Asianet Suvarna News Asianet Suvarna News

ಸಂತೋಷ್‌ ಟ್ರೋಫಿ: ರಾಜ್ಯ ತಂಡಕ್ಕೆ ‘ಬಿ’ ಗುಂಪಲ್ಲಿ ಸ್ಥಾನ

ಮಹಾರಾಷ್ಟ್ರ, ಡೆಲ್ಲಿ, ಮಣಿಪುರ, ಮಿಜೋರಾಂ, ರೈಲ್ವೇಸ್‌ ‘ಬಿ’ ಗುಂಪಿನಲ್ಲಿವೆ. ಕಳೆದ ಬಾರಿ ರನ್ನರ್‌-ಅಪ್‌ ಮೇಘಾಲಯದ ಜತೆ ಅರುಣಾಚಲ ಪ್ರದೇಶ, ಗೋವಾ, ಅಸ್ಸಾಂ, ಸರ್ವಿಸಸ್‌, ಕೇರಳ ‘ಎ’ ಗುಂಪಿನಲ್ಲಿವೆ.

Santosh Trophy Karnataka Football Team in B Group kvn
Author
First Published Dec 2, 2023, 10:08 AM IST

ನವದೆಹಲಿ(ಡಿ.02): 77ನೇ ಆವೃತ್ತಿ ಸಂತೋಷ್‌ ಟ್ರೋಫಿ ಫುಟ್ಬಾಲ್‌ ಟೂರ್ನಿಯ ಫೈನಲ್‌ ಹಂತದ ಡ್ರಾ ಬಿಡುಗಡೆಗೊಂಡಿದ್ದು, ಹಾಲಿ ಚಾಂಪಿಯನ್‌ ಕರ್ನಾಟಕ ‘ಬಿ’ ಗುಂಪಿನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ. 12 ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದು, ತಲಾ 6 ತಂಡಗಳ 2 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. 

ಮಹಾರಾಷ್ಟ್ರ, ಡೆಲ್ಲಿ, ಮಣಿಪುರ, ಮಿಜೋರಾಂ, ರೈಲ್ವೇಸ್‌ ‘ಬಿ’ ಗುಂಪಿನಲ್ಲಿವೆ. ಕಳೆದ ಬಾರಿ ರನ್ನರ್‌-ಅಪ್‌ ಮೇಘಾಲಯದ ಜತೆ ಅರುಣಾಚಲ ಪ್ರದೇಶ, ಗೋವಾ, ಅಸ್ಸಾಂ, ಸರ್ವಿಸಸ್‌, ಕೇರಳ ‘ಎ’ ಗುಂಪಿನಲ್ಲಿವೆ. ಪ್ರತಿ ಗುಂಪಿನಿಂದ ಅಗ್ರ-4 ತಂಡಗಳು ಕ್ವಾರ್ಟರ್‌ಗೇರಲಿವೆ. ಟೂರ್ನಿಯ ಪಂದ್ಯಗಳು ಫೆ.21ರಿಂದ ಮಾ.9ರ ವರೆಗೂ ಅರುಣಾಚಲ ಪ್ರದೇಶದಲ್ಲಿ ನಡೆಯಲಿವೆ.

ಐ-ಲೀಗ್‌ ಆಟಗಾರರಿಗೆ ಫಿಕ್ಸಿಂಗ್‌ ಆಫರ್‌: ತನಿಖೆ!

ನವದೆಹಲಿ: ಐ-ಲೀಗ್‌ ಫುಟ್ಬಾಲ್‌ ಟೂರ್ನಿಯಲ್ಲಿ ಹಲವು ಆಟಗಾರರಿಗೆ ಮ್ಯಾಚ್‌ ಫಿಕ್ಸಿಂಗ್‌ ನಡೆಸುವಂತೆ ಬುಕಿಗಳಿಂದ ಆಫರ್‌ ಬಂದಿದ್ದಾಗಿ ಅಖಿಲ ಭಾರತೀಯ ಫುಟ್ಬಾಲ್‌ ಫೆಡರೇಶನ್‌(ಎಐಎಫ್‌ಎಫ್‌) ಆಘಾತಕಾರಿ ಮಾಹಿತಿ ನೀಡಿದೆ. ಅಲ್ಲದೆ ಈ ಬಗ್ಗೆ ಸೂಕ್ತ ತನಿಖೆ ನಡೆಸುವುದಾಗಿ ತಿಳಿಸಿದೆ. 

Breaking: ವಿಶ್ವಕಪ್‌ ಸೋತ ಭಾರತಕ್ಕೆ ಆಸೀಸ್‌ ವಿರುದ್ಧ ಟಿ20 ಸರಣಿ ಜಯದ ಸಮಾಧಾನ!

