ತಮ್ಮನನ್ನು ನೋಡುತ್ತಿದ್ದಂತೆ ಅಕ್ಕನ ತುಂಟಾಟ ಶುರು; ಧ್ರುವ ಸರ್ಜಾ ಮಕ್ಕಳ ವಿಡಿಯೋ ವೈರಲ್!
ಆಕ್ಷನ್ ಪ್ರಿನ್ಸ್ ಮುದ್ದಾದ ಮಕ್ಕಳ ವಿಡಿಯೋ ವೈರಲ್. ಅಕ್ಕನ ತುಂಟಾಟ ನೋಡಿ ಆಕೆನೇ ಮಗು ಮತ್ತೊಂದು ಮಗು ಜೊತೆ ಆಟ ಎಂದ ನೆಟ್ಟಿಗರು..

ಕನ್ನಡ ಚಿತ್ರರಂಗದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕೆಲವು ದಿನಗಳ ಹಿಂದೆ ತಮ್ಮ ನಿವಾಸದಲ್ಲಿ ಮಗನ ತೊಟ್ಟಿಲು ಶಾಸ್ತ್ರವನ್ನು ಸರಳವಾಗಿ ಮನೆ ಮಟ್ಟಕ್ಕೆ ಮಾಡಿಕೊಂಡಿದ್ದಾರೆ.

ಈ ವೇಳೆ ಧ್ರುವ ಮಗಳ ಮತ್ತು ಮಗ ಒಟ್ಟಿಗೆ ಇರುವ ವಿಡಿಯೋವನ್ನು ಯಾರೋ ಸರೆ ಹಿಡಿದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ.
ಹಸಿರು ಹಳದಿ ಬಣ್ಣದ ಲಂಗಾ ಬ್ಲೌಸ್ ಧರಿಸಿದ್ದಾಳೆ ಧ್ರುವ ಮಗಳು. ವೈಟ್ ಬಣ್ಣ ಪ್ರಿಂಟ್ ಇರುವ ಸಿಂಪಲ್ ಬಟ್ಟೆಯಲ್ಲಿದ್ದಾನೆ ಮಗ.
ಕೊಂಚ ಬೇಗ ಎರಡನೇ ಮಗುವಿಗೆ ಪ್ರೇರಣಾ ಪ್ರೆಗ್ನೆಂಟ್ ಆದ ಕಾರಣ ಮಗಳಿಗೆ ಧ್ರುವ ಇನ್ನೂ ನಾಮಕರಣ ಮಾಡಿಲ್ಲವಂತೆ. ಈ ಹಿಂದೆ ಧ್ರುವ ಹೇಳಿದ್ದರು.
ಮೇಘನಾ ರಾಜ್ ಧ್ರುವ ಮಗಳನ್ನು ಕಣ್ಮಣಿ ಎಂದು ಕರೆಯುತ್ತಾರೆ. ಮಕ್ಕಳ ವಿಡಿಯೋ ನೋಡಿ ಫ್ಯಾಮಿಲಿ ಫುಲ್ ಕಂಪ್ಲೀಟ್ ಎನ್ನುತ್ತಾರೆ ಫ್ಯಾನ್ಸ್.
ಧ್ರುವ ಬಿಡುವು ಇದ್ದಾಗ ಅಣ್ಣದ ಸಮಾಧಿ ಇರುವ ಫಾರ್ಮ್ ಹೌಸ್ನಲ್ಲಿ ಸಮಯ ಕಳೆಯುತ್ತಾರೆ. ಪತ್ನಿ ಎರಡನೇ ಸೀಮಂತ ಕೂಡ ಅಲ್ಲೇ ಮಾಡಿದ್ದರು.