Asianet Suvarna News Asianet Suvarna News

ಚಿಕ್ಕಬಳ್ಳಾಪುರ: ಕತ್ತೆ ಖರೀದಿಯ ಆಸೆಗೆ ಬಿದ್ದು ಲಕ್ಷಾಂತರ ರೂ. ಕಳೆದುಕೊಂಡ..!

ಕತ್ತೆಗಳನ್ನು ಕೊಡಿಸುವುದಾಗಿ ನಂಬಿಸಿ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಮುಡಿಪು ಬಳಿಯ ಶೆನವ ಕುರುನಾಡ್ ಗ್ರಾಮದ ಶ್ರೀನಿವಾಸಗೌಡ ಎಂಬುವವರು ₹9.45 ಲಕ್ಷ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ ಬಾಗೇಪಲ್ಲಿ ತಾಲೂಕು ರಾಮಾನುಪಾಡಿ ಗ್ರಾಮದ ಗೋದಾವರಿ ಫಾರಂ ಹೌಸ್ ಮಾಲೀಕ ಪಿ.ವಿ.ರವೀಂದ್ರ. 

Fraud of 9.45 Lakh by Claiming to Give Donkey in Chikkaballapur grg
Author
First Published Sep 17, 2023, 6:37 AM IST

ಚಿಕ್ಕಬಳ್ಳಾಪುರ(ಸೆ.17): ಕತ್ತೆಗಳನ್ನು ಕೊಡಿಸುವುದಾಗಿ ಹೇಳಿ ತಮಗೆ ₹9.45 ಲಕ್ಷ ವಂಚನೆ ಮಾಡಿದ್ದಾರೆಂದು ಆರೋಪಿಸಿ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಪಾತಪಾಳ್ಯ ಪೊಲೀಸ್ ಠಾಣೆಗೆ ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ.

ಮುಂಗಡ 9.45 ಲಕ್ಷ ಜಮಾ:

ಕತ್ತೆಗಳನ್ನು ಕೊಡಿಸುವುದಾಗಿ ನಂಬಿಸಿ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಮುಡಿಪು ಬಳಿಯ ಶೆನವ ಕುರುನಾಡ್ ಗ್ರಾಮದ ಶ್ರೀನಿವಾಸಗೌಡ ಎಂಬುವವರು ₹9.45 ಲಕ್ಷ ವಂಚಿಸಿದ್ದಾರೆ ಎಂದು ಬಾಗೇಪಲ್ಲಿ ತಾಲೂಕು ರಾಮಾನುಪಾಡಿ ಗ್ರಾಮದ ಗೋದಾವರಿ ಫಾರಂ ಹೌಸ್ ಮಾಲೀಕ ಪಿ.ವಿ.ರವೀಂದ್ರ ದೂರಿನಲ್ಲಿ ತಿಳಿಸಿದ್ದಾರೆ.

ಜಮಖಂಡಿ: ಲಕ್ಷಾಂತರ ರೂ. ಸ್ಕೀಂ ಹಣದೊಂದಿಗೆ ಪರಾರಿ, ದಂಪತಿ ಬಂಧನ

ಶ್ರೀನಿವಾಸಗೌಡ ಟಿವಿ ಕಾರ್ಯಕ್ರಮದಲ್ಲಿ ಕತ್ತೆಗಳ ಸಾಕಾಣಿಕೆ ಬಗ್ಗೆ ಮತ್ತು ಅದರ ಆರೈಕೆ ಕುರಿತು ಮಾಹಿತಿ ನೀಡಿದ್ದರು. ತಾವೂ ಸಹ ಹಸು ಮತ್ತು ಕತ್ತೆಗಳ ಸಾಕಾಣಿಕೆ ಮಾಡುತ್ತಿದ್ದು, ಕಳೆದ ಮೇನಲ್ಲಿ ಶ್ರೀನಿವಾಸಗೌಡರನ್ನು ದೂರವಾಣಿ ಮೂಲಕ ಪರಿಚಯ ಮಾಡಿಕೊಂಡಿದ್ದೆ. ತಮ್ಮ ಫಾರಂಹೌಸ್‌ಗೆ ಆಗಮಿಸಿದ್ದ ಶ್ರೀನಿವಾಸಗೌಡ ತಮಗೆ ರಾಜಸ್ಥಾನ ತಳಿಯಾದ ಹಲಾರಿ ಕತ್ತೆಗಳನ್ನು ಕೊಡಿಸುತ್ತೇನೆ, ಒಂದು ಕತ್ತೆಯ ಬೆಲೆ ಅಂದಾಜು ₹1 ಲಕ್ಷ ಆಗುತ್ತೆ, ಒಟ್ಟು 11 ಕತ್ತೆಗಳಿಗೆ ಸಾಗಾಣಿಕೆ ಎಲ್ಲಾ ಸೇರಿ ₹11 ಲಕ್ಷ ಆಗುತ್ತದೆ ಎಂದು 9.45 ಲಕ್ಷವನ್ನು ಮುಂಗಡವಾಗಿ ಪಡೆದಿದ್ದರು. 15 ದಿನಗಳಲ್ಲಿ ಕತ್ತೆಗಳನ್ನು ಕೊಡುತ್ತೇನೆ ಎಂದು ಹೇಳಿ ಇದುವರೆಗೂ ತನಗೆ ಕತ್ತೆಗಳನ್ನು ನೀಡದೇ ವಂಚಿಸಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ.

Follow Us:
Download App:
  • android
  • ios