ಗುರುವಾರ ಮಾಹಿತಿ ನೀಡಿರುವ ಎಐಎಫ್‌ಎಫ್‌ ಅಧ್ಯಕ್ಷ ಕಲ್ಯಾಣ್‌ ಚೌಬೆ, ಆಟಗಾರರನ್ನು ಸಂಪರ್ಕಿಸಿ ಫಿಕ್ಸಿಂಗ್‌ ಆಫರ್‌ ನೀಡಿದ ಬಗ್ಗೆ ಮಾಹಿತಿ ಲಭಿಸಿದೆ ಎಂದರು. ಆದರೆ ಮಾಹಿತಿ ಹೇಗೆ ಸಿಕ್ಕಿತು, ಆಟಗಾರರು ಯಾರು ಎಂಬುದನ್ನು ಅವರು ಬಹಿರಂಗಪಡಿಸಿಲ್ಲ. 13 ತಂಡಗಳಿರುವ 2023ರ ಐ-ಲೀಗ್‌ ಅಕ್ಟೋಬರ್‌ನಲ್ಲಿ ಆರಂಭಗೊಂಡಿದ್ದು, ಈಗಾಗಲೇ 40+ ಪಂದ್ಯಗಳು ನಡೆದಿವೆ.

ಕಿರಿಯರ ಹಾಕಿ ವಿಶ್ವಕಪ್‌: ಜರ್ಮನಿಗೆ ಭಾರತ ಶರಣು

ಸ್ಯಾಂಟಿಯಾಗೊ(ಚಿಲಿ): ಮಹಿಳೆಯರ ಹಾಕಿ ವಿಶ್ವಕಪ್‌ನಲ್ಲಿ ಭಾರತ ಮಾಜಿ ಚಾಂಪಿಯನ್‌ ಜರ್ಮನಿ ವಿರುದ್ಧ 3-4 ಗೋಲುಗಳಿಂದ ಸೋಲನುಭವಿಸಿದೆ. ಗುರುವಾರ ರಾತ್ರಿ ‘ಸಿ’ ಗುಂಪಿನ 2ನೇ ಪಂದ್ಯದಲ್ಲಿ ಭಾರತ ಆರಂಭದಲ್ಲಿ ಮೇಲುಗೈ ಸಾಧಿಸಿದ್ದರೂ ಬಳಿಕ ಜರ್ಮನಿ ಪುಟಿದೆದ್ದು ಪಂದ್ಯ ತನ್ನದಾಗಿಸಿಕೊಂಡಿತು. ಸೋಲಿನ ಹೊರತಾಗಿಯೂ ಭಾರತ 3 ಅಂಕದೊಂದಿಗೆ ಪಟ್ಟಿಯಲ್ಲಿ 2ನೇ ಸ್ಥಾನ ಕಾಯ್ದುಕೊಂಡಿದ್ದು, ಬೆಲ್ಜಿಯಂ(06) ಅಂಕ ಅಗ್ರಸ್ಥಾನದಲ್ಲಿದೆ. ಕೊನೆ ಪಂದ್ಯದಲ್ಲಿ ಶನಿವಾರ ಬೆಲ್ಜಿಯಂ ವಿರುದ್ಧ ಸೆಣಸಾಡಲಿದ್ದು, ಕ್ವಾರ್ಟರ್‌ಗೇರಲು ಭಾರತಕ್ಕೆ ಗೆಲುವು ಅನಿವಾರ್ಯ.

