1 ಲಕ್ಷವಾದ ಬಳಿಕ ಭಾರತದದಲ್ಲಿ ಚಿನ್ನದ ಬೆಲೆ ಕುಸಿತ ಕಾಣುತ್ತಿರೋದ್ಯಾಕೆ? ಇಂದಿನ ದರ ಎಷ್ಟು?
Gold Price And International Market: ಅಮೆರಿಕ-ಚೀನಾ ವ್ಯಾಪಾರ ಬಿಕ್ಕಟ್ಟಿನ ನಡುವೆ ಚಿನ್ನದ ಬೆಲೆಯಲ್ಲಿ ಏರಿಳಿತ ಕಂಡುಬಂದಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಡಾಲರ್ ಮೌಲ್ಯ ಕುಸಿತ ಮತ್ತು ಚಿನ್ನದ ಬೆಲೆ ಏರಿಕೆಯಾಗಿದ್ದು, ಇದೀಗ ಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ.

Gold Price
ಭಾರತದಲ್ಲಿ ಚಿನ್ನ ಸಾರ್ವಕಾಲಿಕ ದಾಖಲೆಯನ್ನು ಬರೆದಿದೆ. ಆದ್ರೆ ಸಾರ್ವಕಾಲಿಕ ದಾಖಲೆಯ ಬಳಿಕ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬರುತ್ತಿದೆ. ಭಾರತದಲ್ಲಿನ ಚಿನ್ನದ ಬೆಲೆ ಇಳಿಕೆಯಾಗುತ್ತಿರೋದು ಯಾಕೆ ಗೊತ್ತಾ?

ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರದ ಬಿಕ್ಕಟ್ಟು ಉಂಟಾಗಿದ್ದರಿಂದ ಜನರು ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲ್ಪಟ್ಟಿರುವ ಚಿನ್ನದತ್ತ ಮುಖ ಮಾಡಿದ್ದರು. ಇದೀಗ ದುರ್ಬಲ ಜಾಗತಿಕ ಸೂಚ್ಯಂಕಗಳಿಂದಾಗಿ ಭಾರತದಲ್ಲಿ ಚಿನ್ನದ ಬೆಲೆ ಕುಸಿತಕ್ಕೆ ಪ್ರಮುಖ ಕಾರಣವೆಂದು ವಿಶ್ಲೇಷಕರು ಹೇಳುತ್ತಿದ್ದಾರೆ.
ಚಿನ್ನದ ಬೆಲೆ ಏರಿಕೆಯಾಗಿದ್ದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಮೌಲ್ಯ ಕುಸಿತವಾಗಿತ್ತು. ಡೊನಾಲ್ಡ್ ಟ್ರಂಪ್ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಅತ್ಯಧಿಕ ಟ್ಯಾರಿಫ್ ಘೋಷಣೆ ಮಾಡಿದ್ದು, ಷೇರು ಮಾರುಕಟ್ಟೆಯಲ್ಲಿ ಸಂಚಲನವನ್ನು ಸೃಷ್ಟಿಸಿತ್ತು. ಏಪ್ರಿಲ್ ಮೊದಲ ವಾರಕ್ಕೆ ಹೋಲಿಸಿದ್ರೆ ಸದ್ಯದ ಹಣಕಾಸಿನ ಮಾರುಕಟ್ಟೆ ಉತ್ತಮವಾಗಿದೆ ಎಂದು ತಜ್ಞರು ಹೇಳುತ್ತಾರೆ.
ಚೀನಾ ಅಮೆರಿಕದಿಂದ ಆಮದಾಗುವ ವಸ್ತುಗಳ ಮೇಲೆ ಶೇ.84 ತೆರಿಗೆ ಹೇರಿತ್ತು. ಆದರೆ ಟ್ರಂಪ್ ತಾವು ಚೀನಾ ಮೇಲೆ ಹೇರಿದ್ದ ತೆರಿಗೆಯನ್ನು ಶೇ.125ರಿಂದ 146ಕ್ಕೆ ಹೆಚ್ಚಿಸಿದ ಬೆನ್ನಲ್ಲೇ ಚೀನಾ ತನ್ನ ತೆರಿಗೆಯನ್ನು ಶೇ.125ಕ್ಕೆ ಏರಿಸಿತ್ತು. ಇದಾದ ಬಳಿಕ ಉಭಯ ದೇಶಗಳ ನಡುವಿನ ವ್ಯಾಪಾರ ಸಂಬಂಧ ಹದೆಗಟ್ಟಿತ್ತು. ಇದೀಗ ಎರಡೂ ದೇಶಗಳ ನಡುವೆ ಮಾತುಕತೆ ನಡೆಯುತ್ತಿದೆ.
ಭಾರತದಲ್ಲಿ ಎಷ್ಟು ದರ ಇಳಿಕೆ?
ಗೂಡ್ಸ್ ರಿಟರ್ನ್ ವರದಿ ಪ್ರಕಾರ, ಕಳೆದ 9 ದಿನಗಳಲ್ಲಿ 10 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ 4,000 ರೂಪಾಯಿವರಗೆ ಇಳಿಕೆಯಾಗಿದೆ. ಆದ್ರೆ ಇಂದು 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 440 ರೂಪಾಯಿವರೆಗೆ ಏರಿಕೆಯಾಗಿದೆ. ಇಂದಿನ ಚಿನ್ನದ ಬೆಲೆ ಎಷ್ಟಿದೆ ಎಂದು ನೋಡೋಣ ಬನ್ನಿ
ಭಾರತದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 8,980 ರೂಪಾಯಿ (40 ರೂ.ಏರಿಕೆ)
8 ಗ್ರಾಂ: 71,840 ರೂಪಾಯಿ (320 ರೂ. ಏರಿಕೆ)
10 ಗ್ರಾಂ: 89,800 ರೂಪಾಯಿ (400 ರೂ. ಏರಿಕೆ)
100 ಗ್ರಾಂ: 8,,98,000 ರೂಪಾಯಿ (4,000 ರೂ. ಏರಿಕೆ)
ಭಾರತದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 9,797 ರೂಪಾಯಿ (44 ರೂ. ಏರಿಕೆ)
8 ಗ್ರಾಂ: 78,376 ರೂಪಾಯಿ (352 ರೂ. ಏರಿಕೆ)
10 ಗ್ರಾಂ: 97,970 ರೂಪಾಯಿ (440 ರೂ. ಏರಿಕೆ)
100 ಗ್ರಾಂ: 9,79,700 ರೂಪಾಯಿ (4,400 ರೂ.ಏರಿಕೆ)