Asianet Suvarna News Asianet Suvarna News

ಆಸೀಸ್‌ ಹಾಕಿ ಸರ​ಣಿ: ಭಾರ​ತ ಮಹಿಳಾ ತಂಡಕ್ಕೆ ಸವಿತಾ ಪೂನಿಯಾ ನಾಯ​ಕಿ

ಏಷ್ಯನ್‌ ಗೇಮ್ಸ್‌ ಸಿದ್ದತೆಗಾಗಿ ಆಸೀಸ್ ಪ್ರವಾಸ ಮಾಡಲಿರುವ ಭಾರತ ಮಹಿಳಾ ಹಾಕಿ ತಂಡ
ಮೇ 18ರಿಂದ ಅಡಿ​ಲೇ​ಡ್‌​ನಲ್ಲಿ ಆರಂಭ​ವಾ​ಗ​ಲಿ​ರುವ 3 ಪಂದ್ಯಗಳ ಸರಣಿ
ಮೇ 18, 20 ಹಾಗೂ 21ಕ್ಕೆ ಆಸ್ಪ್ರೇ​ಲಿಯಾ ವಿರುದ್ಧ ಸವಿತಾ ಪಡೆ ಕಾದಾಟ

Savita Punia To Lead 20 member Indian Womens Hockey Team For 3 Match Series Against Australia kvn
Author
First Published May 9, 2023, 11:24 AM IST

ನವ​ದೆ​ಹ​ಲಿ(ಮೇ.09): ಏಷ್ಯನ್‌ ಗೇಮ್ಸ್‌ನ ಸಿದ್ಧ​ತೆ​ಗಾಗಿ ಮೇ 18ರಿಂದ ಅಡಿ​ಲೇ​ಡ್‌​ನಲ್ಲಿ ಆರಂಭ​ವಾ​ಗ​ಲಿ​ರುವ ಆಸ್ಪ್ರೇ​ಲಿಯಾ ವಿರು​ದ್ಧದ 3 ಪಂದ್ಯ​ಗಳ ಸರ​ಣಿಗೆ 20 ಮಂದಿಯ ಭಾರತ ಮಹಿಳಾ ಹಾಕಿ ತಂಡ ಪ್ರಕ​ಟ​ಗೊಂಡಿ​ದ್ದು, ಸವಿತಾ ಪೂನಿಯಾ ನಾಯ​ಕಿ​ಯಾಗಿ ನೇಮ​ಕ​ಗೊಂಡಿ​ದ್ದಾರೆ. ಭಾರತ, ಆಸ್ಪ್ರೇ​ಲಿ​ಯಾ ‘ಎ’ ತಂಡದ ವಿರು​ದ್ಧವೂ 2 ಪಂದ್ಯ​ಗ​ಳ​ನ್ನಾ​ಡ​ಲಿದ್ದು, ದೀಪ್‌ ಗ್ರೇಸ್‌ ಉಪ​ನಾ​ಯ​ಕತ್ವ ವಹಿ​ಸ​ಲಿ​ದ್ದಾರೆ. ಮೇ 18, 20 ಹಾಗೂ 21ಕ್ಕೆ ಆಸ್ಪ್ರೇ​ಲಿಯಾ ವಿರುದ್ಧ, ಮೇ 25 ಹಾಗೂ 27ಕ್ಕೆ ಆಸ್ಪ್ರೇ​ಲಿಯಾ ‘ಎ’ ತಂಡದ ವಿರುದ್ಧ ಸವಿತಾ ಬಳಗ ಕಣ​ಕ್ಕಿ​ಳಿ​ಯ​ಲಿ​ದೆ.

