Asianet Suvarna News Asianet Suvarna News

ಪತ್ನಿ ಹಂತಕ ಭಾರತೀಯನ ಸುಳಿವು ನೀಡಿದವರಿಗೆ ₹2 ಕೋಟಿ ಇನಾಮು ಘೋಷಿಸಿದ ಎಫ್‌ಬಿಐ!

 ಪತ್ನಿಯನ್ನು ಕೊಂದಿದ್ದ ಭಾರತೀಯ ಮೂಲದ ವ್ಯಕ್ತಿಯ ಸುಳಿವು ನೀಡಿದವರಿಗೆ ಫೆಡರಲ್ ಬ್ಯೂರೋ ಆಪ್ ಇನ್‌ವೆಸ್ಟಿಗೇಷನ್ ಸಂಸ್ಥೆಯು 2.1 ಕೋಟಿ ರು ಬಹುಮಾನ ನೀಡುವುದಾಗಿ ಘೋಷಿಸಿದೆ.

FBI announces rs 2.1 crore reward on indian man who killed wife In US rav
Author
First Published Apr 14, 2024, 6:28 AM IST

ವಾಷಿಂಗ್ಟನ್: ಪತ್ನಿಯನ್ನು ಕೊಂದಿದ್ದ ಭಾರತೀಯ ಮೂಲದ ವ್ಯಕ್ತಿಯ ಸುಳಿವು ನೀಡಿದವರಿಗೆ ಫೆಡರಲ್ ಬ್ಯೂರೋ ಆಪ್ ಇನ್‌ವೆಸ್ಟಿಗೇಷನ್ ಸಂಸ್ಥೆಯು 2.1 ಕೋಟಿ ರು ಬಹುಮಾನ ನೀಡುವುದಾಗಿ ಘೋಷಿಸಿದೆ.

ಭಾರತ ಮೂಲದ ಭದ್ರೇಶ್ ಕುಮಾರ್ ಚೇತನ್ ಭಾಯ್ ಪಟೇಲ್ ಎನ್ನುವ ವ್ಯಕ್ತಿ ಅಮೆರಿಕದ ಮೇರಿಲ್ಯಾಂಡ್ ನ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಡುತ್ತಿದ್ದ. ಏಪ್ರಿಲ್ 12, 2015 ರಲ್ಲಿ ತನ್ನ ಪತ್ನಿಯನ್ನು ಚಾಕುವಿನಿಂದ ಇರಿದು ಕೊಂದಿದ್ದ.\

ಮೇರಠ್: ರಸ್ತೆ ಮಧ್ಯೆ ನಮಾಜ್ ಮಾಡಿ ಕಿರಿಕಿರಿ; 200ಕ್ಕೂ ಅಧಿಕ ಮಂದಿ ವಿರುದ್ಧ ಕೇಸ್

ಆ ಬಳಿಕ ಪರಾರಿಯಾಗಿದ್ದ.ಘಟನೆ ನಡೆದ ಬಳಿಕ ಆರೋಪಿಯನ್ನು ಬಂಧಿಸುವುದಕ್ಕೆ ಬಂಧನ ವಾರಂಟ್ ಜಾರಿಗೊಳಿಸಲಾಗಿತ್ತು. ಆದ್ರೆ ಭದ್ರೇಶ್ ಕುಮಾರ್(Bhadreshkumar Chetanbhai Patel) ಮಾತ್ರ ಪೊಲೀಸರಿಗೆ ಸಿಕ್ಕಿರಲಿಲ್ಲ. ಭದ್ರೇಶ್ ಹೆಸರನ್ನು ಎಫ್‌ಬಿಐ ಮೋಸ್ಟ್ ವಾಂಟೆಡ್ ಲಿಸ್ಟ್‌ ನ ಅಗ್ರ 10 ಪಟ್ಟಿಯಲ್ಲಿ ಸೇರಿಸಿದ್ದು, ಆತನ ಬಗ್ಗೆ ಸುಳಿವು ನೀಡಿದರೆ 2.5 ಲಕ್ಷ ಡಾಲರ್ ಹಣ ಬಹುಮಾನ ರೂಪದಲ್ಲಿ ನೀಡುವುದಾಗಿ ಘೋಷಿಸಿದೆ.

Follow Us:
Download App:
  • android
  • ios