userpic
user icon
0 Min read

ಬೆಂಗಳೂರು: ದೂರು ನೀಡಲು ಬಂದವಳನ್ನು ಮಂಚಕ್ಕೆ ಕರೆದ ಕಾಮುಕ ಇನ್ಸ್‌ಪೆಕ್ಟರ್!

Inspector called the bed of the woman who came to complain at bengaluru rav
Kodigehalli news

Synopsis

ಉದ್ಯಮಿ ವಿರುದ್ಧ ವಂಚನೆ ದೂರು ನೀಡಲು ಠಾಣೆಗೆ ಬಂದಿದ್ದ ಮಹಿಳೆಯೊಬ್ಬರಿಗೆ ಒಣ ಹಣ್ಣಿನ (ಡ್ರೈ ಫä್ರಟ್ಸ್‌) ಬಾಕ್ಸ್‌ ಹಾಗೂ ಲಾಡ್ಜ್‌ನ ಕೋಣೆ ಕೀ ಕೊಟ್ಟು ಖಾಸಗಿ ಕ್ಷಣ ಕಳೆಯಲು ಆಹ್ವಾನಿಸಿದ ಆರೋಪದ ಮೇರೆಗೆ ಕೊಡಿಗೇಹಳ್ಳಿ ಠಾಣೆ ಇನ್‌ಸ್ಪೆಕ್ಟರ್‌ ವಿರುದ್ಧ ಇಲಾಖಾ ಮಟ್ಟದ ವಿಚಾರಣೆಗೆ ಡಿಸಿಪಿ ಆದೇಶಿಸಿದ್ದಾರೆ.

ಬೆಂಗಳೂರು (ಮಾ.21) : ಉದ್ಯಮಿ ವಿರುದ್ಧ ವಂಚನೆ ದೂರು ನೀಡಲು ಠಾಣೆಗೆ ಬಂದಿದ್ದ ಮಹಿಳೆಯೊಬ್ಬರಿಗೆ ಒಣ ಹಣ್ಣಿನ (ಡ್ರೈ ಫä್ರಟ್ಸ್‌) ಬಾಕ್ಸ್‌ ಹಾಗೂ ಲಾಡ್ಜ್‌ನ ಕೋಣೆ ಕೀ ಕೊಟ್ಟು ಖಾಸಗಿ ಕ್ಷಣ ಕಳೆಯಲು ಆಹ್ವಾನಿಸಿದ ಆರೋಪದ ಮೇರೆಗೆ ಕೊಡಿಗೇಹಳ್ಳಿ ಠಾಣೆ ಇನ್‌ಸ್ಪೆಕ್ಟರ್‌ ವಿರುದ್ಧ ಇಲಾಖಾ ಮಟ್ಟದ ವಿಚಾರಣೆಗೆ ಡಿಸಿಪಿ ಆದೇಶಿಸಿದ್ದಾರೆ.

ಕೊಡಿಗೇಹಳ್ಳಿ ಠಾಣೆ ಇನ್‌ಸ್ಪೆಕ್ಟರ್‌(Kodigehalli police station) ಎನ್‌.ರಾಜಣ್ಣ(N Rajanna) ವಿರುದ್ಧ ಅನುಚಿತ ವರ್ತನೆ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಇಲಾಖಾ ಮಟ್ಟದ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಯಲಹಂಕ ಉಪ ವಿಭಾಗದ ಎಸಿಪಿ ಆರ್‌.ಮಂಜುನಾಥ್‌ ಅವರಿಗೆ ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೇಪ್ರಸಾದ್‌ ಸೂಚಿಸಿದ್ದಾರೆ.

ಮಹಿಳೆಯೊಂದಿಗೆ ಸರಸಕ್ಕೆ ಹೋದ ಬೆಂಗಳೂರು ಉದ್ಯಮಿಗೆ ಮುಂಜಿ ಮಾಡುವುದಾಗಿ ಧಮ್ಕಿ: ಕಾಮದಾಸೆಗೆ ಹೋಗಿ ಹಣ ಕಳ್ಕೊಂಡ

ಮಹಿಳಾ ಪಿಎಸ್‌ಐ ರಾಜಿ ಸಂಧಾನ:

