ಈ 45 ದುರ್ಬಲ ಪಾಸ್ವರ್ಡ್ ಹ್ಯಾಕ್ ಮಾಡಲು ಕೇವಲ 1 ನಿಮಿಷ ಸಾಕು, ಲಿಸ್ಟ್ನಲ್ಲಿದ್ದೀರಾ ನೀವು?
ನಿಮ್ಮ ಪ್ರಮುಖ ಖಾತಗಳ ಪಾಸ್ವರ್ಡ್ ಸ್ಟ್ರಾಂಗ್ ಇದೆಯಾ? ನಾರ್ಡ್ ಪಾಸ್ 2024 ಕೆಲ ಪಟ್ಟಿ ನೀಡಿದೆ. ಈ 45 ಪಾಸ್ವರ್ಡ್ ನೀವು ಬಳಕೆ ಮಾಡಿದ್ದರೆ, ನಿಮ್ಮ ಖಾತೆ ಹ್ಯಾಕ್ ಮಾಡಲು 1 ನಿಮಿಷವೂ ಬೇಕಾಗಿಲ್ಲ. ಈ ಪಟ್ಟಿಯಲ್ಲಿ ನೀವಿದ್ದರೆ ತಕ್ಷಣವೇ ಪಾಸ್ವರ್ಡ್ ಬದಲಾಯಿಸಿ.

ಇಮೇಲ್ ಖಾತೆ, ಸೋಶಿಯಲ್ ಮೀಡಿಯಾ, ಬ್ಯಾಂಕ್ ಖಾತೆ, ಯುಪಿಐ ಪಾವತಿ ಸೇರಿದಂತೆ ಹಲವು ಡಿಜಿಟಲ್ ಖಾತೆಗಳಿಗೆ ಸ್ಟ್ರಾಂಗ್ ಪಾಸ್ವರ್ಡ್ ಹಾಕಬೇಕು. ಆದರೆ ಹಲವರು ನೆನಪಿಟ್ಟುಕೊಳ್ಳುವಂತೆ ಅಥವಾ ಸುಲಭದ ಕಾರಣಕ್ಕೆ ದುರ್ಬಲ ಪಾಸ್ವರ್ಡ್ ಹಾಕುತ್ತಾರೆ. ಇದು ಅತ್ಯಂತ ಅಪಾಯಕಾರಿ. ಡೇಟಾ, ಹಣ ಯಾವುದು ಸೋರಿಕೆಯಾಗದಂತೆ ತಡೆಯುವ ಪಾಸ್ವರ್ಡ್ ಸ್ಟ್ರಾಂಗ್ ಇರಬೇಕು. ಆದರೆ ಭಾರತದಲ್ಲಿ ಬಹುತೇಕರು ಈ 45 ಪಾಸ್ವರ್ಡ್ ಬಳಕೆ ಮಾಡುತ್ತಾರೆ. ಈ ಪಾಸ್ವರ್ಡ್ ಹ್ಯಾಕ್ ಮಾಡಲು ಒಂದು ನಿಮಿಷವೂ ಬೇಕಾಗಿಲ್ಲ. ನಾರ್ಡ್ಪಾಸ್ 2024 ಇದೀಗ 45 ಪಾಸ್ವರ್ಡ್ ಪಟ್ಟಿ ನೀಡಿದೆ. ಇದು ಅತ್ಯಂತ ದುರ್ಬಲ ಪಾಸ್ವರ್ಡ್ ಎಂದಿದೆ. ಇಷ್ಟೇ ಅಲ್ಲ ಈ ಪಾಸ್ವರ್ಡ್ ಹ್ಯಾಕ್ ಮಾಡಲು ಭಾರಿ ತಂತ್ರಜ್ಞಾನ ಗೊತ್ತಿದ್ದ ಹ್ಯಾಕರ್ಸ್ ಬೇಕಿಲ್ಲ ಎಂದಿದೆ

ಪಾಸ್ವರ್ಡ್ ಸ್ಟ್ರಾಂಗ್ ಇರಬೇಕು. ಅದು ಹ್ಯಾಕರ್ಸ್ ಅಥವಾ ಇನ್ಯಾರ ಊಹೆಗೂ ನಿಲುಕಬಾರದು. ಸಾಮಾನ್ಯವಾಗಿ ಬಹುತೇಕರು ಪಾಸ್ವರ್ಡ್ ನೆನಪಿನಲ್ಲಿಡಲು ತಮ್ಮ ಹುಟ್ಟಿದ ದಿನಾಂಕ, ಮೊಬೈಲ್ ನಂಬರ್, 12234 ಸೇರಿದಂತೆ ಹಲವು ಕ್ಯಾರೆಕ್ಟರ್ ಬಳಸುತ್ತಾರೆ. ಇದು ಸುಲಭವಾಗಿ ಹ್ಯಾಕ್ ಮಾಡಲು ಸಾಧ್ಯವಾಗುತ್ತದೆ ಎಂದು ನಾರ್ಡ್ಪಾಸ್ ಹೇಳುತ್ತಿದೆ.