ಭಾರತ ಮಹಿಳಾ ಹಾಕಿ ತಂಡ ಹೀಗಿದೆ:

ಸವಿತಾ ಪೂನಿಯಾ(ನಾಯಕಿ), ಬಿಚು ದೇವಿ ಖಾರಿಬನ್, ದೀಪ್ ಗ್ರೇಸ್ ಎಕ್ಕಾ(ಉಪ ನಾಯಕಿ), ನಿಕ್ಕಿ ಪ್ರಧಾನ್, ಇಸಾಯಿಕ ಚೌಧರಿ, ಉದಿತಾ, ಗುರ್ಜಿತ್ ಕೌರ್, ನಿಶ್ರಾ, ನವಜೋತ್ ಕೌರ್, ಮೋನಿಕಾ, ಸಾಲಿಮಾ ತೆಟೆ, ನೇಹಾ, ನವನೀತ್ ಕೌರ್, ಸೋನಿಕಾ, ಜ್ಯೋತಿ, ಬಲ್ಜೀತ್ ಕೌರ್, ಲಾಲ್‌ರೇಶ್ಮಿ, ವಂದನಾ ಕಟಾರಿಯಾ, ಸಂಗೀತಾ ಕುಮಾರಿ, ಶರ್ಮಿಳಾ ದೇವಿ.

ವಿಶ್ವ ಬಾಕ್ಸಿಂಗ್‌: ಸಚಿ​ನ್‌ ಪ್ರಿ ಕ್ವಾರ್ಟ​ರ್‌ ಪ್ರವೇ​ಶ

ತಾಷ್ಕೆಂಟ್‌: ಪುರುಷರ ಬಾಕ್ಸಿಂಗ್‌ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರ​ತದ ತಾರಾ ಬಾಕ್ಸರ್‌ ಸಚಿನ್‌ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇ​ಶಿ​ಸಿ​ದ್ದಾರೆ. ಸೋಮ​ವಾರ 54 ಕೆ.ಜಿ. ವಿಭಾ​ಗ​ದ 2ನೇ ಸುತ್ತಿನ ಪಂದ್ಯ​ದಲ್ಲಿ 2021ರ ವಿಶ್ವ ಯುವ ಚಾಂಪಿ​ಯ​ನ್‌​ಶಿಪ್‌ ವಿಜೇತ ಸಚಿನ್‌ ಮೊಲ್ಡೋ​ವಾದ ನೊವಾಕ್‌ ಸರ್‌ಗೀ ವಿರುದ್ಧ 5-0 ಅಂತ​ರ​ದಲ್ಲಿ ಗೆದ್ದು ಅಂತಿಮ 16ರ ಘಟ್ಟತಲು​ಪಿ​ದರು. ಆದರೆ 92 ಕೆ.ಜಿ. ವಿಭಾ​ಗದ ಪ್ರಿ ಕ್ವಾರ್ಟ​ರ್‌​ನಲ್ಲಿ ನವೀನ್‌ ಸ್ಪೇನ್‌ನ ಎಮ್ಯಾ​ನು​ಯೆಲ್‌ ರಿಯೆಸ್‌ ವಿರುದ್ಧ 0-5 ಅಂತ​ರ​ದಲ್ಲಿ ಸೋಲ​ನು​ಭ​ವಿ​ಸಿ​ದರು.

Wrestlers Protest ಕುಸ್ತಿಪಟುಗಳ ಹೋರಾಟಕ್ಕೆ ಮತ್ತೊಂದು ಟ್ವಿಸ್ಟ್‌: ಈಗ ರೈತರ ಸಾಥ್‌!

48 ಕೆ.ಜಿ. ವಿಭಾ​ಗ​ದಲ್ಲಿ ಗೋವಿಂದ್‌ ಸಹಾನಿ ಕೂಡಾ ಜಾರ್ಜಿ​ಯಾದ ಸಖಿಲ್‌ ವಿರುದ್ಧ 0-5ರಲ್ಲಿ ಸೋತು ಹೊರ​ಬಿ​ದ್ದ​ರು. ಮಂಗ​ಳ​ವಾರ 51 ಕೆ.ಜಿ. ವಿಭಾ​ದಲ್ಲಿ ದೀಪಕ್‌, 54 ಕೆ.ಜಿ. ವಿಭಾ​ಗ​ದಲ್ಲಿ ಸಚಿನ್‌, 67 ಕೆ.ಜಿ. ವಿಭಾ​ಗ​ದಲ್ಲಿ ಆಕಾಶ್‌ ಪ್ರಿ ಕ್ವಾರ್ಟ​ರ್‌​ನಲ್ಲಿ ಸೆಣ​ಸ​ಲಿ​ದ್ದಾ​ರೆ.

