Asianet Suvarna News Asianet Suvarna News

ಮುಂದಿನ ವರ್ಷ 500 ಸರ್ಕಾರಿ ಶಾಲೆಗಳ ಅಭಿವೃದ್ಧಿ: ಸಚಿವ ಮಧು ಬಂಗಾರಪ್ಪ

ದೇಶದ ಆಸ್ತಿ ಮಕ್ಕಳ ಕಲಿಕೆಯಲ್ಲಿದ್ದು, ಮೊದಲ ಹಂತದಲ್ಲಿ 500 ಶಾಲೆಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಅದಕ್ಕಾಗಿ ರಾಜ್ಯಕ್ಕೆ ಮಾದರಿಯಾಗಿರುವ ಯಡಹಳ್ಳಿಯ ಹೊರಟ್ಟಿ ಪಬ್ಲಿಕ್ ಶಾಲೆಗೆ ಭೇಟಿ ನೀಡಿದ್ದು, ಇಲ್ಲಿಯ ಸೌಲಭ್ಯಗಳನ್ನು ವೀಕ್ಷಣೆ ಮಾಡಲು ಆಗಮಿಸಿದ್ದೇನೆ: ಸಚಿವ ಮಧು ಬಂಗಾರಪ್ಪ 

Development of 500 Government Schools Next Year Says Minister Madhu Bangarappa grg
Author
First Published Dec 13, 2023, 9:30 PM IST

ಬಾಗಲಕೋಟೆ(ಡಿ.13): ರಾಜ್ಯದಲ್ಲಿ ಮುಂದಿನ ವರ್ಷ 500 ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ ಪರಿವರ್ತಿಸಲಾಗುತ್ತಿದೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದರು.

ಮುಧೋಳ ತಾಲೂಕಿನ ಯಡಹಳ್ಳಿಯ ಶಿವಲಿಂಗಪ್ಪ ಬಸಪ್ಪ ಹೊರಟ್ಟಿ ಪಬ್ಲಿಕ್ ಶಾಲೆಗೆ ಮಂಗಳವಾರ ಭೇಟಿ ನೀಡಿದ ವೇಳೆ ಶಾಲಾ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ದೇಶದ ಆಸ್ತಿ ಮಕ್ಕಳ ಕಲಿಕೆಯಲ್ಲಿದ್ದು, ಮೊದಲ ಹಂತದಲ್ಲಿ 500 ಶಾಲೆಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಅದಕ್ಕಾಗಿ ರಾಜ್ಯಕ್ಕೆ ಮಾದರಿಯಾಗಿರುವ ಯಡಹಳ್ಳಿಯ ಹೊರಟ್ಟಿ ಪಬ್ಲಿಕ್ ಶಾಲೆಗೆ ಭೇಟಿ ನೀಡಿದ್ದು, ಇಲ್ಲಿಯ ಸೌಲಭ್ಯಗಳನ್ನು ವೀಕ್ಷಣೆ ಮಾಡಲು ಆಗಮಿಸಿದ್ದೇನೆ ಎಂದರು.

ಬಳ್ಳಾರಿ: ಸಿನಿಮಾ ಟಾಕೀಸ್‌ನಲ್ಲೇ ನಡೀತಿದೆ ವಸತಿ ಶಾಲೆ, ಬಾಲಕಿಯರ ವಸತಿ ಶಾಲೆಯ ದುರಂತ ಕಥೆ

ಗ್ರಾಮ ಪಂಚಾಯತಿಗೆ ಒಂದರಂತೆ:

ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಎಲ್‌ಕೆಜಿಯಿಂದ ಹಿಡಿದು ಪಿಯುಸಿವರೆಗೆ ಸ್ಮಾರ್ಟ್‌ ಕ್ಲಾಸ್‌ನಿಂದ ಹಿಡಿದು ಎಲ್ಲ ರೀತಿಯ ಸೌಲಭ್ಯ ಒದಗಿಸಲಾಗುತ್ತಿದೆ. ಖಾಸಗಿ ಶಾಲೆ ಮೀರಿಸುವ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಸುಸಜ್ಜಿತ ಪ್ರಯೋಗಾಲಯ, ಆಟವಾಡಲು ಮೈದಾನ ಸೇರಿದಂತೆ ಕಲಿಕೆಗೆ ಬೇಕಾಗುವ ಸೌಲಭ್ಯಗಳ ಒದಗಿಸಲಾಗುತ್ತಿದೆ. ಮೊದಲ ಹಂತದಲ್ಲಿ ರಾಜ್ಯದ 500 ಶಾಲೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಮುಂದಿನ ಮೂರು ವರ್ಷಗಳ ನಂತರ 2 ಗ್ರಾಮ ಪಂಚಾಯತಿಗೆ ಒಂದರಂತೆ 3 ಸಾವಿರ ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಪರಿವರ್ತಿನಿಸುವ ಉದ್ದೇಶ ಸರ್ಕಾರ ಹೊಂದಿದೆ ಎಂದರು.

ನನ್ನ ವೈಯಕ್ತಿಕವಾಗಿ ₹5 ಲಕ್ಷ:

ಹಿಂದಿನ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಸೇರಿದಂತೆ ಅನೇಕರು ಸರ್ಕಾರಿ ಶಾಲೆಯಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡಿದ್ದಾರೆ. ದೇಶದ ಆಸ್ತಿ ಮಕ್ಕಳ ಕಲಿಕೆಯಲ್ಲಿ ಇದ್ದು, ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಎಲ್ಲ ಮಕ್ಕಳು ಶಾಲೆಗೆ ಬರಬೇಕು. ಮಕ್ಕಳು ಶಾಲೆಗೆ ಬರುವಂತಹ ವ್ಯವಸ್ಥೆ ಕಲ್ಪಿಸುವ ಕೆಲಸ ಮಾಡಲಾಗುತ್ತಿದೆ. ಪಬ್ಲಿಕ್ ಶಾಲೆ ಪರಿವರ್ತನೆಗೆ ಸಭಾಪತಿ ಹೊರಟ್ಟಿ ಅವರ ಮಾರ್ಗದರ್ಶ ನಮಗೆ ಅಗತ್ಯವಾಗಿದೆ. ಯಡಹಳ್ಳಿ ಮಾದರಿ ಶಾಲೆಗೆ ನನ್ನ ವೈಯಕ್ತಿಕವಾಗಿ ₹5 ಲಕ್ಷ ಗಳನ್ನು ನೀಡುವುದಾಗಿ ತಿಳಿಸಿದರಲ್ಲದೇ ಇನ್ನೀತರ ಸಹಕಾರ ಸಹ ನೀಡಲಾಗುತ್ತಿದೆ ಎಂದರು.

ಹೊರಟ್ಟಿ ಶಾಲೆಗೆ ಮೆಚ್ಚುಗೆ:

ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ ಮಾತನಾಡಿ, ಈ ಭಾಗದ ಮಕ್ಕಳು ನಿಜವಾಗಿಯೂ ಭಾಗ್ಯವಂತರು. ಸಭಾಪತಿ ಬಸವರಾಜ ಹೊರಟ್ಟಿ ಅವರು ತಾವು ಹುಟ್ಟಿದ ಗ್ರಾಮದಲ್ಲಿ ರಾಜ್ಯಕ್ಕೆ ಮಾದರಿಯಾಗುವಂತಹ ಶಿಕ್ಷಣ ಸಂಸ್ಥೆ ಕಟ್ಟಿರುವುದನ್ನು ಕಂಡು ಧನ್ಯವಾದ ತಿಳಿಸಿದರು. ಮಕ್ಕಳಲ್ಲಿ ಶಕ್ತಿ ಇರುತ್ತದೆ. ಶಿಕ್ಷಣ ಕೊಡುವ ಮೂಲಕ ಆ ಶಕ್ತಿಯಿಂದ ಕೆಲಸ ಮಾಡಿಸಿ ಅವರನ್ನು ಹೊರತರುವ ಕೆಲಸವಾಗಬೇಕು. 24 ಗಂಟೆಗಳ ಸಮಯದಲ್ಲಿ ಯಾವುದೇ ರೀತಿಯ ವ್ಯತ್ಯಾಸವಾಗುವುದಿಲ್ಲ. ಸಮಯದ ಸದುಪಯೋಗ ಮುಖ್ಯವಾಗಿದೆ ಎಂದರು.

