Asianet Suvarna News Asianet Suvarna News

Fact Check: ರಾಹುಲ್ ಕ್ಷೇತ್ರ ವಯನಾಡಿನ ಅವ್ಯವಸ್ಥೆಯಿದು.!

ರಸ್ತೆಯುದ್ದಕ್ಕೂ ದೊಡ್ಡ ದೊಡ್ಡ ಹೊಂಡ-ಗುಂಡಿಗಳೇ ತುಂಬಿರುವ ಫೋಟೋವೊಂದನ್ನು ಪೋಸ್ಟ್‌ ಮಾಡಿ ‘ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರ ಕ್ಷೇತ್ರ ವಯನಾಡಿನ ಅವ್ಯವಸ್ಥೆ’ ಎನ್ನಲಾಗುತ್ತಿರುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ?

Fact Check Of Viral Image of potholes on Wayanad Road
Author
Bengaluru, First Published Jul 14, 2020, 9:52 AM IST

ರಸ್ತೆಯುದ್ದಕ್ಕೂ ದೊಡ್ಡ ದೊಡ್ಡ ಹೊಂಡ-ಗುಂಡಿಗಳೇ ತುಂಬಿರುವ ಫೋಟೋವೊಂದನ್ನು ಪೋಸ್ಟ್‌ ಮಾಡಿ ‘ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರ ಕ್ಷೇತ್ರ ವಯನಾಡಿನ ಅವ್ಯವಸ್ಥೆ’ ಎನ್ನಲಾಗುತ್ತಿರುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ಕೆಲವರು ಈ ಫೋಟೋದೊಂದಿಗೆ, ‘ರಾಹುಲ್‌ ಗಾಂಧಿ ಅವರ ಸಂಸತ್‌ ಕ್ಷೇತ್ರ ವಯನಾಡ್‌ ದೇಶದ ಮೊದಲ ಸ್ಮಾರ್ಟ್‌ ಸಿಟಿ ಆಗಿದೆ. ಇಲ್ಲಿನ ಎಲ್ಲಾ ಮನೆಗಳ ಮುಂದೆಯೂ ಈಜುಕೊಳ ನಿರ್ಮಿಸಲಾಗಿದೆ’ ಎಂದು ಮಾರ್ಮಿಕವಾಗಿ ಬರೆದುಕೊಂಡಿದ್ದಾರೆ. ಮತ್ತೆ ಕೆಲವರು ‘ಒಬ್ಬ ಸಂಸದನಾಗಿ ರಾಹುಲ್‌ ಗಾಂಧಿ ಕಾರ‍್ಯವೈಖರಿ ಇದು’ ಎಂದು ಬರೆದುಕೊಂಡಿದ್ದಾರೆ.

 

ಆದರೆ ನಿಜಕ್ಕೂ ವೈರಲ್‌ ಫೋಟೋ ಕೇರಳದ ವಯನಾಡಿನದ್ದೇ ಎಂದು ‌ ಪರಿಶೀಲಿಸಿದಾಗ ಇದು ಸುಳ್ಳು ಸುದ್ದಿ ಎಂಬುದು ಖಚಿತವಾಗಿದೆ. ರಿವರ್ಸ್‌ ಇಮೇಜ್‌ನಲ್ಲಿ ಚಿತ್ರದ ಜಾಡು ಹಿಡಿದು ಹುಡುಕಹೊರಟಾಗ ಸುದ್ದಿಸಂಸ್ಥೆಯೊಂದು 2017ರ ಜುಲೈ 3 ರಂದು ಪ್ರಕಟಿಸಿರುವ ವರದಿ ಪತ್ತೆಯಾಗಿದೆ. ಅದರಲ್ಲಿ ಬಿಹಾರದ ಭಾಗಲ್‌ಪುರ್‌ ಎನ್‌ಎಚ್‌-80 ಹೆದ್ದಾರಿಯೊಂದರ ಚಿತ್ರ ಎಂದು ಬರೆಯಲಾಗಿತ್ತು.

Fact Check:ಕೊರೊನಾ ಸೋಂಕಿತರ ಹೆಣವನ್ನು ಗಂಗಾ ನದಿಯಲ್ಲಿ ತೇಲಿ ಬಿಡಲಾಗುತ್ತಿದೆಯಾ?

ಅಲ್ಲದೆ ಇಲ್ಲಿನ ಸ್ಥಳೀಯ ಸಾಮಾಜಿಕ ಕಾರ‍್ಯಕರ್ತರೊಬ್ಬರು ‘ವೈರಲ್‌ ಫೋಟೋದಲ್ಲಿರುವ ರಸ್ತೆ ಬಿಹಾರದ್ದು. 2017ರಲ್ಲಿ ಈ ರಸ್ತೆ ತೀರಾ ಹದಗೆಟ್ಟಿತ್ತು, ಆದರೆ ಈ ರಸ್ತೆ ಕಾಮಗಾರಿಯನ್ನು 2017ರ ಜೂನ್‌ನಲ್ಲಿ ಪೂರ್ಣಗೊಳಿಸಲಾಗಿದೆ’ ಎಂದಿದ್ದಾರೆ. ಸದ್ಯ ಇದೇ ಫೋಟೋವನ್ನು ಬಳಸಿಕೊಂಡು ಇದು ವಯನಾಡಿನ ರಸ್ತೆಗಳ ದುಸ್ಥಿತಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಸುದ್ದಿ ಹರಡಲಾಗುತ್ತಿದೆ.

- ವೈರಲ್ ಚೆಕ್ 

Follow Us:
Download App:
  • android
  • ios