್ನು ಕೋತಿ ದಾಳಿಯಿಂದ ಕಾಪಾಡಿದ ನಿಕಿತಾಗೆ ಆನಂದ್ ಮಹೀಂದ್ರ ಭರ್ಜರಿ ಆಫರ್!

ಮನೆಯೊಳಗೆ ದಿಢೀರ್ ಎಂಟ್ರಿಕೊಟ್ಟ ಕೋತಿಗಳು ಆತಂಕ ತಂದಿತ್ತು. ಈ ಕೋತಿಗಳಿಂದ ಪುಟ್ಟ ತಂಗಿಯನ್ನು ರಕ್ಷಿಸಲು ಈ ಬಾಲಕಿ ಅಲೆಕ್ಸಾ ಬಳಸಿ ಎಲ್ಲರ ಪ್ರಶಂಸೆಗೆ ಪಾತ್ರಳಾಗಿದ್ದಾಳೆ. ನಾಯಿ ಬೊಗಳುವ ಶಬ್ದ ಮಾಡಲು ಅಲೆಕ್ಸಾಗೆ ಸೂಚಿಸಿದ ಬೆನ್ನಲ್ಲೇ ಕೋತಿಗಳು ಮನೆಯಿಂದ ಕಾಲ್ಕಿತ್ತಿದೆ. ಈ ಬಾಲಕಿಗೆ ಇದೀಗ ಉದ್ಯಮಿ ಆನಂದ್ ಮಹೀಂದ್ರ ಭರ್ಜರಿ ಆಫರ್ ನೀಡಿದ್ದಾರೆ.
 

Anand Mahindra offer Corporate Job to girl who saved little sister from Monkey attack Using Alexa ckm
Author
First Published Apr 6, 2024, 9:58 PM IST

ಲಖನೌ(ಏ.06) ಪುಟ್ಟ ತಂಗಿಯನ್ನು ಕೋತಿಗಳಿಂದ ರಕ್ಷಿಸಲು ಪುಟ್ಟ ಬಾಲಕಿ ಮಾಡಿದ ಉಪಾಯಕ್ಕೆ ಇಡೀ ದೇಶವೆ ಸಲಾಮ್ ಹೇಳಿದೆ. ಮನೆಯೊಳಗೆ ಪ್ರವೇಶಿಸಿದ ಕೋತಿಗಳಿಂದ ಪುಟ್ಟ ತಂಗಿಯನ್ನು ರಕ್ಷಿಸಲು ಬಾಲಕಿ, ತಕ್ಷಣವೆ ಅಲೆಕ್ಸಾ ತಂತ್ರಜ್ಞಾನ ಬಳಸಿದ್ದಾಳೆ. ನಾಯಿ ಬೊಗಳುವ ಶಬ್ದ ಮಾಡಲು ಅಲೆಕ್ಸಾಗೆ ಸೂಚಿಸಿ ಮನೆಯಿಂದ ಕೋತಿಗಳನ್ನು ಓಡಿಸುವಲ್ಲಿ ಬಾಲಕಿ ಯಶಸ್ವಿಯಾಗಿದ್ದಾಳೆ. ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ ನಿಕಿತಾಗೆ ಇದೀಗ ಉದ್ಯಮಿ ಆನಂದ್ ಮಹೀಂದ್ರ ಭರ್ಜರಿ ಆಫರ್ ನೀಡಿದ್ದಾರೆ. ಮಹೀಂದ್ರ ಗ್ರೂಪ್ ಕಾರ್ಪೋರೇಟ್ ಕಂಪನಿಯಲ್ಲಿ ನಿಕಿತಾಗೆ ಉದ್ಯೋಗ ಆಫರ್ ನೀಡಿದ್ದಾರೆ.