ಇತ್ತೀಚೆಗೆ ತಮ್ಮ ಪರಿಚಿತ ಉದ್ಯಮಿ ವೀರೇಂದ್ರ ಬಾಬು(Veerendrababu businessman) .15 ಲಕ್ಷ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿ ಕೊಡಿಗೇಹಳ್ಳಿ ಠಾಣೆಗೆ ಸಂತ್ರಸ್ತೆ ದೂರು ಸಲ್ಲಿಸಲು ತೆರಳಿದ್ದರು. ಆಗ ಸಂತ್ರಸ್ತೆಗೆ ಇನ್‌ಸ್ಪೆಕ್ಟರ್‌ ಪರಿಚಯವಾಗಿದೆ. ಬಳಿಕ ತನ್ನ ಖಾಸಗಿ ಮೊಬೈಲ್‌ ಸಂಖ್ಯೆಯನ್ನು ಆಕೆಗೆ ನೀಡಿದ ಇನ್‌ಸ್ಪೆಕ್ಟರ್‌, ನಿಮಗೆ ಸಹಾಯ ಮಾಡುವುದಾಗಿ ಹೇಳಿ ಕಳುಹಿಸಿದ್ದರು. ಆನಂತರ ಆಕೆಯೊಂದಿಗೆ ವಾಟ್ಸ್‌ ಆಪ್‌ ಚಾಟಿಂಗ್‌ ಹಾಗೂ ಟಾಕಿಂಗ್‌ ಶುರು ಮಾಡಿದ್ದರು. ಪದೇ ಪದೇ ನಿಮ್ಮ ಖಾಸಗಿಯಾಗಿ ಭೇಟಿಯಾಗಬೇಕು ಎಂದು ಇನ್‌ಸ್ಪೆಕ್ಟರ್‌ ಆಹ್ವಾನಿಸುತ್ತಿದ್ದರು.

ಕೊನೆಗೆ ಇತ್ತೀಚೆಗೆ ಪ್ರಕರಣದ ಕುರಿತು ಮಾಹಿತಿ ಬೇಕಿದೆ ಎಂದು ಹೇಳಿ ಠಾಣೆಗೆ ಬರುವಂತೆ ಸಂತ್ರಸ್ತೆಗೆ ಇನ್‌ಸ್ಪೆಕ್ಟರ್‌ ಸೂಚಿಸಿದ್ದರು. ಅಂತೆಯೇ ಠಾಣೆಗೆ ತೆರಳಿದ್ದ ಆಕೆಗೆ ಡ್ರೈDryfruits ಬಾಕ್ಸ್‌ ಮತ್ತು ಲಾಡ್ಜ್‌ನ ಕೊಠಡಿ ಕೀ ಕೊಟ್ಟು ಇನ್‌ಸ್ಪೆಕ್ಟರ್‌ ಆಹ್ವಾನಿಸಿದ್ದರು. ಇದಕ್ಕೆ ಸಂತ್ರಸ್ತೆ ಆಕ್ಷೇಪಿಸಿ ಹೊರ ಬಂದಿದ್ದರು. ಇದಾದ ಬಳಿಕ ತಮ್ಮ ನೋವನ್ನು ಮಹಿಳಾ ಸಬ್‌ ಇನ್‌ಸ್ಪೆಕ್ಟರ್‌ ಬಳಿ ಆಕೆ ಹಂಚಿಕೊಂಡಿದ್ದರು. ಆಗ ’ನಿನ್ನ ಸಹಾಯಕ್ಕೆ ನಾನು ಇರುತ್ತೇನೆ’ ಎಂದ ಮಹಿಳಾ ಪಿಎಸ್‌ಐ, ಕೊನೆಗೆ ರಾಜಿ ಸಂಧಾನ ಮೂಲಕ ವಿವಾದ ಬಗೆಹರಿಸಲು ಯತ್ನಿಸಿದ್ದರು ಎಂಬ ಆರೋಪ ಕೇಳಿ ಬಂದಿದೆ.

ಛೀ ಪಾಪಿ..! ಬಿಹಾರದಲ್ಲಿ ಬೀದಿ ನಾಯಿಯ ಮೇಲೆ ಕಾಮುಕನಿಂದ ಅತ್ಯಾಚಾರ: ವಿಡಿಯೋ ವೈರಲ್‌ ಬಳಿಕ ಪೊಲೀಸರಿಂದ ತನಿಖೆ

ಈ ಘಟನೆ ಸಂಬಂಧ ತಮ್ಮ ಸ್ನೇಹಿತರ ಜತೆ ಚರ್ಚಿಸಿದ ಬಳಿಕ ಸಂತ್ರಸ್ತೆ, ಈಶಾನ್ಯ ವಿಭಾಗ ಡಿಸಿಪಿ ಲಕ್ಷ್ಮೇಪ್ರಸಾದ್‌ಗೆ ದೂರು ಸಲ್ಲಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಡಿಸಿಪಿ ಅವರು, ಯಲಹಂತ ಉಪವಿಭಾಗ ಎಸಿಪಿಗೆ ಆಂತರಿಕ ತನಿಖೆ ನಡೆಸಿ ತ್ವರಿತವಾಗಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಅಲ್ಲದೆ ತಮ್ಮ ದೂರಿನ ಜತೆಗೆ ಇನ್‌ಸ್ಪೆಕ್ಟರ್‌ ವಾಟ್ಸ್‌ಆಪ್‌ ಸಂದೇಶಗಳು ಹಾಗೂ ಡ್ರೈ ಫä್ರಟ್ಸ್‌ ಬಾಕ್ಸ್‌, ಲಾಡ್ಜ್‌ ಕೋಣೆಯ ಕೀಯನ್ನು ಡಿಸಿಪಿ ಅವರಿಗೆ ಸಂತ್ರಸ್ತೆ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Latest Videos