ವೇಟ್‌​ಲಿ​ಫ್ಟಿಂಗ್‌: ಅಜಿ​ತ್‌ಗೆ 9ನೇ ಸ್ಥಾನ

ಜಿಂಜು​(​ಕೊ​ರಿ​ಯಾ​): ಏಷ್ಯನ್‌ ವೇಟ್‌​ಲಿ​ಫ್ಟಿಂಗ್‌ ಚಾಂಪಿ​ಯ​ನ್‌​ಶಿ​ಪ್‌​ನಲ್ಲಿ ಭಾರ​ತ 2 ಪದ​ಕ​ಗ​ಳೊಂದಿಗೆ ಅಭಿ​ಯಾನ ಕೊನೆ​ಗೊ​ಳಿ​ಸಿ​ದೆ. ಸೋಮ​ವಾರ ಪುರು​ಷರ 73 ಕೆ.ಜಿ. ವಿಭಾ​ಗ​ದ​ಲ್ಲಿ ಭಾರ​ತದ ಯುವ ಅಥ್ಲೀ​ಟ್‌, ರಾಷ್ಟ್ರೀಯ ಚಾಂಪಿ​ಯನ್‌ ಅಜಿತ್‌ ನಾರಾ​ಯಣ 9ನೇ ಸ್ಥಾನ ಹಾಗೂ ಕಾಮ​ನ್‌​ವೆಲ್ತ್‌ ಗೇಮ್ಸ್‌ ಚಿನ್ನ ವಿಜೇತ ಅಚಿಂತ ಶೆಹುಲಿ 10ನೇ ಸ್ಥಾನ ಪಡೆ​ದರು.

ಅಜಿತ್‌ ಒಟ್ಟು 307 ಕೆ.ಜಿ.​(​ಸ್ನಾ್ಯ​ಚ್‌​ನಲ್ಲಿ 139 ಕೆ.ಜಿ. ಮತ್ತು ಕ್ಲೀನ್‌ ಆಂಡ್‌ ಜರ್ಕ್​ನಲ್ಲಿ 168 ಕೆ.ಜಿ.) ಭಾರ ಎತ್ತಿ ‘ಬಿ’ ಗುಂಪಿ​ನಲ್ಲಿ ಮೊದಲ ಸ್ಥಾನ ಪಡೆ​ದರೆ, ಶೆಹುಲಿ 305 ಕೆ.ಜಿ.​(​ಸ್ನಾ್ಯ​ಚ್‌​ನಲ್ಲಿ 140 ಕೆ.ಜಿ. ಮತ್ತು ಕ್ಲೀನ್‌ ಆಂಡ್‌ ಜರ್ಕ್​ನಲ್ಲಿ 165 ಕೆ.ಜಿ.) ತೂಕ ಎತ್ತಿ 2ನೇ ಸ್ಥಾನಿ​ಯಾ​ದರು. ಆದರೆ ‘ಎ’ ಗುಂಪಿನ ಸ್ಪರ್ಧೆ​ಗಳ ಬಳಿಕ ಇವ​ರಿ​ಬ್ಬರು ಕ್ರಮ​ವಾಗಿ 9, 10ನೇ ಸ್ಥಾನಕ್ಕೆ ತೃಪ್ತಿ​ಪ​ಟ್ಟು​ಕೊಂಡರು.

Follow Us:
Download App:
  • android
  • ios