ನಿಕಿತಾ ಸಮಯಪ್ರಜ್ಞೆ, ತಂತ್ರಜ್ಞಾನವನ್ನು ಸೂಕ್ತ ರೀತಿಯಲ್ಲಿ ಸದುಪಯೋಗ ಪಡಿಸಿ ಪುಟ್ಟ ತಂಗಿ ಹಾಗೂ ತಾನು ಇಬ್ಬರೂ ಕೋತಿ ದಾಳಿಯಿಂದ ಸುರಕ್ಷಿತವಾಗಿದ್ದಾರೆ. ನಿಕಿತಾಳ ಈ ನಡೆಯನ್ನು ಆನಂದ್ ಮಹೀಂದ್ರ ಮೆಚ್ಚಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಆನಂದ್ ಮಹೀಂದ್ರ ಬಾಲಕಿ ನಿಕಿತಾ ಶಿಕ್ಷಣ ಮುಗಿದ ಬಳಿಕ ನೇರವಾಗಿ ಮಹೀಂದ್ರ ಗ್ರೂಪ್ ಕಾರ್ಪೋರೇಟ್ ಜಗತ್ತಿನಲ್ಲಿ ಕೆಲಸ ಮಾಡಲು ಆಕೆಯ ಮನ ಒಲಿಸಲು ನಾವು ತಯಾರಿದ್ದೇವೆ ಎಂದು ಆನಂದ್ ಮಹೀಂದ್ರ ಹೇಳಿದ್ದಾರೆ.

Monkey Attack: ಚೇಷ್ಠೆ ಮಾಡೋ ಕಪಿರಾಯ ದ್ವೇಷವನ್ನೂ ಸಾಧಿಸ್ತಾನಾ ? ಕೋತಿ ಕಾಟಕ್ಕೆ ಹೈರಾಣಾದ ಕುಟುಂಗಳು !

ಈ ಕುರಿತು ಟ್ವೀಟ್ ಮಾಡಿರುವ ಆನಂದ್ ಮಹೀಂದ್ರ, ನಾವು ತಂತ್ರಜ್ಞಾನದ ಗುಲಾಮಮರುತ್ತಿದ್ದೇವೆಯೇ? ಅಥವಾ ಯಜಮಾನರಾಗುತ್ತೇವೆಯೇ ಎಂಬುದು ಇದೀಗ ಬಾರಿ ಚರ್ಚೆಯಾಗುತ್ತಿರುವ ವಿಷಯ. ಈ ತಂತ್ರಜ್ಞಾನ ಮನುಷ್ಯನ ಜಾಣ್ಮೆಯನ್ನು ಸಕ್ರಿಯಗೊಳಿಸುತ್ತದೆ ಅನ್ನೋದಕ್ಕೆ ಈ ಪುಟ್ಟ ಬಾಲಕಿ ರೋಚಕ ಕತೆ ನಮಗೆ ಹೊಸ ಹುರುಪು ನೀಡುತ್ತದೆ. ಈ ಬಾಲಕಿಯ ತ್ವರಿತ ಆಲೋಚನೆ ಹಾಗೂ ಕಾರ್ಯಪ್ರಜ್ಞೆ ಅಸಾಧಾರಣವಾಗಿತ್ತು. ಅನೀಕ್ಷಿತ ಜಗತ್ತಿನಲ್ಲಿ ಬಾಲಕಿಯ ನಾಯಕತ್ವದ ಸಾಮರ್ಥ್ಯ ಪ್ರದರ್ಶಿಸಿ ಯಶಸ್ವಿಯಾಗಿದ್ದಾಳೆ. ಬಾಲಕಿ ಶಿಕ್ಷಣ ಮುಗಿಸಿದ ಬಳಿಕ ಆಕೆ ಎಂದಾದರೂ ಕಾರ್ಪೋರೇಟ್ ಜಗತ್ತಿನಲ್ಲಿ ಕೆಲಸ ಮಾಡಲು ನಿರ್ಧರಿಸಿದರೆ, ನಾವು ಆಕೆಯನ್ನು ಮಹೀಂದ್ರ ಗ್ರೂಪ್ ಕಂಪನಿ ಸೇರಿಕೊಳ್ಳಲು ಮನವೊಲಿಸುತ್ತೇವೆ ಎಂದು ಆನಂದ್ ಮಹೀಂದ್ರ ಹೇಳಿದ್ದಾರೆ.  