123456, 11111, 00000, ಸೇರಿದಂತೆ ಸೀರಿಸ್ ನಂಬರ್ ಪಾಸ್ವರ್ಡ್ ಬೇಗ ನೆನಪಿನಲ್ಲಿ ಉಳಿಯುತ್ತದೆ. ಆದರೆ ಈ ಪಾಸ್ವಾರ್ಡ್ ಹ್ಯಾಕ್ ಮಾಡಲು ಹ್ಯಾಕರ್ಸ್ ಬೇಕಾಗಿಲ್ಲ. ಜನಸಾಮಾನ್ಯರು ಹ್ಯಾಕ್ ಮಾಡಬಲ್ಲರು. ಕಾರಣ 123456 ಪಾಸ್ವರ್ಡ್ ಫ್ರೀಕ್ವೆನ್ಸಿ 3,018,059. ಈ ರೀತಿಯ ಸುಲಭ ಪಾಸ್ವರ್ಡ್ ಫ್ರಿಕ್ವೆನ್ಸಿ ಎಲ್ಲೆಡೆ ಲಭ್ಯವಿದೆ.ಹೀಗಾಗಿ ಇವು ಅತ್ಯಂತ ದುರ್ಬಲ ಪಾಸ್ವರ್ಡ್ ಎಂದು ಗುರುತಿಸಲಾಗಿದೆ. ಇನ್ನು abcd, xyz,abc123 ಸೇರಿದಂತೆ ಇಂಗ್ಲೀಷ್ ಅಕ್ಷರ ಮಾಲೆಯ ಪಾಸ್ವರ್ಡ್ ಕೂಡ ಅತೀ ದುರ್ಬಲ ಪಾಸ್ವರ್ಡ್ ಆಗಿದೆ.
ಹೆಸರು , ಹುಟ್ಟಿದ ದಿನಾಂಕ, ಮೊಬೈಲ್ ನಂಬರ್ನ್ನೇ ಪಾಸ್ವರ್ಡ್ ಆಗಿ ನೀಡುವುದು ಉತ್ತಮ ಬೆಳವಣಿಗೆ ಅಲ್ಲ. ಈ ರೀತಿಯ ಪಾಸ್ವರ್ಡ್ಗಳನ್ನು ಸುಲಭವಾಗಿ ಹ್ಯಾಕ್ ಮಾಡಲು ಸಾಧ್ಯವಿದೆ. ನಿಮ್ಮ ಸೋಶಿಯಲ್ ಮೀಡಿಯಾ ಖಾತೆ ಅಥವಾ ಇನ್ಯಾವುದೇ ಡಿಜಿಟಲ್ ಮೂಲಕ ವೈಯುಕ್ತಿಕ ಮಾಹಿತಿ ಪಡೆದು ಸುಲಭವಾಗಿ ಹ್ಯಾಕ್ ಮಾಡಲಾಗುತ್ತದೆ. ಹೀಗಾಗಿ ಇಂತಹ ಪಾಸ್ವರ್ಡ್ ನೀವು ಬಳಸಿದ್ದರೆ ಬದಲಾಯಿಸಿಕೊಳ್ಳಿ.
password, password1, iloveyou, tiger, Moneky, 1g2w3e4r5t ಈ ರೀತಿಯ ಕೆಲ ಪಾಸ್ವರ್ಡ್ ಕೂಡ ಅಪಾಯಕಾರಿಯಾಗಿದೆ. ಇದರ ಫ್ರೀಕೆನ್ಸ್ ಸುಲಭವಾಗಿ ಲಭ್ಯವಿದೆ. ಹೀಗಾಗಿ ಇವುಗಳನ್ನು ಯಾರು ಬೇಕಾದರೂ ಹ್ಯಾಕ್ ಮಾಡಬಹುದು. ಈ ರೀತಿಯ ಪಾಸ್ವರ್ಡ್ ನೀಡಿದ್ದರೆ ಬದಲಾಯಿಸಿ, ಅಥವಾ ದುರ್ಬಲ ಪಾಸ್ವರ್ಡ್ ಆಗಿದ್ದರೆ ಬದಲಿಸುವುದು ಉತ್ತಮ.
ನೀವು ಬಳಸುವ ಪಾಸ್ವರ್ಡ್ನಲ್ಲಿ ಸ್ಪೆಷಲ್ ಕ್ಯಾರೆಕ್ಟರ್, ಸಂಖ್ಯೆ, ಅಲ್ಫಾಬೆಟ್ ಸೇರಿದಂತೆ ಕೆಲವ ಕ್ಯಾರೆಕ್ಟರ್ ಇರಲೇಬೇಕೆಂಬ ನಿಯಮವಿದೆ. ಯಾವುದೇ ಕಾರಣಕ್ಕೂ ನಿಮ್ಮ ಹೆಸರು, ಅಥವಾ ಊರಿನ ಹೆಸರು, ಪೋಷಕರ ಹೆಸರು, ಮಕ್ಕಳ ಹೆಸರನ್ನು ಪಾಸ್ವರ್ಡ್ ಆಗಿ ಬಳಸಬೇಡಿ. ಇನ್ನು ಐಡಿ ಯನ್ನೇ ಪಾಸ್ವರ್ಡ್ ಆಗಿ ನೀಡುವ ಪರಿಪಾಠವಿದ್ದರೂ ಬದಲಿಸಿಕೊಳ್ಳಿ.