ಇನ್ನೋರ್ವ ವಿಧಾನ ಪರಿಷತ್ ಸದಸ್ಯ ಯು.ಬಿ.ವೆಂಕಟೇಶ ಮಾತನಾಡಿ, ಯಡಹಳ್ಳಿಯಲ್ಲಿ ಸರ್ಕಾರಿ ಶಾಲೆ ಈ ರೀತಿ ಇರುವುದು ಹೆಮ್ಮೆಯ ವಿಷಯ. ಮಕ್ಕಳ ಓದಿನ ಜೊತೆಗೆ ಸಂಸ್ಕಾರವೂ ಮುಖ್ಯವಾಗಿದೆ. ಮನೆ, ಸಮಾಜ, ದೇಶದ ಬಗ್ಗೆ ವಿಚಾರ ಮಾಡುವಂತಾಗಬೇಕು. ನಾವು ಏನು ಮಾಡಬೇಕು ಎಂಬುವುದು ನಮ್ಮ ಮನಸ್ಸಿಗೆ ಬರಬೇಕು. ಸಭಾಪತಿ ಹೊರಟ್ಟಿ ಅವರು ಮಾದರಿ ಶಾಲೆಯನ್ನಾಗಿ ಮಾಡಿದ್ದಾರೆ. ವಿದ್ಯಾರ್ಥಿಗಳು ಚೆನ್ನಾಗಿ ಕಲಿತು ಅವರ ಹೆಸರು ತರಬೇಕು ಎಂದರು.

ಸಿಬಿಎಸ್​ಇ 10ನೇ ತರಗತಿ, 12ನೇ ತರಗತಿ ಪರೀಕ್ಷಾ ದಿನಾಂಕ ಪ್ರಕಟ

ಈ ಸಂದರ್ಭದಲ್ಲಿ ಜಿ.ಪಂ ಸಿಇಒ ಶಶಿಧರ ಕುರೇರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಕೆ.ನಂದನೂರ, ಮುಧೋಳ ತಹಸೀಲ್ದಾರ್‌ ವಿನೋದ ಹತ್ನಳ್ಳಿ, ಪಬ್ಲಿಕ್ ಶಾಲೆಯ ಪ್ರಾಂಶುಪಾಲ್‌ ವಿ.ಪಿ.ಪೆಟ್ಲೂರ, ಉಪಪ್ರಾಚಾರ್ಯ ರಾಜಶೇಖರ ಹಿರೇಮಠ ಸೇರಿದಂತೆ ಇತರರು ಇದ್ದರು.

ಗ್ರಾಮೀಣ ಭಾಗದ ಮಕ್ಕಳಿಗೆ ನರ್ಸರಿಯಿಂದ ಪದವಿವರೆಗೆ ಶಿಕ್ಷಣ ನೀಡುವ ಉದ್ದೇಶದಿಂದ ಮಾದರಿಯಾಗುವ ನಿಟ್ಟಿನಲ್ಲಿ ಶಾಲೆಯನ್ನು ಅಭಿವೃದ್ಧಿಪಡಿಸಲಾಗಿದೆ. ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಸತಿ ನಿಲಯ, ಹೈಟೆಕ್ ಶೌಚಾಲಯ ನಿರ್ಮಿಸಲಾಗಿದೆ. ಇಲ್ಲಿಯ ಶಿಕ್ಷಕರು ಸಹ ಶಾಲಾ ಅವಧಿ ಬಿಟ್ಟು ಹೊರತುಪಡಿಸಿ ಉಳಿದ ಅವಧಿಯಲ್ಲಿಯೂ ಪಾಠ ಮಾಡುತ್ತಿದ್ದಾರೆ. ಇದರಿಂದ ಉತ್ತಮ ಪಬ್ಲಿಕ್‌ ಶಾಲೆಯಾಗಿ ಹೊರಹೊಮ್ಮಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ. 

Follow Us:
Download App:
  • android
  • ios