 

 

ಬಸ್ತಿಯ ರೆಸಿಡೆನ್ಶಿಯಲ್ ಏರಿಯಾದಲ್ಲಿ ನಿವಾಸಿ ಪಂಕಚ್ ಒಜಾ ಮನೆಗೆ ಕೆಲ ಆಪ್ತರು ಆಗಮಿಸಿದ್ದರು. ಹೀಗಾಗಿ ಮನೆಯ ಗೇಟುಗಳು ತೆರೆದಿತ್ತು. ಹೀಗಾಗಿ ಎರಡು ಅಂತಸ್ತಿನ ಮನೆಯ ಮೊದಲ ಮಹಡಿಗೆ ಕೋತಿಗಳ ಗುಂಪು ಪ್ರವೇಶಿಸಿತ್ತು. ಇತ್ತ ಬೆಡ್ ರೂಂನಲ್ಲಿ ಆಟವಾಡುತ್ತಿದ್ದ ಬಾಲಕಿ ನಿಕಿತ ಹಾಗೂ ಆಕೆಯ ತಂಗಿ 15 ತಿಂಗಳ ವಮಿಕಾ ಗಾಬರಿಯಾಗಿದ್ದಾರೆ. ಕಾರಣ ಈ ಕೋತಿಗಳು ನೇರವಾಗಿ ಬೆಡ್ ರೂಂ ಬಳಿ ಆಗಮಿಸಿತ್ತು. 

ಬಾಲಕಿ ಮೇಲೆ ದಾಳಿ ಮಾಡಿದ ಕೋತಿ: ಕಾಲಿಗೆ ಗಂಭೀರ ಗಾಯ

ಕೋತಿ ದಾಳಿ ಮಾಡಿದರೆ ಇಬ್ಬರು ಪ್ರಾಣಕ್ಕೆ ಅಪಾಯ. ಗುಂಪಾಗಿ ಬಂದಿರುವ ಕೋತಿಗಳನ್ನು ಓಡಿಸಿ ತನ್ನ ತಂಗಿ ಹಾಗೂ ತಾನೂ ಅಪಾಯದಿಂದ ಪಾರಾಗಲು ತಕ್ಷಣವೇ ತಂತ್ರಜ್ಞಾನದ ನೆರವು ಪಡೆದಿದ್ದಾರೆ. ಪಕ್ಕದಲ್ಲೇ ಇದ್ದ ಅಲೆಕ್ಸಾ ತಂತ್ರಜ್ಞಾನ ಬಳಸಿಕೊಂಡಿದ್ದಾಳೆ. ಕೋತಿಗಳನ್ನು ಓಡಿಸಲು ತಕ್ಷಣವೆ ನಾಯಿ ಬೊಗಳುವ ಶಬ್ದ ಮಾಡಲು ಸೂಚಿಸಿದ್ದಾಳೆ. ಅಲೆಕ್ಸಾ ನಾಯಿ ಬೊಗಳುವ ಶಬ್ದದಿಂದ ಕೋತಿಗಳು ಗಾಬರಿಯಿಂದ ಹೊರಕ್ಕೆ ಓಡಿದೆ. ಈ ಮೂಲಕ 15 ತಿಂಗಳ ವಮಿಕಾ ಹಾಗೂ ನಿಕಿತಾ ಇಬ್ಬರು ದಾಳಿಯಿಂದ ಸುರಕ್ಷಿತವಾಗಿದ್ದಾರೆ.
 

Follow Us:
Download App:
  • android
  • ios