Vijay Hazare Trophy ದೇವದತ್ ಪಡಿಕ್ಕಲ್ ಮತ್ತೊಂದು ಶತಕ, ರಾಜ್ಯಕ್ಕೆ ಸತತ 5ನೇ ಗೆಲುವು

ಬ್ಯಾಡ್ಮಿಂಟನ್‌: ಸೆಮೀಸ್‌ಗೆ ಪ್ರಿಯಾನ್ಶು, ಅಶ್ವಿನಿ-ತನಿಶಾ

ಲಖನೌ: ಇಲ್ಲಿ ನಡೆಯುತ್ತಿರುವ ಸಯ್ಯದ್‌ ಮೋದಿ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ಅಶ್ವಿನಿ ಪೊನ್ನಪ್ಪ-ತನಿಶಾ ಕ್ರಾಸ್ಟೊ ಹಾಗೂ ಪ್ರಿಯಾನ್ಶು ರಾಜಾವತ್‌ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಈ ಋತುವಿನಲ್ಲಿ ಈಗಾಗಲೆ ಆರ್ಲಿಯಾನ್ಸ್‌ ಮಾಸ್ಟರ್ಸ್‌ ಪ್ರಶಸ್ತಿ ಗೆದ್ದಿರುವ 21ರ ಪ್ರಿಯಾನ್ಶು, ಶುಕ್ರವಾರ ಪುರುಷರ ಸಿಂಗಲ್ಸ್‌ ಕ್ವಾರ್ಟರ್‌ನಲ್ಲಿ ಇಂಡೋನೇಷ್ಯಾದ ಆಲ್ವಿ ಫರ್ಹಾನ್‌ ವಿರುದ್ಧ 21-15, 21-16 ಅಂತರದಲ್ಲಿ ಗೆಲುವು ಸಾಧಿಸಿದರು. ಮಹಿಳಾ ಡಬಲ್ಸ್ ಕ್ವಾರ್ಟರ್‌ನಲ್ಲಿ ಅಶ್ವಿನಿ-ತನಿಶಾ ಜೋಡಿಗೆ ಕಾಮನ್‌ವೆಲ್ತ್‌ ಗೇಮ್ಸ್‌ ಪದಕ ವಿಜೇತ, ಭಾರತದ ವಿಶ್ವ ನಂ.19 ಜೋಡಿ ಗಾಯತ್ರಿ-ತ್ರೀಸಾ ವಿರುದ್ಧ 21-19 21-8 ಅಂತರದ ಸುಲಭ ಜಯ ಲಭಿಸಿತು.

ಕಲಬುರಗಿ ಓಪನ್‌ ಟೆನಿಸ್‌: ರಾಮ್‌ಕುಮಾರ್‌ ಸೆಮಿಗೆ

ಕಲಬುರಗಿ: ಐಟಿಎಫ್‌ ಕಲಬುರಗಿ ಓಪನ್ ಪುರುಷರ ಟೆನಿಸ್‌ ಟೂರ್ನಿಯಲ್ಲಿ ಭಾರತ ತಾರಾ ಆಟಗಾರ ರಾಮ್‌ಕುಮಾರ್‌ ರಾಮನಾಥನ್‌ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಭಾರತ ಇತರೆಲ್ಲಾ ಆಟಗಾರರು ಸೋತು ಅಭಿಯಾನ ಕೊನೆಗೊಳಿಸಿದ್ದು, ರಾಮ್‌ಕುಮಾರ್‌ ಪ್ರಶಸ್ತಿ ಕಣದಲ್ಲಿರುವ ಏಕೈಕ ಭಾರತೀಯ ಎನಿಸಿಕೊಂಡಿದ್ದಾರೆ.

Vijay Hazare Trophy ದೇವದತ್ ಪಡಿಕ್ಕಲ್ ಮತ್ತೊಂದು ಶತಕ, ರಾಜ್ಯಕ್ಕೆ ಸತತ 5ನೇ ಗೆಲುವು

ಶುಕ್ರವಾರ ಸಿಂಗಲ್ಸ್‌ ಕ್ವಾರ್ಟರ್‌ನಲ್ಲಿ 5ನೇ ಶ್ರೇಯಾಂಕಿತ ರಾಮ್‌, ಭಾರತದ ಸುರೇಶ್‌ ಕುಮಾರ್‌ ವಿರುದ್ಧ 7-5, 6-0 ಅಂತರದಲ್ಲಿ ಗೆಲುವು ಸಾಧಿಸಿದರು. ಸೆಮೀಸ್‌ನಲ್ಲಿ ಅವರಿಗೆ ಜಪಾನ್‌ನ ರ್‍ಯೊಟಾರೊ ತಗುಚಿ ಸವಾಲು ಎದುರಾಗಲಿದೆ. ತಗುಚಿ ಕ್ವಾರ್ಟರ್‌ನಲ್ಲಿ ಭಾರತದ ಆರ್ಯನ್‌ ಶಾರನ್ನು 6-3 6-2 ಸೆಟ್‌ಗಳಲ್ಲಿ ಮಣಿಸಿದರು. ಇದೇ ವೇಳೆ ಡಬಲ್ಸ್‌ನಲ್ಲಿ ಕರ್ನಾಟಕದ ಆದಿಲ್‌ ಕಲ್ಯಾನ್‌ಪುರ-ಸಿದ್ಧಾರ್ಥ್‌ ರಾವತ್‌, ರಿಷಭ್‌ ಅಗರ್‌ವಾಲ್‌-ಭರತ್‌ ಜೋಡಿ ಸೆಮೀಸ್‌ನಲ್ಲಿ ಸೋತು ಹೊರಬಿದ್ದವು.
 

Follow Us:
Download App:
  • android
  • ios